For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಕೇಳಿ ಇಲ್ಲಿ, ಕೇಕ್‌ನಿಂದ ಆದಷ್ಟು ದೂರವಿರಿ...

ಗರ್ಭಧಾರಣೆ ವೇಳೆ, ತಿನ್ನುವ ಬಯಕೆ ಮೂಡುವುದು ಸಹಜ, ಆದರೆ ಕೇಕ್‌ನ ವಿಷಯಕ್ಕೆ ಬಂದಾಗ ಒಂದೆರಡು ತುಂಡು ಸೇವಿಸಬಹುದು, ಆದರೆ ಅದಕ್ಕಿಂತ ಹೆಚ್ಚು ತಿಂದರೆ ಅದು ನಿಮ್ಮ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು....

By manu
|

ಗರ್ಭಧಾರಣೆ ವೇಳೆ ವಿವಿಧ ರೀತಿಯ ರುಚಿಕರವಾದ ಆಹಾರವನ್ನು ತಿನ್ನಬೇಕೆಂಬ ಹಂಬಲ ಪ್ರತಿಯೊಬ್ಬ ಮಹಿಳೆಯಲ್ಲೂ ಆಗುತ್ತಾ ಇರುತ್ತದೆ. ರುಚಿರುಚಿಯಾದ ಆಹಾರವನ್ನು ತಿಂದರೆ ಅದರ ಪರಿಣಾಮ ಗರ್ಭದಲ್ಲಿರುವ ಮಗುವಿನ ಮೇಲೆ ಕೂಡ ಬೀರುತ್ತದೆ. ಇದರಿಂದ ರುಚಿ ಕಡೆ ಗಮನ ಹರಿಸುವಾಗ ನೀವು ಹೆಚ್ಚಾಗಿ ಆರೋಗ್ಯಕರವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.

Cakes During Pregnancy

ಗರ್ಭಧಾರಣೆ ವೇಳೆ ನಿಮ್ಮ ಆಸುಪಾಸಿನಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಲಿದ್ದರೆ ಆಗ ಕೇಕ್ ತಿನ್ನಬೇಕೆಂದು ನಿಮಗೆ ಹಂಬಲವಾದರೆ ಏನು ಮಾಡಬೇಕೆಂಬ ಪ್ರಶ್ನೆ ಕಾಡುತ್ತದೆ. ಇದಕ್ಕಾಗಿ ನೀವು ಕೆಲವೊಂದು ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಗರ್ಭಧಾರಣೆ ವೇಳೆ ಕೇಕ್ ತಿನ್ನುವುದು ಕೆಟ್ಟದು ಎಂದು ಹೇಳುತ್ತಿಲ್ಲ. ಗರ್ಭಿಣಿಯರೇ ದಿನ ನಿತ್ಯದ ಆಹಾರ ಕ್ರಮ ಹೀಗಿರಲಿ

ಆದರೆ ಕೇಕ್‌ನ ಪ್ರಮಾಣದ ಬಗ್ಗೆ ಗಮನಹರಿಸಬೇಕು. ಒಂದೆರಡು ತುಂಡು ಒಳ್ಳೆಯದು ಆದರೆ ಅದಕ್ಕಿಂತ ಹೆಚ್ಚು ತಿಂದರೆ ಅದು ನಿಮ್ಮ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಗರ್ಭಧಾರಣೆ ವೇಳೆ ಆರೋಗ್ಯಕರ ಆಹಾರವನ್ನು ತಿನ್ನುವುದು ತುಂಬಾ ಮುಖ್ಯ.

ಆರೋಗ್ಯಕರವಾದ ಆಹಾರವನ್ನು ತಿಂದರೆ ಅದು ಮಗುವಿಗೆ ಒಳ್ಳೆಯ ಪೋಷಕಾಂಶಗಳನ್ನು ಒದಗಿಸಿಕೊಡುತ್ತದೆ. ಕೇಕ್ ತುಂಬಾ ರುಚಿಕರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಗರ್ಭ ಧರಿಸುವ ಮಹಿಳೆಯರಿಗೆ ಕೇಕ್ ತಿನ್ನಬೇಕೆಂಬ ಹಂಬಲವಾಗುತ್ತಿದ್ದರೆ ನೀವು ಈಗಲೇ ಆ ಆಸೆಯನ್ನು ಕೈಬಿಡುವುದು ತುಂಬಾ ಒಳ್ಳೆಯದು.

ಕೇಕ್ ಮೇಲೆ ಹಾಕಿರುವಂತಹ ಸಂಸ್ಕರಿತ ಸಕ್ಕರೆಯನ್ನು ಒಳಗೊಂಡಿರುವ ಕ್ರೀಮ್ ನಿಮಗೆ ಒಳ್ಳೆಯದಲ್ಲ. ಮನೆಯಲ್ಲಿ ಮಾಡಿದಂತಹ ಕೇಕ್ ನಲ್ಲಿ ಕೆಲವೊಂದು ಬ್ಯಾಕ್ಟೀರಿಯಾಗಳು ಇರುವುದರಿಂದ ಗರ್ಭ ಧರಿಸಿರುವ ಮಹಿಳೆಯರು ಇದರಿಂದ ದೂರವಿದ್ದರೆ ತುಂಬಾ ಒಳ್ಳೆಯದಲ್ಲ.

