ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಇಂತಹ ಆಹಾರಗಳನ್ನು ಸೇವಿಸಿ

By: Divya
Subscribe to Boldsky

ಗರ್ಭಿಣಿಯರು ಏನು ತಿನ್ನುತ್ತಾರೋ ಅದು ಮಗುವಿನ ಬೆಳವಣಿಗೆಯ ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ ಆರೋಗ್ಯ ಪೂರ್ಣ ಆಹಾರವನ್ನೇ ಸೇವಿಸಬೇಕು. ಗರ್ಭಿಣಿಯರ ನಾಲಿಗೆ ರುಚಿಯಲ್ಲಿ ವ್ಯತ್ಯಾಗಳು ಉಂಟಾಗುತ್ತವೆ. ಇದರಿಂದಾಗಿಯೇ ಕೆಲವು ಆಹಾರದ ಸೇವನೆಯಿಂದ ವಾಕರಿಕೆ ಆಗುವುದು. ಈ ಸಮಸ್ಯೆಯಿಂದ ರುಚಿಗೆ ತಕ್ಕ ಹಾಗೆ ಮತ್ತು ಮಗುವಿನ ಬೆಳವಣಿಗೆಯ ದೃಷ್ಟಿಯಿಂದಲೂ ಆಹಾರದ ಆಯ್ಕೆ ಮಾಡಬೇಕಾಗುವುದು.

ಕೆಲವು ಸಂಶೋಧನೆ ಹಾಗೂ ಅಧ್ಯಯನದ ಪ್ರಕಾರ ಮಗುವಿನ ಬಣ್ಣ, ಬುದ್ಧಿ ಬೆಳವಣಿಗೆ ಹಾಗೂ ಚುರುಕುತನವು ತಾಯಿ ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬರು ನಮ್ಮ ಮಗುವಿನ ಬುದ್ಧಿ ವಿಕಾಸ ಹಾಗೂ ಬೆಳವಣಿಗೆ ಚೆನ್ನಾಗಿ ಆಗಬೇಕು ಎಂದು ಬಯಸುತ್ತಾರೆ. ಇಂತಹ ಬಯಕೆಯನ್ನು ಈಡೇರಿಸಲು ಕೆಲವು ತರಕಾರಿ, ಹಣ್ಣು ಹಂಪಲುಗಳು ಸಹಾಯ ಮಾಡುತ್ತವೆ. ಅವು ಯಾವವು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ..... 

ಫೋಲಿಕ್ ಆಮ್ಲಗಳ ಪ್ರಭಾವ

ಫೋಲಿಕ್ ಆಮ್ಲಗಳ ಪ್ರಭಾವ

ಭ್ರೂಣದಲ್ಲಿರುವ ಮಗುವಿನ ಮೆದುಳು ಬೆಳವಣಿಗೆಯಲ್ಲಿ ಫೋಲಿಕ್ ಆಮ್ಲ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಗರ್ಭಿಣಿಯರು ಫೋಲಿಕ್ ಆಮ್ಲ ಇರುವ ಆಹಾರವನ್ನು ಸೇವಿಸಬೇಕು. ಕೆಲವು ನೈಸರ್ಗಿಕ ಆಹಾರ ಮೂಲಗಳಾದ ಮೊಸರು, ಪಾಲಕ್ ಸೊಪ್ಪು ಹಾಗೂ ಹಸಿ ತರಕಾರಿಗಳನ್ನು ಸೇವಿಸಬೇಕು.

ಇವು ಬೇಡದ ಹಣ್ಣುಗಳು

ಇವು ಬೇಡದ ಹಣ್ಣುಗಳು

ಬೆರಿ ಹಣ್ಣುಗಳು, ಟೊಮೆಟೊ ಮತ್ತು ಪಪ್ಪಾಯ ಎಲ್ಲವೂ ಆಂಟಿ ಆಕ್ಸಿಡೆಂಟ್‍ಗಳನ್ನು ಒಳಗೊಂಡಿರುತ್ತವೆ. ಇವು ಭ್ರೂಣದ ಮೆದುಳು ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಇವುಗಳಿಂದ ಆದಷ್ಟು ದೂರ ಇರುವುದು ಒಳ್ಳೆಯದು.

