ಅಧ್ಯಯನ ವರದಿ: ಬಂಜೆತನಕ್ಕೆ ಸಿಹಿಯಾದ 'ತಂಪು ಪಾನೀಯ' ಕೂಡ ಕಾರಣ!

By: Divya
Subscribe to Boldsky

ಕೃತಕವಾದ ಸಿಹಿಯನ್ನು ಹೊಂದಿರುವ ಸೋಡಾ ಹಾಗೂ ತಂಪು ಪಾನೀಯವೆಂದರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಈ ಪಾನೀಯಗಳಲ್ಲಿ ಅನೇಕ ವಿಷಕಾರಿ ಅಂಶಗಳಿವೆಯೆಂದು ಆಗಾಗ ಅನೇಕ ಸಂಶೋಧನೆಯ ಅಧ್ಯಯನಗಳು ದೃಢಪಡಿಸುತ್ತಲೇ ಬರುತ್ತಿವೆ. ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಸೋಡಾ ಹಾಗೂ ತಂಪು ಪಾನೀಯಗಳು ಮಹಿಳೆಯರಲ್ಲಿ ಬಂಜೆತನವನ್ನು ಸೃಷ್ಟಿಸುತ್ತದೆ ಎನ್ನುವ ಸತ್ಯ ವಿಚಾರವನ್ನು ತೆರೆದಿಟ್ಟಿದೆ.

ವೈದ್ಯರು ಹೇಳುವಂತೆ ಕೃತಕವಾದ ಸಿಹಿಯನ್ನು ಹೊಂದಿರುವ ಸೋಡಾ ಮತ್ತು ಗಾಳಿಯನ್ನು ಹೊಂದಿರುವ ತಂಪು ಪಾನೀಯಗಳು ಬಂಜೆತಕ್ಕೆ ಕಾರಣವಾಗುತ್ತವೆ ಎಂದಿದ್ದಾರೆ. ಇವುಗಳಲ್ಲಿ ಉಪಯೋಗಿಸಲಾಗುವ ರಾಸಾಯನಿಕ ಉತ್ಪನ್ನಗಳು ಹಾರ್ಮೋನ್‍ಗಳ ಅಸಮತೋಲನವನ್ನುಂಟು ಮಾಡುತ್ತವೆ. 

Soda Drinks

"ಬಹುತೇಕ ಎಲ್ಲಾ ಕೃತಕ ತಂಪು ಪಾನೀಯಗಳು ಮತ್ತು ಸೋಡಾಗಳು ಅಸ್ಪರ್ಟೇಮ್‍ನ್ನು ಒಳಗೊಂಡಿವೆ. ಇದು ಬಂಜೆತನ, ಗರ್ಭಪಾತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತದೆ' ಎಂದು ಐವಿಎಫ್ ತಜ್ಞ ಅರವಿಂದ್ ವೈಡ್ ಹೇಳಿದ್ದಾರೆ.

ಇದನ್ನೂ ಓದಿ- ತಂಪು ಪಾನೀಯಗಳ ಹಿಂದಿದೆ, ಬೆಚ್ಚಿ ಬೀಳಿಸುವ ಸತ್ಯ

ಇವುಗಳ ಅತಿಯಾದ ಸೇವನೆಯಿಂದ ಹಾರ್ಮೋನ್‍ಗಳ ಅಸಮತೋಲನ, ಅಸ್ಥಿರಜ್ಜು, ಅಂಡಾಶಯದ ಅಸ್ವಸ್ಥತೆ ಮತ್ತು ಫ್ರೀ ಮೆನ್ಸುವಲ್ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಡಾವನ್ನು ಇತರ ತಿಂಡಿಗಳೊಂದಿಗೆ ಸೇವಿಸಿದಾಗ ಅಮೈನೊ ಆಮ್ಲಗಳು ಫೀನಿಲಾಲನೈನ್ ಮತ್ತು ಆಸ್ಪರ್ಟಿಕ್ ಆಮ್ಲಗಳು ಉಂಟಾಗುತ್ತವೆ. ಇವು ನೈಸರ್ಗಿಕವಾಗಿಯೇ ಹಾನಿಕಾರಕವೆಂದು ಪರಿಗಣಿಸಲಾಗಿವೆ. 

cold drinks

ತಜ್ಞರ ಪ್ರಕಾರ ಉವು ಜೀವಕೋಶಗಳನ್ನು ನಾಶಮಾಡುತ್ತವೆ. ವೀರ್ಯ ಮತ್ತು ಅಂಡಾಣುಗಳು ಕೋಶಗಳಾಗಿರುವುದರಿಂದ ಇವು ಶೇ. 90ರಷ್ಟು ಸಾಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲಾ ವೈದ್ಯರು ಹಾಗೂ ತಜ್ಞರುಗಳು ಇದು ಆರೋಗ್ಯಕರವಲ್ಲದ ಪಾನಿಯ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ ಎಂದು ವೈಡ್ ಹೇಳಿದ್ದಾರೆ. 

