Just In
Don't Miss
- News
ಅಸ್ಸಾಂ ಚುನಾವಣಾಪೂರ್ವ ಸಮೀಕ್ಷೆ: ಕಷ್ಟಪಟ್ಟು ಅಧಿಕಾರಕ್ಕೆ ಬರಲಿದೆ ಬಿಜೆಪಿ
- Education
Bangalore Rural Zilla Panchayat Recruitment 2021: 9 ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಪಂಜಾಬ್ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!
- Automobiles
ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ
- Movies
ವಿಡಿಯೋ: ರಸ್ತೆ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ
- Finance
ಎಲ್ಪಿಜಿ ಸಿಲಿಂಡರ್ ಬೆಲೆ 7 ವರ್ಷದಲ್ಲಿ ದುಪ್ಪಟ್ಟು ಏರಿಕೆ: ತೈಲದ ಮೇಲಿನ ತೆರಿಗೆ ಸಂಗ್ರಹ 459% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅತಿಯಾದ ವ್ಯಾಯಮ ಕೂಡ ಗರ್ಭಾವಸ್ಥೆಯಲ್ಲಿ ಒಳ್ಳೆಯದಲ್ಲ..
ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಏನಾದರೂ ಹಾನಿಯಿದೆಯೇ ಎಂಬುದು ನಿಮ್ಮ ಮನದಲ್ಲಿರಬಹುದು. ಗರ್ಭಿಣಿಯಾಗಿದ್ದಾಗ ನೀವು ಚಟುವಟಿಕೆಯಿಂದ ಇರಬೇಕು ಎಂದಾದಲ್ಲಿ ವ್ಯಾಯಮವನ್ನು ಮಾಡಲೇಬೇಕಾಗುತ್ತದೆ. ಇದರ ಜೊತೆಗೆ ಸರಿಯಾದ ಆಹಾರವನ್ನು ಸೇವಿಸಬೇಕು.
ಗರ್ಭಿಣಿಯಾಗುವುದಕ್ಕಿಂತ ಮುನ್ನ ನೀವು ಯೋಗ ಅಥವಾ ಜಿಮ್ ತರಗತಿಗತಿಗಳಿಗೆ ಹೋಗುತ್ತಿದ್ದೀರಿ ಎಂದಾದಲ್ಲಿ 3 ನೆಯ ಅಥವಾ 4 ನೇ ತಿಂಗಳಿನಲ್ಲಿ ಹೋಗಬಹುದು ಎಂಬುದು ಪರಿಣಿತರ ಸಲಹೆಯಾಗಿದೆ. ಆದರೆ ಈ ವ್ಯಾಯಮಕ್ಕೂ ಒಂದು ಪರಿಧಿಯಿದ್ದು ಆ ಗೆರೆಯೊಳಗೆ ನೀವು ಎಲ್ಲವನ್ನೂ ನಡೆಸಬೇಕಾಗುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ದೇಹ ಭಾರವಾಗುತ್ತದೆ ಇದರೊಂದಿಗೆ ಕೆಲವೊಂದು ಸಮಸ್ಯೆಗಳಾದ ಪಾದಗಳ ಊದುವಿಕೆ, ಬೆನ್ನಿನಲ್ಲಿ ನೋವು, ಆಯಾಸ ಸುಸ್ತು ಕಾಣಿಸಿಕೊಳ್ಳುತ್ತದೆ. ಸರಿಯಾದ ವ್ಯಾಯಮ: ತಾಯಿ, ಮಗುವಿನ ಆರೋಗ್ಯಕ್ಕೆ ಪೂರಕ
ಈ ಲಕ್ಷಣಗಳು ನಿಮಗೆ ಕಾಣಿಸಿಕೊಂಡಿತು ಎಂದಾದಲ್ಲಿ ಆದಷ್ಟು ವಿಶ್ರಾಂತಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಕಾಲನ್ನು ಉಗುರು ಬೆಚ್ಚನೆ ನೀರಿನಲ್ಲಿ ಇರಿಸಿಕೊಳ್ಳುವುದು ಊತವನ್ನು ಕಡಿಮೆ ಮಾಡುತ್ತದೆ. ಬೆನ್ನು ನೋವಿಗೆ ಆದಷ್ಟು ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ನಿಯಮಿತವಾಗಿ ಮಸಾಜ್ ಮಾಡುವುದು ದೇಹದ ನೋವನ್ನು ಕಡಿಮೆ ಮಾಡುತ್ತದೆ. ಅಂತೆಯೇ ನಿಯಮಿತ ವ್ಯಾಯಾಮ ಮಾಡುವವರಿಗೆ ಹೆರಿಗೆ ಸುಲಭವಾಗಿ ನಡೆಯುತ್ತದೆ. ವ್ಯಾಯಮವನ್ನು ಪ್ರೀತಿಸುವವರು ನೀವಾಗಿದ್ದಲ್ಲಿ ಯಾವ ರೀತಿಯ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ...

ತಲೆತಿರುಗುವಿಕೆ
ವ್ಯಾಯಾಮ ಮಾಡುವಾಗ ನಿಮಗೆ ತಲೆತಿರುಗುತ್ತಿದೆ ಎಂದಾದಲ್ಲಿ, ತುರ್ತಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಸ್ವಲ್ಪ ನೀರು ಕುಡಿದು ದೀರ್ಘವಾಗಿ ಉಸಿರಾಡಿ ಮತ್ತು ನಿಮ್ಮ ನರ ವ್ಯವಸ್ಥೆಯನ್ನು ಶಾಂತಗೊಳಿಸಿ.

