ಸೈಲೆಂಟ್ ಆಗಿ ಕಾಡುವ 'ಮೌನ ಗರ್ಭಪಾತ'! ಇದನ್ನು ಪತ್ತೆ ಹಚ್ಚುವುದು ಹೇಗೆ?

By: Hemanth
Subscribe to Boldsky

ಗರ್ಭಿಣಿಯರಿಗೆ ಕೆಲವೊಂದು ಸಂದರ್ಭಗಳಲ್ಲಿ ಗರ್ಭಪಾತವಾಗುವುದು. ಆಹಾರದಲ್ಲಿನ ವ್ಯತ್ಯಯ, ದೇಹದಲ್ಲಿನ ಕೆಲವೊಂದು ಬದಲಾವಣಿಗಳಿಂದಾಗಿ ಗರ್ಭಪಾತವಾಗಬಹುದು. ಗರ್ಭದ ಮೇಲೆ ಅತಿಯಾದ ಒತ್ತಡ ಬಿದ್ದಾಗ ಇಂತಹ ಘಟನೆ ನಡೆಯುತ್ತದೆ. ಆದರೆ ಕೆಲವೊಂದು ಗರ್ಭಿಣಿಯರಿಗೆ ತಿಳಿಯದೆ ಇರುವ ರೀತಿಯಲ್ಲೇ ಗರ್ಭಪಾತವಾಗುವುದು. ಇದನ್ನು ಮೌನ ಗರ್ಭಪಾತವೆನ್ನುವರು.

ಗರ್ಭದಲ್ಲಿರುವ ಮಗು ಸಾವನ್ನಪ್ಪಿದೆ ಎಂದು ತಿಳಿದುಬರುವುದೇ ಇಲ್ಲ. ದೇಹಕ್ಕೆ ಕೂಡ ಗರ್ಭದಲ್ಲಿರುವ ಮಗು ಜೀವಂತವಾಗಿದೆ ಎಂದು ತಿಳಿಯುವುದಿಲ್ಲ. ಇದರಿಂದಾಗಿ ಅದು ಗರ್ಭಧಾರಣೆಗೆ ಸಂಬಂಧಿಸಿದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತಾ ಇರುವುದು. ಮಹಿಳೆಯರಿಗೆ ಕೂಡ ಇದರ ಅರಿವು ಆಗುವುದಿಲ್ಲ. ಈ ಕಾರಣದಿಂದಾಗಿಯೇ ಇದನ್ನು ಮೌನ ಗರ್ಭಪಾತವೆಂದು ಕರೆಯುತ್ತಾರೆ. ಈ ರೀತಿಯ ಗರ್ಭಪಾತದ ಸಮಸ್ಯೆಗೆ ಇರುವ ಕೆಲವೊಂದು ವಿಷಯಗಳನ್ನು ನಿಮಗೆ ಬೋಲ್ಡ್ ಸ್ಕೈ ತಿಳಿಸಿಕೊಡಲಿದೆ....

ಮೌನ ಗರ್ಭಪಾತದ ಬಗ್ಗೆ ತಿಳಿಯುವುದು ಹೇಗೆ?

ಮೌನ ಗರ್ಭಪಾತದ ಬಗ್ಗೆ ತಿಳಿಯುವುದು ಹೇಗೆ?

ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಾ ಇದ್ದರೆ ಗರ್ಭದಲ್ಲಿರುವ ಭ್ರೂಣದ ಬಗ್ಗೆ ತಿಳಿಯುವುದು. ಭ್ರೂಣದಲ್ಲಿ ಏನಾದರೂ ಸಮಸ್ಯೆಯಿದೆಯೆಂದು ವೈದ್ಯರಿಗೆ ತಿಳಿದುಬಂದರೆ ಅವರು ಭ್ರೂಣದ ಹೃದಯಬಡಿತವನ್ನು ಮೊದಲು ಪರೀಕ್ಷಿಸುವರು. ಭ್ರೂಣದ ಬಗ್ಗೆ ಹೆಚ್ಚಿಗೆ ತಿಳಿಯಲು ಅಲ್ಟ್ರಾಸೌಂಡ್ ಮಾಡಿಸಿಕೊಳ್ಳುವುದು ಒಳ್ಳೆಯದು.

ಇದನ್ನು ಪತ್ತೆಹಚ್ಚಲು ಯಾವುದೇ ಲಕ್ಷಣಗಳಿವೆಯಾ?

ಇದನ್ನು ಪತ್ತೆಹಚ್ಚಲು ಯಾವುದೇ ಲಕ್ಷಣಗಳಿವೆಯಾ?

ಇದಕ್ಕೆ ಯಾವುದೇ ಲಕ್ಷಣಗಳು ಇಲ್ಲ. ಇದಕ್ಕಾಗಿಯೇ ಇದನ್ನು ಮೌನ ಗರ್ಭಪಾತವೆಂದು ಕರೆಯುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ರಕ್ತಸ್ರಾವ ಅಥವಾ ಸ್ನಾಯು ಸೆಳೆತ ಉಂಟಾಗುವುದಿಲ್ಲ. ಭ್ರೂಣದ ಅಂಗಾಂಶಗಳು ಒಳಗಡೆಯೇ ಇರುವ ಕಾರಣದಿಂದ ದೇಹವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತಾ ಇರುತ್ತದೆ.

