Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೇಳಿ ಇಲ್ಲಿ, ಗರ್ಭಿಣಿಯಾಗಿದ್ದಾಗ ಭಾರ ಎತ್ತಲು ಹೋಗಬೇಡಿ...
ಗರ್ಭಿಣಿ ಮಹಿಳೆಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅವರೊಳಗೆ ಮತ್ತೊಂದು ಜೀವವು ಬೆಳೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪ್ರತಿಯೊಂದು ಹೆಜ್ಜೆಯನ್ನು ಜಾಗೃತೆಯಿಂದ ಇಡಬೇಕಾಗುತ್ತದೆ.
ಅದರಲ್ಲೂ ಭಾರದ ವಿಷಯದಲ್ಲಿ ಗರ್ಭಿಣಿಯರು ಎಚ್ಚರ ವಹಿಸಬೇಕಾಗಿರುವುದು ಅತೀ ಅವಶ್ಯಕ. ಹಿರಿಯರು ಕೂಡ ಗರ್ಭಿಣಿ ಮಹಿಳೆಯರಿಗೆ ಇದರ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತಾರೆ.

ಸುಮಾರು 10 ಕೆಜಿ ತನಕ ಭಾರವನ್ನು ಗರ್ಭಿಣಿ ಮಹಿಳೆಯರು ಎತ್ತಬಹುದು. ಆದರೆ ಅದಕ್ಕಿಂತ ಹೆಚ್ಚಿನ ಭಾರವನ್ನು ಎತ್ತಲೇಬಾರದು. ಇದು ತುಂಬಾ ಅಪಾಯಕಾರಿ ಎಂದು ಅಧ್ಯಯನಗಳು ಹೇಳಿವೆ. ದೈಹಿಕವಾಗಿ ನೀವು ಬಲಿಷ್ಠರಾಗಿದ್ದು, ಹತ್ತು ಕೆಜಿಗಿಂತ ಹೆಚ್ಚಿನ ಭಾರವನ್ನು ಎತ್ತಲು ಶಕ್ತರಾಗಿದ್ದರೂ ಗರ್ಭಧಾರಣೆಯ ಸಮಯದಲ್ಲಿ ಇಷ್ಟು ಭಾರವನ್ನು ಎತ್ತಲು ದೇಹವು ಅವಕಾಶ ನೀಡುವುದಿಲ್ಲ.
ಇದಕ್ಕೆ ಕಾರಣವೇನು?
ಗರ್ಭಿಣಿಯಾಗಿರುವಾಗ ನಿಮ್ಮ ಗಂಟು ಮತ್ತು ಸ್ನಾಯುಗಳು ತುಂಬಾ ದುರ್ಬಲವಾಗಿರುತ್ತದೆ. ಇದರಿಂದಾಗಿ ಗರ್ಭಿಣಿಯಾಗಿರುವಾಗ ಗಾಯಾಳುವಾಗುವ ಸಾಧ್ಯತೆ ಹೆಚ್ಚಿದೆ. ಭಾರ ಎತ್ತುವಾಗ ಹೆಚ್ಚಿನ ಒತ್ತಡವು ನಿಮ್ಮ ಬೆನ್ನಿನ ಮೇಲೆ ಬೀಳುತ್ತದೆ. ಇದರಿಂದಾಗಿ ವೈದ್ಯರು ಭಾರ ಎತ್ತಬಾರದು ಎಂದು ಸಲಹೆ ನೀಡುತ್ತಾರೆ. ಶೀಘ್ರ ಗರ್ಭಧಾರಣೆಗೆ ಸಹಾಯಕವಾಗಿರುವ 20 ಆಹಾರಗಳು
ನೀವು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಗರ್ಭದಲ್ಲಿ ಮಗುವಿರುವಾಗ ಹೊಟ್ಟೆ ದೊಡ್ಡದಾಗಿರುತ್ತದೆ. ಇದರಿಂದಾಗಿ ಗುರುತ್ವಾಕರ್ಷಣೆಯಿಂದಾಗಿ ನೀವು ಬೀಳುವ ಸಾಧ್ಯತೆಗಳು ಹೆಚ್ಚು. ಬೀಳುವುದು ಮತ್ತು ಜಾರುವುದು ತುಂಬಾ ಅಪಾಯಕಾರಿ.
ವೈದ್ಯರ ಸಲಹೆ ಪಡೆದುಕೊಂಡು ಎಷ್ಟು ಭಾರ ಎತ್ತುವುದು ಸುರಕ್ಷಿತ ಮತ್ತು ಯಾವುದು ಸುರಕ್ಷಿತವಲ್ಲ ಎಂದು ತಿಳಿದುಕೊಳ್ಳಿ. ಗರ್ಭಿಣೆಯಾಗಿರುವಾಗ ಭಾರ ಎತ್ತುವ ಕೆಲಸ ಮಾಡುವುದರಿಂದ ದೂರವಿದ್ದರೆ ತುಂಬಾ ಒಳ್ಳೆಯದು. ಗರ್ಭಿಣಿಯಾಗಿರುವಾಗ ನಿಮ್ಮ ಕೆಲಸಗಳನ್ನು ಮಾಡಲು ಯಾರಾದರೂ ಇದ್ದರೆ ಹೆಚ್ಚಿನ ಭಾರ ಎತ್ತುವ ಸಮಸ್ಯೆಯಿಂದ ಪಾರಾಗಬಹುದು. ತಾಯ್ತನದ ಅವಧಿಯಲ್ಲಿ ಮೇಕಪ್ ಕಿಟ್ ಬಗ್ಗೆ ಎಚ್ಚರವಿರಲ್ಲಿ!



Click it and Unblock the Notifications



