ಗರ್ಭಿಣಿಯರೇ ಹುಷಾರು: ನಿಷ್ಕಾಳಜಿ ಮಾಡಿದರೆ ಅಪಾಯ ತಪ್ಪಿದ್ದಲ್ಲ!

By: manu
Subscribe to Boldsky

ಗರ್ಭಿಣಿಯಾಗುವುದು ಎಂಥಾ ಒಂದು ಅದ್ಭುತವಾದ ಅನುಭವವೋ, ಅಷ್ಟೇ ಚಿಂತೆಗೀಡು ಮಾಡುವಂತಹ ಕೆಲವೊಂದು ಘಟನೆಗಳ ಅನುಭವವು ಸಹ ಹೌದು. ಇಲ್ಲಿ ಖುಷಿಯ ಜೊತೆಗೆ ಕಿರಿಕಿರಿಯು ಉಚಿತವಾಗಿ ದೊರೆಯುತ್ತದೆ. ಬೆಳಗ್ಗೆ ಎದ್ದ ಕೂಡಲೆ ಮಂಕು ಕವಿದಂತಿರುವುದು, ನೋವಿನಿಂದ ಊದಿಕೊಳ್ಳುವ ಸ್ತನಗಳು ಮತ್ತು ಪಾದಗಳು ಮತ್ತು ವಾತ ಇವೆಲ್ಲವು ಸಹಜವಾಗಿ ಸಂಭವಿಸುತ್ತ ಇರುತ್ತವೆ.

ಎಚ್ಚರ: ಗರ್ಭಾವಸ್ಥೆಯ ಏಳು ಲಕ್ಷಣಗಳನ್ನು ಕಡೆಗಣಿಸಲೇಬಾರದು

ಆದರೆ ಇವೆಲ್ಲವುಗಳಿಗಿಂತ ಗರ್ಭಿಣಿಯರನ್ನು ಭಯಭೀತರನ್ನಾಗಿ ಮಾಡುವುದು ಅನಿರೀಕ್ಷಿತ ರಕ್ತಸ್ರಾವ. ಇದು ನಿಜಕ್ಕೂ ಭಯಾನಕವಾದ ಘಟನೆಯಾಗಿರುತ್ತದೆ. ಅಂತಹ ಸಮಯದಲ್ಲಿ ವೈದ್ಯರ ಸಲಹೆಯನ್ನು ಬಿಟ್ಟು ಬೇರಾವ ಔಷಧಿಯನ್ನೂ ಸ್ವೀಕರಿಸಬಾರದು. ಕೆಲವರಿಗೆ ಗರ್ಭಾವಸ್ಥೆಯ ಆರಂಭದ 2-3 ತಿಂಗಳಲ್ಲಿ ರಸ್ತಸ್ರಾವ ಕಾಣಿಸಿಕೊಳ್ಳುತ್ತದೆ. ಇದು ಗರ್ಭಪಾತದ ಸಂಕೇತವಾಗಿರಬಹುದು. ಇಲ್ಲವೇ ಕೆಲವೊಮ್ಮೆ ಬೇರೆ ಕಾರಣಗಳಿಗೂ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ.  

ಗರ್ಭಿಣಿಯರ ಪ್ರಾಣ ಹಿಂಡುವ ಮೂತ್ರ ಸೋಂಕಿನ ನಿವಾರಣೆ ಹೇಗೆ?

ಇಂತಹ ಸಮಯದಲ್ಲಿ ನಾವೇ ನಿರ್ಣಯ ತೆಗೆದುಕೊಂಡು ಸುಮ್ಮನಾಗಬಾರದು. ವೈದ್ಯರಲ್ಲಿ ಸೂಕ್ತ ಪರೀಕ್ಷೆ ಮತ್ತು ಸಲಹೆಯನ್ನು ಪಡೆದುಕೊಳ್ಳಬೇಕು. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಬಗೆಯ ರಕ್ತಸ್ರಾವ ಉಂಟಾದರೆ ನೋವು ಮತ್ತು ಸೆಳೆತ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯ ಈ ರಕ್ತ ಸ್ರಾವವು ಹೆಚ್ಚು ಭಯಾನಕವಾದದ್ದು ಹೌದು. ಇದು ಯಾವೆಲ್ಲ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ನೆನಪಿಡಬೇಕಾದ ವಿಚಾರವೆಂದರೆ ಅದೇನೇ ತೊಂದರೆ ಇದ್ದರೂ ವೈದ್ಯರ ಮೊರೆ ಹೋಗಲೇ ಬೇಕು... 

