For Quick Alerts
ALLOW NOTIFICATIONS  
For Daily Alerts

ತಡ ವಯಸ್ಸಿನಲ್ಲಿ ಗರ್ಭಧಾರಣೆ, ಹೃದಯಕ್ಕೆ ಅಪಾಯವಿದೆಯೇ?

By Manu
|

ಇತ್ತೀಚಿನ ಒಂದು ಸಂಶೋಧನೆಯಿಂದ ಗರ್ಭಧರಿಸಲು ತಡವಾದಷ್ಟೂ ಹೃದಯ ಸಂಬಂಧಿ ತೊಂದರೆ ಮತ್ತು ಸ್ತಂಭನದ ಸಂಭವ ಹೆಚ್ಚುತ್ತದೆ ಎಂದು ಕಂಡುಬಂದಿದೆ. ನಲವತ್ತು ವರ್ಷದ ಆಸುಪಾಸಿನಲ್ಲಿ ಗರ್ಭಧರಿಸಿದ ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಿ ಈ ವಿವರಗಳನ್ನು ಕಂಡುಕೊಳ್ಳಲಾಗಿದೆ.

Does Late Pregnancy Raise Heart Attack Risk?

ಇತ್ತೀಚೆಗೆ ವಿವಾಹಗಳೂ ತಡವಾಗುತ್ತಿದೆ ಅಲ್ಲದೇ ಜೀವನದ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಅಥವಾ ಇತರ ಕಾರಣಗಳಿಂದ ಗರ್ಭಧರಿಸಲು ಮಹಿಳೆಯರು ತಡಮಾಡುತ್ತಿರುವುದು ಕಂಡುಬಂದಿದೆ. ಆದರೆ ಸತತವಾಗಿ ಬದಲಾವಣೆಯಾಗುವ ಮಹಿಳೆಯರ ದೇಹ ತಡವಾದ ಗರ್ಭಾವಸ್ಥೆಯಲ್ಲಿ ಹಲವು ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗರ್ಭಾವಸ್ಥೆ ಮಾತ್ರವಲ್ಲ, ಹೆರಿಗೆಯ ಬಳಿಕವೂ ಇಡಿಯ ಜೀವಮಾನ ಕಾಡಬಹುದಾದ ತೊಂದರೆಗಳು ಇಲ್ಲಿಂದ ಪ್ರಾರಂಭವಾಗಬಹುದು ಎಂದು ಈ ಸಮೀಕ್ಷೆ ತಿಳಿಸುತ್ತದೆ. ಸಮೀಕ್ಷೆಗಾಗಿ ಈಗ ಐವತ್ತರಿಂದ ಎಂಭತ್ತು ವರ್ಷದವರಾಗಿರುವ ಮಹಿಳೆಯರ ಒಟ್ಟು ಎಪ್ಪತ್ತು ಸಾವಿರದಷ್ಟು ಮಹಿಳೆಯರ ಆರೋಗ್ಯದ ವಿವರಗಳನ್ನು ಕಲೆಹಾಕಿ ಈ ತೀರ್ಮಾನಕ್ಕೆ ಬರಲಾಗಿದೆ.

ಈ ಸಮೀಕ್ಷೆಗಾಗಿ ಅಷ್ಟೂ ದಾಖಲೆಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಮೊದಲ ವಿಭಾಗದಲ್ಲಿ ಸಾಮಾನ್ಯ ಇಪ್ಪತ್ತರ ದಶಕದಲ್ಲಿ ಗರ್ಭ ಧರಿಸಿದ ಮಹಿಳೆಯರ ವಿವರಗಳನ್ನೂ ಎರಡನೆಯ ವಿಭಾಗದಲ್ಲಿ ತಡವಾಗಿ ಹೆರಿಗೆಯಾದ ಮಹಿಳೆಯರ ಆರೋಗ್ಯದ ವಿರಗಳನ್ನೂ ಆಯ್ದುಕೊಳ್ಳಲಾಗಿತ್ತು.

ಎರಡೂ ವಿಭಾಗದ ಮಾಹಿತಿಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿ ತಡವಾಗಿ ಹೆರಿಗೆಯಾದ ಮಹಿಳೆಯರು ಹೃದಯ ಸ್ತಂಭನ ಮತ್ತು ಹೃದಯದ ತೊಂದರೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಖಚಿತಪಡಿಸಿಕೊಳ್ಳಲಾಗಿದೆ.

ಇದನ್ನು ಮನಗಂಡು ತಡವಾಗಿ ಹೆರಿಗೆಯಾದವರು ಹೃದಯ ಸಂಬಂಧಿ ವ್ಯಾಯಾಮಗಳು ಮತ್ತು ಇತರ ಚಟುವಟಿಕೆ, ಔಷಧಿ ಮತ್ತು ಆಹಾರಗಳ ಮೂಲಕ ಆರೋಗ್ಯವನ್ನು ವೃದ್ದಿಪಡಿಸಿಕೊಂಡು ಈ ಸಂಭವವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.


ಇದಕ್ಕಾಗಿ ನಿಯಮಿತವಾಗಿ ತಮ್ಮ ಅರೋಗ್ಯವನ್ನು ತಪಾಸಿಸಿಕೊಂಡು ವೈದ್ಯರ ಸಲಹೆಯಂತೆ ಸೂಕ್ತ ಔಷಧಿ, ಆಹಾರ ಮತ್ತು ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
English summary

Does Late Pregnancy Raise Heart Attack Risk?

A new study claims that late pregnancy may increase the risk of heart attack and stroke. This study says that women who wait till 40 to have a baby are among the ones who may face the risk.
Story first published: Sunday, February 21, 2016, 11:37 [IST]
X
Desktop Bottom Promotion