For Quick Alerts
ALLOW NOTIFICATIONS  
For Daily Alerts

ನೀವು ಗರ್ಭಿಣಿ ಎಂದು ತೋರಿಸುವ ಕೆಲವೊಂದು ಲಕ್ಷಣಗಳು

By manjula balaraj
|

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಪ್ರತಿಯೊಂದು ಹೆಣ್ಣು ಬಯಸುವುದು ತಾಯ್ತನವನ್ನು. ಗರ್ಭವತಿಯಾದ ನಂತರ ಗರ್ಭಧಾರಣೆಯ ವರೆಗೆ ಹೆಣ್ಣು ಪಡುವ ಪ್ರಯಾಸ, ಆಯಾಸ ಅಷ್ಟಿಷ್ಟಲ್ಲ. ಈ ಸಮಯದಲ್ಲಾಗುವ ಬದಲಾವಣೆಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಗರ್ಭವತಿಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ನಾನಾ ರೀತಿಯ ಬದಲಾವಣೆಗಳಾಗುತ್ತವೆ.

Symptoms That Tell You Are Pregnant

ಇದರಲ್ಲಿ ಕೆಲವು ಮಾತ್ರ ನಮಗೆ ಗೋಚರಿಸುತ್ತದೆ, ಇನ್ನಷ್ಟು ಗೋಚರಿಸುವುದಿಲ್ಲ. ವೈದ್ಯರ ನೆರವಿನಿಂದ ಗರ್ಭಧಾರಣೆಯ ವೇಳೆ ಪರೀಕ್ಷೆ ಮಾಡಬೇಕು ಮತ್ತು ಅವರ ಮಾರ್ಗದರ್ಶನವನ್ನು ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಎಚ್ಚರಿಕೆಯಿಂದ ಅನುಸರಿಸುವುದು ಸೂಕ್ತ.

ಸಾಮಾನ್ಯವಾಗಿ ಮಹಿಳೆಯಲ್ಲಿ ಗರ್ಭಧಾರಣೆಯ ಲಕ್ಷಣಗಳು ಬದಲಾಗುತ್ತಿರುತ್ತವೆ. ಅಲ್ಲದೇ ಎಲ್ಲಾ ಮಹಿಳೆಯರು ಈ ವಿಚಾರದಲ್ಲಿ ಕಷ್ಟಕರವಾದ ಸಂದರ್ಭಗಳನ್ನು ಎದುರಿಸುವುದಿಲ್ಲ. ಕೆಲವು ಸಣ್ಣ ಪುಟ್ಟ ಲಕ್ಷಣಗಳು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಗರ್ಭವತಿಯಾದ ಎಲ್ಲಾ ಮಹಿಳೆಯರಲ್ಲಿ ಒಂದಲ್ಲಾ ಒಂದು ಚಿಹ್ನೆಗಳು ಸಾಮಾನ್ಯವಾಗಿ ಕಾಣಸಿಗುತ್ತದೆ.

ಸ್ತನಗಳಲ್ಲಿ ಊತ ಕಂಡುಬರುವುದು
ಗರ್ಭಿಣಿಯರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದರೆ, ಅಂತಹವರು ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸ್ತನಗಳಲ್ಲಿ ಊತ ಕಂಡುಬರುವುದು ಗರ್ಭಧಾರಣೆಯ ಸಮಯದಲ್ಲಿ ಮೊದಲು ಕಂಡುಬರುವಂತಹ ಲಕ್ಷಣ.

ಅಸ್ವಸ್ಠತೆ
ಗರ್ಭದಾರಣೆಯ ಸಮಯದಲ್ಲಿ ಸ್ತನಗಳಲ್ಲಿ ಕಾಣುವ ಊತದಿಂದ ಅಸ್ವಸ್ಥತೆ ಕಂಡುಬರಬಹುದು. ಈ ನೋವು ಮೊದಲ ಮೂರು ತಿಂಗಳುಗಳಲ್ಲಿ ಜಾಸ್ತಿ ಪ್ರಮಾಣದಲ್ಲಿದ್ದು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಯಾಕೆ ಗೋಚರಿಸುತ್ತದೆ ಎಂದರೆ ದೇಹವು ಹಾರ್ಮೊನುಗಳ ಈ ಬದಲಾವಣೆಗೆ ಕ್ರಮೇಣ ಹೊಂದಿಕೊಳ್ಳಲು ಆರಂಭಿಸುತ್ತದೆ ಎಂದು.