ಇಂಪ್ಲಾಂಟೇಶನ್ ಬ್ಲೀಡಿಂಗ್ ಅಥವಾ ಸ್ಪಾಟಿಂಗ್

ಇಂಪ್ಲಾಂಟೇಶನ್ ಬ್ಲೀಡಿಂಗ್ ಅಥವಾ ಸ್ಪಾಟಿಂಗ್

ಯಾವಾಗ ಫಲವತ್ತಾದ ಅಂಡಾಣು ಗರ್ಭಕೋಶದ ಗೋಡೆಗಳಿಗೆ ಅಂಟಿಕೊಳ್ಳುತ್ತದೆಯೋ, ಆಗ ಇದು ಕಂಡು ಬರುತ್ತದೆ. ಗರ್ಭಧರಿಸಿದ ನಂತರದ 10 ರಿಂದ 14 ದಿನಗಳ ನಂತರ ಇದು ಕಂಡು ಬರುತ್ತದೆ.

ಅವಧಿ ಪೂರ್ವ ನೋವು

ಅವಧಿ ಪೂರ್ವ ನೋವು

ಇದೇಕೆ ಸಂಭವಿಸುತ್ತದೆ: ಇದನ್ನು ಅವಧಿ ಪೂರ್ವ ನೋವು ಎಂದು ಸಹ ಕರೆಯುತ್ತಾರೆ. ಇದು ನಿಮ್ಮ ದೇಹವು ಆದಷ್ಟು ಬೇಗ ಪ್ರಸವಕ್ಕೆ ತಯಾರಾಗಿದೆ ಎಂದು ಸೂಚಿಸುವಾಗ ಕಾಣಿಸಿಕೊಳ್ಳುತ್ತದೆ (ಸಾಮಾನ್ಯವಾಗಿ ಇದು 20 ವಾರಗಳ ನಂತರ ಅಥವಾ ನಿಮ್ಮ ಪ್ರಸವಕ್ಕೆ ನೀಡುಲಾದ ಗಡುವಿನ 3 ವಾರಗಳ ಮೊದಲು ಕಾಣಿಸಿಕೊಳ್ಳುತ್ತದೆ).

ಗರ್ಭಕಂಠದ ಸೂಕ್ಷ್ಮತೆ

ಗರ್ಭಕಂಠದ ಸೂಕ್ಷ್ಮತೆ

ಲೈಂಗಿಕತೆಯ ನಂತರ, ಹಾರ್ಮೋನ್‍ಗಳ ವ್ಯತ್ಯಾಸ ಮತ್ತು ಗರ್ಭಕಂಠದ ಸೂಕ್ಷ್ಮತೆಯಿಂದಲೂ ಸ್ವಲ್ಪ ಪ್ರಮಾಣದ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇದೆ.

ಸೋಂಕುಗಳು

ಸೋಂಕುಗಳು

ಗರ್ಭಕಂಠ ಅಥವಾ ಯೋನಿಗೆ ಕೆಲವು ಬ್ಯಾಕ್ಟೀರಿಯಾದ ಸೋಂಕು ತಗುಲಿದರೆ ರಕ್ತಸ್ರಾವ ಉಂಟಾಗುವುದು. ಇದರಿಂದ ಗರ್ಭಪಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕು.

