Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆರಿಗೆಯ ಬಳಿಕ, ಕರೀನಾ ಈಗ ಫುಲ್ ಸ್ಲಿಮ್! ಏನು ಸೀಕ್ರೆಟ್ ಗೊತ್ತೇ?
ಮನಸ್ಸಿದ್ದರೆ ಮಾರ್ಗ ಎಂಬಂತೆ ನಿಮ್ಮ ಉದಾಸೀನವನ್ನು ದೂರಮಾಡಿ ನಿಯಮಿತ ವ್ಯಾಯಾಮ ಹಾಗೂ ಸೂಕ್ತ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ನೀವು ತೆಳ್ಳಗಾಗುವುದು ಖಂಡಿತ.
ಇಂದಿನ ಫ್ಯಾಷನ್ ಯುಗದಲ್ಲಿ ಎಲ್ಲರೂ ಬಳುಕುವ ಬಳ್ಳಿಯಂತೆ ಸುಂದರಿಯಾಗಿ ಕಾಣಬೇಕೆಂಬ ಅದಮ್ಯ ಆಸೆಯನ್ನು ಹೊಂದಿರುವುದು ಸಹಜವಾಗಿದೆ. ಬೇಕಾಬಿಟ್ಟಿ ಆಹಾರ ಸೇವನೆ, ಆರೋಗ್ಯದ ಕಡೆಗೆಗಮನ ನೀಡದೇ ಇರುವುದು, ವ್ಯಾಯಾಮ ಮಾಡದೇ ಕುಳಿತಲ್ಲೇ ಕುಳಿತುಕೊಂಡಿರುವುದು ಹೀಗೆ ನಾನಾ ಕಾರಣಗಳಿಂದ ಇಂದು ಬೊಜ್ಜು ಸ್ತ್ರೀ ಹಾಗೂ ಪುರುಷರನ್ನು ಕಾಡುತ್ತಿದೆ.
ಹೆಂಗಳೆಯರು ತಾವು ಮದುವೆಗೆ ಮುನ್ನ ಇಲ್ಲವೇ ಮಗುವನ್ನು ಹೆರುವ ಮುನ್ನ ಸಪೂರವಾಗಿ ಆಕರ್ಷಕ ಮೈಕಾಂತಿಯನ್ನು ಪಡೆದುಕೊಂಡಿದ್ದೆವು ಆದರೆ ಮದುವೆಯ ನಂತರ ಮಗುವಾದ ಬಳಿಕ ಸ್ಥೂಲಕಾಯರಾಗಿದ್ದೇವೆ. ಎಂಬುದಾಗಿ ಬೇರೆ ಬೇರೆ ಕಾರಣಗಳನ್ನು ನೀಡಿ ತಾವು ದಪ್ಪಗಾಗಿರುವುದಕ್ಕೆ ತಮ್ಮನ್ನು ಕಾರಣವನ್ನಾಗಿ ಮಾಡಿಕೊಳ್ಳುವುದೇ ಇಲ್ಲ.
ಆದರೆ ಬೊಜ್ಜಿಗೆ ಮೂಲ ಕಾರಣ ಮಹಿಳೆಯರು ಉದಾಸೀನವೇ ಆಗಿದೆ. ಕ್ರಮಬದ್ಧವಾದ ಜೀವನ ಶೈಲಿಯನ್ನು ಅನುಸರಿಸದೇ ಇರುವುದು, ಅನಾರೋಗ್ಯಕರ ಆಹಾರ ಪದ್ಧತಿ, ಮದುವೆಯಾಯಿತು ಮಕ್ಕಳಾಯಿತು ಇನ್ನು ಏಕೆ ದಪ್ಪ ಸಪೂರ ಮೈಕಟ್ಟು ಎಂಬ ಭಾವನೆ ಅವರಲ್ಲಿ ಬೇರೂರುತ್ತದೆ. ಆದರೆ ತಾವು ಸಿನಿಮಾ ನಟಿಯರಂತೆ ಬಳುಕುವ ಬಳ್ಳಿಯಂತೆ ಇರದಿದ್ದರೂ ಆರೋಗ್ಯವಾಗಿರಬೇಕೆಂಬ ಬಯಕೆ ಮನದಲ್ಲಿ ಮೂಡಿತೆಂದರೆ ನೀವು ಸಿನಿಮಾ ನಟಿಯರನ್ನುಮೀರಿಸುವ ದೇಹ ಪ್ರಕೃತಿಯನ್ನು ಬೆಳೆಸಿಕೊಳ್ಳುವುದು ಖಂಡಿತ.
ಮನಸ್ಸಿದ್ದರೆ ಮಾರ್ಗ ಎಂಬಂತೆ ನಿಮ್ಮ ಉದಾಸೀನವನ್ನು ದೂರಮಾಡಿ ನಿಯಮಿತ ವ್ಯಾಯಾಮ ಹಾಗೂ ಸೂಕ್ತ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ನೀವು ತೆಳ್ಳಗಾಗುವುದು ಖಂಡಿತ. ಇಂದಿನ ಲೇಖನದಲ್ಲಿ ಕರೀನಾ ಕಪೂರ್ ತಮ್ಮ ಹೆರಿಗೆಯ ನಂತರ ಮುಂಚಿನಂತೆ ಸಪೂರ ದೇಹಸಿರಿಯನ್ನು ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ಅರಿತುಕೊಳ್ಳೋಣ....

