ಗರ್ಭಿಣಿಯರಿಗೆ ಕಾಡುವ ಕೂದಲುದುರುವ ಸಮಸ್ಯೆ! ಆರೈಕೆ ಹೇಗೆ?

By: Hemanth
Subscribe to Boldsky

ಗರ್ಭಧಾರಣೆ ವೇಳೆ ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ರೀತಿಯ ಬದಲಾವಣೆಗಳಿಗೆ ಒಳಗಾಗುವ ಕಾರಣದಿಂದ ಕೆಲವೊಂದು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಲ್ಲಿ ಕೂದಲು ಉದುರುವುದು ಪ್ರಮುಖವಾಗಿದೆ. ಹಾರ್ಮೋನು ಬದಲಾವಣೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಹಲವಾರು ರೀತಿಯ ಶಾಂಪೂ ಹಾಗೂ ಸಾಬೂನುಗಳನ್ನು ಬಳಸುತ್ತೀರಿ. ಆದರೆ ಇಂತಹ ರಾಸಾಯನಿಕಯುಕ್ತ ವಸ್ತುಗಳಿಂದ ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ತೊಂದರೆಯಾಗುವುದು.

ಹೆರಿಗೆಯ ನಂತರ ಕೂದಲುದುರುವ ಸಮಸ್ಯೆ ಕಾಡುತ್ತಿದೆಯೇ?

ಗರ್ಭಧಾರಣೆಯ ಮೊದಲು ಮೂರು ತಿಂಗಳಲ್ಲಿ ಕೂದಲು ಉದುರುವ ಸಮಸ್ಯೆಯಿರುತ್ತದೆ. ಬಳಿಕ ಇದು ಕಡಿಮೆಯಾಗುವುದು. ಪ್ರತಿಯೊಬ್ಬರಿಗೂ ಇದು ಸಮಾನವಾಗಿರುವುದಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಈ ಸಮಸ್ಯೆಯು ಭಿನ್ನವಾಗಿರುತ್ತದೆ. ಗರ್ಭಧಾರಣೆ ವೇಳೆ ಸರಿಯಾದ ಪೋಷಕಾಂಶಗಳು ಕೂದಲಿಗೆ ಸಿಗದ ಹಿನ್ನೆಲೆಯಲ್ಲಿ ಕೂದಲು ಉದುರಬಹುದು.

ಕಬ್ಬಿನಾಂಶದ ಮಾತ್ರೆಗಳನ್ನು ಅತಿಯಾಗಿ ಸೇವಿಸುವ ಕಾರಣದಿಂದಲೂ ಕೂದಲು ಉದುರಬಹುದು. ಗರ್ಭಧಾರಣೆ ಸಂದರ್ಭದಲ್ಲಿ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನದ ಮೂಲಕ ಹೇಳಿಕೊಡಲಿದೆ. ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಲು ಈ ಲೇಖನ ಓದುತ್ತಾ ಸಾಗಿ....

ವಿನ್ಯಾಸ ಬೇಡ

ವಿನ್ಯಾಸ ಬೇಡ

ಗರ್ಭಧಾರಣೆ ಸಮಯದಲ್ಲಿ ಕೂದಲಿಗೆ ಅತಿಯಾಗಿ ವಿನ್ಯಾಸ ಮಾಡಬೇಡಿ. ಬ್ಲೋ ಡ್ರೈಯಿಂಗ್, ಸ್ಟ್ರೇಟ್ನಿಂಗ್ ಮತ್ತು ಬಣ್ಣ ಕೊಡುವಂತಹ ಇತರ ಉತ್ಪನ್ನಗಳನ್ನು ಬಳಸಿಕೊಳ್ಳುವುದು ಕೋಶಗಳಿಗೆ ತುಂಬಾ ಹಾನಿಯುಂಟು ಮಾಡಲಿದೆ. ಈ ಸಮಯದಲ್ಲಿ ಹೇರ್ ಸೇರಮ್ ಮತ್ತು ಇತರ ಕೆಲವೊಂಧು ಕಾಸ್ಮೆಟಿಕ್ ಬಳಸುವುದನ್ನು ನಿಲ್ಲಿಸಿ.