ಉಪಚರ್ಮದ ಹೆಮಟೋಮಾ

ಉಪಚರ್ಮದ ಹೆಮಟೋಮಾ

ಜರಾಯುಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ರಕ್ತಸ್ರಾವ ಉಂಟಾಗುವುದು. ಇದು ಶೇ.1 ರಷ್ಟು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಈ ಕಾರಣದ ರಕ್ತಸ್ರಾವದಲ್ಲಿ ಅಧಿಕ ಪ್ರಮಾಣದ ರಕ್ತಸ್ರಾವ ಉಂಟಾಗುವುದು. ಜೊತೆಗೆ ಇದು ಗರ್ಭಪಾತದಲ್ಲೇ ಅಂತ್ಯಗೊಳ್ಳುವುದು.

ಅವಳಿ ಶಿಶುಗಳು

ಅವಳಿ ಶಿಶುಗಳು

ಗರ್ಭದಲ್ಲಿ ಅವಳಿ ಶಿಶುಗಳಿದ್ದರೆ ರಕ್ತಸ್ರಾವ ಉಂಟಾಗುವುದು. ಇದು ಗರ್ಭಪಾತಕ್ಕೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು. ಇದಕ್ಕೆ ಇನ್ನೊಂದು ಕಾರಣ ಕಡಿಮೆ ಮಟ್ಟದ ಎಚ್‍ಸಿಜಿ ಪ್ರಮಾಣ.

ಗರ್ಭಪಾತದ ಬಗ್ಗೆ ಭಯ

ಗರ್ಭಪಾತದ ಬಗ್ಗೆ ಭಯ

ಗರ್ಭಕಂಠವು ಮುಚ್ಚಿದ್ದು, ಗರ್ಭಪಾತದ ಬಗ್ಗೆ ಯಾವುದೇ ಕುರುಹುಗಳಿಲ್ಲದೆ ಇದ್ದರೂ ರಕ್ತಸ್ರಾವ ಉಂಟಾದರೆ ಹೆಚ್ಚು ಗಮನ ನೀಡಬೇಕು. ಇಲ್ಲವಾದರೆ ಇದು ಗರ್ಭಪಾತಲ್ಲೇ ಕೊನೆಗೊಳ್ಳಬಹುದು.

ಅನುಚಿತ ಸ್ಥಾನದಲ್ಲಿ ಗರ್ಭಧಾರಣೆ

ಅನುಚಿತ ಸ್ಥಾನದಲ್ಲಿ ಗರ್ಭಧಾರಣೆ

ಫಲವತ್ತಾದ ಮೊಟ್ಟೆಯು ಗರ್ಭಕೋಶದ ನಾಳದಲ್ಲಿ(ಟ್ಯೂಬ್) ಕೂತಿದ್ದರೆ ನೋವು ಮತ್ತು ರಕ್ತಸ್ರಾವ ಉಂಟಾಗುವುದು. ಈ ಸಂದರ್ಭದಲ್ಲಿ ವೈದ್ಯರ ತಪಾಸಣೆ ಮತ್ತು ಸಲಹೆ ಬಹಳ ಮುಖ್ಯವಾದದ್ದು.

ಗರ್ಭಪಾತ

ಗರ್ಭಪಾತ

ದುರಾದೃಷ್ಟಕ್ಕೆ ಉಂಟಾಗುತ್ತಿರುವ ರಕ್ತಸ್ರಾವವು ಗರ್ಭಪಾತದ ಸ್ಪಷ್ಟ ಚಿಹ್ನೆಯಾಗಿರಬಹುದು. ಈ ಸಮಸ್ಯೆ ಎದುರಾದಾಗ ತಡ ಮಾಡದೆ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆದರೆ ಗರ್ಭಪಾತವನ್ನು ತಡೆಯಬಹುದು.

English summary

Causes Of Bleeding During Pregnancy

You have to be cautious during pregnancy and check for pain and cramps as it could be also an ectopic pregnancy that is causing the bleeding. Ectopic pregnancy can be dangerous as it may cause damage to the fallopian tube. Here are the most common reasons for first-trimester spotting or bleeding. You must visit your doctor to determine the reason.
Subscribe Newsletter