ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

By: Arshad
Subscribe to Boldsky

ಗರ್ಭವತಿಯ ಆರೋಗ್ಯ ಆಕೆ ನಿತ್ಯವೂ ಸೇವಿಸುವ ಆಹಾರವನ್ನು ಪರಿಗಣಿಸಿರುತ್ತದೆ. ಈ ಸಮಯದಲ್ಲಿ ಆಕೆಯ ಆಹಾರ ಅರೋಗ್ಯಕರವಾಗಿರಬೇಕು ಹಾಗೂ ಈ ಪ್ರಮಾಣ ಅತಿಹೆಚ್ಚೂ ಆಗಬಾರದು ಹಾಗೂ ಕಡಿಮೆಯೂ ಆಗಬಾರದು. ತಾಯಿ ಹಾಗೂ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಇಬ್ಬರ ಆರೋಗ್ಯವೂ ಈ ಆಹಾರವನ್ನೇ ಅವಲಂಬಿಸಿದೆ. ಗರ್ಭಾವಸ್ಥೆಯಲ್ಲಿ ಕೆಳಗೆ ವಿವರಿಸಿದ ಆಹಾರಗಳು ಅತ್ಯಂತ ಉತ್ತಮವಾಗಿದ್ದು ಕಡ್ಡಾಯವಾಗಿ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಬೇಕಾದವುಗಳಾಗಿವೆ. ಬನ್ನಿ, ಈ ನಾಲ್ಕು ಬಗೆಯ ಆಹಾರಗಳು ಯಾವುವು ಎಂಬುದನ್ನು ನೋಡೋಣ...

ಪಿಷ್ಟಭರಿತ ಆಹಾರಗಳು

ಗರ್ಭಿಣಿ ಎಂದು ಗೊತ್ತಾದ ಬಳಿಕ ನಿಮ್ಮ ಅಹಾರದಲ್ಲಿ ಸಾಕಷ್ಟು ಹಸಿರು ತರಕಾರಿಗಳಿರುವಂತೆ ನೋಡಿಕೊಳ್ಳಿ. ವಿಶೇಷವಾಗಿ ಪಿಷ್ಟ ಹೆಚ್ಚಿರುವ ಆಹಾರಗಳಾದ ಆಲುಗಡ್ಡೆ, ಅಕ್ಕಿ, ಇಡಿಯ ಗೋಧಿಯ ಹಿಟ್ಟಿನ ಚಪಾತಿ, ಓಟ್ಸ್ ಮೊದಲಾದವು ನಿಮ್ಮ ನಿತ್ಯದ ಆಹಾರದ ಭಾಗವಾರಿರುವಂತೆ ನೋಡಿಕೊಳ್ಳಿ. ಈ ಆಹಾರಗಳಲ್ಲಿ ಕ್ಯಾಲೋರಿಗಳು ಹೆಚ್ಚಿರುತ್ತವೆ ಹಾಗೂ ಈ ಸಮಯದಲ್ಲಿ ಅಗತ್ಯವಿರುವ ವಿಟಮಿನ್ನುಗಳನ್ನೂ ಒದಗಿಸುತ್ತವೆ.

ಮೂರನೇ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು?

ಡೈರಿ ಆಹಾರಗಳು

ಈ ಆಹಾರಗಳು ಗರ್ಭಿಣಿಯ ಆರೋಗ್ಯಕ್ಕೆ ತುಂಬಾ ಅಗತ್ಯವಾದುದಾದರೂ ಈ ಆಹಾರಗಳು ಕಡಿಮೆ ಕೊಬ್ಬಿನ ಅಥವಾ ಲೋ ಫ್ಯಾಟ್ ಆಗಿದ್ದರೆ ಉತ್ತಮ. ಹಾಲು, ಮೊಸರು, ಚೀಸ್ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದ್ದು ಮೂಳೆಗಳ ದೃಢತೆ ಹಾಗೂ ಮಗುವಿನ ದೇಹದ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ. ಇದರೊಂದಿಗೆ ಅಗತ್ಯ ಖನಿಜಗಳಾದ ಸತು, ಅಯೋಡಿನ್, ಮೆಗ್ನೇಶಿಯಂ ಮೊದಲಾದವೂ ಉತ್ತಮ ಪ್ರಮಾಣದಲ್ಲಿದ್ದು ಮಗುವಿನ ಆರೋಗ್ಯಕ್ಕೆ ತುಂಬಾ ಅಗತ್ಯವಾಗಿವೆ.

Foods to eat during pregnancy

ಹಸಿ ತರಕಾರಿ ಮತ್ತು ಹಣ್ಣುಗಳು

ಹಸಿಯಾಗಿ ತಿನ್ನಬಹುದಾದ ತರಕಾರಿ, ಹಸಿರು ಎಲೆಗಳು ಹಾಗೂ ಹಣ್ಣುಗಳು ನಿಮ್ಮ ಆಹಾರದಲ್ಲಿರುವುದು ಅಗತ್ಯವಾಗಿದೆ. ದಿನವಿಡೀ ಸಾಕಷ್ಟು ಹಣ್ಣು ತರಕಾರಿಗಳನ್ನು ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಖನಿಜಗಳು ಮತ್ತು ವಿಟಮಿನ್ನುಗಳು ದೊರಕುತ್ತವೆ ಹಾಗೂ ಜೀರ್ಣಕ್ರಿಯೆಗೆ ತುಂಬಾ ಅಗತ್ಯವಿರುವ ಕರಗದ ನಾರನ್ನೂ ಒದಗಿಸುತ್ತದೆ. ಇದರಿಂದ ಮಲಬದ್ದತೆಯಾಗದಂತೆ ನೋಡಿಕೊಳ್ಳುವುದು ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ಹೆಚ್ಚು ಅಗತ್ಯವಾಗಿದೆ.

