For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಎದೆಯುರಿ, ಇಂತಹ ಆಹಾರಗಳಿಂದ ದೂರವಿರಿ

By Manu
|

ಗರ್ಭಾವಸ್ಥೆಯಲ್ಲಿ ದೇಹ ಹಲವಾರು ಬದಲಾವಣೆಗಳನ್ನು ಪಡೆಯುತ್ತಾ ಹೋಗುವ ಕಾರಣ ಗರ್ಭಿಣಿ ಎದುರಿಸಬೇಕಾದ ಆರೋಗ್ಯನಿಮಿತ್ತ ತೊಂದರೆಗಳ ಪಟ್ಟಿಯೂ ದೊಡ್ಡದೇ ಇದೆ. ಇದರಲ್ಲಿ ಮುಖ್ಯವಾದುದು ಎದೆಯುರಿ ಅಥವಾ ಹೊಟ್ಟೆಯ ಉರಿ. ಹೊಟ್ಟೆಯಲ್ಲಿ ಆಹಾರ ಜೀರ್ಣವಾದ ಬಳಿಕ ಉತ್ಪತ್ತಿಯಾಗುವ ಕೆಲವು ಅನಿಲಗಳು ಅನ್ನನಾಳದ ಮುಖಾಂತರ ಹೊರಬರಲು ಯತ್ನಿಸುವ ಪ್ರಯತ್ನದಲ್ಲಿ ಹೊಟ್ಟೆಯ ಮೇಲ್ಭಾಗ, ವಪೆ, ಅನ್ನನಾಳ ಮೊದಲಾದವುಗಳ ಒಳಪದರವನ್ನು ಪ್ರಚೋದಿಸುವ ಕಾರಣ ಈ ಉರಿ ಉಂಟಾಗುತ್ತದೆ. ನರಕಯಾತನೆ ನೀಡುವ ಎದೆಯುರಿ ಸಮಸ್ಯೆಗೆ ಫಲಪ್ರದ ಮನೆಮದ್ದು

ಸಾಮಾನ್ಯವಾಗಿ ಇದು ಎಲ್ಲರ ತೊಂದರೆಯೂ ಆಗಿದ್ದು ಅಪಾಯಕಾರಿಯಾದ ತೊಂದರೆಯೇನೂ ಅಲ್ಲ. ಆದರೆ ಹೊಟ್ಟೆಯಲ್ಲಿನ ಉರಿ ತಾಳಲಾರದೇ ಸಂಕಟ ಅನುಭವಿಸುವುದು ಮಾತ್ರ ತಪ್ಪುವುದಿಲ್ಲ. ಆದರೆ ಗರ್ಭಿಣಿಯರಲ್ಲಿ ಈ ತೊಂದರೆ ಆಹಾರದ ಹೊರತಾಗಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಕಾಡಬಹುದು. ಆದ್ದರಿಂದ ಗರ್ಭಿಣಿಯರು ತಾವು ಸೇವಿಸುವ ಆಹಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಹೊಟ್ಟೆಯಲ್ಲಿ ಉರಿ ತರಿಸುವ, ವಾಯುಪ್ರಕೋಪ ಉಂಟುಮಾಡುವ ಆಹಾರಗಳನ್ನು ಹೆರಿಗೆಯಾಗುವವರೆಗಾದರೂ ತಿನ್ನಬಾರದು. ಗರ್ಭಾವಸ್ಥೆಯಲ್ಲಿ ಸ್ರವಿಸುವ ಹಾರ್ಮೋನುಗಳಲ್ಲಿ ಪ್ರೊಜೆಸ್ಟರಾನ್ ಎಂಬುವುದು ಪ್ರಮುಖವಾಗಿದ್ದು ಇದರ ಪ್ರಮಾಣ ಇತರ ಸಮಯಕ್ಕಿಂತ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿರುತ್ತದೆ. ಎದೆಯುರಿ ಸಮಸ್ಯೆಗೆ ಆರೋಗ್ಯಕರ ಜೀವನಶೈಲಿಯೇ ಮದ್ದು ಕಣ್ರಿ!