ಗರ್ಭಧಾರಣೆ ವೇಳೆ ಮಹಿಳೆಯರ ದೇಹದಲ್ಲಿ ಪ್ರತಿರೋಧಕ ಶಕ್ತಿಯು ತುಂಬಾ ಕಡಿಮೆ ಇರುವುದರಿಂದ ಯಾವುದೇ ಬ್ಯಾಕ್ಟೀರಿಯಾಗಳು ಬೇಗನೆ ದಾಳಿ ಮಾಡಿ ಆರೋಗ್ಯ ಕೆಡಿಸಬಹುದು. ಇದಕ್ಕಾಗಿ ಆರೋಗ್ಯಕರವಾದ ಆಹಾರವನ್ನು ಸಲಹೆ ಮಾಡಲಾಗುತ್ತದೆ. ಗರ್ಭಿಣಿಯರ ಆರೋಗ್ಯಕ್ಕೆ 'ಬಲ ನೀಡುವ' ಆಹಾರಗಳಿವು...

ನಿಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸದೆ ಇದ್ದರೆ ಗರ್ಭದಲ್ಲಿರುವ ಮಗುವಿನ ಮೇಲೆ ಇದರ ಪರಿಣಾಮ ಬೀರಬಹುದು. ಮನೆಯಲ್ಲಿಯೇ ಕೇಕ್ ತಯಾರಿಸುತ್ತಾ ಇದ್ದರೆ ಹಸಿಯಾಗಿರುವ ಯಾವುದೇ ಪದಾರ್ಥಗಳನ್ನು ಇದಕ್ಕೆ ಹಾಕಬೇಡಿ. ಇದರಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಿರುತ್ತದೆ. ಮನೆಯಲ್ಲಿ ಮಾಡಿರುವಂತಹ ಕೇಕ್ ಸರಿಯಾಗಿ ಬೇಯಿಸದೆ ಇದ್ದರೆ ಅದರಿಂದ ಮಗು ಹಾಗೂ ನಿಮ್ಮ ಆರೋಗ್ಯ ಕೆಡಬಹುದು.

ಸಿಹಿಯಿಂದ ತೂಕ ಹೆಚ್ಚುವುದು
ಗರ್ಭಧಾರಣೆ ವೇಳೆ ಸಿಕ್ಕಿದೆಲ್ಲವನ್ನೂ ತಿನ್ನಬೇಕೆಂದು ಅನಿಸುವುದು ಸಹಜ. ಆದರೆ ಗರ್ಭಧಾರಣೆ ವೇಳೆ ಅತಿಯಾದ ತೂಕ ಒಳ್ಳೆಯದಲ್ಲ. ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಗರ್ಭಧಾರಣೆ ವೇಳೆ ತೂಕ ಹೆಚ್ಚಿಸಿಕೊಳ್ಳಬೇಡಿ. ಇರುವ ತೂಕವನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳಿ. ಇದರಿಂದ ಆದಷ್ಟು ಮಟ್ಟಿಗೆ ಸಿಹಿಯಿಂದ ದೂರವಿರಬೇಕು.

ಆಲ್ಕೋಹಾಲ್
ಕೆಲವೊಂದು ಕೇಕ್ ಗಳಿಗೆ ರಮ್, ಅಮರೆಟ್ಟೊದಂತಹ ಆಲ್ಕೋಹಾಲ್ ಅನ್ನು ಹಾಕಿರುತ್ತಾರೆ. ಗರ್ಭಧಾರಣೆ ವೇಳೆ ಇದನ್ನು ಸಂಪೂರ್ಣವಾಗಿ ದೂರವಿಡಬೇಕು. ಆಡುಗೆ ಆಲ್ಕೋಹಾಲ್ ಅನ್ನು ತಟಸ್ಥಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಕೇಕ್ ಗೆ ಒಳ್ಳೆಯ ರುಚಿಯನ್ನು ನೀಡುತ್ತದೆ. ಇಂತಹ ಕೇಕ್ ತಿನ್ನುವುದರಿಂದ ಅದು ಮಗುವಿನ ಮೇಲೆ ಪರಿಣಾಮ ಬೀರುವುದು. ಇಂತಹ ಕೇಕ್ ತಿನ್ನುವುದರಿಂದ ಹುಟ್ಟು ಅಂಗವೈಕಲ್ಯತೆ, ಅಕಾಲಿಕ ಹೆರಿಗೆ ಮತ್ತು ಮಗುವಿನಲ್ಲಿ ಮಾನಸಿಕ ಸಮಸ್ಯೆಗಳು ಕಂಡುಬರಬಹುದು.

English summary

Is It Okay To Eat Cakes During Pregnancy?

During pregnancy, women tend to crave for tasty food, but there are a lot among them who also feel worried that such cravings could affect their unborn child. For example, if you have a birthday party at your place at the peak of your pregnancy, should you go for that delicious cake and have a piece or two? To have it or not -- the dilemma can be frustrating.
X
Desktop Bottom Promotion