For Quick Alerts
ALLOW NOTIFICATIONS  
For Daily Alerts

ಮಹಿಳೆಯರು ತಿಳಿದಿರಬೇಕು.... ಈ ಮಾತ್ರೆಗಳು ಅಪಾಯ ತರಬಲ್ಲವು!

ಇತ್ತೀಚೆಗೆ ನಡೆಸಿದ ಕೆಲವು ಅಧ್ಯಯಗಳ ಪ್ರಕಾರ ಚಿಕ್ಕ-ಪುಟ್ಟ ಕಾರಣಗಳಿಗೂ ಅತಿಯಾಗಿ ಪ್ರತಿಜೀವಕ ಮಾತ್ರೆಗಳನ್ನು ಸೇವಿಸುವುದರಿಂದ ಗರ್ಭಪಾತವಾಗುವುದು ಎನ್ನುವುದನ್ನು ದೃಢಪಡಿಸಿದೆ.

By Divya
|

ಮಹಿಳೆಯರ ದೈಹಿಕ ಆರೋಗ್ಯವು ಸಾಮಾನ್ಯವಾಗಿ ಸೂಕ್ಷ್ಮವಾಗಿರುತ್ತದೆ. ಅವರು ಸೇವಿಸುವ ಆಹಾರ, ಜೀವನ ಶೈಲಿ ಮತ್ತು ಮಾತ್ರೆಗಳಿಂದ ಆರೋಗ್ಯದಲ್ಲಿ ಅನೇಕ ತೊಂದರೆಗಳುಂಟಾಗುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ಪ್ರತಿಜೀವಕ (ಅಂಟಿಬಯೋಟಿಕ್ಸ್) ಮಾತ್ರೆಗಳು ಅನೇಕ ಅಡ್ಡ ಪರಿಣಾಮಗಳನ್ನುಂಟುಮಾಡುತ್ತವೆ.

tablets and water

ಇತ್ತೀಚೆಗೆ ನಡೆಸಿದ ಕೆಲವು ಅಧ್ಯಯಗಳ ಪ್ರಕಾರ ಚಿಕ್ಕ-ಪುಟ್ಟ ಕಾರಣಗಳಿಗೂ ಅತಿಯಾಗಿ ಪ್ರತಿಜೀವಕ ಮಾತ್ರೆಗಳನ್ನು ಸೇವಿಸುವುದರಿಂದ ಗರ್ಭಪಾತವಾಗುವುದು ಎನ್ನುವುದನ್ನು ದೃಢಪಡಿಸಿದೆ. ಕೆನಡಾದ ಕ್ವಿಬೆಕ್ ಯೂನಿವರ್ಸೈಟ್ ಡಿ ಮಾಂಟ್ರಿಯಲ್‍ನ ಫಾರ್ಮಸಿ ಫ್ಯಾಕಲ್ಟಿ ಅನಿಕ್ ಬೆರಾರ್ಡ್ ಹೇಳುವ ಪ್ರಕಾರ ಪ್ರತಿಜೀವಕಗಳನ್ನು ಅತಿಯಾಗಿ ಸೇವಿಸುವ ಮಹಿಳೆಯರಲ್ಲಿ ಸ್ವಾಭಾವಿಕ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಿದ್ದಾರೆ.

ಅದರಲ್ಲೂ ಮ್ಯಾಕ್ರೋಲೈಡ್ಸ್, ಕ್ವಿನೋಲೋನೆಸ್, ಟೆಟ್ರಾಸೈಕ್ಲಿನೆಸ್, ಸಲ್ಫೋನಮೈಡ್ಸ್, ಮೆಟ್ರೊನಿಡಾಜೋಲ್ ಎಂಬ ಪ್ರತಿಜೀವಕಗಳ ಮಾತ್ರೆಯು ಹೆಚ್ಚು ಅಡ್ಡಪರಿಣಾಮ ಬೀರುವವು ಎಂದು ಹೇಳಿದೆ. ಪ್ರತಿಜೀವಕಗಳ ಬಳಕೆಯಿಂದ ಶೇ. 60ರಷ್ಟು ಸ್ವಾಭಾವಿಕ ಗರ್ಭಪಾತವಾಗುವ ಸಂಭವವಿರುತ್ತದೆ.

ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ (ಸಿಎಮ್‍ಎಜೆ) ಪ್ರಕಟಿಸಿರುವ ಅಧ್ಯಯನದ ಪ್ರಕಾರ 8,702 ಗರ್ಭಿಣಿಯರು ಸ್ವಾಭಾವಿಕ ಗರ್ಭಪಾತಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆಗೆ ಒಳಗಾದ ಮಹಿಳೆಯರು ವಯಸ್ಸಾದವರು, ಬಹು ಆರೋಗ್ಯ ಸಮಸ್ಯೆ ಹೊಂದಿರುವವರು, ಕೆಲವು ಸೋಂಕಿನಿಂದ ಅಥವಾ ಒಂಟಿಯಾಗಿ ವಾಸಿಸುತ್ತಿರವ ಕಾರಣಗಳಿಂದಾಗಿರ ಬಹುದು ಎಂದು ಹೇಳಿದೆ.

ಇದನ್ನೂ ಓದಿ - ಗರ್ಭಪಾತದ ಬಳಿಕ ಫಲವತ್ತತೆಯನ್ನು ನಿರೀಕ್ಷಿಸಬಹುದೇ?

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಲ್ಲಿ ಮೂತ್ರದ ಸೋಂಕಾದ ಎರಿಥ್ರೋಮೈಸಿನ್ ಮತ್ತು ನಿಟ್ರೊಫಂಟೊಯಿನ್‍ನಿಂದ ಸಾಮಾನ್ಯವಾಗಿ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಲ್ಲದೆ ಸೋಂಕಿನ ತೀವ್ರತೆಯಿಂದ ಗರ್ಭಪಾತವಾಗುವುದು ಎನ್ನಲಾಗುತ್ತದೆ.

ಪ್ರತಿಜೀವಕ ಮಾತ್ರೆಯನ್ನು ಗರ್ಭಿಣಿಯರಿಗೆ ವೈದ್ಯರು ಸೂಚಿಸುವುದಿಲ್ಲ. ಹಾಗೊಮ್ಮೆ ಸೂಚಿಸಿದರೂ ಅದು ಗರ್ಭಿಣಿಯ ಸಮಸ್ಯೆಯ ಆಧಾರದಮೇಲೆ ಸಲಹೆ ನೀಡಲಾಗುತ್ತದೆ. ಅವು ಕಡಿಮೆ ಪ್ರಮಾಣದ ಪ್ರತಿಜೀವಕ ಅಂಶ ಹೊಂದಿರುವ ಮಾತ್ರೆಗಳಾಗಿರುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ - ಗರ್ಭಪಾತವಾದಾಗ ತಿನ್ನಬಾರದ ಆಹಾರಗಳು

ಗರ್ಭಾವಸ್ಥೆಯಲ್ಲಿ ಉಂಟಾಗುವ ಸೋಂಕಿನ ಚಿಕಿತ್ಸೆಯ ಮಾರ್ಗಸೂಚಿಯನ್ನು ನವೀಕರಿಸುವ ಸಲುವಾಗಿ ಈ ಸಂಶೋಧನೆ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.

English summary

Do Antibiotics Increase The Risk Of Miscarriage?

Women who take common antibiotics to treat various infections during early pregnancy may be at two-fold risk of suffering a miscarriage, according to a new study. These antibiotics are macrolides, quinolones, tetracyclines, sulfonamides and metronidazole.
X
Desktop Bottom Promotion