ಮಹಿಳೆಯರಲ್ಲಿ 'ಫಲವಂತಿಕೆ' ಹೆಚ್ಚಿಸುವ ಮನೆಮದ್ದುಗಳು

By: manu
Subscribe to Boldsky

ಒಂದು ವೇಳೆ ನೀವು ಸಂತಾನಾಪೇಕ್ಷೆ ಹೋಂದಿರುವ ಮಹಿಳೆಯಾಗಿದ್ದು ಇದುವರೆಗೆ ಗರ್ಭ ಧರಿಸದೇ ಇದ್ದಲ್ಲಿ ನಿಮಗೆ ಇದು ದೊಡ್ಡ ಕೊರಗಾಗಿ ಕಾಡುತ್ತಿದ್ದಿರಬಹುದು. ಗರ್ಭಾಂಕುರಗೊಳ್ಳಲು ಎಲ್ಲಾ ಸಾಧ್ಯತೆಗಳು ಸರಿಯಾಗಿದ್ದು ಫಲಬರದೇ ಇದ್ದಲ್ಲಿ ಈ ಕೊರತೆಯನ್ನು ಕೆಲವು ಅಡುಗೆಮನೆಯ ಸಾಮಾಗ್ರಿಗಳು ಸುಲಭವಾಗಿ ಫಲಕೊಡಲು ನೆರವಾಗುತ್ತವೆ. ಹಿಳೆಯರಲ್ಲಿ ಸಂತಾನೋತ್ಪತ್ತಿ ಹೆಚ್ಚಿಸುವ ಸೂಪರ್ ಫುಡ್‌! 

ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸಾಗಿದ್ದು ಉತ್ತಮ ಉದ್ಯೋಗ ಹಾಗೂ ನೆಮ್ಮದಿಯ ಜೀವನವನ್ನು ನಡೆಸಲು ಉತ್ಸುಕರಾಗಿರುತ್ತಾರೆ. ಆದರೆ ಈ ಜಗತ್ತಿನಲ್ಲಿ ಎಲ್ಲರಿಗೂ ಸಂತಾನಭಾಗ್ಯ ಸಿಗುವುದಿಲ್ಲ. ಸಣ್ಣ ಪುಟ್ಟ ತಪ್ಪುಗಳು 'ತಾಯ್ತನದ ಸುಖಕ್ಕೆ' ಮಾರಕವಾಗಬಹುದು! 

ಕೆಲವು ಮಹಿಳೆಯರಿಗೆ ಪ್ರಥಮ ಪ್ರಯತ್ನದಲ್ಲಿಯೇ ಫಲಕಂಡರೆ ಕೆಲವರಿಗೆ ವರ್ಷಗಟ್ಟಲೇ ಪ್ರಯತ್ನಿಸಿದರೂ ಫಲ ಸಿಗದೇ ಇರಬಹುದು. ಇದಕ್ಕೆ ಕೇವಲ ಮಹಿಳೆಯನ್ನು ಮಾತ್ರ ದೂಷಿಸಿ ಫಲವಿಲ್ಲ, ಪತಿ ಪತ್ನಿಯರಲ್ಲಿ ಯಾರೊಬ್ಬರಿಗೂ ತೊಂದರೆ ಇದ್ದರೂ ಫಲ ಕಾಣದೇ ಮಹಿಳೆಯನ್ನೇ ದೂಷಿಸುವಂತಾಗುತ್ತದೆ. ಬಂಜೆತನಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಕಾರಣ..

ಒಂದು ವೇಳೆ ನಿಮ್ಮ ಪತಿಯ ಆರೋಗ್ಯ ಚೆನ್ನಾಗಿದ್ದು ನಿಮ್ಮಲ್ಲಿಯೇ ಕೊರತೆ ಇದೆ ಎಂದಾದರೆ ನಿಮ್ಮ ಅಡುಗೆ ಮನೆಯ ಸಾಮಾಗ್ರಿಗಳು ನಿಮ್ಮಲ್ಲಿ ಫಲವಂತಿಕೆಯನ್ನು ಹೆಚ್ಚಿಸಲು ಖಂಡಿತಾ ನೆರವಾಗಲಿವೆ. ಬನ್ನಿ, ಈ ನಿಟ್ಟಿನಲ್ಲಿ ಏನು ಮಾಡಬಹುದು ಎಂಬುದನ್ನು ನೋಡೋಣ..

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

* ಬೆಣ್ಣೆಹಣ್ಣಿನ ತಿರುಳು - ಮೂರು ದೊಡ್ಡ ಚಮಚ

* ಆಲಿವ್ ಎಣ್ಣೆ - ಒಂದು ದೊಡ್ಡಚಮಚ

ಶೀಘ್ರವೇ ಶುಭಸುದ್ದಿಯನ್ನು ಪಡೆಯಬಹುದು!