ನಾವು ಸೇವಿಸುವ ಆಹಾರ ಅನ್ನನಾಳದ ಮೂಲಕ ಹಿಂದೆ ಬರದಂತೆ ತಡೆಯಲು ಹೊಟ್ಟೆ ಮತ್ತು ಅನ್ನನಾಳ ಕೂಡುವಲ್ಲಿ ಕವಾಟವೊಂದಿದೆ. (ಆದ್ದರಿಂದ ಕುತ್ತಿಗೆಯವರೆಗೆ ಊಟ ಮಾಡಿದ್ದೇನೆ ಎಂದು ಹೇಳುವುದು ಕೇವಲ ಸಾಂದರ್ಭಿಕವೇ ಹೊರತು ವಾಸ್ತವವಾಗಿ ಸಾಧ್ಯವಿಲ್ಲ) ಗರ್ಭಾವಸ್ಥೆಯಲ್ಲಿ ಪ್ರೊಜೆಸ್ಟರಾನ್ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಈ ಕವಾಟ ಕೊಂಚ ಸಡಿಲವಾಗುವುದನ್ನು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ. ಹಾಗಾಗಿ ಕೊಂಚವೇ ಹೊಟ್ಟೆಯುರಿ ತರಿಸುವ ಆಹಾರವಿದ್ದರೂ ಇದು ಈ ಸಡಿಲಗೊಂಡ ಕವಾಟದ ಮೂಲಕ ಅನ್ನನಾಳಕ್ಕೆ ಸುಳುತ್ತದೆ. ಇದೇ ಎದೆಯುರಿಗೆ ಪ್ರಮುಖ ಕಾರಣ. ಸಾಮಾನ್ಯವಾಗಿ ಈ ತೊಂದರೆ ಐದನೆಯ ಮತ್ತು ಆರನೆಯ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಈ ತೊಂದರೆ ಹೆರಿಗೆಯವರೆಗೂ ಮುಂದುವರೆಯಬಹುದು.

ಅಲ್ಲದೇ ಈ ಉರಿಯನ್ನು ತಾಳಲಾರದೇ ಅನ್ನನಾಳದಲ್ಲಿದ್ದ ವಾಯು ಮತ್ತು ಆಮ್ಲೀಯ ದ್ರವವನ್ನು ಹೊರಹಾಕಲು ಅನ್ನನಾಳದಲ್ಲಿ ಅಲೆಗಳಂತೆ ಮುದುಡುವ ಪ್ರಯತ್ನವೂ ಗರ್ಭಿಣಿಗೆ ಅಸಹನೀಯವಾಗಿದ್ದು ಹೇಳಿಕೊಳ್ಳಲೂ ಮುಜುಗರವಗುತ್ತದೆ. ಆದ್ದರಿಂದ ಈ ತೊಂದರೆಗೆ ಒಳಗಾಗದಿರಲು ಸೂಕ್ತ ಆಹಾರವನ್ನು ಸೇವಿಸುವುದೇ ಜಾಣತನದ ಕ್ರಮ. ಗರ್ಭಾವಸ್ಥೆಯಲ್ಲಿ ಯಾವ ಆಹಾರಗಳನ್ನು ಸೇವಿಸದಿರುವುದು ಹಿತಕರ ಎಂದು ತಿಳಿದು ಜಾಣರಾಗಲು ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ...

ಕಾಫಿ ಮತ್ತು ಟೀ

ಕಾಫಿ ಮತ್ತು ಟೀ

ಕೆಫೀನ್ ಇರುವ ಯಾವುದೇ ಪೇಯ ಗರ್ಭಿಣಿಗೆ ಹೇಳಿಸಿದ್ದಲ್ಲ. ಆದ್ದರಿಂದ ಟೀ ಕಾಫಿ ಕೋಕೋ ಮೊದಲಾದ ಆಹಾರಗಳನ್ನು ಹೆರಿಗೆಯಾಗುವವರೆಗೆ ಮರೆತೇ ಬಿಡುವುದು ಉತ್ತಮ. ಇದರ ಬದಲಿಗೆ ಎಳನೀರು, ಹಣ್ಣಿನ ರಸ, ಗಂಜಿನೀರು ಇತ್ಯಾದಿಗಳನ್ನು ಸೇವಿಸಬಹುದು.

