For Quick Alerts
ALLOW NOTIFICATIONS  
For Daily Alerts

ತಾಯಿಯ ಎದೆ ಹಾಲೇ ಮಗುವಿಗೆ ಮೊದಲ ಚುಚ್ಚುಮದ್ದು!

By Arshad
|

ಇತ್ತೀಚಿನ ಒಂದು ಸಂಶೋಧನೆಯ ಮೂಲಕ ಸ್ತನಪಾನ ಮತ್ತು ಸೂಕ್ತ ಸಮಯದಲ್ಲಿ ಲಸಿಕೆಗಳನ್ನು ಹಾಕಿಸುವ ಮೂಲಕ ಮಕ್ಕಳಲ್ಲಿ ಕಿವಿಯ ಸೋಂಕು ಆಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ.

ಮಗುವಿಗೆ ತಾಯಿಹಾಲಿಗಿಂತ ಉತ್ತಮ ಆಹಾರ ಇನ್ನೊಂದಿಲ್ಲ ಎಂದು ಬಹಳ ಹಿಂದಿನಿಂದಲೇ ಹೇಳಲಾಗುತ್ತಾ ಬರಲಾಗಿದೆ. ತಾಯಿಹಾಲು ಕುಡಿದು ಬೆಳೆದ ಮಕ್ಕಳಲ್ಲಿ ಶೀತ, ನೆಗಡಿ, ಜ್ವರ ಮೊದಲಾದವುಗಳನ್ನು ಎದುರಿಸುವ ಶಕ್ತಿ ಇತರ ಮಕ್ಕಳಿಗಿಂತ ಹೆಚ್ಚಿರುತ್ತದೆ.

Does Breastfeeding Lower Infection Risks

ಆರು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಒಂದು ವೇಳೆ ಕಿವಿಯ ಸೋಂಕು ಕಂಡುಬಂದರೆ ಈ ಸೋಂಕು ಅವರ ಮುಂದಿನ ವಯಸ್ಸಿನಲ್ಲಿಯೂ ಮತ್ತೆ ಮತ್ತೆ ಕಾಡುವ ಸಂಭವವಿದೆ. ಆದರೆ ತಾಯಿಹಾಲು ಕುಡಿದ ಮತ್ತು ಸಕಾಲಕ್ಕೆ ಲಸಿಕೆ ಪಡೆದ ಮಕ್ಕಳಲ್ಲಿ ಈ ಸೋಂಕು 40%ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.

ಒಂದು ತಿಂಗಳ ವಯಸ್ಸಿನ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಮಕ್ಕಳ ಆರೋಗ್ಯವನ್ನು ತಪಾಸಿಸಿ ಈ ಸಮೀಕ್ಷೆಯನ್ನು ನಡೆಸಿದ್ದು ಇವರ ಕುಟುಂಬದ ಹಿನ್ನೆಲೆಯನ್ನೂ ಕೂಲಂಕಶವಾಗಿ ಅಭ್ಯಸಿಸಲಾಯಿತು.

ಮಕ್ಕಳ ಮೂಗಿನಲ್ಲಿರುವ ಬ್ಯಾಕ್ಟೀರಿಯಾ, ತಾಯಿಹಾಲಿನ ಪ್ರಮಾಣ ಮೊದಲಾದವುಗಳನ್ನು ಅಭ್ಯಸಿಸಿ ಕಿವಿಯ ಸೋಂಕಿಗೂ ತಾಯಿಹಾಲಿನ ಪ್ರಮಾಣಕ್ಕೂ ನಿಕಟ ಸಂಬಂಧವಿರುವುದನ್ನು ಕಂಡುಕೊಳ್ಳಲಾಯಿತು.

ಆದ್ದರಿಂದ ಮಕ್ಕಳಿಗೆ ಸಾಧ್ಯವಾದಷ್ಟು ಹೆಚ್ಚು ತಾಯಿಹಾಲನ್ನು ಕುಡಿಸುವುದು ಅಗತ್ಯವಾಗಿದ್ದು ಇದರಿಂದ ಕಿವಿಯ ಸೋಂಕು ಮಾತ್ರವಲ್ಲ, ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗಿದೆ. ಮಕ್ಕಳನ್ನು ಬಾಧಿಸುವ ಹಲವಾರು ಸೋಂಕುಗಳಿಂದ ಇದರಿಂದ ರಕ್ಷಣೆ ಪಡೆಯಬಹುದಾಗಿದೆ.

English summary

Does Breastfeeding Lower Infection Risks

A new study claims that breast feeding and timely vaccinations could lower the chances of ear infections in infants. In fact, breastfeeding can also reduce the risk of other infections like common cold in infants.Also, medically, vaccinations too help in cutting the risk of infections. Infants who are below the age of 6 months who suffer ear infections may also have increased risk at a later age too.
Story first published: Tuesday, May 24, 2016, 10:03 [IST]
X
Desktop Bottom Promotion