ಆಯಾಸ
ಆರಂಭಿಕ ದಿನಗಳಲ್ಲಿ ಗರ್ಭಿಣಿಯರಲ್ಲಿ ಆಯಾಸ ಕಂಡುಬರುವುದು ಇನ್ನೊಂದು ಲಕ್ಷಣ. ಆಹಾರದ ಅತ್ಯಂತ ಕಡುಬಯಕೆಗಳು ಗರ್ಭಧಾರಣೆಯ ಲಕ್ಷಣಗಳಲ್ಲಿ ಪ್ರಮುಖವಾದುದು. ಕೆಲವು ಸಲ ಈ ಸಮಯದಲ್ಲಿ ಹಿಂದೆ ತುಂಬಾ ಇಷ್ಟ ಪಡುತ್ತಿದ್ದ ಆಹಾರಗಳೂ ಈ ಸಮಯದಲ್ಲಿ ಇಷ್ಟವಾಗದೇ ಇರಬಹುದು.

ಅನಿಮಿಯತ ಅಧವಾ ಸ್ವಲ್ಪ ಮುಟ್ಟಿನ ಲಕ್ಷಣ ಕಂಡುಬರುವುದು
ಬಾಯಿರುಚಿ ಕಳೆದುಕೊಳ್ಳುವುದು ಗರ್ಭಧಾರಣೆಯ ಸಮಯದಲ್ಲಿ ಬಂದು ಹೋಗುವ ಇನ್ನೊಂದು ಲಕ್ಷಣಗಳು, ಆದರೆ ಸರಿಯಾಗಿ ಋತುಚಕ್ರ ಆಗುತ್ತಿದ್ದ ಮಹಿಳೆಗೆ ಗರ್ಭವತಿ ಆದ ನಂತರ ಮುಟ್ಟಿನ ಚಿಹ್ನೆಗಳೂ ಒಮೊಮ್ಮೆ ಕಾಣಬಹುದು.

ಅಹಿತಕರ ವಾಸನೆ
ತೀವ್ರವಾದ ವಾಸನೆ ಗರ್ಭದಾರಣೆಯ ಮೊದಲ ದಿನಗಳಲ್ಲಿ ಆಗದೆ ಇರುವುದು ಕೂಡ ಲಕ್ಷಣಗಳಲ್ಲಿ ಒಂದು. ಮದುವೆಯಾದ ಹೊಸ ಮಹಿಳೆಯರಲ್ಲಿ ಕೆಲವು ವಾಸನೆಗಳು ಆಗದೆ ಇರುವಲ್ಲಿ ಅವರು ಗರ್ಭಿಣಿ ಎಂದುಕೊಳುವುದು ಸ್ವೀಕಾರಾರ್ಹವಲ್ಲ.

ಪದೇ ಪದೇ ಮೂತ್ರ ವಿಸರ್ಜನೆಯಾಗುವುದು
ಪದೇ ಪದೇ ಮೂತ್ರ ವಿಸರ್ಜನೆಯಾಗುವುದು ಇದು ಕೂಡ ಗರ್ಭಿಣಿ ಮಹಿಳೆಯರಲ್ಲಿ ಕಂಡು ಬರುವ ಲಕ್ಷಣ. ಗರ್ಭದಾರಣೆಯ ಮೊದಲ ತಿಂಗಳಿನಿಂದ ಈ ಸಮಸ್ಯೆಯು ಬೇರೆ ಎಲ್ಲಾ ಲಕ್ಷಣಗಳಿಗಿಂತ ಹೆಚ್ಚಾಗಿ ಕಂಡುಬರುವುದು. ಕೆಲವು ಸ್ರೀಯರಲ್ಲಿ ಗರ್ಭವತಿ ಆಗುವುದಕ್ಕಿಂತ ಮೊದಲಿನಿಂದಲೂ ಈ ಲಕ್ಷಣಗಳು ಕಂಡುಬರಬಹುದು. ಆದುದರಿಂದ ದೇಹದಲ್ಲಿ ಮೇಲೆ ಹೇಳಿರುವಂತಹ ಯಾವುದೇ ರೀತಿಯ ಬದಲಾವಣೆ ಕಂಡುಬಂದ ಕೂಡಲೇ ವೈದ್ಯರಲ್ಲಿ ಗರ್ಭವತಿ ಆಗಿರುವ ಬಗ್ಗೆ ತಪಾಸಣೆ ಮಾಡುವುದು ಉತ್ತಮ.

English summary

Symptoms That Tell You Are Pregnant

During pregnancy, a woman's body undergoes many changes, in which some are more noticeable than the others. Cautiously noting early pregnancy symptoms and signs along with at-home and doctor-assisted pregnancy testing will assist you to be ready as early as possible for the changes you'll be experiencing over the months to follow.
Story first published: Monday, April 4, 2016, 20:29 [IST]
X
Desktop Bottom Promotion