ಆಲ್ಕೋಹಾಲ್

ಆಲ್ಕೋಹಾಲ್

ಗರ್ಭಾವಸ್ಥೆ ಪ್ರಾರಂಭವಾದ ಬಳಿಕ ಮದ್ಯಪಾನದ ಬಗ್ಗೆ ಯೋಚಿಸದೇ ಇರುವುದೇ ಗರ್ಭಿಣಿಯ ಮತ್ತ್ತು ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಉತ್ತಮ. ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಾದಷ್ಟೂ ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಅಂಗಗಳ ಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ಅದರಲ್ಲೂ ಆಲ್ಕೋಹಾಲ್ ಸೇವಿಸಿದ ಬಳಿಕ ಸೇವಿಸಿದ ಯಾವುದೇ ಆಹಾರ ವಾಂತಿಯ ರೂಪದಲ್ಲಿ ಹಿಂದೆ ಬರುವ ಸಾಧ್ಯತೆ ಅಪಾರವಾಗಿ ಹೆಚ್ಚುವ ಕಾರಣ ಹೆರಿಗೆ ಮುಗಿದು ಬಾಣಂತನ ದಾಟುವವರೆಗೂ ಬೇಡವೇ ಬೇಡ.

ಕೊಬ್ಬು ಹೆಚ್ಚಿರುವ ಆಹಾರಗಳು

ಕೊಬ್ಬು ಹೆಚ್ಚಿರುವ ಆಹಾರಗಳು

ಬೆಣ್ಣೆ, ತುಪ್ಪ, ಒಮೆಗಾ 3 ಕೊಬ್ಬಿನ ತೈಲ ಮೊದಲಾದವು ಗರ್ಭಾವಸ್ಥೆಯಲ್ಲಿ ಹೊಟ್ಟೆಯುರಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಕೊಬ್ಬು ಹೆಚ್ಚಿರುವ, ಅದರಲ್ಲೂ ಅನಾರೋಗ್ಯಕರ ಸಿದ್ಧ ಆಹಾರ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನದಿರುವುದೇ ಉತ್ತಮ. ಆಹಾರದಲ್ಲಿ ಕೊಬ್ಬು ಹೆಚ್ಚಾದಷ್ಟೂ ಹೊಟ್ಟೆಯುರಿಯೂ ಹೆಚ್ಚುವುದನ್ನು ಗಮನಿಸಲಾಗಿದೆ.

