Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದೀರೇ? ಈ ಆಹಾರಗಳನ್ನು ತಪ್ಪದೇ ಸೇವಿಸಿ
ಒಂದು ವೇಳೆ ನಿಮ್ಮ ಗರ್ಭದಲ್ಲಿ ಅವಳಿ ಮಕ್ಕಳು ಬೆಳೆಯುತ್ತಿವೆ ಎಂದು ತಿಳಿದ ಬಳಿಕ ನಿಮ್ಮ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತಲ್ಲವೇ? ಹೌದು, ಅವಳಿ ಮಕ್ಕಳು ಎಂದರೆ ಎಲ್ಲರಿಗೂ ಇಷ್ಟವೇ. ಆದರೆ ತಾಯಿಯಾಗುತ್ತಿರುವವಳಿಗೆ ಮಾತ್ರ ಹೆಚ್ಚಿನ ಆರೈಕೆಯ ಅಗತ್ಯವಿದೆ. ಗರ್ಭದಲ್ಲಿ ಒಂದೇ ಮಗುವಿರಲಿ, ಅವಳಿ ಮಕ್ಕಳೇ ಇರಲಿ, ಪ್ರಾರಂಭಿಕ ದಿನದಿಂದಲೂ ಗರ್ಭಿಣಿಯ ದೇಹ ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಾ ಹೋಗುತ್ತದೆ. ತಾಯಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗಿರಲು ಮೊದಲ ದಿನದಿಂದ ಹಿಡಿದು ಹೆರಿಗೆಯರೆಗೂ ಗರ್ಭಿಣಿ ತನ್ನ ನಿತ್ಯದ ಚಟುವಟಿಕೆಗಳಲ್ಲಿ ಕೆಲವಾರು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಗರ್ಭಿಣಿಯ ದೇಹ ದಿನದಿನಕ್ಕೂ ತೂಕ ಗಳಿಸುತ್ತಲೇ ಸಾಗುವ ಕಾರಣ ಆರೋಗ್ಯಕರ ಆಹಾರ ಹಾಗೂ ಜೀವನಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಆಹಾರ ಎಷ್ಟು ಆರೋಗ್ಯಕರವಾಗಿರುತ್ತದೆಯೋ ಅಷ್ಟೂ ಗರ್ಭಿಣಿಗೂ ಗರ್ಭದಲ್ಲಿರುವ ಮಗುವಿಗೂ ಉತ್ತಮ ಆರೋಗ್ಯ ಪಡೆಯಲು ನೆರವಾಗುತ್ತದೆ. ಅಲ್ಲದೇ ಗರ್ಭಾವಸ್ಥೆಯಲ್ಲಿ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ಜಟಿಲತೆಗೆ ಒಳಗಾಗದಿರಲೂ ಸಾಧ್ಯವಾಗುತ್ತದೆ. ಆದ್ದರಿಂದ ಒಂದು ವೇಳೆ ನೀವು ಅವಳಿ ಮಕ್ಕಳ ಗರ್ಭಿಣಿಯಾಗಿದ್ದರೆ ಕೆಳಗೆ ವಿವರಿಸಿದ ಆಹಾರಗಳು ನಿಮಗೆ ಅತಿ ಹೆಚ್ಚು ಸೂಕ್ತವಾಗಿವೆ....

ಒಣಫಲಗಳು
ಒಣಫಲಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು ಹಾಗೂ ಒಮೆಗಾ-3 ಕೊಬ್ಬಿನ ಆಮ್ಲಗಳಿವೆ. ಇವು ವಿಶೇಷವಾಗಿ ಗರ್ಭಿಣಿ ಹಾಗೂ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಪೂರಕವಾಗಿವೆ.

ಹಾಲು
ಗರ್ಭಾವಸ್ಥೆಯ ಹೊರತಾಗಿಯೂ ಹಾಲು ಎಲ್ಲಾ ಸಮಯದಲ್ಲಿ ಉತ್ತಮ ಆಹಾರ ಹೌದು. ಆದರೆ ಗರ್ಭಾವಸ್ಥೆಯಲ್ಲಿ ಹಾಲಿನ ಸೇವನೆಯನ್ನು ಒಂದು ದಿನವೂ ಗರ್ಭಿಣಿಯಾದವಳು ತಪ್ಪಿಸಬಾರದು. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಪೂರಕವಾಗಿವೆ.

ಮೊಸರು
ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಯ್ಸಿಯಂ ಇದೆ. ವಿಶೇಷವಾಗಿ ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿರುವ ಗರ್ಭಿಣಿಗೆ ಹೆಚ್ಚಿನ ಕ್ಯಾಲ್ಸಿಯಂನ ಅಗತ್ಯವಿದೆ. ಮಗುವಿನ ಮೂಳೆ ಹಾಗೂ ಹಲ್ಲುಗಳ ಬೆಳವಣಿಗೆಗೆ ಹೆಚಿನ ಕ್ಯಾಲ್ಸಿಯಂ ಅಗತ್ಯವಿದ್ದು ಮೊಸರಿನ ಸೇವನೆಯಿಂದ ಈ ಕೊರತೆ ನೀಗುತ್ತದೆ.

