ಗರ್ಭಿಣಿಯರ ಆರೋಗ್ಯಕ್ಕೆ ಚಾಕಲೇಟ್ ಒಳ್ಳೆಯದು, ಆದರೆ ಮಿತಿ ಇರಲಿ!!

By: Jaya subramanya
Subscribe to Boldsky

ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹೆಚ್ಚಿನ ಅಸ್ಥೆಯನ್ನು ತೋರಲಾಗುತ್ತದೆ. ಆಕೆಯಲ್ಲದೇ ಇನ್ನೊಂದು ಜೀವ ಕೂಡ ಉದರಲ್ಲಿರುವುದರಿಂದ ಹೆಚ್ಚುವರಿ ಕಾಳಜಿಯನ್ನು ತಾಯಿ ಮಗುವಿಗೆ ನೀಡಲಾಗುತ್ತದೆ. ಹೆಚ್ಚುವರಿ ಪ್ರೋಟೀನ್ ನ್ಯೂಟ್ರೀನ್ ಇರುವ ಆಹಾರ ಪದಾರ್ಥಗಳನ್ನು ಆಕೆಗೆ ಸೇವಿಸಲು ನೀಡಲಾಗುತ್ತದೆ. ಇದರಿಂದ ಆಕೆಯಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಮತ್ತು ಆಕೆ ಸಣ್ಣ ಸಣ್ಣ ಕಾಯಿಲೆಗಳೊಂದಿಗೆ ಹೋರಾಡಲು ತನ್ನನ್ನು ಬಲಪಡಿಸಿಕೊಳ್ಳುತ್ತಾಳೆ.

Chocolate During Pregnancy

ಅಂತೆಯೇ ಕೆಲವೊಂದು ಆಹಾರಗಳನ್ನು ಸೇವಿಸಬಹುದು, ಸೇವಿಸಬಾರದು ಮೊದಲಾಗಿ ಕಟ್ಟುನಿಟ್ಟುಗಳನ್ನು ಆಕೆಗೆ ಹಾಕುತ್ತಾರೆ. ಆದರೆ ಹೆಚ್ಚು ಪ್ರೋಟೀನ್ ಇರುವ ಆಹಾರ ಪದಾರ್ಥಗಳನ್ನು ಗರ್ಭಾವಸ್ಥೆಯಲ್ಲಿ ಸೇವಿಸಿದರೆ ಮಾತ್ರವೇ ಆಕೆಗೆ ಪ್ರಸವ ಕಾಲದಲ್ಲಿ ಬೇಕಾದ ಶಕ್ತಿ ಪೂರೈಕೆಯಾಗುತ್ತದೆ.

Chocolate

ಇಂದಿನ ಲೇಖನದಲ್ಲಿ ಇನ್ನೊಂದು ಸಿಹಿಯಾದ ವಿಚಾರವನ್ನು ನಾವು ಹೇಳಲಿದ್ದು ಗರ್ಭಿಣಿಯರು ಚಾಕಲೇಟ್‌ಗಳನ್ನು ತಮ್ಮ ಗರ್ಭಾವಸ್ಥೆಯಲ್ಲಿ ಸೇವಿಸಬಹುದು ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.  ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಚಾಕಲೇಟ್‌ಗಳಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಗರ್ಭಿಣಿ ಸ್ತ್ರೀಯರಲ್ಲಿ ಪ್ರೀ ಎಕ್ಲಾಂಪ್ಸಿಯನ್ನು ನಿವಾರಣೆ ಮಾಡುವಲ್ಲಿ ಸಹಾಯಕ ಎಂದೆನಿಸಲಿದೆ. ಪ್ರೀ ಎಕ್ಲಾಂಪ್ಸಿಯು ಗರ್ಭಿಣಿಯರಲ್ಲಿ ಹಲವಾರು ಅಪಾಯಗಳನ್ನು ಉಂಟುಮಾಡುತ್ತವೆ. ಈ ಸಂದರ್ಭದಲ್ಲಿ ಚಾಕಲೇಟ್ ಸೇವನೆಯಿಂದ ಅವುಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

Chocolate

ನಿಯಮಿತವಾಗಿ ಚಾಕಲೇಟ್ ಸೇವನೆಯಿಂದ ಮಹಿಳೆಯರಲ್ಲಿ ರಕ್ತಸಂಚಾರ ವೃದ್ಧಿಯಾಗುತ್ತದೆ ಮತ್ತು ಸುಸೂತ್ರ ಹೆರಿಗೆಗಾಗಿ ಸಹಕಾರಿ ಎಂದೆನಿಸಲಿದೆ. ಅಂತೆಯೇ ಜರಾಯುವನ್ನು ದೃಢಗೊಳಿಸಲಿದೆ. ಅದರಲ್ಲೂ ಡಾರ್ಕ್ ಚಾಕಲೇಟ್ ಅನ್ನು ತಿನ್ನುವುದು ಇನ್ನಷ್ಟು ಬಲಶಾಲಿಯಾಗಿ ಗರ್ಭಿಣಿಯನ್ನು ಮಾಡಲಿದೆ. ವಾರದಲ್ಲಿ ಐದು ಬಾರಿ ಚಾಕಲೇಟ್‌ ಸೇವಿಸಿದಲ್ಲಿ ಇನ್ನಷ್ಟು ಪ್ರಯೋಜನವನ್ನು ಗರ್ಭಿಣಿ ಸ್ತ್ರೀ ಪಡೆದುಕೊಳ್ಳಬಹುದಾಗಿದೆ...   ಹುಟ್ಟುವ ಮಗು 'ಬುದ್ಧಿವಂತ' ಆಗಬೇಕೇ? ಆಹಾರಕ್ರಮ ಹೀಗಿರಲಿ

English summary

Why Women Should Eat Chocolate During Pregnancy?

Some of the common foods that pregnant women are known to crave for during pregnancy are pickles, raw mangoes, sweets, chicken dishes and even chocolates! Yes A new research has concluded that eating chocolates during pregnancy is healthy for both the mother and the baby!
Please Wait while comments are loading...
Subscribe Newsletter