For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಅತ್ಯಗತ್ಯವಾಗಿ ಪಡೆದುಕೊಳ್ಳಬೇಕಾಗಿರುವ ವಿಟಮಿನ್‌ಗಳು

By Jaya subramanya
|

ಹೆಣ್ಣು ತಾಯ್ತನದ ಹೊಸ್ತಿಲಿನಲ್ಲಿರುವಾಗ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ ವಿಟಮಿನ್‌ಗಳನ್ನು ಸೇವಿಸಬೇಕಾಗುತ್ತದೆ. ಗರ್ಭದಲ್ಲಿ ಇನ್ನೊಂದು ಜೀವ ಇರುವಾಗ ತಾಯಿ ಆ ಜೀವದ ಜಾಗರೂಕತೆಯನ್ನು ಮಾಡಬೇಕು. ಪುಷ್ಟಿ ಶಕ್ತಿಯನ್ನು ನೀಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಅದರಲ್ಲೂಗರ್ಭಾವಸ್ಥೆಯಲ್ಲಿ ಕಂಡುಬರುವ ಬೆಳಗ್ಗಿನ ವಾಕರಿಕೆ, ಸುಸ್ತು, ಆಯಾಸ, ಬಳಲಿಕೆಯನ್ನು ನಿಗ್ರಹಿಸಲು ಕೆಲವೊಂದು ಆಹಾರದ ಅಂಶಗಳು ಹಿತಕಾರಿಯಾಗಿರುತ್ತದೆ.

'ವಿಟಮಿನ್ ಎ' ಇದುವೇ ಅಪಾಯದ ಮೊದಲ ಹೆಜ್ಜೆ!

ನೀವು ಸೇವಿಸುವ ಆಹಾರ ಮಗುವಿನ ಪ್ರಗತಿಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ವಿಟಮಿನ್‌ಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಕೆಲವೊಂದು ವಿಟಮಿನ್‌ಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸಲಿದ್ದು ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಯಾವ ಬಗೆಯ ವಿಟಮಿನ್‌ಗಳನ್ನು ನೀವು ಸೇವಿಸಬೇಕು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ...

ವಿಟಮಿನ್ ಬಿ 12

ವಿಟಮಿನ್ ಬಿ 12

ತಜ್ಞರ ಪ್ರಕಾರ ಗರ್ಭಿಣಿಯು 2.5 ಎಮ್‌ಸಿಜಿ ವಿಟಮಿನ್ ಬಿ12 ಅನ್ನು ಪಡೆದುಕೊಂಡಿರಬೇಕು. ತಾಯಿ ಮಗುವಿನ ಆರೋಗ್ಯದಲ್ಲಿ ಈ ವಿಟಮಿನ್ ಪ್ರಮುಖ ಪಾತ್ರ ವಹಿಸುವುದರಿಂದ ಈ ವಿಟಮಿನ್ ಸರಿಯಾದ ಪ್ರಮಾಣದಲ್ಲಿ ಗರ್ಭಿಣಿಯ ದೇಹದಲ್ಲಿರಬೇಕು.ಹೆರಿಗೆಯ ಕನಿಷ್ಠ ಪಕ್ಷ 3 ತಿಂಗಳ ಮುಂಚೆ ನಿತ್ಯವೂ ಈ ವಿಟಮಿನ್ ಸೇವನೆಯನ್ನು ತಾಯಿಯು ಮಾಡಬೇಕು. ಅಂತೆಯೇ ಗರ್ಭಾವಸ್ಥೆಯ ಆರಂಭದ ಮೂರು ತಿಂಗಳಲ್ಲಿ ಈ ವಿಟಮಿನ್ ಸೇವನೆಯನ್ನು ಮಾಡಬೇಕು. ವೈದ್ಯರೊಂದಿಗೆ ಸಮಾಲೋಚಿಸಿ ನಂತರವೇ ಈ ವಿಟಮಿನ್ ಸೇವನೆಯನ್ನು ಮಾಡಿ.

