For Quick Alerts
ALLOW NOTIFICATIONS  
For Daily Alerts

  ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು, ಚಿಂತೆ ಪಡಬೇಡಿ....

  By Super Admin
  |

  ಪ್ರಕೃತಿಯಲ್ಲಿ ಜೀವ ನೀಡುವಂತಹ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಅದರಲ್ಲೂ ಮನುಷ್ಯರಲ್ಲಿ ಮಹಿಳೆಯರು ಒಂದು ಜೀವವನ್ನು 9 ತಿಂಗಳ ಕಾಲ ತನ್ನೊಳಗೆ ಹೊತ್ತುಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಆಕೆಯಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಆಗುವುದು ಸಹಜ. ಆಕೆಯ ದೇಹದಲ್ಲೂ ಹಲವಾರು ರೀತಿಯ ಬದಲಾವಣೆಗಳು ಆಗುತ್ತದೆ.   

  ಗರ್ಭ ಧರಿಸಿದ ಮಹಿಳೆಯರ ಸ್ತನದಲ್ಲಿ ಕಾಣಿಸಿಕೊಳ್ಳುವಂತಹ ಬದಲಾವಣೆಯು ಪ್ರಮುಖವಾಗಿರುವಂತದ್ದಾಗಿದೆ. ಹಾರ್ಮೋನುಗಳ ಬದಲಾವಣೆಯಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಭಾವನಾತ್ಮಕ ಹಾಗೂ ದೈಹಿಕ ಬದಲಾವಣೆಗಳು ಆಗುತ್ತದೆ. ಅದರಲ್ಲೂ ಹೆಚ್ಚಾಗಿ ಗರ್ಭಿಣಿ ಮಹಿಳೆಯರು ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ.  ಗರ್ಭಿಣಿಯರೇ, ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ ಪ್ಲೀಸ್!

  ಇಷ್ಟು ಮಾತ್ರವಲ್ಲದೆ ಹೊಟ್ಟೆಯ ಸುತ್ತಲು, ಸೊಂಟ, ನಿತಂಬಗಳಲ್ಲಿ ಕೊಬ್ಬು ಆವರಿಸಿಕೊಳ್ಳುತ್ತದೆ. ಇನ್ನೊಂದು ಮಹತ್ವದ ಬದಲಾವಣೆಯೆಂದರೆ ಗರ್ಭಿಣಿ ಮಹಿಳೆಯರ ಸ್ತನದ ಗಾತ್ರ, ಆಕಾರದಲ್ಲಿ ಬದಲಾವಣೆಗಳು ಕಂಡುಬರುವುದು. ಗರ್ಭಧಾರಣೆ ಮತ್ತು ಹೆರಿಗೆ ಬಳಿಕ ಸ್ತನವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಜನಿಸಿದ ಮಗುವಿನ ಸ್ತನ್ಯಪಾನವು ಅತೀ ಅಗತ್ಯವಾಗಿರುತ್ತದೆ. ಗರ್ಭಧಾರಣೆ ವೇಳೆ ಸ್ತನದಲ್ಲಿ ಯಾವ ಬದಲಾವಣೆಗಳು ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ....   ಜ್ವರ ಬಂದಾಗ ಎದೆಹಾಲೆಂಬ ಅಮೃತ ಕೂಡ ವಿಷವಾಗುವುದೇ?      

  ಸ್ತನವು ಭಾರವೆನಿಸಬಹುದು

  ಸ್ತನವು ಭಾರವೆನಿಸಬಹುದು

  ದೇಹದಲ್ಲಿ ಗರ್ಭಧಾರಣೆಯ ಹಾರ್ಮೋನುಗಳು ತುಂಬಿರುವ ಕಾರಣದಿಂದಾಗಿ ಸ್ತನವು ಭಾರವೆನಿಸಬಹುದು. ಸ್ತನದಲ್ಲಿರುವ ಗ್ರಂಥಿಗಳು ಗರ್ಭಧಾರಣೆ ವೇಳೆ ಹಿಗ್ಗುವ ಕಾರಣದಿಂದ ಸ್ತನವು ಭಾರವಾದಂತೆ ಭಾಸವಾಗುವುದು.