ಸೋಡಾ

ಸೋಡಾ

ಸೋಡಾ ಸಹಿತ ಬುರುಗು ಬರುವ ಯಾವುದೇ ಲಘುಪಾನೀಯ ಗರ್ಭಾವಸ್ಥೆಯಲ್ಲಿ ಅಪಾಯಕಾರಿಯಾಗಿದೆ. ವಾಸ್ತವವಾಗಿ ಲಘುಪಾನೀಯದಲ್ಲಿ ಕರಗಿರುವ ಇಂಗಾಲದ ಡೈ ಆಕ್ಸೈಡ್ ಗುಳ್ಳೆಗಳ ರೂಪದಲ್ಲಿ ಬಿಡುಗಡೆಯಾಗುವುದೇ ಬುರುಗು ಬರಲು ಕಾರಣ ಈ ದ್ರವವನ್ನು ಕುಡಿಯುವ ವೇಳೆಯಲ್ಲಿ ಈ ಬುರುಗು ಅನ್ನನಾಳದಲ್ಲಿ ಗುಳ್ಳೆಗಳ ರೂಪದಲ್ಲಿ ಹಿಂದೆ ಬರುತ್ತದೆ. ಇದು ಅನ್ನನಾಳದ ಒಳಭಾಗಕ್ಕೆ ಕೊಂಚ ಕಚಗುಳಿ ಇಡುತ್ತದೆ. ಇತರರಿಗೆ ಈ ಕಚಗುಳಿ ಇಷ್ಟವಾದರೂ ಗರ್ಭಿಣಿಯರಿಗೆ ಮಾತ್ರ ಇದು ಸರ್ವಥಾ ಸಲ್ಲದು. ಈ ಕಚಗುಳಿ ಹೊಟ್ಟೆಯಲ್ಲಿದ್ದ ಆಹಾರವನ್ನು ನೇರವಾಗಿ ವಾಂತಿಯ ಮೂಲಕ ಹೊರಹಾಕಬಹುದು ಮತ್ತು ಹೊಟ್ಟೆಯಲ್ಲಿದ್ದ ಜೀರ್ಣಗೊಂಡಿದ್ದ ಮತ್ತು ಆಮ್ಲೀಯ ದ್ರವ ಅನ್ನನಾಳಕ್ಕೆ ನುಗ್ಗಿ ಅತಿ ಹೆಚ್ಚಿನ ಉರಿಯುಂಟುಮಾಡಬಹುದು. ಆದ್ದರಿಂದ ಬಾಣಂತನ ಮುಗಿಯುವವರೆಗೂ ಲಘುಪಾನೀಯ, ಸೋಡಾ ಇತ್ಯಾದಿಗಳಿಗೆ "ಬೇಡ" ಎಂದು ಹೇಳುವುದೇ ಸರಿಯಾದ ಕ್ರಮ.

ಚಾಕಲೇಟು

ಚಾಕಲೇಟು

ಗರ್ಭಾವಸ್ಥೆಯಲ್ಲಿ ತಿನ್ನಬಾರದ ಆಹಾರಳಲ್ಲಿ ಚಾಕಲೇಟು ಸಹಾ ಒಂದು. ಒಂದು ವೇಳೆ ಗರ್ಭಿಣಿ ಚಾಕಲೇಟಿಗೆ ವ್ಯಸನಳಾಗಿದ್ದು ಚಾಕಲೇಟು ತಿನ್ನದಿರಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದ್ದರೆ ಮಾತ್ರ ಅಲ್ಪ ಪ್ರಮಾಣದಲ್ಲಿ ಕಪ್ಪು ಚಾಕಲೇಟನ್ನು ಮಾತ್ರ ತಿನ್ನಬೇಕು. ಸಾಮಾನ್ಯವಾಗಿ ಚಾಕಲೇಟು ತಿನ್ನುವವರಿಗೆ ಈ ವ್ಯಸನ ಅವರ ರಕ್ತದಲ್ಲಿ ಹರಿಯುವ ಸಕ್ಕರೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಚಾಕಲೇಟು ತಿನ್ನುವ ಬಯಕೆಯಾದಾಗಲೆಲ್ಲಾ ಹಣ್ಣಿನ ರಸವನ್ನು ಒಣಗಿಸಿ ಮಾಡಿದ ಗಟ್ಟಿಪಾಕವನ್ನು ಪ್ರಯತ್ನಿಸಿ. ಮಾವಿನಹಣ್ಣಿನ ಪಾಕ, ಕೊಬ್ಬರಿ ಪಾಕ ಮೊದಲಾದವುಗಳು ಬಹಳ ಹಿಂದಿನಿಂದ ಗರ್ಭಿಣಿಯರ ಈ ತೊಂದರೆಯನ್ನು ನಿವಾರಿಸುತ್ತಾ ಬಂದಿದೆ.

English summary

Foods That Cause Heartburn In Pregnancy

Heartburn is one of the most common health problems that women face during their pregnancy period. Heartburn, also known as acid indigestion, is an irritation or a burning sensation caused by the stomach content that reflux from the stomach back to the oesophagus. Thus, in this article, we at Boldsky will be listing out some of the foods that cause heartburn during pregnancy. Read on to know more about it
X
Desktop Bottom Promotion