ಅಯೋಡಿನ್

ಅಯೋಡಿನ್

ಗರ್ಭಿಣಿಯರಿಗೆ ಅಯೋಡಿನ್ ಕೂಡ ಮುಖ್ಯ ಅಂಶವಾಗಿದೆ. ಇದು ಐಕ್ಯೂವನ್ನು ಸುಧಾರಿಸುವಲ್ಲಿ ಕಾರ್ಯನಿರ್ವಹಿಸಲಿದೆ. ಅಂತೆಯೇ ಕಣ್ಣಿನ ದೃಷ್ಟಿ ತೀಕ್ಷ್ಣತೆಯನ್ನು ಸುಧಾರಿಸಲಿದೆ.ಒಂದು ಅಧ್ಯಯನದ ಪ್ರಕಾರ 1/3 ಮಹಿಳೆಯರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದು ಮಗುವಿನ ದೃಷ್ಟಿಗೆ ಪರಿಣಾಮವನ್ನು ಬೀರಬಹುದು. ತಜ್ಞರು ಹೇಳುವಂತೆ ಗರ್ಭಿಣಿಯು 250 ಎಮ್‌ಸಿಜಿ ಅಯೋಡಿನ್ ಅನ್ನು ಸೇವಿಸಬೇಕು. ಇದು ಮಗುವಿನ ಮೆದುಳಿನ ಹಾನಿಯನ್ನು ತಡೆಗಟ್ಟುತ್ತದೆ.

ಮೆಗ್ನೇಶಿಯಂ

ಮೆಗ್ನೇಶಿಯಂ

270 ಎಮ್‌ಜಿ ಮೆಗ್ನೇಶಿಯಂ ಅನ್ನು ಗರ್ಭಿಣಿಯರು ಸೇವಿಸಬೇಕು. ತಾಯಿಯು ಎದೆಹಾಲನ್ನು ಉಣಿಸುತ್ತಿದ್ದಲ್ಲಿ ಮೆಗ್ನೇಶಿಯಂ ಪ್ರಮಾಣವು 320 ಎಮ್‌ಜಿ ಏರಿಕೆಯಾಗುತ್ತದೆ. ದೇಹದ ಕೋಶವನ್ನು ರಿಪೇರಿ ಮಾಡುವಲ್ಲಿ ಮೆಗ್ನೇಶಿಯಂ ನಿಷ್ಣಾತವಾಗಿದೆ. ಭ್ರೂಣದ ಬೆಳವಣಿಗೆಯನ್ನು ಮೆಗ್ನೇಶಿಯಂ ಮಾಡಲಿದ್ದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.

ಫೋಲಿಕ್ ಆಸಿಡ್

ಫೋಲಿಕ್ ಆಸಿಡ್

600 ಎಮ್‌ಸಿಜಿ ಫೋಲಿಕ್ ಆಸಿಡ್ ಅನ್ನು ಗರ್ಭಿಣಿಯರು ತಮ್ಮ ನಿತ್ಯದ ಆಹಾರದಲ್ಲಿ ಸೇವಿಸಬೇಕು. ನ್ಯೂರಲ್ ಟ್ಯೂಬ್ ಜನನವನ್ನು ಇದು ತಡೆಗಟ್ಟುತ್ತದೆ. ಆರಂಭದ ಮೂರು ತಿಂಗಳಲ್ಲಿ 200 ಎಮ್‌ಸಿಜಿ ಫೋಲಿಕ್ ಆಸಿಡ್ ಅನ್ನು ಗರ್ಭಿಣಿಯು ಸೇವಿಸಬೇಕು. ಎಲೆಗಳುಳ್ಳ ತರಕಾರಿಗಳು, ಹಣ್ಣುಗಳು, ಆಲೂಗಡ್ಡೆ, ಮೊಟ್ಟೆಯಲ್ಲಿ ಸಾಕಷ್ಟು ಫೋಲಿಕ್ ಆಸಿಡ್ ಇದೆ.

