For Quick Alerts
ALLOW NOTIFICATIONS  
For Daily Alerts

ಗಂಡಂದಿರು ಬಾಯ್ಬಿಟ್ಟು ಹೇಳುವುದಿಲ್ಲ, ಪ್ರೀತಿಯಲ್ಲಿ ಮೋಸವಿಲ್ಲ!

ಸಾಮಾನ್ಯವಾಗಿ ಪುರುಷರು ತಮ್ಮ ಅಭಿಲಾಷೆಗಳನ್ನು ತಮ್ಮ ಗರ್ಭವತಿ ಪತ್ನಿಯರ ಮೇಲೆ ಹೇರುವುದನ್ನು ಇಷ್ಟಪಡದ ಕಾರಣ ಇವನ್ನು ತಮ್ಮೊಳಗೇ ಇಟ್ಟುಕೊಳ್ಳುತ್ತಾರೆ. ಈ ಬದಲಾವಣೆಯೇ ಪತ್ನಿಯರಿಗೆ ಅಚ್ಚರಿ ತರಿಸುತ್ತದೆ....

By Manu
|

ವಿವಾಹದ ಬಳಿಕ ತಮ್ಮ ಸಂಗಾತಿಯ ಇಷ್ಟ ಅಭಿಲಾಷೆಗಳನ್ನು ಕಂಡುಕೊಂಡ ಮಹಿಳೆಯರು ತಾವು ಗರ್ಭ ಧರಿಸಿದ ಬಳಿಕ ತನ್ನ ಗಂಡನ ಅಭಿಲಾಷೆಗಳು ಬದಲಾಗುವುದನ್ನು ಗಮನಿಸಿರಬಹುದು. ಇದು ಹೆಚ್ಚಿನ ಮಹಿಳೆಯರಿಗೆ ಅಚ್ಚರಿ ತರಿಸುತ್ತದೆ. ವಾಸ್ತವವಾಗಿ ಹೆಚ್ಚಿನ ಪುರುಷರು ತಮ್ಮ ಸಂಗಾತಿ ಗರ್ಭ ಧರಿಸಿದ ಬಳಿಕ ಇನ್ನಷ್ಟು ಹೆಚ್ಚು ಇಷ್ಟಪಡುತ್ತಾರೆ. ಗರ್ಭಿಣಿ ಪತ್ನಿಯ ಮನವರಿಯಿರಿ ಪತಿರಾಯರೆ

ಈ ಅವಧಿಯಲ್ಲಿ ತಮ್ಮ ಅಭಿಲಾಷೆಗಳನ್ನು ತಮ್ಮ ಗರ್ಭವತಿ ಪತ್ನಿಯರ ಮೇಲೆ ಹೇರುವುದನ್ನು ಇಷ್ಟಪಡದ ಕಾರಣ ಇವನ್ನು ತಮ್ಮೊಳಗೇ ಇಟ್ಟುಕೊಳ್ಳುತ್ತಾರೆ. ಈ ಬದಲಾವಣೆಯೇ ಪತ್ನಿಯರಿಗೆ ಅಚ್ಚರಿ ತರಿಸುತ್ತದೆ. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆಯೋಣ...

ವಾಸ್ತವ #1

ವಾಸ್ತವ #1

ಗರ್ಭವತಿಯಾದ ಬಳಿಕ ಪತ್ನಿಯೊಂದಿಗಿನ ಸಮಾಗಮ ಆಕೆಗೆ ಹಾಗೂ ಹುಟ್ಟಲಿರುವ ಮಗುವಿಗೆ ತೊಂದರೆಯಾಗಬಹುದೆಂಬ ಕಾರಣದಿಂದ ಹೆಚ್ಚಿನ ಪುರುಷರು ಮುಂದಾಗುವುದಿಲ್ಲ. ಆದರೆ ಈ ಬಗ್ಗೆ ನಿಮಗಿಂತ ನಿಮ್ಮ ವೈದ್ಯರು ಸೂಕ್ತ ಸಲಹೆ ನೀಡಬಲ್ಲರು.

ವಾಸ್ತವ #2

ವಾಸ್ತವ #2

ತಮ್ಮ ಭಯ, ಆತಂಕ, ಉದ್ವೇಗಗಳ ಬಗ್ಗೆ ಪತಿ ಪತ್ನಿಯರು ಮುಕ್ತವಾಗಿ ತೆರೆದ ಮನಸ್ಸಿನಿಂದ ಸಮಾಲೋಚಿಸಿಕೊಂಡಾಗ ಇಬ್ಬರೂ ಹೆಚ್ಚು ನಿರಾಳತೆ ಮತ್ತು ನೆಮ್ಮದಿಯನ್ನು ಪಡೆಯಬಹುದು.

ವಾಸ್ತವ #3

ವಾಸ್ತವ #3

ಆರೋಗ್ಯತಜ್ಞರ ಪ್ರಕಾರ ಪತಿ ಪತ್ನಿಯರು ಜೊತೆಯಾಗಿ ಕಳೆಯುವ ಕ್ಷಣಗಳೇ ಹೆಚ್ಚು ಅಮೂಲ್ಯವಾಗಿದ್ದು ಶಾರೀರಿಕ ಸಂಬಂಧಕ್ಕಿಂತಲೂ ಹೆಚ್ಚು ಆತ್ಮೀಯತೆ ನೀಡುತ್ತದೆ.

ವಾಸ್ತವ #4

ವಾಸ್ತವ #4

ಗರ್ಭಾವಸ್ಥೆಯ ಎಲ್ಲಾ ಸಮಯದಲ್ಲಿ ಪತಿ ಪತ್ನಿಯರ ನಡುವಣ ಅಭಿಲಾಶೆಗಳು ಬದಲಾಗುತ್ತಾ ಹೋದರೂ ಪತಿ ಪತ್ನಿಯರ ನಡುವಣ ಆತ್ಮೀಯತೆ, ಬಾಂಧವ್ಯ ಮತ್ತು ಅನ್ಯೋನ್ಯತೆ ಎಲ್ಲಾ ಹಂತಗಳನ್ನು ಸುಲಭವಾಗಿ ದಾಟುವಂತೆ ಮಾಡುತ್ತದೆ.

ವಾಸ್ತವ #5

ವಾಸ್ತವ #5

ಆದ್ದರಿಂದ ನಿಮ್ಮ ಪತಿಯ ಅಭಿಲಾಷೆಗಳು ಬದಲಾಗುತ್ತಾ, ವಿಶೇಷವಾಗಿ ಕಡಿಮೆಯಾಗುತ್ತ ಹೋಗುತ್ತಿದೆ ಎಂದು ಅನ್ನಿಸಿದರೆ ಇದು ನಿಮ್ಮ ಪತಿಯ ಪ್ರೇಮವನ್ನು ಪ್ರಕಟಿಸುತ್ತದೆ. ಒಂದು ವೇಳೆ ಇದು ವ್ಯತಿರಿಕ್ತವಾಗಿದ್ದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.

English summary

Will Pregnancy Affect Your Partner’s Desire?

Many women wonder whether pregnancy could kill the desire in their men. But in fact, many men find their partners attractive even during the phase of pregnancy. But most of the men may not feel the desire during that phase for many reasons. Firstly, thoughts of responsibilities and burdens could reduce the desire.
X
Desktop Bottom Promotion