ದ್ವಿದಳ ಧಾನ್ಯ, ಮೊಳಕೆ ಬರಿಸಿದ ಕಾಳು

ದ್ವಿದಳ ಧಾನ್ಯ, ಮೊಳಕೆ ಬರಿಸಿದ ಕಾಳು

ಮಗುವಿನ ಬೆಳವಣಿಗೆಗೆ ಕಬ್ಬಿಣಾಂಶ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಗರ್ಭಿಣಿಯರು ದ್ವಿದಳ ಧಾನ್ಯ, ಮೊಳಕೆ ಬರಿಸಿದ ಕಾಳು ಹಾಗೂ ನಿಯಮಿತವಾಗಿ ಚಿಕನ್‍ಗಳನ್ನು ಸೇವಿಸಬೇಕು.

ಪ್ರೋಟೀನ್ ಪಾತ್ರ

ಪ್ರೋಟೀನ್ ಪಾತ್ರ

ಭ್ರೂಣದ ಬೆಳವಣಿಗೆಯಲ್ಲಿ ಪ್ರೋಟೀನ್ ಪಾತ್ರ ಮಹತ್ತರವಾದದ್ದು. ಗರ್ಭಿಣಿ ನಿತ್ಯವೂ 10 ಗ್ರಾಂ.ಗಳಷ್ಟು ಪ್ರೋಟೀನ್ ಸೇವನೆ ಮಾಡಬೇಕು. ಮೊಸರು, ಬೀನ್ಸ್, ಕಡಲೆಕಾಯಿ ಮತ್ತು ಬೆಣ್ಣೆ ಹೆಚ್ಚು ಪ್ರೋಟೀನ್‍ಗಳನ್ನು ಒಳಗೊಂಡಿರುತ್ತವೆ.

ಮಗುವಿನ ವರ್ಣಕ್ಕೆ

ಮಗುವಿನ ವರ್ಣಕ್ಕೆ

ಬಿಳಿ ವರ್ಣದ ಮಗು ನಿಮ್ಮ ಬಯಕೆಯಾಗಿದ್ದರೆ ತೆಂಗಿನಕಾಯಿ ತಿರುಳು, ಕೇಸರಿ ಹಾಲು, ಮೊಟ್ಟೆ, ಬಾದಾಮಿ, ತುಪ್ಪ, ಕಿತ್ತಳೆ ಹಣ್ಣನ್ನು ಸೇವಿಸಬೇಕು. ಇವುಗಳಿಂದ ಮಗುವಿನ ವರ್ಣ ಬಿಳಿಯಾಗುತ್ತದೆ ಎಂದು ಕೆಲವು ಅಧ್ಯಯನಗಳು ದೃಢ ಪಡಿಸಿವೆ.

ಉತ್ತಮ ಜೀವನ ಶೈಲಿ

ಉತ್ತಮ ಜೀವನ ಶೈಲಿ

ಉತ್ತಮ ಜೀವನ ಶೈಲಿ ಹಾಗೂ ಶಾಂತಿಯುತ ಮನಸ್ಸು ಮತ್ತು ಆರೋಗ್ಯವು ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಅತಿಯಾದ ಒತ್ತಡದ ಮನಸ್ಸು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವುದು.

ನೆನಪಿಡಿ

ನೆನಪಿಡಿ

ಮೀನುಗಳನ್ನು ತಿನ್ನಬೇಕು ಎಂದು ಬಯಕೆಯಾದರೆ ಮೊದಲು ವೈದ್ಯರ ಸಲಹೆ ಪಡೆಯಬೇಕು. ಮೀನಿನ ಹೊಟ್ಟೆ ಹಾಗೂ ದೇಹದಲ್ಲಿ ಹಾನಿಕಾರಕ ಅಂಶಗಳಿರುತ್ತವೆ. ಅವು ಮಗು ಮತ್ತು ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

English summary

What To Eat During Pregnancy For Fair And Intelligent Baby

We are what we eat. In the same way, what a pregnant woman eats will surely influence the foetus. And yes, many sources claim that eating certain foods can surely help conceive an intelligent and a fair baby.Now, here are some tips to conceive an intelligent and fair baby. Talk to your gynecologist before following these tips.
Story first published: Thursday, July 13, 2017, 8:31 [IST]
Subscribe Newsletter