ಕೆಲವೊಂದು ಪರಿಸ್ಥಿತಿಗಳಲ್ಲಿ....

ಕೆಲವೊಂದು ಪರಿಸ್ಥಿತಿಗಳಲ್ಲಿ....

ಕೆಲವೊಂದು ಸಂದರ್ಭಗಳಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಯಾಗುತ್ತದೆ. ಇದು ಗರ್ಭದಲ್ಲಿ ಏನೋ ತೊಂದರೆಯಿದೆ ಎನ್ನುವುದರ ಸೂಚನೆಯಾಗಿದೆ. ವಾಕರಿಕೆ, ನಿಶ್ಯಕ್ತಿ, ಸ್ತನಗಳು ಮೃದುವಾಗುವುದು ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಇತರ ಕೆಲವು ಲಕ್ಷಣಗಳು ಹಠಾತ್ ಆಗಿ ಮಾಯವಾಗುವುದು. ಇಂತಹ ಸಂದರ್ಭದಲ್ಲಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಇತರ ಲಕ್ಷಣಗಳು

ಇತರ ಲಕ್ಷಣಗಳು

ಯೋನಿಯು ಡಿಸ್ಚಾರ್ಚ್ ಮಾಡುವ ಬಣ್ಣವು ಕೆಂಪು ಬಣ್ಣವನ್ನು ಹೊಂದಿರುವುದು. ಇದು ಕೂಡ ಒಂದು ಸೂಚನೆಯಾಗಿದೆ. ಭ್ರೂಣದಲ್ಲಿರುವ ಮಗುವಿನ ಹೃದಯಬಡಿತವನ್ನು ಪರೀಕ್ಷಿಸಿದ ಬಳಿಕ ವೈದ್ಯರು ಗರ್ಭಪಾತವಾಗಿದೆಯಾ ಆಥವಾ ಇಲ್ಲವಾ ಎನ್ನುವುದು ತಿಳಿಯುತ್ತದೆ.

ಮೌನ ಗರ್ಭಪಾತದ ಸಾಧ್ಯತೆಗಳು ಎಷ್ಟಿವೆ?

ಮೌನ ಗರ್ಭಪಾತದ ಸಾಧ್ಯತೆಗಳು ಎಷ್ಟಿವೆ?

ಶೇ.1ರಷ್ಟು ಮಹಿಳೆಯರು ಮೌನ ಗರ್ಭಪಾತಕ್ಕೆ ಒಳಗಾಗುವ ಸಾಧ್ಯತೆಯಿದೆ. ಅಂಕಿಅಂಶಗಳು ಪ್ರಕಾರ 100 ಗರ್ಭಿಣಿಯರಲ್ಲಿ 20 ಮಂದಿ ಗರ್ಭಪಾತಕ್ಕೆ ಒಳಗಾಗುವರು ಮತ್ತು ಇದರಲ್ಲಿ ಒಬ್ಬರು ಮಾತ್ರ ಮೌನ ಗರ್ಭಪಾತಕ್ಕೆ ಒಳಗಾಗುವವರು.

ಮೌನ ಗರ್ಭಪಾತಕ್ಕೆ ಕಾರಣವೇನು?

ಮೌನ ಗರ್ಭಪಾತಕ್ಕೆ ಕಾರಣವೇನು?

ಭ್ರೂಣದ ವರ್ಣತಂತುಗಳಲ್ಲಿ ಆಗುವಂತಹ ಕೆಲವೊಂದು ಅಸಹಜತೆಗಳು ಮೌನ ಗರ್ಭಪಾತಕ್ಕೆ ಕಾರಣವಾಗುತ್ತದೆ.

ಮೌನ ಗರ್ಭಪಾತದ ಬಳಿಕ ಏನು ಮಾಡಬೇಕು?

ಮೌನ ಗರ್ಭಪಾತದ ಬಳಿಕ ಏನು ಮಾಡಬೇಕು?

ಭ್ರೂಣದ ಅಂಗಾಂಶಗಳನ್ನು ತೆಗೆಯಲು ವೈದ್ಯರು ಸೂಚಿಸಬಹುದು. ಕೆಲವೊಂದು ಸಂದರ್ಭಗಳಲ್ಲಿ ಅಂಗಾಂಶಗಳು ನೈಸರ್ಗಿಕವಾಗಿ ಹೊರಬರುವುದು.

ಅಂತರ ಕಾಯ್ದುಕೊಳ್ಳಬೇಕೇ?

ಅಂತರ ಕಾಯ್ದುಕೊಳ್ಳಬೇಕೇ?

ಮತ್ತೆ ಗರ್ಭಧರಿಸಬೇಕೆಂದು ದಂಪತಿ ನಿರ್ಧರಿಸಿದ್ದರೆ ಆಗ ಮೂರು ತಿಂಗಳು ಕಾಯಬೇಕು ಎಂದು ವೈದ್ಯರು ಸೂಚಿಸುವರು

English summary

What Is A Missed Miscarriage?

In fact, even the body fails to realise that the foetus is no longer alive in such cases. That is why the body continues to release hormones related to pregnancy and this makes the woman experience normal pregnancy symptoms even though the foetus is no longer alive. This is the reason why it is named as a missed miscarriage. Here are some more facts about this type of pregnancy problem.
Story first published: Monday, August 21, 2017, 23:45 [IST]
Subscribe Newsletter