For Quick Alerts
ALLOW NOTIFICATIONS  
For Daily Alerts

ಎಳನೀರು, ಗರ್ಭಿಣಿಯರ ಪಾಲಿಗಂತೂ ಪನ್ನೀರು

By Deepak
|

ಗರ್ಭಿಣಿಯರನ್ನು ಪೋಷಣೆ ಮಾಡುವುದು ಮಕ್ಕಳನ್ನು ಪೋಷಿಸುವುದಕ್ಕಿಂತ ಸೂಕ್ಷ್ಮವಾದ ಕೆಲಸ. ಎಳೆ ಮಕ್ಕಳಿಗೆ ತಾಯಿಯ ಹಾಲಾದರು ಸಿಕ್ಕುತ್ತದೆ. ಆದರೆ ಗರ್ಭಿಣಿಯರಿಗೆ ಯಾವುದಾದರು ಆಹಾರವನ್ನು ನೀಡುವ ಮೊದಲು ಅದು ಅವರಿಗೆ ಒಳ್ಳೆಯದೆ, ಇಲ್ಲವೇ? ಎಂದು ಆಲೋಚಿಸಿ, ತಿಳಿದುಕೊಂಡು ಕೊಡಬೇಕಾಗುತ್ತದೆ. ಹಾಗೆ ನೆಮ್ಮದಿಯಾಗಿ ಅವರಿಗೆ ನೀಡಬಹುದಾದ ಆಹಾರ ಪದಾರ್ಥಗಳಲ್ಲಿ ಎಳನೀರು ಸಹ ಒಂದು. ಇದು ಅವರ ಪೋಷಕಾಂಶವನ್ನು ಪೂರೈಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಗರ್ಭಿಣಿಯರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೂ ಸಹ ಇದು ಪೋಷಕಾಂಶಗಳನ್ನು ಒದಗಿಸುತ್ತದೆ. ಗರ್ಭಿಣಿಯರಾಗಿರುವಾಗ ಎಳನೀರನ್ನು ಸೇವಿಸುವುದರಿಂದ ದಿನ ನಿತ್ಯದ ನೀರಿನಂಶವನ್ನು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ದೇಹಕ್ಕೆ ಒದಗಿಸಬಹುದು. ಹೀಗೆ ನಿಮ್ಮ ದೇಹದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಇದು ಒಳ್ಳೆಯ ಮಾರ್ಗವಾಗಿರುತ್ತದೆ.

Benefits Of Coconut Water During Pregnancy

ಎಳನೀರಿನಲ್ಲಿ ಎಲೆಕ್ಟ್ರೋಲೈಟ್‌‌ಗಳು, ಕ್ಲೊರೈಡ್‌ಗಳು, ಮೆಗ್ನಿಷಿಯಂ, ಕ್ಯಾಲ್ಸಿಯಂ, ರೈಬೊಫ್ಲಾವಿನ್ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುವುದರ ಜೊತೆಗೆ ಇದರಲ್ಲಿ ಡಯಟರಿ ಫೈಬರ್‌ಗಳು ಸಹ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಒಂದು ಮಿತವಾದ ಪ್ರಮಾಣದಲ್ಲಿ ಸಕ್ಕರೆ, ಸೋಡಿಯಂ ಮತ್ತು ಪ್ರೋಟಿನ್ ಸಹ ಎಳೆನೀರಿನಲ್ಲಿ ಲಭ್ಯವಿರುತ್ತದೆ.

ಗರ್ಭಿಣಿಯಾದ ಮೊದಲ ಮೂರು ತಿಂಗಳಿನಲ್ಲಿ ಎಳನೀರನ್ನು ಸೇವಿಸುವುದರಿಂದ ಮುಂಜಾನೆ ಮಂಕುತನ, ಮಲಬದ್ಧತೆ, ಎದೆ ಉರಿ, ಸುಸ್ತು, ತಲೆ ಸುತ್ತುವಿಕೆ, ನಿರ್ಜಲೀಕರಣವನ್ನು ತಡೆಯಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಇದು ನಮ್ಮ ದೇಹದಲ್ಲಿ ಕಳೆದು ಹೋಗಿರುವ ಉಪ್ಪಿನಂಶವನ್ನು ಸಹ ಮರು ತುಂಬಿಸುತ್ತದೆಯಂತೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎಳನೀರು, ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮೂತ್ರಾನಾಳದ ಇನ್‌ಫೆಕ್ಷನ್ ಅನ್ನು ತಡೆಯುತ್ತದೆ ಮತ್ತು ಅಧಿಕ ರಕ್ತ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಂದು ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ಗರ್ಭಿಣಿಯರಿಗಾಗಿ ಎಳನೀರನ್ನು ಸೇವಿಸುವುದರಿಂದ ದೊರೆಯುವ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದೆ. ಮುಂದೆ ಓದಿ....

