For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗಾಗಿ ಶಕ್ತಿದಾಯಕ ಸಸ್ಯಾಹಾರಿ ಆಹಾರಗಳು

By Jaya subramanya
|

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಆರೋಗ್ಯಪೂರ್ಣ ಆಹಾರ ಕ್ರಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯವಶ್ಯಕ. ಅಲ್ಲದೆ ತಮ್ಮ ದಿನನಿತ್ಯ ಆಹಾರ ಕ್ರಮದಲ್ಲಿ ನಿಯಮಿತವಾಗಿ ಸೇವಿಸುವ ಆಹಾರಕ್ಕಿಂತಲೂ ತರಕಾರಿ ಮತ್ತು ಹಣ್ಣುಗಳು ಹೆಚ್ಚು ಇರುವಂತೆ ನೋಡಿಕೊಳ್ಳಬೇಕು.

ಗರ್ಭಿಣಿಯು ಸೇವಿಸುವ ಆಹಾರವೇ ಭ್ರೂಣವನ್ನು ಕಾಪಾಡುವುದರಿಂದ ತಾಯಿಯು ತಮ್ಮ ಆಹಾರದಲ್ಲಿ ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್‎ಗಳು ಇರುವ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಅದರಲ್ಲೂ ಗರ್ಭಾವಸ್ಥೆಯ ಮೊದಲ ಮತ್ತು ಎರಡನೆಯ ತ್ರೈಮಾಸಿಕಗಳು ಹೆಚ್ಚು ಮುಖ್ಯವಾಗಿರುವುದರಿಂದ ಈ ಆರು ತಿಂಗಳಲ್ಲೇ ಮಗುವು ಸಂಪೂರ್ಣವಾಗಿ ಬೆಳೆಯುವುದರಿಂದ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ನೀವು ಸೇವಿಸುವ ಆಹಾರ ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ ಅಂತೆಯೇ ಈ ಆಹಾರಗಳು ಗರ್ಭಾವಸ್ಥೆಯ ಸಂಕಷ್ಟಗಳನ್ನು ನಿವಾರಿಸುತ್ತದೆ. ಆದರೆ 70 ರಷ್ಟು ಮಹಿಳೆಯರು ತಪ್ಪಾದ ಆಹಾರಗಳನ್ನು ಸೇವಿಸಿ ಗರ್ಭದಲ್ಲಿರುವ ಮಗುವಿಗೆ ಮತ್ತು ತಮಗೆ ಅಪಾಯಗಳನ್ನು ತಂದುಕೊಳ್ಳುತ್ತಾರೆ. ಅಲ್ಲದೇ ಬರಿಯ ಸಸ್ಯಾಹಾರಿ ತಾಯಂದಿರಿಗೆ ಪ್ರೊಟೀನ್ ಆಧಾರಿತ ಆಹಾರಗಳನ್ನು ಸೇವಿಸುವುದರಲ್ಲಿ ಕೊರತೆ ಕಾಣುತ್ತದೆ ಕೋಳಿ ಮತ್ತು ಮೀನು ಹೆಚ್ಚು ನ್ಯೂಟ್ರೀನ್ ಅಂಶಗಳನ್ನು ಹೊಂದಿರುತ್ತವೆ. ಹಾಗಿದ್ದರೆ ಸಸ್ಯಾಹಾರಿ ತಾಯಂದಿರುಗಳಿಗಾಗಿ ಅಧಿಕ ಪ್ರೊಟೀನ್ ಮತ್ತು ವಿಟಮಿನ್‎ಗಳುಳ್ಳ ತರಕಾರಿಗಳ ಪಟ್ಟಿಯನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ, ಮುಂದೆ ಓದಿ...

ಬ್ರಕೋಲಿ

ಬ್ರಕೋಲಿ

ಈ ಹಸಿರು ತರಕಾರಿಯನ್ನು ನಿಮ್ಮ ಗರ್ಭಾವಸ್ಥೆ ಡಯೆಟ್‎ನಲ್ಲಿ ನೀವು ಸೇರಿಸಿಕೊಳ್ಳಲೇಬೇಕು. ಬ್ರಕೋಲಿ ಸೇವನೆಯು ಹೆಚ್ಚು ಪ್ರಮಾಣದ ಕ್ಯಾಲ್ಶಿಯಮ್ ಮತ್ತು ಫೊಲೇಟ್ ಅನ್ನು ಒದಗಿಸುತ್ತದೆ ಇದು ಭ್ರೂಣದ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಎಲೆತರಕಾರಿಗಳು