ಮಹಿಳೆಯರಿಗೆ ಸಂತಾನಭಾಗ್ಯ ಕರುಣಿಸುವ 'ಹಣ್ಣು-ತರಕಾರಿಗಳು'!

ಮಾಂಸ, ಮೀನು ಮತ್ತು ಇತರ ಆಹಾರಗಳು

ಮೊಟ್ಟೆ, ಮೀನು, ಮಾಂಸ, ಒಣಫಲಗಳು, ಶೇಂಗಾಬೀಜ ಮೊದಲಾದವುಗಳಲ್ಲಿ ಹೆಚ್ಚಿನ ಪ್ರೋಟೀನು ಮತ್ತು ಇತರ ಪೋಷಾಕಂಶಗಳಿರುತ್ತವೆ. ಇವುಗಳನ್ನು ಪಿಷ್ಟಭರಿತ ಇತರ ಆಹಾರಗಳ ಜೊತೆಗೆ ಸೇವಿಸುವುದರಿಂದ ಗರ್ಭಿಣಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಈ ಆಹಾರಗಳಲ್ಲಿ ಉತ್ತಮ ಪ್ರಮಾಣದ ಸತು, ಕಬ್ಬಿಣ, ವಿಟಮಿನ್ ಎ, ಬಿ ಸಹಿತ ಹಲವು ಪೋಷಕಾಂಶಗಳಿವೆ. ಈ ಆಹಾರಗಳನ್ನು ಮಿತಪ್ರಮಾಣದಲ್ಲಿ ಸೇವಿಸುವ ಮೂಲಕ ಉತ್ತಮ ಆಹಾರವನ್ನು ಕಾಪಾಡಿಕೊಳ್ಳಬಹುದು ಹಾಗೂ ಸುಲಭ ಹೆರಿಗೆಯ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಬಹುದು.

ಗರ್ಭಾವಸ್ಥೆಯಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು. ಇವುಗಳಲ್ಲಿ ಪ್ರಮುಖವಾದುದೆಂದರೆ

1. ಕಡ್ಡಾಯವಾಗಿ ಸಿಹಿ ತಿನಿಸುಗಳನ್ನು ಹಾಗೂ ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಲೇಬಾರದು. ಬಿಸ್ಕತ್, ಕುಕ್ಕಿಗಳು, ಕೇಕ್ ಅಥವಾ ಚಾಕಲೇಟುಗಳನ್ನು ತಿನ್ನಬಾರದು. ಇವುಗಳಲ್ಲಿ ಕ್ಯಾಲೋರಿಗಳು ಹೆಚ್ಚಿದ್ದರೂ ಸಹಾ ಮಗುವಿಗೆ ಅಗತ್ಯವಿರುವ ಪೋಷಕಾಂಶಗಳು ಇಲ್ಲದೇ ಇರುವುದರಿಂದ ಹೆರಿಗೆಯಾಗುವವರೆಗೂ ಸಿಹಿವಸ್ತುಗಳ ವ್ಯಾಮೋಹ ತ್ಯಜಿಸುವುದೇ ಉತ್ತಮ

2. ಯಕೃತ್ ಹಾಗೂ ಯಕೃತ್ ಆಧಾರಿತ ಆಹಾಗಳಲ್ಲಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿದ್ದರೂ ಸಹಾ ಇವು ಹೆರಿಗೆಯಾಗುವವರೆಗೂ ಬೇಡ. ಏಕೆಂದರೆ ಇದರಲ್ಲಿರುವ ಹೆಚ್ಚಿನ ವಿಟಮಿನ್ ಎ ಮಗುವಿನ ಆರೋಗ್ಯಕ್ಕೆ ಮಾರಕವಾಗಬಹುದು.

Foods to eat during pregnancy

3. ಕೊಬ್ಬು ಹೆಚ್ಚಿಸುವ ತಿಂಡಿಗಳಾದ ಚಿಪ್ಸ್, ಪೇಸ್ಟ್ರಿ, ಚಾಕಲೇಟು ಮೊದಲಾದವುಗಳನ್ನು ತಿನ್ನದಿರಿ. ಇವುಗಳಲ್ಲಿ ಕ್ಯಾಲೋರಿಗಳು ಹೆಚ್ಚಿದ್ದರೂ ಗರ್ಭಿಣಿಯ ದೇಹಕ್ಕೆ ಇವು ಸೂಕ್ತವಲ್ಲ. ಇದರಿಂದ ಹೃದಯ ಸಂಬಂಧಿತ ತೊಂದರೆ ಹಾಗೂ ತೂಕ ಹೆಚ್ಚುವ ಸಂಭವವಿರುತ್ತದೆ. ಬದಲಿಗೆ ವಿಟಮಿನ್ ಹಾಗೂ ನಾರು ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಗರ್ಭಿಣಿ ಹಾಗೂ ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ.

English summary

Pregnancy health care tips: Foods to eat during pregnancy

A Woman's healthy pregnancy is dependent on what she eats every day. Hence a healthy diet should be followed when she is pregnant. The diet that she follows during her pregnancy not only enhances her health. It plays a vital role in the baby's health too. These following four basic food groups should be included in your diet strictly.
Subscribe Newsletter