ದಿನ ನಿತ್ಯ ಸೇವಿಸುವ ನೀರಿನಂಶವನ್ನು ತಮತೋಲನದಲ್ಲಿರಿಸುತ್ತದೆ
ಗರ್ಭಿಣಿಯರ ದೇಹಕ್ಕೆ ಅಧಿಕ ನೀರಿನಂಶ ಬೇಕಾಗುತ್ತದೆ. ಅದು ಅವರಿಗಷ್ಟೇ ಅಲ್ಲದೆ ಅವರ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ದೃಷ್ಟಿಯಿಂದಲೂ ಸಹ ಅತ್ಯಗತ್ಯ. ಎಳನೀರು ದೇಹಕ್ಕೆ ಹೆಚ್ಚುವರಿ ನೀರಿನಂಶವನ್ನು ಒದಗಿಸುವುದರ. ಜೊತೆಗೆ ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ.

ಎಲೆಕ್ಟ್ರೋಲೈಟ್‍ಗಳನ್ನು ಒದಗಿಸುತ್ತದೆ
ಗರ್ಭಿಣಿಯರಿಗೆ ನೀರಿನ ಜೊತೆಗೆ ಅಧಿಕ ಪ್ರಮಾಣದಲ್ಲಿ ಎಲೆಕ್ಟ್ರೋಲೈಟ್‌ಗಳು ಬೇಕಾಗುತ್ತವೆ. ಇವು ದೇಹದಲ್ಲಿ ನೀರಿನಂಶವನ್ನು ಕಾಪಾಡಲು ನೆರವಾಗುತ್ತವೆ. ಎಳನೀರಿನಲ್ಲಿ ಸೋಡಿಯಂ, ಕ್ಯಾಲ್ಸಿಯಂ ಮತ್ತು ಪೊಟಾಶಿಯಂ ಇರುತ್ತದೆ, ಇವುಗಳೆಲ್ಲವು ದೇಹಕ್ಕೆ ಎಲೆಕ್ಟ್ರೋಲೈಟ್‌ಗಳನ್ನು ಕೊಂಡೊಯ್ಯುವ ಸಾಧನಗಳಾಗಿರುತ್ತವೆ. ಇವುಗಳು ದೇಹದಲ್ಲಿ ನೀರಿನ ಅಂಶವನ್ನು ಕಾಪಾಡುವಲ್ಲಿ ಗಮನಾರ್ಹವಾದ ಕೆಲಸವನ್ನು ಮಾಡುತ್ತವೆ.

ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತವೆ
ಅಧಿಕ ಜನ ಮಹಿಳೆಯರಲ್ಲಿ ಗರ್ಭಿಣಿಯರಾಗಿರುವಾಗ ಅಧಿಕ ರಕ್ತದೊತ್ತಡ ಕಂಡು ಬರುತ್ತದೆ. ಇದು ತಾಯಿ ಮತ್ತು ಮಗು ಇಬ್ಬರ ಮೇಲೆ ಸಹ ದುಷ್ಪರಿಣಾಮವನ್ನು ಬೀರುತ್ತದೆ. ಎಳನೀರನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ರಕ್ತದೊತ್ತಡವನ್ನು ಹಗುರ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಆರೋಗ್ಯಕರ ತೂಕವನ್ನು ಕಾಪಾಡುತ್ತದೆ
ಎಳನೀರಿನಲ್ಲಿ ಕೊಬ್ಬಿನಂಶವಿರುವುದಿಲ್ಲ ಮತ್ತು ಕೊಲೆಸ್ಟ್ರಾಲ್ ಸಹ ಇರುವುದಿಲ್ಲ. ಆದ್ದರಿಂದ ಇದನ್ನು ಸೇವಿಸುವುದರಿಂದ ನಿಮಗೆ ತೂಕ ಹೆಚ್ಚಾಗುವುದಿಲ್ಲ. ಹಾಗಾಗಿ ಇದನ್ನು ನೀವು ಪ್ರತಿನಿತ್ಯ ಸೇವಿಸಿದರು ಸಹ ನಿಮ್ಮ ತೂಕದಲ್ಲಿ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಹೀಗೆ ಇದು ಗರ್ಭಿಣಿಯರಿಗೆ ಹೇಳಿ ಮಾಡಿಸಿದಂತಹ ಅಮೃತದಂತಹ ಪಾನೀಯವಾಗಿದೆ.

ಎದೆ ಹಾಲು
ಎಳನೀರನ್ನು ಕುಡಿಯುವುದರಿಂದ ಎದೆ ಹಾಲಿನ ಉತ್ಪಾದನೆಯು ಸಹ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಎಳ ನೀರು ಆರೋಗ್ಯಕರವಾದ ಎದೆ ಹಾಲಿಗೆ ಕಾರಣವಾಗುತದೆ. ಇದು ಸಹ ಗರ್ಭಿಣಿಯರಿಗೆ ಉತ್ತಮವಾದ ಪ್ರಯೋಜನ. ಇಷ್ಟೆಲ್ಲ ಉಪಯೋಗ ಅದು ಸ್ವಾಭಾವಿಕ ಮಾರ್ಗದಲ್ಲಿ ಏಕೆ ಕಳೆದುಕೊಳ್ಳುತ್ತೀರಿ.

English summary

Benefits Of Coconut Water During Pregnancy

Pregnant women look out for foods that fulfills their nutritional needs. There are a handful of foods that provide health benefits both for the mother and the baby. One such food that pregnant women prefer to consume during pregnancy is coconut water. In this article, we at Boldsky are listing out some more benefits of drinking coconut water during pregnancy. Read on to know more about it.
Story first published: Friday, January 1, 2016, 20:28 [IST]
X
Desktop Bottom Promotion