cold drinks

ಸಫ್ದರ್ಜಂಗ್ ಆಸ್ಪತ್ರೆಯ ಗೈನೆಕಾಲಜಿ ವಿಭಾಗಕ್ಕೆ ಸಂಬಂಧಿಸಿದ ರಚ್ನಾ ಜೈಸ್ವರ್ ಅವರು ಹೇಳುವಂತೆ ಕೃತಕ ಸಿಹಿಯನ್ನು ಹೊಂದಿರುವ ಸೋಡಾ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಕುಗ್ಗುವುದು, ಅತಿಯಾದ ತೂಕದ ಹೆಚ್ಚಳ ಹಾಗೂ ಹಾರ್ಮೋನ್‍ಗಳ ಅಸಮತೋಲನಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಸೋಡಾ ಹೆಚ್ಚು ಆಮ್ಲೀಯ ಗುಣವನ್ನು ಹೊಂದಿರುವ ಪಾನೀಯ. ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಪಿಎಚ್ ಮಟ್ಟವನ್ನು ಬದಲಾಯಿಸುತ್ತದೆ. ಎಂದು ಜೈಸ್ವರ ತಿಳಿಸಿದ್ದಾರೆ. ಪುರುಷರು ಏರೋಟೇಟೆಡ್ ಪಾನೀಯ ಮತ್ತು ಸೋಡಾಗಳನ್ನು ಸೇವಿಸುವುದರಿಂದ ದೇಹದ ಪಿಎಚ್ ವಾತಾವರಣದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಅಲ್ಲದೆ ವೀರ್ಯಾಣುಗಳ ನಾಶ, ಅಸಹಜ ಆಕಾರ ಮತ್ತು ಕಳಪೆ ಗುಣಮಟ್ಟಕ್ಕೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.   

ಇದನ್ನೂ ಓದಿ-   ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು

ಬೆಸ್ಪೆನಾಲ್-ಎ ಎನ್ನುವ ರಾಸಾಯನಿಕವು ಮೃದುವಾದ ವೀರ್ಯಗಳ ಗುಣಮಟ್ಟವನ್ನು ಕುಗ್ಗಿಸುತ್ತದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇರುವ ಪಾನೀಯಗಳು, ಮದ್ಯ ಪಾನೀಯಗಳನ್ನು ಸೇವಿಸುವ ಪುರುಷರು ಕಡಿಮೆ ವೀರ್ಯಾಣು ಸಂಖ್ಯೆಯನ್ನು ಹೊಂದುವ ಅಪಾಯವಿದೆ ಎಂದು ಜೈಸ್ಪರ್ ಅಭಿಪ್ರಾಯಿಸಿದ್ದಾರೆ. ಮೃದು ಪಾನೀಯಗಳು(ತಂಪು ಪಾನೀಯ) ಕೆಫೀನ್ ಮತ್ತು ಫ್ರಕ್ಟೋಸ್‍ಅನ್ನು ಒಳಗೊಂಡಿದೆ.

cold drinks

ಇವು ಮಹಿಳೆಯರ ಅಂಡಾಶಯದ ಅಸ್ವಸ್ಥತೆಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ. ಕೆಫೀನ್‍ನಿಂದ ಗರ್ಭಾಶಯದ ರಕ್ತದ ಹರಿವು ಕಡಿಮೆಯಾಗುತ್ತದೆ. ಮುಟ್ಟಿನ ರಕ್ತ ಸ್ರಾವವೂ ಕಡಿಮೆಯಾಗುತ್ತದೆ. ಕೆಫಿನ್ ಆಸ್ಪರ್ಟಮೆ ಮತ್ತು ಫ್ರಕ್ಟೋಸ್‍ಗಳ ಸಂಯೋಜನೆ ಲೈಂಗಿಕ ಹಾರ್ಮೋನ್‍ಗಳ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಲಕ್ನೋ ಮೂಲದ ಐವಿಎಫ್ ತಜ್ಞೆ ರಾಧಿಕಾ ವಾಜಪೇಯಿ ಹೇಳಿದ್ದಾರೆ.    

ತಂಪು ಪಾನೀಯ ಸೇವನೆ: ಅಪಾಯ ಕಟ್ಟಿಟ್ಟ ಬುತ್ತಿ!

English summary

Do Artificially Sweetened Sodas Cause Infertility

Doctors say that sedentary life, consumption of artificially sweetened sodas and aerated drinks may also cause infertility in humans.
Story first published: Wednesday, May 17, 2017, 11:05 [IST]
Subscribe Newsletter