ಕಬ್ಬಿಣದ ಅಂಶ

ಕಬ್ಬಿಣದ ಅಂಶ

ಗರ್ಭಿಣಿಯರು ತಮ್ಮ ದೇಹದಲ್ಲಿ 14.8 ಎಮ್‌ಜಿ ಕಬ್ಬಿಣದ ಅಂಶವನ್ನು ಹೊಂದಿರಬೇಕು ಇದು ಭ್ರೂಣಕ್ಕೆ ಬೇಕಾದ ರಕ್ತ ಸಂಚಾರವನ್ನು ಒದಗಿಸುತ್ತದೆ. ಕಬ್ಬಿಣದ ಅಂಶದ ಕೊರತೆಯು ಗರ್ಭಾವಸ್ಥೆಯಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. 30 ಶೇಕಡಾದಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದು ಗರ್ಭಾವಸ್ಥೆಯ ಸಮಯದಲ್ಲಿ ಕಬ್ಬಿಣದ ಅಂಶವುಳ್ಳ ಆಹಾರವನ್ನು ಸೇವಿಸುವುದು ಅತ್ಯಗತ್ಯವಾಗಿದೆ.ಎಲೆಗಳುಳ್ಳ ತರಕಾರಿಗಳು, ನಟ್ಸ್, ರೆಡ್ ಮೀಟ್ ಮತ್ತು ಸಾಕಷ್ಟು ಪ್ರಮಾಣದ ಈ ಅಂಶಗಳುಳ್ಳ ಆಹಾರ ಸೇವನೆಯನ್ನು ಮಾಡಬೇಕು.

ವಿಟಮಿನ್ ಡಿ

ವಿಟಮಿನ್ ಡಿ

10 ಎಮ್‌ಸಿಜಿ ವಿಟಮಿನ್ ಡಿ ಯನ್ನು ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಪಡೆದುಕೊಂಡಿರಬೇಕು. ಮಗುವಿಗೆ ಗರ್ಭಾವಸ್ಥೆಯ ಆರಂಭದ ಕೆಲವು ತಿಂಗಳುಗಳ ಕಾಲ ಶಕ್ತಿಯನ್ನು ಒದಗಿಸುವಲ್ಲಿ ವಿಟಮಿನ್ ಡಿ ಸಹಕಾರಿಯಾಗಿದೆ. ಎಣ್ಣೆಯುಕ್ತ ಮೀನು, ಮೊಟ್ಟೆಗಳನ್ನು ಸೇವಿಸಿದರೆ ವಿಟಮಿನ್ ಡಿಯನ್ನು ದೇಹದಲ್ಲಿ ಹೊಂದಬಹುದಾಗಿದೆ. 15 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ಕೂಡ ವಿಟಮಿನ್ ಡಿ ಯನ್ನು ಹೊಂದಬಹುದಾಗಿದೆ. ಮಗುವಿನ ಮೂಳೆಗಳು ವಿಟಮಿನ್ ಡಿ ಅಂಶದಿಂದ ಮೃದುಗೊಳ್ಳುತ್ತದೆ.

ಸೆಲೇನಿಯಂ

ಸೆಲೇನಿಯಂ

ಸಾಮಾನ್ಯವಾಗಿ 60 ಎಮ್‌ಸಿಜಿ ಸೆಲೇನಿಯಂ ಅನ್ನು ಗರ್ಭಿಣಿ ಸ್ತ್ರೀಯು ತಮ್ಮ ದೇಹದಲ್ಲಿ ಒಳಗೊಂಡಿರಬೇಕು. ತಾಯಿಯು ಎದೆಹಾಲುಣಿಸಿದಾಗ 75 ಎಮ್‌ಸಿಜಿ ಏರಿಕೆಯಾಗುತ್ತದೆ. ಸೆಲೇನಿಯಂ ಕೊರತೆಯುಂಟಾದಾಗ ಗರ್ಭಪಾತವಾಗುವ ಅಪಾಯ ಹೆಚ್ಚಿರುತ್ತದೆ. ಈ ಅಂಶವನ್ನು ಪಡೆದುಕೊಳ್ಳಲು ಬ್ರೆಜಿಲ್ ನಟ್ಸ್ ಅನ್ನು ಸೇವಿಸಬೇಕು.ಇದಲ್ಲದೆ ಗರ್ಭಿಣಿಯರು ಅವಶ್ಯವಾಗಿ ಪಡೆದುಕೊಳ್ಳಬೇಕಾದ ವಿಟಮಿನ್‌ಗಳ ಪಟ್ಟಿಯನ್ನು ಇಂದಿಲ್ಲಿ ನೀಡುತ್ತಿದ್ದೇವೆ.

English summary

Essential Vitamins For A Pregnant Woman

Proper nutrition and diet is not just required to maintain the health of a pregnant woman but is essential for the proper development of the foetus inside the body. Due to physiological changes happening in the mother due to pregnancy and the metabolic demand by the foetus, the requirement of vitamins in every woman differs. So here are essential vitamins that are required by a pregnant woman.
Story first published: Tuesday, June 20, 2017, 20:08 [IST]
X
Desktop Bottom Promotion