ಸ್ತನಗಳು ಇಳಿ ಬೀಳಲು- ಎದೆ ಹಾಲುಣಿಸುವುದು ಕಾರಣವಲ್ಲ!

By: Hemanth
Subscribe to Boldsky

ಸಮರ್ಥವಾಗಿ ನಿಭಾಯಿಸಿದರೆ ಜೀವನ ಸಾರ್ಥಕವಾದಂತೆ. ಮಗು ಹುಟ್ಟಿದ ಬಳಿಕ ತಾಯಿ ಹಾಲು ಅದಕ್ಕೆ ಪ್ರಮುಖ ಆಹಾರವಾಗಿರುತ್ತದೆ. ಮಗುವಿಗೆ ಎರಡು ವರ್ಷಗಳ ಕಾಲ ತಾಯಿ ಎದೆಹಾಲು ನೀಡಬೇಕೆಂದು ಹೇಳಲಾಗುತ್ತದೆ. ತಾಯಿಯ ಎದೆ ಹಾಲೇ ಮಗುವಿಗೆ ಮೊದಲ ಚುಚ್ಚುಮದ್ದು!  

ತಾಯಿ ಎದೆಹಾಲಿನಲ್ಲಿರುವ ಪ್ರಮುಖ ಪೋಷಕಾಂಶಗಳು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಕೆಲವರು ತಮ್ಮ ಸೌಂದರ್ಯ ಹಾಳಾಗುತ್ತದೆ ಎನ್ನುವ ಕಾರಣವನ್ನು ನೀಡಿ ಮಗುವಿನ ಎದೆಹಾಲು ನೀಡಲು ನಿರಾಕರಿಸುತ್ತಾರೆ ಮತ್ತು ಬೇರೆ ಹಾಲನ್ನು ನೀಡುತ್ತಾರೆ. ಅಲ್ಲದೆ ಮಗುವಿಗೆ ಎದೆಹಾಲುಣಿಸಿದರೆ ಸ್ತನಗಳು ಇಳಿ ಬೀಳುತ್ತದೆ ಎಂದು ಕೆಲವರು ನಂಬಿದ್ದಾರೆ. ಸ್ತನಗಳು ಇಳಿ ಬೀಳಲು ಮಗುವಿಗೆ ಹಾಲುಣಿಸುವುದೇ ಕಾರಣವೇ ಎಂದು ಈ ಲೇಖನದ ಮೂಲಕ ತಿಳಿಯಿರಿ...... 

ವಾಸ್ತವ #1

ವಾಸ್ತವ #1

ಸ್ತನಗಳು ಇಳಿ ಬೀಳಲು ಮಗುವಿಗೆ ಹಾಲುಣಿಸುವುದು ಕಾರಣವೆಂದು ಹೆಚ್ಚಿನ ಮಹಿಳೆಯರು ಭಾವಿಸಿದ್ದಾರೆ. ಆದರೆ ಸ್ತನಗಳು ಇಳಿಬೀಳಲು ಮಗುವಿಗೆ ಎದೆಹಾಲುಣಿಸುವುದು ಕಾರಣವಲ್ಲವೆಂದು ತಜ್ಞರು ಹೇಳುತ್ತಾರೆ. ಇದಕ್ಕೆ ಬೇರೆ ಕೆಲವೊಂದು ಕಾರಣಗಳು ಇದೆ.

ವಾಸ್ತವ #2

ವಾಸ್ತವ #2

ಅಧ್ಯಯನವು ಎರಡು ಗುಂಪಿನಲ್ಲಿ ಮಹಿಳೆಯರನ್ನು ವಿಂಗಡಿಸಿತು. ಒಂದು ಗುಂಪಿನಲ್ಲಿ ಎದೆಹಾಲುಣಿಸುವ ಮಹಿಳೆಯರು ಮತ್ತು ಮತ್ತೊಂದು ಗುಂಪಿನಲ್ಲಿ ಎದೆಹಾಲು ಉಣಿಸಿದ ಮಹಿಳೆಯರನ್ನು ಇಡಲಾಯಿತು. ಅಧ್ಯಯನದಿಂದ ತಿಳಿದ ವಿಚಾರವೆಂದರೆ ಸ್ತನ ಇಳಿಬೀಳಲು ಎದೆಹಾಲುಣಿಸುವುದು ಮಾತ್ರ ಕಾರಣವಲ್ಲ.

ವಾಸ್ತವ #3

ವಾಸ್ತವ #3

ಎದೆಹಾಲುಣಿಸುವುದರಿಂದ ಎದೆಯ ಚರ್ಮವು ತುಂಬಾ ಆರೋಗ್ಯವಾಗಿರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಸ್ತವ #4

ವಾಸ್ತವ #4

ಎದೆಹಾಲುಣಿಸುವುದಕ್ಕಿಂತ ಗರ್ಭಧಾರಣೆಯ ಸಮಯವು ಸ್ತನದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಹಾಲಿನ ಉತ್ಪತ್ತಿ ಆರಂಭವಾದಾಗ ಸ್ತನದ ಗಾತ್ರವು ಬದಲಾಗುತ್ತದೆ.

ವಾಸ್ತವ #5

ವಾಸ್ತವ #5

ತೂಕವನ್ನು ಹೆಚ್ಚಿಸಿಕೊಂಡಾಗ ಸ್ತನದ ಸಮೀಪವಿರುವ ಅಸ್ಥಿರಜ್ಜುಗಳು ಎಳೆಯಲ್ಪಡುತ್ತದೆ. ಈ ಕಾರಣದಿಂದಾಗಿ ಸ್ತನಗಳು ಇಳಿ ಬೀಳುತ್ತವೆ.

ವಾಸ್ತವ #6

ವಾಸ್ತವ #6

ಸ್ತನಗಳ ಗಾತ್ರ, ಅಳತೆಯಲ್ಲಿ ಅನುವಂಶೀಯತೆ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

 

English summary

Does Breastfeeding Cause Saggy Breasts?

Some mothers prefer formula feeding whereas some choose breastfeeding. What's the healthier option? Breastfeeding is surely healthy for the baby and the mother too. Firstly, it strengthens the bond between the mother and the baby. And then breast milk is the most natural and nutritious source of food for the baby which is free of chemicals. But breastfeeding is blamed for saggy breasts. But is it true that breastfeeding could sag the breasts?
Subscribe Newsletter