ಎಣ್ಣೆ

ಎಣ್ಣೆ

ಗರ್ಭಧಾರಣೆ ಸಮಯದಲ್ಲಿ ಕೂದಲಿಗೆ ಸರಿಯಾಗಿ ಎಣ್ಣೆ ನೀಡುವುದು ಅತೀ ಅಗತ್ಯವಾಗಿದೆ. ದೇಹದಂತೆ ಕೂದಲಿಗೆ ಕೂಡ ಸರಿಯಾದ ಆರೈಕೆ ಮತ್ತು ಬುಡಕ್ಕೆ ಪೋಷಕಾಂಶ ಬೇಕಾಗುವುದು. ಮಲಗುವ ಮೊದಲು ವಾರದಲ್ಲಿ ಎರಡು ಸಲ ಕೂದಲಿಗೆ ಎಣ್ಣೆ ಹಾಕಿಕೊಳ್ಳಿ. ಇದು ಕೂದಲಿಗೆ ಸರಿಯಾದ ಪೋಷಣೆ ನೀಡುವುದು.

ರಾಸಾಯನಿಕಯುಕ್ತ ಕಾಸ್ಮೆಟಿಕ್ ಬಳಸಬೇಡಿ

ರಾಸಾಯನಿಕಯುಕ್ತ ಕಾಸ್ಮೆಟಿಕ್ ಬಳಸಬೇಡಿ

ಮಹಿಳೆಯರು ಹೆಚ್ಚಾಗಿ ಕಾಸ್ಮೆಟಿಕ್ ಬಳಸುವುದು ಸಾಮಾನ್ಯ. ಆದರೆ ಗರ್ಭಧಾರಣೆ ಸಮಯದಲ್ಲಿ ಇಂತಹ ಕಾಸ್ಮೆಟಿಕ್ ಬಳಸುವುದನ್ನು ನಿಲ್ಲಿಸಬೇಕು. ಇದರಲ್ಲಿ ಇರುವಂತಹ ರಾಸಾಯನಿಕಗಳು ಗರ್ಭಧಾರಣೆ ಸಮಯದಲ್ಲಿ ಮಹಿಳೆಯರಿಗೆ ಹಾನಿ ಉಂಟು ಮಾಡಬಹುದು.

ಗರ್ಭಿಣಿಯರೇ ಎಚ್ಚರ: ಸೌಂದರ್ಯ ಉತ್ಪನ್ನಗಳಿಗೆ ಮರುಳಾಗದಿರಿ!

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ಗರ್ಭಧಾರಣೆ ಸಮಯದಲ್ಲಿ ಮಹಿಳೆಯರು ಆರೋಗ್ಯಕರ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಪೋಷಕಾಂಶಗಳು ಹೆಚ್ಚು ಇರುವಂತಹ ಆಹಾರವನ್ನು ಮಹಿಳೆಯರು ಸೇವಿಸಬೇಕು. ಇದು ತಾಯಿ ಹಾಗೂ ಮಗುವಿನ ಬೆಳವಣಿಗೆಗೆ ಒಳ್ಳೆಯದು. ಸೇವಿಸುವಂತಹ ಆಹಾರದಲ್ಲಿ ಪ್ರಮುಖ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇದ್ದರೆ ಅದರಿಂದ ತಾಯಿಯ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲದೆ ಮಗುವಿನ ಬೆಳವಣಿಗೆಗೆ ನೆರವಾಗುವುದು.

ಧ್ಯಾನ

ಧ್ಯಾನ

ಗರ್ಭಧಾರಣೆ ವೇಳೆ ಮಹಿಳೆಯರು ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸಹಜ. ಇಂತಹ ಸಮಯದಲ್ಲಿ ಕೂದಲು ಉದುರಬಹುದು. ಇದಕ್ಕಾಗಿ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಬೇಕು. ಒತ್ತಡಮುಕ್ತ ಜೀವನ ಸಾಗಿಸುವಲ್ಲಿ ಧ್ಯಾನವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಭಾವನೆಗಳಲ್ಲಿ ಬದಲಾವಣೆಗಳು ಆಗುವುದು ಕೂಡ ಒತ್ತಡದ ಮಟ್ಟ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಗರ್ಭಧಾರಣೆ ವೇಳೆ ಒತ್ತಡಕ್ಕೆ ಒಳಗಾಗದೆ ಆರಾಮವಾಗಿದ್ದರೆ ತುಂಬಾ ಒಳ್ಳೆಯದು.

English summary

Ways To Prevent Hair Fall During Pregnancy

Hair loss is a common problem that is faced by women during their pregnancy phase. Many hormonal changes that occur inside the body are responsible for an increased hair loss in women during pregnancy. Normally, hair fall occurs during the first trimester of pregnancy. Thus, it is important to treat this problem by following certain helpful tips, as listed in this article.
Subscribe Newsletter