ಒಂದು ಲೋಟ ಹಾಲು
ಆಕರ್ಷಕ ಮೈಮಾಟದ ಕರೀನಾ ಕಪೂರ್ ಸುದೃಢವಾದ ದೇಹವನ್ನು ಕಾಪಾಡಿಕೊಳ್ಳಲು ನಿರ್ವಹಿಸಲು ಗರ್ಭಾವಸ್ಥೆಯ ನಂತರ ಒಂದು ಲೋಟದಷ್ಟು ಹಾಲು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಗರ್ಭಾವಸ್ಥೆಯ ಮೊದಲು ಹಾಗೂ ನಂತರ ಕ್ಯಾಲ್ಶಿಯಂ ಕೊರತೆಯನ್ನು ನೀವು ಎದುರಿಸುತ್ತಿದ್ದಲ್ಲಿ ಹಾಲು ಉತ್ತಮ ಆಯ್ಕೆಯಾಗಿದೆ. ಕರೀನಾ ಹೇಳುವಂತೆ ಹಾಲು ದೇಹದಲ್ಲಿ ಕ್ಯಾಲ್ಶಿಯಂ ಅನ್ನು ಪೂರೈಸಲು ಸಹಕಾರಿಯಾಗಿದೆ.

ನೀರು
ಎಂಟು ಲೋಟದಷ್ಟು ನೀರು ಸೇವನೆ ಕರೀನಾರ ಇನ್ನೊಂದು ಆರೋಗ್ಯದ ಗುಟ್ಟಾಗಿದೆ. 8-10 ಲೋಟದಷ್ಟು ಬಿಸಿ ನೀರನ್ನು ಆಕೆ ನಿಯಮಿತವಾಗಿ ಸೇವಿಸುತ್ತಾರೆ. ಗರ್ಭಾವಸ್ಥೆಯ ಸಮಯದಲ್ಲಿ ಹಾಗೂ ನಂತರ ಸಾಕಷ್ಟು ನೀರು ಕುಡಿಯುವುದು ಅತ್ಯವಶ್ಯಕವಾಗಿದೆ. ಕರೀನಾರಂತೆ ನೀವು ಕೂಡ ಬಿಸಿ ನೀರನ್ನು ಕುಡಿಯಲು ಆರಂಭಿಸಿ.

ಯೋಗ
ಕರೀನಾ ದೈಹಿಕ ಚಟುವಟಿಕೆಯಾದ ಯೋಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಾರ್ಮ್ ಅಪ್, ಪವರ್ ಯೋಗ, ಸೂರ್ಯ ನಮಸ್ಕಾರ, ಉಸಿರಾಟದ ವ್ಯಾಯಾಮಗಳು ಮತ್ತು ಕೆಲವೊಂದು ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ತಮ್ಮ ದೇಹವನ್ನು ಮೊದಲಿಗೆ ರೂಪಕ್ಕೆ ತಂದುಕೊಂಡಿದ್ದಾರೆ.

