ಹುಟ್ಟುವ ಮಕ್ಕಳಲ್ಲಿ ಸ್ಥೂಲಕಾಯ-'ತಂಪು ಪಾನೀಯವೇ' ಕಾರಣ!

By: Arshad
Subscribe to Boldsky

ಗರ್ಭಾವಸ್ಥೆಯಲ್ಲಿ ಪ್ರತಿದಿನ ಕನಿಷ್ಠ ಒಂದು ಲೋಟವಾದರೂ ಕೃತಕ ಸಿಹಿಕಾರಕ ಬೆರೆಸಿ ತಯಾರಿಸಿದ ಪೇಯವನ್ನು (ತಂಪು ಪಾನೀಯ) ಕುಡಿದ ತಾಯಂದಿರಿಗೆ ಜನಿಸಿದ ಮಕ್ಕಳು ಏಳು ವರ್ಷವಾಗುತ್ತಲೂ ಸ್ಥೂಲಕಾಯದತ್ತ ವಾಲುತ್ತಾರೆ ಎಂದು ಒಂದು ಸಂಶೋಧನೆ ಪ್ರಕಟಿಸಿದೆ.

ಮಕ್ಕಳಲ್ಲಿ ಉಂಟಾಗುವ ಸ್ಥೂಲಕಾಯ ಚಿಂತಾಜನಕ ವಿಷಯವಾಗಿದ್ದು ಮಗು ಬೆಳೆದಂತೆ ಆರೋಗ್ಯ ಸಂಬಂಧಿತ ತೊಂದರೆಗಳು ಹೆಚ್ಚುತ್ತಾ ಹೋಗುತ್ತವೆ. ಮಧುಮೇಹ, ಹೃದಯದ ತೊಂದರೆ, ಪಾರ್ಶ್ವವಾಯು ಆವರಿಸುವುದು, ಕೆಲವು ಕ್ಯಾನ್ಸರ್ ಆವರಿಸುವುದು ಮೊದಲಾದವು ಚಿಕ್ಕವಯಸ್ಸಿಗೇ ಕಾಣಿಸಿಕೊಳ್ಳುತ್ತವೆ.

"ನಮ್ಮ ಸಂಶೋಧನೆಯಲ್ಲಿ ಕಂಡುಕೊಂಡಂತೆ ಗರ್ಭಾವಸ್ಥೆಯಲ್ಲಿ ಕೃತಕ ಸಿಹಿಕಾರಕ ಪೇಯವನ್ನು ಸೇವಿಸಿದ ತಾಯಂದಿರಿಗೆ ಜನಿಸಿದ ಮಕ್ಕಳು ಹೀಗೆ ಸೇವಿಸಿಲ್ಲದ ತಾಯಾಂದಿರಿಗೆ ಜನಿಸಿದ ಮಕ್ಕಳಿಗಿಂತಲೂ ಬೆಳವಣಿಗೆಯ ಹಂತದಲ್ಲಿಯೇ ಸ್ಥೂಲಕಾಯ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ" ಎಂದು Eunice Kennedy Shriver National Institute of Child Health and Human Development (NICHD) ಸಂಸ್ಥೆ ಕ್ಯೂಲಿನ್ ಝಾಂಗ್ ರವರು ತಿಳಿಸಿದ್ದಾರೆ. 

Soft Drinks

ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯವನ್ನು ಅಧ್ಯಯನ ಮಾಡಿದ ಸಂಶೋಧಕರ ಪ್ರಕಾರ ಮಗುವನ್ನು ಆವರಿಸಿರುವ ಗರ್ಭಕೋಶದ ದ್ರವ (amniotic fluid) ದ ಪ್ರಮಾಣ ಹೆಚ್ಚುತ್ತಿದ್ದಂತೆಯೇ ತಾಯಂದಿರು ಹೆಚ್ಚು ಹೆಚ್ಚು ದ್ರವಾಹಾರವನ್ನು ಸೇವಿಸಬೇಕಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ತೂಕ ಏರದೇ ಇರುವಂತೆ ನೋಡಿಕೊಳ್ಳಲು ಕೆಲವು ತಾಯಂದಿರು ತಾಜಾ ಹಣ್ಣುಗಳ ಜ್ಯೂಸ್ ಬದಲಿಗೆ ಕಡಿಮೆ ಕ್ಯಾಲೋರಿ ಹೊಂದಿರುವ ಕೃತಕ ರುಚಿಯನ್ನು ಬೆರೆಸಿರುವ ಪೇಯಗಳನ್ನು ಕುಡಿಯುತ್ತಾರೆ.