ಎಲೆತರಕಾರಿಗಳು

ಬೀಟಾ ಕ್ಯಾರೊಟಿನ್ ಮತ್ತು ಲ್ಯೂಟಿನ್‭‎ನಂತಹ ಸಸ್ಯಜನ್ಯ ಅಂಶಗಳನ್ನು ಈ ತರಕಾರಿಗಳು ಒಳಗೊಂಡಿರುವುದರಿಂದ ಗರ್ಭಿಣಿಯರ ಆಹಾರದಲ್ಲಿ ಇದು ಇರಲೇಬೇಕು. ಗರ್ಭಾವಸ್ಥೆಯ ಸಂದರ್ಭದಲ್ಲಿ ಉಂಟಾಗುವ ಕಷ್ಟಗಳನ್ನು ಇದು ನಿವಾರಿಸುತ್ತದೆ.ಅಂತೆಯೇ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಓಟ್ ಮೀಲ್

ಓಟ್ ಮೀಲ್

ನಾರಿನಂಶವನ್ನು ಓಟ್ ಮೀಲ್ ಒಳಗೊಂಡಿದೆ ಅಂತೆಯೇ ಗರ್ಭಾವಸ್ಥೆಯ ಸಂದರ್ಭದಲ್ಲಿ ಉಂಟಾಗುವ ಕಷ್ಟವನ್ನು ನಿವಾರಿಸಲು ಇದು ಸಹಕಾರಿ. ಆದ್ದರಿಂದ ಸಾಮಾನ್ಯ ಸಮಸ್ಯೆಗಳಿಗೆ ಅದ್ಭುತ ಪರಿಹಾರವನ್ನು ಇದು ಒದಗಿಸುತ್ತದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಫೊಲೇಟ್, ಫೈಬರ್ ಮತ್ತು ವಿಟಮಿನ್ ಸಿ ಈ ಮೂರೂ ಅಂಶಗಳನ್ನು ಹೊಂದಿರುವ ಕಿತ್ತಳೆ ಗರ್ಭಿಣಿಗೆ ಹೆಚ್ಚು ಆರೋಗ್ಯಪೂರ್ಣ ಹಣ್ಣಾಗಿದೆ. ಅಂತೆಯೇ ಈ ಹಣ್ಣು ಹೆಚ್ಚುವರಿ ನೀರನ್ನು ಒಳಗೊಂಡಿರುವುದರಿಂದ ನೀವು ಸೇವಿಸುವ ನೀರಿನ ಪ್ರಮಾಣವನ್ನು ಅಧಿಕಗೊಳಿಸುತ್ತದೆ ಮತ್ತು ಬೇಸಿಗೆಯಲ್ಲಿ ಉಂಟಾಗುವ ಡೀಹೈಡ್ರೇಶನ್ ಅನ್ನು ಇದು ನಿವಾರಿಸುತ್ತದೆ.

ಸಂಪೂರ್ಣ ಧಾನ್ಯಗಳು

ಸಂಪೂರ್ಣ ಧಾನ್ಯಗಳು

ಕಬ್ಬಿಣ ಮತ್ತು ಜಿಂಕ್ ಅಂಶಗಳನ್ನು ಸಂಪೂರ್ಣ ಧಾನ್ಯಗಳು ಒಳಗೊಂಡಿರುತ್ತವೆ. ಗರ್ಭಾವಸ್ಥೆ ಸಂದರ್ಭದಲ್ಲಿ ಯಾವುದೇ ರಕ್ತ ಅಸಮತೋಲನಗಳನ್ನು ಸೋಲಿಸಲು ಅಂದರೆ ಅನಿಮಿಯಾದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಈ ಧಾನ್ಯಗಳು ಸಹಕಾರಿಯಾಗಿದೆ.

ನಟ್ಸ್

ನಟ್ಸ್

ಈ ಹಿಂದೆ ಯಾವುದೇ ರೀತಿಯ ಅಲರ್ಜಿಗಳು ನಿಮಗುಂಟಾಗಿಲ್ಲ ಎಂದಾದಲ್ಲಿ, ಯಾವುದೇ ರೀತಿಯ ನಟ್ಸ್ ಅನ್ನು ನಿಮಗೆ ಸೇವಿಸಬಹುದು. ಪೋಷಕಾಂಶ ಮತ್ತು ಶಕ್ತಿಗಾಗಿ ಸಣ್ಣ ಸಂಗ್ರಾಹಾರವಾಗಿರುವುದರಿಂದ ಗರ್ಭಾವಸ್ಥೆ ಕಾಲದಲ್ಲಿ ನಟ್ಸ್ ಸೇವಿಸುವುದರಿಂದ ಸಂತಸಭರಿತವಾಗಿ ಗರ್ಭಾವಸ್ಥೆಯನ್ನು ತಾಯಿ ಅನುಭವಿಸಬಹುದಾಗಿದೆ.

English summary

Vegetarian Superfoods For A Healthier Pregnancy

Healthy eating is important when you have the bun in the oven. It is mandatory to add foods like vegetables and fruits to your daily intake, as they help in keeping the foetus healthy and aid in its overall growth. The first and second trimesters of pregnancy are very important, as it is during these 6 months where the baby is growing to a whole being.
Story first published: Wednesday, April 13, 2016, 20:26 [IST]
X
Desktop Bottom Promotion