ಪೂರ್ಣ ಸಸ್ಯಾಹಾರ
ಬಾಲಿವುಡ್‌ನ ರಾಣಿಯಾಗಿರುವ ಕರೀನಾ ಕಪೂರ್ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. ಆಕೆಯ ಬೆಳಗ್ಗಿನ ಉಪಹಾರ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟದಲ್ಲಿ ಆಕೆ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಾರೆ. ಮುಸಲಿ, ಚೀಸ್, ಬ್ರೆಡ್ ಸ್ಲೈಸ್‌ಗಳು, ಪರಾಟ, ಸೋಯಾ ಮಿಲ್ಕ್, ಚಪಾತಿ, ದಾಲ್, ಹಸಿರು ಸೊಪ್ಪು, ತರಕಾರಿಗಳನ್ನು ಆಕೆ ಯಥೇಚ್ಛವಾಗಿ ಸೇವಿಸುತ್ತಾರೆ.

ಎರಡು ಗಂಟೆಗಳಿಗೊಮ್ಮೆ ಉಪಹಾರ
ಲಘು ಉಪಹಾರ ನಮಗೆ ಶಕ್ತಿಯನ್ನು ಪೂರೈಸುವ ಸಾಧನಗಳು ಎಂದೆನಿಸಿವೆ ಆದರೆ ನಾವು ಕರಿದ ತಿಂಡಿಗಳನ್ನೇ ಈ ರೂಪದಲ್ಲಿ ಸೇವಿಸುತ್ತೇವೆ. ಆದರೆ ತನ್ನ ಮುಖ್ಯ ಉಪಹಾರಗಳ ನಡುವೆ ಆಕೆ ಆರೋಗ್ಯಕರವಾಗಿರುವ ಲಘು ಉಪಹಾರವನ್ನು ಸೇವಿಸುತ್ತಾರೆ. ಇದು ಪ್ರೊಟೀನ್ ಶೇಕ್ ಅಥವಾ ಹಣ್ಣುಗಳಾಗಿವೆ. ಇದು ಶಕ್ತಿಯನ್ನು ನೀಡುವುದರ ಜೊತೆಗೆ ತೂಕ ಇಳಿಕೆಯಲ್ಲೂ ಸಹಕಾರಿಯಾಗಿದೆ.

ಕಾರ್ಡಿಯೊ ವರ್ಕ್ಔಟ್
ಯೋಗ ಮತ್ತು ಡಯೆಟ್‌ನೊಂದಿಗೆ ಆಕೆ ಕಾರ್ಡಿಯೊ ವರ್ಕ್‌ಔಟ್ ಅನ್ನು ಮಾಡುವುದರ ಜೊತೆಗೆ ತಮ್ಮನ್ನು ಫಿಟ್ ಆಗಿ ಇರಿಸಿಕೊಂಡಿದ್ದಾರೆ. ಗರ್ಭಾವಸ್ಥೆಯ ನಂತರ ಹಿಂದಿನ ತಮ್ಮ ದೇಹವನ್ನು ಪಡೆಯಲು ಈ ವರ್ಕ್ ಔಟ್ ಅವರಿಗೆ ಸಹಕಾರಿಯಾಗಿದೆ.

ನಡಿಗೆ
ತಮ್ಮ ಪುತ್ರನ ಜನನವಾದ ನಂತರ ಪರಿಣಿತರ ಸಲಹೆಯಂತೆ ಆಕೆ ನಡಿಗೆಯನ್ನು ಅಳವಡಿಸಿಕೊಂಡಿದ್ದಾರೆ. ಗರ್ಭಾವಸ್ಥೆಯ ನಂತರ ಕೆಲವೊಂದು ವ್ಯಾಯಾಮಗಳನ್ನು ಮಾಡುವುದು ಕಷ್ಟಕರ ಆದರೆ ನಡಿಗೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯಕರ ದೇಹವನ್ನು ಪಡೆದುಕೊಳ್ಳಬಹುದಾಗಿದೆ. ವ್ಯಾಯಾಮ, ಕಾರ್ಡಿಯೊ ವ್ಯಾಯಾಮ ಜೊತೆಗೆ ನಡಿಗೆಯನ್ನು ದೇಹದ ತೂಕ ಇಳಿಸುವಲ್ಲಿ ಅಳವಡಿಸಿಕೊಳ್ಳಿ.



Click it and Unblock the Notifications
