Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹದಿಹರೆಯದ ಗರ್ಭಧಾರಣೆ-ಅಪಾಯ ಮೈಮೇಲೆ ಎಳೆದುಕೊಂಡಂತೆ!
ಮಾನವನ ದೇಹವು ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ತನಕವೂ ಒಂದೊಂದು ಘಟ್ಟಗಳನ್ನು ದಾಟಿ ಹೋಗಬೇಕಾಗುತ್ತದೆ. ಒಂದೊಂದು ಘಟ್ಟಕ್ಕೆ ಅದರದ್ದೇ ಆದ ವಯಸ್ಸಿದೆ. ಆ ವಯಸ್ಸಿನಲ್ಲಿಯೇ ಅದನ್ನು ಮಾಡಬೇಕು. ಅದಕ್ಕಿಂತ ಮೊದಲು ಅಥವಾ ಬಳಿಕ ಮಾಡಿದರೆ ಅದರಿಂದ ಅಡ್ಡಪರಿಣಾಮಗಳು ಖಚಿತ.
ಅದರಲ್ಲೂ ಹದಿಹರೆಯರಲ್ಲಿ ಗರ್ಭ ಧರಿಸುವುದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹದಿಹರೆಯದಲ್ಲಿ ತಿಳಿದೋ ತಿಳಿಯದೆಯೋ ಮಾಡುವಂತಹ ತಪ್ಪಿನಿಂದಾಗಿ ಆಗುವಂತಹ ಗರ್ಭಧಾರಣೆಯಿಂದ ಹಲವಾರು ಸಮಸ್ಯೆಗಳು ಎದುರಾಗಬಹುದು. ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು, ಚಿಂತೆ ಪಡಬೇಡಿ....
ದೈಹಿಕ, ಮಾನಸಿಕವಾಗಿ ದೇಹವು ಇದಕ್ಕೆ ತಯಾರಾಗಿರುವುದಿಲ್ಲ. ಹದಿಯರೆಯದಲ್ಲಿ ನಿಮ್ಮ ಹಾಗೂ ಸಂಗಾತಿಯ ಸಂಬಂಧವು ಒಳ್ಳೆಯ ರೀತಿಯಲ್ಲಿದ್ದರೂ ಸಾಮಾಜಿಕವಾಗಿಯೂ ಸಮಸ್ಯೆಗಳು ಕಾಡುವುದು ಸಹಜ. ಹದಿಹರೆಯದಲ್ಲಿ ಗರ್ಭಿಣಿಯಾಗುವುದರಿಂದ ಆಗುವಂತಹ ಕೆಲವೊಂದು ನಕಾರಾತ್ಮಕ ಅಂಶಗಳ ಬಗ್ಗೆ ಇಲ್ಲಿ ತಿಳಿಸಲಿದ್ದೇವೆ....

ವಾಸ್ತವ#1
ಹದಿಹರೆಯದಲ್ಲಿ ಗರ್ಭಿಣಿಯಾದರೆ ಇದರಿಂದ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಬಹುದು. ಹದಿಹರೆಯದಲ್ಲಿ ಗರ್ಭಿಣಿಯಾದರೆ ಖಂಡಿತವಾಗಿಯೂ ಶಿಕ್ಷಣದ ಮೇಲೆ ಪರಿಣಾಮ ಉಂಟಾಗುವುದು. ಮೊದಲನೇಯದಾಗಿ ವಿದ್ಯಾಭ್ಯಾಸ ಮತ್ತು ಗರ್ಭಧಾರಣೆಯನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ತುಂಬಾ ಕಷ್ಟ. ಎರಡನೇಯದಾಗಿ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳಿಂದ ಅವಮಾನಕ್ಕೆ ಒಳಗಾಗಬಹುದು. ಈ ಕಾರಣಕ್ಕಾಗಿ ವಿದ್ಯಾಭ್ಯಾಸದಿಂದ ಹದಿಹರೆಯದ ಗರ್ಭಿಣಿ ದೂರ ಉಳಿಯಬಹುದು.

ವಾಸ್ತವ#2
ಗರ್ಭಧಾರಣೆ ವೇಳೆ ಆಗುವಂತಹ ಕೆಲವೊಂದು ಏರುಪೇರುಗಳನ್ನು ಎದುರಿಸಲು ಹದಿಹರೆಯದ ಹುಡುಗಿಯರ ದೇಹವು ಸಜ್ಜಾಗಿರುವುದಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಇದರಿಂದಾಗಿ ಹುಟ್ಟುವ ಮಗುವಿಗೆ ಅಂಗವಿಕಲತೆ ಉಂಟಾಗಬಹುದು.

ವಾಸ್ತವ#3
ಪ್ರೌಢ ಮಹಿಳೆಗಿಂತ ಹದಿಹರೆಯದ ಹುಡುಗಿಯು ಗರ್ಭಿಣಿಯಾದಾಗ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾಳೆ. ಗರ್ಭಧಾರಣೆ ವೇಳೆ ದೈಹಿಕ ಹಾಗೂ ಮಾನಸಿಕ ಒತ್ತಡವು ಹೆಚ್ಚಿರುತ್ತದೆ. ಇದನ್ನು ನಿಭಾಯಿಸುವಂತಹ ಜ್ಞಾನವು ಹದಿಹರೆಯದ ಹುಡುಗಿಯರಲ್ಲಿ ಇರುವುದಿಲ್ಲ.

ವಾಸ್ತವ#4
ಹದಿಹರೆಯದ ಹುಡುಗಿಯರು ಗರ್ಭ ಧರಿಸಿದಾಗ ಆರೋಗ್ಯವನ್ನು ಲಘುವಾಗಿ ಪರಿಗಣಿಸುತ್ತಾರೆ. ಕೆಲವರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾರೆ. ಇನ್ನು ಕೆಲವರು ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದಿಲ್ಲ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

ವಾಸ್ತವ#5
ಮಗುವನ್ನು ನೋಡಿಕೊಳ್ಳುವಂತಹ ಜ್ಞಾನವು ಹದಿಹರೆಯದ ಹುಡುಗಿಯರಲ್ಲಿ ಇರುವುದಿಲ್ಲ. ಮನೆಯವರ ಬೆಂಬಲವಿಲ್ಲದೆ ಇದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.



Click it and Unblock the Notifications
