Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಉಪ್ಪು ಹೆಚ್ಚಿರುವ ಆಹಾರದ ಆಸೆಯಾ? ಹಾಗಾದರೆ ಖಂಡಿತವಾಗಿಯೂ ಗಂಡು ಮಗು!
ಮಹಿಳೆ ಗರ್ಭ ಧರಿಸಿದ ಬಳಿಕ ಆಕೆಯಲ್ಲಿ ಪ್ರತಿಯೊಬ್ಬರು ಕೇಳುವಂತಹ ಪ್ರಶ್ನೆಯೆಂದರೆ ನಿನಗೆ ಗಂಡು ಮಗು ಬೇಕಾ ಅಥವಾ ಹೆಣ್ಣು ಮಗು ಬೇಕಾ ಎಂದು. ಗರ್ಭಧರಿಸಿರುವ ಮಹಿಳೆಯು ಹಾಗೆ ಮಾಡಿದರೆ ಗಂಡು ಮಗು ಆಗುತ್ತದೆ. ಹೀಗೆ ಮಾಡಿದರೆ ಹೆಣ್ಣು ಮಗು ಆಗುತ್ತದೆ ಎನ್ನುವ ಕಥೆಗಳು ಇದ್ದೇ ಇದೆ.
ಆದರೆ ತಿನ್ನುವಂತಹ ಆಹಾರದಲ್ಲಿಯೂ ಗಂಡು ಹಾಗೂ ಹೆಣ್ಣು ಮಗು ಪಡೆಯಬಹುದು ಎಂದು ಹೇಳುತ್ತಾರೆ. ಇದು ಎಷ್ಟು ಸತ್ಯ ಮತ್ತು ಸುಳ್ಳು ಎನ್ನುವುದು ಗೊತ್ತಿಲ್ಲ. ಗರ್ಭಿಣಿ ಮಹಿಳೆ ಸಾಮಾನ್ಯವಾಗಿ ಕೇಳುವಂತಹ ಮತ್ತು ಪ್ರಯತ್ನಿಸುವಂತಹ ವಿಷಯಗಳು ಇಲ್ಲಿವೆ. ಇದರಲ್ಲಿ ಯಾವುದನ್ನು ನಂಬಬೇಕು ಎಂದು ನಿಮಗೆ ಬೋಲ್ಡ್ ಸ್ಕೈ ಹೇಳುತ್ತಿದೆ....

ಹೊಟ್ಟೆಯ ಗಾತ್ರ
ಸುಳ್ಳು: ಹೊಟ್ಟೆಯ ಗಾತ್ರ. ಹೊಟ್ಟೆ ದೊಡ್ಡದಾಗಿದ್ದರೆ ಹೆಣ್ಣು ಮಗುವಾಗುವುದು ಮತ್ತು ಸಣ್ಣದಾಗಿದ್ದರೆ ಗಂಡು ಮಗು ಎಂದು ಹೇಳುವುದು.
ಸತ್ಯ: ಸ್ನಾಯುಗಳ ಗಾತ್ರ, ವಿನ್ಯಾಸ ಮತ್ತು ಮಗುವಿನ ಸ್ಥಾನ ಇದು ಹೊಟ್ಟೆಯ ಗಾತ್ರ ಮತ್ತು ವಿನ್ಯಾಸ ನಿರ್ಧರಿಸುವುದು. ಹೊಟ್ಟೆ ದೊಡ್ಡದಾಗಿದ್ದರೆ ಹೆಣ್ಣು ಮಗು ಮತ್ತು ಸಣ್ಣದಾಗಿದ್ದರೆ ಗಂಡು ಮಗು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ.

ಉಪ್ಪು ಹೆಚ್ಚಿರುವ ಆಹಾರ ಇಷ್ಟವಿದ್ದರೆ
ಸುಳ್ಳು: ಉಪ್ಪು ಹೆಚ್ಚಿರುವ ಆಹಾರ ಇಷ್ಟವಿದ್ದರೆ ಗಂಡು ಮಗು ಮತ್ತು ಸಿಹಿ ತಿಂಡಿ ಇಷ್ಟವಿದ್ದರೆ ಹೆಣ್ಣು ಮಗು ಎಂದು ಹೇಳಲಾಗುತ್ತದೆ.
ಸತ್ಯ: ಗರ್ಭದಲ್ಲಿರುವ ಮಗು ಮತ್ತು ಗರ್ಭಿಣಿಯ ಆಸೆಗೆ ಒಂದಕ್ಕೊಂದು ಯಾವುದೇ ಸಂಬಂಧವಿಲ್ಲವೆಂದು ಅಧ್ಯಯನಗಳು ಹೇಳಿವೆ.