ಮೀನು
ಒಂದು ವೇಳೆ ಮೀನು ನಿಮಗೆ ಅಲರ್ಜಿಕಾರಕವಲ್ಲದಿದ್ದಲ್ಲಿ ಮೀನನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ಪಾದರಸದ ಪ್ರಮಾಣ ಅತಿ ಕಡಿಮೆ ಇರುವ ಮೀನನ್ನೇ ಖರೀದಿಸಿ ಸೇವಿಸಿ. ಇದರಿಂದ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಅಗತ್ಯದ ವಿಟಮಿನ್ ಇ ಪ್ರಮಾಣವನ್ನು ಮೀನು ಪೂರೈಸುತ್ತದೆ.

ಕಡಲೆ ಕಾಳು
ಕಡ್ಲೆಕಾಳಿನಲ್ಲಿಯೂ ಪ್ರೋಟೀನ್ ಪ್ರಮಾಣ ಹೆಚ್ಚಿರುತ್ತದೆ. ವಿಶೇಷವಾಗಿ ನೆನೆಸಿಟ್ಟ ಹಾಗೂ ಪುಟ್ಟ ಮೊಳಕೆಯೊಡೆದಿರುವ ಕಡ್ಲೆಕಾಳು ಪ್ರೋಟೀನಿನ ಆಗರವಾಗಿದ್ದು ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿರುವ ಗರ್ಭಿಣಿಗೆ ಉತ್ತಮವಾದ ಆಹಾರವಾಗಿದೆ. ವಿಶೇಷವಾಗಿ ಮಗುವಿನ ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದ್ದು ಮೊಳಕೆ ಬರಿಸಿದ ಕಡಲೇ ಕಾಳು ಉತ್ತಮ ಆಯ್ಕೆಯಾಗಿದೆ.

ಮೊಟ್ಟೆ
ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು,ಪ್ರೋಟೀನ್ ಹಾಗೂ ವಿವಿಧ ಖನಿಜಗಳಿವೆ. ವಿಶೇಷವಾಗಿ ಅವಳಿಮಕ್ಕಳ ಗರ್ಭಿಣಿಗೆ ಈ ಎಲ್ಲಾ ಪೋಷಕಾಂಶಗಳು ಹೆಚ್ಚು ಅಗತ್ಯವಾಗಿವೆ.

ಪಾಲಕ್ ಅಥವಾ ಬಸಲೆ ಸೊಪ್ಪು
ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವಿದೆ. ಈ ಕಬ್ಬಿಣ ಕೆಂಪು ರಕ್ತಕಣಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕು. ಈಗ ಗರ್ಭದಲ್ಲಿ ಇಬ್ಬರು ಮಕ್ಕಳಿರುವ ಕಾರಣ ಹೆಚ್ಚಿನ ರಕ್ತಕಣಗಳ ಉತ್ಪಾದನೆಗೆ ಹೆಚ್ಚಿನ ಕಬ್ಬಿಣದ ಅಗತ್ಯವಿದ್ದು ಪಾಲಕ್ ಅಥವಾ ಬಸಲೆ ಸೊಪ್ಪುಗಳನ್ನು ನಿಯಮಿತವಾಗಿ ಗರ್ಭಿಣಿ ಸೇವಿಸುವುದು ಅಗತ್ಯ.

ಸೇಬು
ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುವುದರಿಂದ ಹೊಟ್ಟೆಯಲ್ಲಿರುವ ಮಕ್ಕಳ ಆರೋಗ್ಯ ಹಾಗೂ ತಾಯಿಯ ಆರೈಕೆಗೂ ಪೂರಕವಾಗಿದೆ. ಗರ್ಭಿಣಿಯರಿಗೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುವುದು.

ವಾಲ್‌ನಟ್
ಇದರಲ್ಲಿ ಒಮೆಗಾ-3 ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವುದರಿಂದ ಮಹಿಳೆಯರು ನಿತ್ಯವೂ ಸೇವಿಸಿದರೆ ಉತ್ತಮ. ಇದು ಹೊಟ್ಟೆಯಲ್ಲಿರುವ ಮಕ್ಕಳ ಮೆದುಳು ಬೆಳವಣಿಗೆಗೆ ಸಹಾಯಕವಾಗಿರುತ್ತದೆ.

ಬಾರ್ಲಿ
ಇದರಲ್ಲಿ ಕಾರ್ಬೋಹೈಡ್ರೇಟ್ ಉತ್ತಮವಾಗಿರುವುದರಿಂದ ಮಗು ಮತ್ತು ತಾಯಿಯ ಆರೋಗ್ಯ ಸುಧಾರಣೆಗೆ ಉತ್ತಮವಾಗಿದೆ. ಅಲ್ಲದೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.



Click it and Unblock the Notifications