ತಲೆನೋವು
ನಿಮಗೆ ಆಯಾಸವಾಗುತ್ತಿದೆ ಎಂದಾದಲ್ಲಿ, ತಲೆನೋವು ಹಗುರವಾಗಿ ಕಾಣಿಸಿಕೊಳ್ಳುತ್ತದೆ. ವ್ಯಾಯಾಮ ಮಾಡುವಾಗ ನೀವು ಹೆಚ್ಚು ಬೆವರುವುದರಿಂದ ಡೀಹೈಡ್ರೇಶನ್ ಉಂಟಾಗಿ ತಲೆನೋವು ಬಂದುಬಿಡುತ್ತದೆ.

ಎದೆ ನೋವು
ಸಾಮಾನ್ಯವಾಗಿ ಗರ್ಭಿಣಿಯರು ಎದುರಿಸುವ ಸಮಸ್ಯೆಯಾಗಿದೆ ಎದೆ ನೋವು. ಅದೂ 2ನೆಯ ಟ್ರೈಮಿಸ್ಟರ್ನ ಕೊನೆಯಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಹೊಟ್ಟೆಯ ಭಾರದಿಂದ ಈ ಎದೆನೋವು ಕಾಣಿಸಿಕೊಳ್ಳುತ್ತದೆ ಇದರಿಂದ ಎದೆ ನೋವು ಮತ್ತು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

ಉಸಿರಾಟದಲ್ಲಿ ತೊಂದರೆ
ಉಸಿರಾಟದಲ್ಲಿ ತೊಂದರೆಯಾದಾಗ ಗರ್ಭಿಣಿಯರು ವ್ಯಾಯಾಮವನ್ನು ನಿಲ್ಲಿಸಲೇಬೇಕು. ನಿಮ್ಮ ವ್ಯಾಯಾಮದ ಅವಧಿಯಲ್ಲಿ ಉಸಿರಾಟದ ತೊಂದರೆಯನ್ನು ನೀವು ಅನುಭವಿಸುತ್ತೀರಿ ಎಂದಾದಲ್ಲಿ ನಿಮ್ಮ ದೇಹವನ್ನು ಹಗುರಾಗಿಸಿ ನಿಧಾನವಾಗಿ ಉಸಿರಾಡಿ.

ಯೋನಿ ಸ್ರಾವ
ನಿಮ್ಮ ಗರ್ಭಾವಸ್ಥೆಯಲ್ಲಿ ಯೋನಿ ಸ್ರಾವ ಉಂಟಾಗುತ್ತಿದೆ ಎಂದಾದಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ವ್ಯಾಯಾಮ ಮಾಡುವಾಗ ಸಣ್ಣದಾಗಿ ರಕ್ತಸ್ರಾವ ಉಂಟಾಗುತ್ತಿದೆ ಎಂದಾದಲ್ಲಿ, ಕೂಡಲೇ ಆಸ್ಪತ್ರೆಗೆ ನೀವು ಹೋಗಬೇಕು ಇಲ್ಲದಿದ್ದರೆ ಗರ್ಭಪಾತ ಆಗುವ ಸಂಭವ ಇರುತ್ತದೆ.

ಕುಗ್ಗುವಿಕೆ
ಕುಗ್ಗುವಿಕೆ ಹೆಚ್ಚು ನೋವನ್ನು ಉಂಟುಮಾಡುತ್ತಿರುತ್ತದೆ, ನೀವು ಹೆರಿಗೆಗೆ ಸಮೀಪವಾಗಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ಕುಗ್ಗುವಿಕೆಯ ನೋವು ನಿಮ್ಮನ್ನು ಹೆಚ್ಚು ಕಾಡುತ್ತಿದೆ ಎಂದಾದಲ್ಲಿ ಆದಷ್ಟು ಬೇಗ ಪ್ರಸೂತಿ ಆಸ್ಪತ್ರೆಗೆ ಧಾವಿಸಿ. ಕೆಲವೊಂದು ವ್ಯಾಯಾಮಗಳು ಪೂರ್ವ ಹೆರಿಗೆ ನೋವನ್ನು ಉಂಟುಮಾಡುತ್ತದೆ ಆದ್ದರಿಂದ ಆದಷ್ಟು ಈ ವ್ಯಾಯಾಮಗಳನ್ನು ಮಾಡದಿರಿ.

ವೇಗದ ಹೃದಯ ಬಡಿತ
ನಿಮ್ಮ ಹೃದಯ ವೇಗದಲ್ಲಿ ಬಡಿಯುತ್ತಿದೆ ಎಂದಾದಲ್ಲಿ ವ್ಯಾಯಾಮವನ್ನು ನಿಲ್ಲಿಸಬೇಕು ಎಂಬ ಸೂಚನೆ ಇದಾಗಿದೆ. ನಿಮ್ಮ ಹೃದಯ ವೇಗವಾಗಿ ಬೆಳೆಯುತ್ತಿದೆ ಎಂದಾದಲ್ಲಿ, ವಿರಾಮವನ್ನು ತೆಗೆದುಕೊಂಡು ಆರಾಮ ಮಾಡಿ.