Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯೆಂದರೆ ಅದು ಬಂಜೆತನ. ಯಾವುದೇ ಸುರಕ್ಷಿತ ವಿಧಾನಗಳಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೂ ಕೂಡ ಮಹಿಳೆಯು ಗರ್ಭಧರಿಸಲು ಅಸಮರ್ಥಳಾಗುವುದೇ ಬಂಜೆತನ. ಸಂಪೂರ್ಣ ಅವಧಿಗೆ ಗರ್ಭಧಾರಣೆ ಮಾಡಲಾಗದ ಮಹಿಳೆ ಕೂಡ ಇದೇ ವ್ಯಾಪ್ತಿಗೆ ಬರುತ್ತಾಳೆ. ಒಂದು ವರ್ಷ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ ಬಳಿಕವೂ ಮಗು ಗರ್ಭಧರಿಸಲು ವಿಫಲರಾದರೆ ಆಗ ಆ ದಂಪತಿಗೆ ಬಂಜೆತನವಿದೆ ಎಂದು ಪರಿಗಣಿಸಲಾಗುತ್ತದೆ. ಬಂಜೆತನಕ್ಕೆ ಹಲವಾರು ಕಾರಣಗಳಿವೆ. ಇದು ವಯಸ್ಸು, ಆಹಾರಕ್ರಮ, ಜೀವನಶೈಲಿ, ಒತ್ತಡ, ವೈದ್ಯಕೀಯ ಪರಿಸ್ಥಿತಿ ಅಥವಾ ಕೆಲಸದ ವಾತಾವರಣದಲ್ಲಿ ಒಡ್ಡುವಿಕೆ ಇದಕ್ಕೆ ಕಾರಣವಾಗಿರಬಹುದು. ಇದು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ, ಬಂಜೆತನಕ್ಕೂ ಕಾರಣವಾಗಬಹುದು.
ಅಮೆರಿಕಾದ ದ ಮಯೊ ಕ್ಲಿನಿಕ್ ನ ಪ್ರಕಾರ ಶೇ. 40ರಿಂದ 50ರಷ್ಟು ಬಂಜೆತನವು ಮಹಿಳೆಯರಲ್ಲಿನ ಸಮಸ್ಯೆಯಿಂದ ಬರುತ್ತದೆ. ಅನುವಂಶೀಯ ಸಮಸ್ಯೆ, ಅಂಡೋತ್ಪತ್ತಿ ಸಮಸ್ಯೆ, ಹಾರ್ಮೋನ್ ಅಸಮತೋಲನ, ಅಧಿಕ ತೂಕ ಮತ್ತು ದೇಹರಚನೆಯ ವಿರೂಪಗಳಿಂದಾಗಿ ಮಹಿಳೆಯರಲ್ಲಿ ಬಂಜೆತನ ಬರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಚಿಕಿತ್ಸೆಯಿದೆ. ಆದರೆ ಮತ್ತೆ ಕೆಲವು ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆಯಿಲ್ಲ. ಬಂಜೆತನದ ಚಿಕಿತ್ಸೆಯ ಗೊಂದಲದಲ್ಲಿ ಸಿಲುಕುವುದಕ್ಕಿಂತ ಮಹಿಳೆಯರಲ್ಲಿ ಬಂಜೆತನ ಹೇಗೆ ತಡೆಯಬಹುದು ಎಂದು ತಿಳಿದುಕೊಳ್ಳುವುದು ಮುಖ್ಯ.

ಮಹಿಳೆಯರಲ್ಲಿ ಬಂಜೆತನ ಬರದಂತೆ ಮಾಡಲು ಸಮಸ್ಯೆಗೆ ಕಾರಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮಹಿಳೆಯರಲ್ಲಿ ಬಂಜೆತನ ತಡೆಯುವುದು ಹೇಗೆಂದು ನೀವು ಉತ್ತರಕ್ಕಾಗಿ ಕಾಯುತ್ತಿದ್ದರೆ ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯಗೊಳ್ಳುತ್ತದೆ. ಮಹಿಳೆಯರಲ್ಲಿನ ಬಂಜೆತನ ತಡೆಯಲು ಕೆಲವೊಂದು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.
ಆಹಾರಕ್ರಮ
ಮಹಿಳೆಯರಲ್ಲಿ ಬಂಜೆತನ ತಡೆಯಲು ಆಹಾರ ಕ್ರಮವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನೀವು ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ನ್ನು ಕಡ್ಡಾಯವಾಗಿ ತ್ಯಜಿಸಬೇಕು. ಇಂತಹ ಆಹಾರಗಳು ಸಂಯೋಜಕ ಮತ್ತು ಸಂಸ್ಕರಿತವಾಗಿರುತ್ತದೆ. ಇದು ನಿಮ್ಮ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಆಹಾರ ಕ್ರಮದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬಳಸುವುದು ಮಹಿಳೆಯರಲ್ಲಿ ಬಂಜೆತನ ತಡೆಗಟ್ಟಲು ಒಂದು ಅತ್ಯುತ್ತಮ ವಿಧಾನ.