  ರಕ್ತಸಂಚಲನ

  ರಕ್ತಸಂಚಲನ

  ಸ್ತನದೊಳಗೆ ರಕ್ತಸಂಚಲನವು ಹೆಚ್ಚಾಗುವುದರಿಂದ ನೋವು ಕಾಣಿಸಿಕೊಳ್ಳುವುದು. ಹಾರ್ಮೋನು ಬದಲಾವಣಿಯಿಂದಾಗಿ ಗ್ರಂಥಿಗಳು ಊದಿಕೊಂಡು ಇರುವುದರಿಂದ ಸ್ತನವು ಮೃಧುವಾಗಿ ನೋವುಂಟು ಮಾಡುತ್ತದೆ.

  ನಸುನೀಲಿ ಬಣ್ಣದ ರಕ್ತನಾಳ ಕಾಣಿಸಿಕೊಳ್ಳಬಹುದು

  ನಸುನೀಲಿ ಬಣ್ಣದ ರಕ್ತನಾಳ ಕಾಣಿಸಿಕೊಳ್ಳಬಹುದು

  ಗರ್ಭಿಣಿಯಾಗಿರುವಾಗ ನಿಮ್ಮ ಸ್ತನಗಳ ಮೇಲೆ ನಸುನೀಲಿ ಬಣ್ಣದ ರಕ್ತನಾಳಗಳು ಎದ್ದು ಕಾಣಿಸಿಕೊಳ್ಳಬಹುದು. ಹೆಚ್ಚುವರಿ ರಕ್ತದ ಅರಿವನ್ನು ಸರಿಯಾಗಿಸಲು ಅವುಗಳು ಹಿಗ್ಗಿಕೊಳ್ಳುತ್ತದೆ.

  ಸ್ತನದ ತೊಟ್ಟು

  ಸ್ತನದ ತೊಟ್ಟು

  ಗರ್ಭಧಾರಣೆ ವೇಳೆ ಸ್ತನದ ತೊಟ್ಟು ದೊಡ್ಡದಾಗುತ್ತದೆ. ಈ ಭಾಗದಲ್ಲಿ ಗ್ರಂಥಿಗಳು ಹಿಗ್ಗುವ ಕಾರಣದಿಂದಾಗಿ ಕೆಲವು ಮಹಿಳೆಯರ ಸ್ತನದ ತೊಟ್ಟು ಗಡಸು ಮತ್ತು ದೊಡ್ಡದಾಗುತ್ತದೆ.

  2 ಮತ್ತು 3 ನೇ ತ್ರೈಮಾಸಿಕದಲ್ಲಿ....

  2 ಮತ್ತು 3 ನೇ ತ್ರೈಮಾಸಿಕದಲ್ಲಿ....

  ಗರ್ಭಧಾರಣೆಯ 2 ಮತ್ತು 3 ನೇ ತ್ರೈಮಾಸಿಕದಲ್ಲಿ ಸ್ತನದಿಂದ ಹಾಲು ಹೊರಬರುತ್ತದೆ. ಸ್ತನದಿಂದ ದಪ್ಪಗಿನ ದ್ರವವು ಹೊರಬರುವುದನ್ನು ನೋಡಬಹುದು. ಇದು ಕೊಲೆಸ್ಟ್ರಮ್ ಅಥವಾ ಹಾಲಿನ ಆರಂಭಿಕ ಹಂತವಾಗಿದೆ. ಮಗುವಿಗೆ ಜನ್ಮ ನೀಡುವ ಮೊದಲು ಹೀಗೆ ಆಗುತ್ತದೆ.

  ಕಲೆಗಳು ಕಾಣಿಸಿಕೊಳ್ಳಬಹುದು

  ಕಲೆಗಳು ಕಾಣಿಸಿಕೊಳ್ಳಬಹುದು

  ಗಾತ್ರ ಮತ್ತು ಆಕಾರವು ದೊಡ್ಡದಾಗುವುದರಿಂದ ಚರ್ಮದಲ್ಲಿ ಹಿಗ್ಗಿದ ಕಲೆಗಳು ಕಾಣಿಸಿಕೊಳ್ಳಬಹುದು.

   

  English summary

  Surprising Changes Your Breasts Experience During Pregnancy

  If you are a woman who is expecting a child, then you will surely be aware of the various physical changes that you may be going through. Surely, you would be experiencing changes in your breasts too during this phase
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more