International Journal of Epidemiology ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಗರ್ಭಾವಸ್ಥೆಯಲ್ಲಿ ಕೃತಕ ರುಚಿಯನ್ನು ಬೆರೆಸಿದ್ದ ಪೇಯಗಳನ್ನು ಸೇವಿಸಿದ್ದ ತಾಯಂದಿರಿಗೆ ಜನಿಸಿದ ಮಕ್ಕಳು ಸ್ಥೂಲಕಾಯಕ್ಕೆ ಒಳಗಾಗುವ ಸಾಧ್ಯತೆ ಇತರ ಮಕ್ಕಳಿಗಿಂತ 60% ರಷ್ಟು ಹೆಚ್ಚಿರುತ್ತದೆ. ಈ ತಾಯಂದಿರಿಗೆ ಜನಿಸಿದ ಮಕ್ಕಳು ಏಳು ವರ್ಷವಾಗುತ್ತಲೇ ಸಾಮಾನ್ಯ ಮಕ್ಕಳಿಗಿಂತ ದುಪ್ಪಟ್ಟು ತೂಕ ಹೊಂದಿರುತ್ತಾರೆ.

ಗರ್ಭಾವಸ್ಥೆಯಲ್ಲಿ ತೂಕ ಏರಬಾರದೆಂದು ಕೃತಕ ರುಚಿಯ ಪೇಯಗಳನ್ನು ಕುಡಿಯುವುದರಿಂದ ಏನೂ ಪ್ರಯೋಜನವಾಗದು. ಬದಲಿಗೆ ಈ ಪೇಯಗಳನ್ನು ಸೇವಿಸದೇ ಕೇವಲ ನೀರನ್ನು ಮಾತ್ರವೇ ಸೇವಿಸುತ್ತಾ ಬಂದಿರುವ ಮಹಿಳೆಯರಿಗೆ ಜನಿಸಿದ ಮಕ್ಕಳಿಗೆ ಸ್ಥೂಲಕಾಯ ಆವರಿಸುವ ಸಾಧ್ಯತೆ ಇತರ ಮಕ್ಕಳಿಗಿಂತಲೂ ಏಳು ಶೇಖಡಾ ಕಡಿಮೆ ಇರುತ್ತದೆ ಎಂದು ಸಂಶೋಧನಕಾರರು ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಗರ್ಭಾವಸ್ಥೆಯ ಮಧುಮೇಹದ ತೊಂದರೆ ಇದ್ದ ಒಂಭೈನೂರಕ್ಕೂ ಹೆಚ್ಚು ಮಹಿಳೆಯರ ಆರೋಗ್ಯದ ಅಂಕಿಅಂಶಗಳನ್ನು ಕಲೆಹಾಕಿ ವಿಶ್ಲೇಷಿಸಲಾಗಿದೆ. ಆದರೆ ಇದಕ್ಕೂ ಮುನ್ನ ಪ್ರಾಣಿಗಳ ಮೇಲೆ ನಡೆದಿದ್ದ ಪ್ರಯೋಗಗಳ ಪ್ರಕಾರ ಸ್ಥೂಲಕಾಯ ಹೆಚ್ಚಲು ಜೀರ್ಣಾಂಗಗಳಲ್ಲಿರುವ ಕೆಲವು ವಿಧದ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ಕಾರಣವೆಂದು ನಂಬಲಾಗಿತ್ತು.

ಆದರೆ ಈ ಸಂಶೋಧನೆ ಇದನ್ನು ಸರಿಪಡಿಸಿದ್ದು ಆಹಾರದಲ್ಲಿನ ಕೃತಕ ರುಚಿಕಾರಕ ರಾಸಾಯನಿಕಗಳು ಮಕ್ಕಳ ಜೀರ್ಣಾಂಗಗಳು ಅಗತ್ಯಕ್ಕೂ ಹೆಚ್ಚೇ ಪ್ರಮಾಣದಲ್ಲಿ ಆಹಾರದಿಂದ ಸಕ್ಕರೆಯನ್ನು ಹೀರಿಕೊಂಡು ರಕ್ತಕ್ಕೆ ಗ್ಲುಕೋಸ್ ಸೇರಿಸುವುದೇ ಕಾರಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

English summary

Diet Beverages In Pregnancy May Up Child Obesity Risk

Babies born to women who drank at least one artificially sweetened beverage per day during pregnancy were more likely to be overweight or obese at age 7, a study has showed. Childhood obesity is known to increase the risk for certain health problems later in life, such as diabetes, heart disease, stroke and some cancers
Subscribe Newsletter