ಶೀಘ್ರವೇ ಶುಭಸುದ್ದಿಯನ್ನು ಪಡೆಯಬಹುದು!

ಮಹಿಳೆಯರಲ್ಲಿ ಫಲವಂತಿಕೆಯನ್ನು ಹೆಚ್ಚಿಸಲು ಈ ಸಾಮಾಗ್ರಿಗಳು ಅತ್ಯುತ್ತಮವಾಗಿದ್ದು ನಿಯಮಿತವಾಗಿ ಸೇವಿಸುವ ಮೂಲಕ ಶೀಘ್ರವೇ ಶುಭಸುದ್ದಿಯನ್ನು ಪಡೆಯಬಹುದು.

ಪೌಷ್ಟಿಕ ಆಹಾರವನ್ನೂ ಸೇವಿಸಬೇಕು

ಪೌಷ್ಟಿಕ ಆಹಾರವನ್ನೂ ಸೇವಿಸಬೇಕು

ಬರೆಯ ಈ ಸಾಮಾಗ್ರಿಗಳನ್ನು ಸೇವಿಸಿದರೆ ಮಾತ್ರ ಸಾಲದು, ಬದಲಿಗೆ ಮಹಿಳೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಪೌಷ್ಟಿಕ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವ್ಯಾಯಾಮ, ಒತ್ತಡರಹಿತ ಜೀವನ ಹಾಗೂ ಫಲವಂತಿಕೆ ನೀಡುವ ಸಮಯದಲ್ಲಿ ಹೆಚ್ಚಿನ ಸಮಾಗಮವೂ ಅವಶ್ಯವಾಗಿದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-3- ಕೊಬ್ಬಿನ ಆಮ್ಲಗಳಿದ್ದು ಇವು ಮಹಿಳೆಯರಲ್ಲಿ ಅಂಡಾಣುವಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ಅಂಡಾಣು ಫಲಿತಗೊಳ್ಳುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಬೆಣ್ಣೆ ಹಣ್ಣಿನಲ್ಲಿ ಅಡಗಿದೆ-ಬೆಣ್ಣೆಯಂತಹ ಸೌಂದರ್ಯ!

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಸಹಾ ಮಹಿಳೆಯರಲ್ಲಿ ಫಲವಂತಿಕೆಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಇದರಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ಮಹಿಳೆಯರ ದೇಹದಲ್ಲಿ ಪ್ರೊಜೆಸ್ಟರಾನ್ ಎಂಬ ರಸದೂತವನ್ನು ಹೆಚ್ಚು ಸ್ರವಿಸಲು ನೆರವಾಗುವ ಮೂಲಕ ಗರ್ಭ ನಿಲ್ಲಲು ಸಹಕರಿಸುತ್ತದೆ.ಮಲಬದ್ಧತೆ ಸಮಸ್ಯೆಗೆ 'ಆಲೀವ್ ಎಣ್ಣೆ'ಯೇ ದಿವ್ಯೌಷಧ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ

* ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ.

* ಈ ಮಿಶ್ರಣವನ್ನು ಪ್ರತಿ ರಾತ್ರಿ ಊಟದ ಬಳಿಕ ದಿನದ ಅಂತಿಮ ಆಹಾರವಾಗಿ ಸೇವಿಸುತ್ತಾ ಬನ್ನಿ.

* ಒಂದು ದಿನವೂ ಬಿಡದೇ ಸುಮಾರು ಮೂರರಿಂದ ನಾಲ್ಕು ತಿಂಗಳು ಸೇವನೆಯನ್ನು ಮುಂದುವರೆಸಬೇಕು.

ಕುಟುಂಬ ವೈದ್ಯರಲ್ಲಿ ನಿಯಮಿತವಾಗಿ ಭೇಟಿ ನೀಡಿ

ಕುಟುಂಬ ವೈದ್ಯರಲ್ಲಿ ನಿಯಮಿತವಾಗಿ ಭೇಟಿ ನೀಡಿ

ನಿಮ್ಮ ಕುಟುಂಬವೈದ್ಯರಲ್ಲಿ ನಿಯಮಿತವಾಗಿ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿ, ಸೂಕ್ತ ಪರೀಕ್ಷೆಗಳ ಮೂಲಕ ಅಗತ್ಯವಾದ ಚಿಕಿತ್ಸೆಯನ್ನೂ ಪಡೆದುಕೊಳ್ಳಿ.

 
English summary

Kitchen Ingredients To improve Fertility That Really Work!

If you are a woman who is trying to get pregnant, but it has not happened yet, then you would obviously be a little worried, right? Well, did you know that there is an amazing kitchen remedy that can help you conceive with ease? Many women, after a certain point in their lives, when they have a stable partner and a job, would definitely wish to have children and become mothers.
Please Wait while comments are loading...
Subscribe Newsletter