ವೈದ್ಯಕೀಯ ಸಲಹೆ
ನಿಮ್ಮ ಫಲವತ್ತತೆಗೆ ಕಾರಣವಾಗುವಂತಹ ವೈದ್ಯಕೀಯ ಪರಿಸ್ಥಿತಿ ತಿಳಿದುಕೊಳ್ಳಲು ವೈದ್ಯಕೀಯ ಸಲಹೆ ಪಡೆಯುವುದು ಅತ್ಯುತ್ತಮ ವಿಧಾನ. ಬಂಜೆತನಕ್ಕೆ ಕಾರಣವಾಗುವಂತಹ ಯಾವುದೇ ಚಿಹ್ನೆಗಳು ನಿಮಗೆ ಕಾಣಿಸುತ್ತಿದ್ದರೆ ಅದರ ಬಗ್ಗೆ ವೈದ್ಯರಲ್ಲಿ ಮಾತನಾಡಿ. ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆ ಮಾಡಿ ಚಿಕಿತ್ಸೆ ಮಾಡುವುದರಿಂದ ಮಹಿಳೆಯರಲ್ಲಿ ಬಂಜೆತನ ತಡೆಗಟ್ಟಬಹುದು.
ವೈದ್ಯಕೀಯ ಫಿಟ್ ನೆಸ್
ವೈದಕೀಯವಾಗಿ ಫಿಟ್ ಇರುವುದು ಮಹಿಳೆಯರಲ್ಲಿ ಬಂಜೆತನ ತಡೆಗಟ್ಟಲು ತುಂಬಾ ನೆರವಾಗಬಹುದು. ಡಯಾಬಿಟಿಸ್, ಥೈರಾಯ್ಡ್ ಸಮಸ್ಯೆ ಮತ್ತು ಹಾರ್ಮೋನ್ ಅಸಮತೋಲನದಂತಹ ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳು ಫಲವತ್ತತೆ ಮೇಲೆ ಪರಿಣಾಮ ಬೀರಬಹುದು. ಇಂತಹ ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಬಂಜೆತನ ತಡೆಗಟ್ಟಬಹುದು.
ಒಳ್ಳೆಯ ಅಭ್ಯಾಸಗಳು
ನಿಮ್ಮ ಅಭ್ಯಾಸಗಳು ಒಳ್ಳೆಯದಿಲ್ಲದಿದ್ದರೆ ಬಂಜೆತನ ತಡೆಗಟ್ಟುವುದು ಹೇಗೆಂದು ಚಿಂತಿಸಿ ಫಲವಿಲ್ಲ. ಧೂಮಪಾನ ಬಿಡಿ, ಆಲ್ಕೋಹಾಲ್ ಮತ್ತು ಇತರ ಮಾದಕ ದ್ರವ್ಯಗಳನ್ನು ತ್ಯಜಿಸಿ. ಒಳ್ಳೆಯ ಅಭ್ಯಾಸಗಳು ಮಹಿಳೆಯರಲ್ಲಿ ಬಂಜೆತನ ತಡೆಗಟ್ಟಲು ಅತ್ಯುತ್ತಮ ವಿಧಾನ.
ಆರೋಗ್ಯಕರ ತೂಕ
ಮಹಿಳೆಯರಲ್ಲಿ ಬಂಜೆತನಕ್ಕೆ ಕೊಬ್ಬು ಅತ್ಯಂತ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಕೊಬ್ಬಿನಿಂದಾಗಿ ಹಾರ್ಮೋನ್ ಅಸಮತೋಲನವಾಗಿ ಅದರ ಪರಿಣಾಮ ಬಂಜೆತನ ಉಂಟಾಗಬಹುದು. ನಿಮ್ಮ ತೂಕ ಇಳಿಸುವ ಮೂಲಕ ಪಿಸಿಒಎಸ್ ನಂತಹ ಪರಿಸ್ಥಿತಿಯನ್ನು ಸರಿಪಡಿಸಬಹುದು. ಮಹಿಳೆಯರಲ್ಲಿ ಬಂಜೆತನ ತಡೆಗಟ್ಟುವುದು ಹೇಗೆಂದು ತಿಳಿಯಲು ಬಯಸಿದ್ದರೆ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಇದಕ್ಕೆ ಒಳ್ಳೆಯ ಸಲಹೆ.
ಯೋಗ ಮತ್ತು ವ್ಯಾಯಾಮ
ಯೋಗ ಮತ್ತು ವ್ಯಾಯಾಮವು ಮಹಿಳೆಯರಲ್ಲಿ ಬಂಜೆತನ ತಡೆಗಟ್ಟಬಹುದು. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಡುವುದಲ್ಲದೆ ನಿಮ್ಮ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಒತ್ತಡ ಮತ್ತು ಖಿನ್ನತೆ ನಿವಾರಿಸುವಲ್ಲಿ ಯೋಗ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವ್ಯಾಯಾಮವು ನಿಮ್ಮ ದೇಹದ ತೂಕವನ್ನು ಸಮತೋಲದಲ್ಲಿಡಲು ನೆರವಾಗುತ್ತದೆ.
ಜೀವನಶೈಲಿ
ಮಹಿಳೆಯರಲ್ಲಿ ಬಂಜೆತನ ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ನಡೆಸುವುದು ಮುಖ್ಯ. ನಿಮ್ಮ ಜೀವನಶೈಲಿಯುವ ನಿಮ್ಮ ಜೀವನದ ಬಗ್ಗೆ ಎಲ್ಲವನ್ನು ತಿಳಿಸುತ್ತದೆ. ಇದು ನಿಮ್ಮ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯಕರ ಜೀವನಶೈಲಿ ಪಾಲಿಸಿ ಮತ್ತು ಇದು ಮಹಿಳೆಯರಲ್ಲಿ ಬಂಜೆತನ ಹೇಗೆ ತಡೆಯುತ್ತದೆ ಎಂದು ನೋಡಿ.



Click it and Unblock the Notifications