ಉಂಗುರವನ್ನು ಹಿಡಿದುಕೊಂಡು ಅದನ್ನು ಹೊಟ್ಟೆಯ ಮೇಲೆ ತಿರುಗಿಸಿದರೆ
ಸುಳ್ಳು: ನೀವು ಒಂದು ಉಂಗುರವನ್ನು ಹಿಡಿದುಕೊಂಡು ಅದನ್ನು ಹೊಟ್ಟೆಯ ಮೇಲೆ ತಿರುಗಿಸಿದರೆ, ಅದು ಹಿಂದಕ್ಕೆ ಮುಂದಕ್ಕೆ ಹೋದರೆ ಗಂಡು ಮಗು ಮತ್ತು ವೃತ್ತಾಕಾರದಲ್ಲಿದ್ದರೆ ಹೆಣ್ಣು ಮಗು.
ಸತ್ಯ: ಇದು ತುಂಬಾ ತಮಾಷೆಯ ವಿಷಯ. ಇದನ್ನು ಮಾಡಲು ಹೋಗಬೇಡಿ. ಇದರಲ್ಲಿ ಯಾವುದೇ ಸತ್ಯವಿಲ್ಲ.

ಸಾಮಾನ್ಯ ಹೆರಿಗೆ
ಸುಳ್ಳು: ತಾಯಿಗೆ ಸಾಮಾನ್ಯ ಹೆರಿಗೆಯಾಗಿದ್ದರೆ ಮಗಳಿಗೂ ಸಾಮಾನ್ಯ ಹೆರಿಗೆಯಾಗಬಹುದು.
ಸತ್ಯ: ಗರ್ಭಧಾರಣೆ ಮತ್ತು ಪ್ರಸವಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅನುವಂಶೀಯತೆ ಪ್ರಭಾವ ಬೀರಲ್ಲ. ಮಗುವಿನ ಗಾತ್ರ, ಸ್ಥಾನ ಮತ್ತು ಒಳ್ಳೆಯ ಆರೋಗ್ಯ ಇದೆಲ್ಲವು ಪ್ರಮುಖವಾಗಿದೆ.

ಬೆನ್ನಿನ ಮೇಲೆ ಮಲಗಿದರೆ
ಸುಳ್ಳು: ಬೆನ್ನಿನ ಮೇಲೆ ಮಲಗಿದರೆ ಮಗುವಿಗೆ ನೋವಾಗುವುದು
ಸತ್ಯ: ಎಡದ ಬದಿಗೆ ಮಲಗುವುದರಿಂದ ಗರ್ಭದಲ್ಲಿರುವ ಮಗುವಿಗೆ ಸರಿಯಾಗಿ ರಕ್ತಸರಬರಾಜು ಆಗುವುದು. ಇದರಿಂದ ವೈದ್ಯರು ಇದನ್ನೇ ಸಲಹೆ ಮಾಡುತ್ತಾರೆ. ಬೆನ್ನಿನ ಮೇಲೆ ಮಲಗುವುದರಿಂದ ಯಾವುದೇ ಹಾನಿಯಿಲ್ಲ.

ಲೈಂಗಿಕ ಕ್ರಿಯೆ
ಸುಳ್ಳು: ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಗುವಿಗೆ ಹಾನಿಯಾಗುವುದು
ಸತ್ಯ: ಮಗುವನ್ನು ಚರ್ಮದ ಏಳು ಪದರಗಳು ರಕ್ಷಿಸುತ್ತಾ ಇರುವುದು. ಗರ್ಭಕಂಠವು ಉದ್ದ ಹಾಗೂ ಗಡುಸಾಗಿ ಗರ್ಭಕೋಶಕ್ಕೆ ಏನೂ ಪ್ರವೇಶವಾಗದಂತೆ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದರಿಂದ ಮಗುವಿಗೆ ಹಾನಿಯಿಲ್ಲ.



Click it and Unblock the Notifications
