For Quick Alerts
ALLOW NOTIFICATIONS  
For Daily Alerts

ತಾಯಿಯಾಗುವ ಮೊದಲು, ದುಶ್ಚಟಗಳಿಗೆ ಗುಡ್‌ಬೈ ಹೇಳಲೇಬೇಕು

ಸಹವಾಸ ದೋಷದಿಂದ ಕೆಲವೊಂದು ಕೆಟ್ಟ ಚಟಗಳು ಮಹಿಳೆಯರಿಗೆ ಅಂಟಿಕೊಂಡಿಬಿಡುತ್ತದೆ. ಅಲ್ಲದೆ ಇವು ದುಶ್ಚಟವಾಗಿಯೂ ಪರಿವರ್ತಿತವಾಗಿ ಬಿಡುತ್ತದೆ. ಈ ದುಶ್ಚಟಗಳೇ ತಾಯಿ ಮತ್ತು ಗರ್ಭದಲ್ಲಿರುವ ಮಗುವಿಗೂ ಅಪಾಯಕಾರವಾಗಿ ಪರಿಣಮಿಸಬಹುದು....

By Arshad
|

ಗರ್ಭವತಿಯಾಗುವುದು ಪ್ರತಿ ಹಣ್ಣಿನ ಕನಸಾಗಿದೆ. ಆದರೆ ಈ ಕನಸು ಆರೋಗ್ಯಕರವಾಗಿ ನನಸಾಗಲು ಕೆಲವೊಂದು ತ್ಯಾಗಗಳನ್ನೂ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಈ ಬಯಕೆಯನ್ನು ಹೊಂದಿದ್ದರೆ ನಿಮ್ಮ ಅಭ್ಯಾಸಗಳನ್ನು ಕೊಂಚ ಗಮನವಿಟ್ಟು ನೋಡುವುದು ಉತ್ತಮ. ಸಾಮಾನ್ಯವಾಗಿ ನಮ್ಮ ದುಶ್ಚಟಗಳು ನಮಗೆ ದುಶ್ಚಟಗಳಂತೆ ಅನ್ನಿಸುವುದಿಲ್ಲ.

ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ಇರುವ ಹಿರಿಯರ ದೃಷ್ಟಿಯಿಂದ ನೋಡಿದಾಗ ನಿಮಗೆ ನಿಮ್ಮ ಚಟಗಳಲ್ಲಿ ದುಶ್ಚಟಗಳು ಯಾವುವು ಎಂದು ಗೊತ್ತಾಗುತ್ತದೆ. ಗರ್ಭ ಧರಿಸುವುದು ಎಂದರೆ ಇದೊಂದು ಅತಿ ಸೂಕ್ಷ್ಮವಾದ ಕ್ರಿಯೆಯಾಗಿದ್ದು ಗರ್ಭಾವಸ್ಥೆಯಲ್ಲಿ ತಾಯಿಯಾಗುವವಳ ದೇಹ ಹಲವಾರು ಬದಲಾವಣೆಗೆ ಒಳಪಡುತ್ತದೆ.

ದೇಹದ ಒಳಭಾಗದಲ್ಲಿ ಎಷ್ಟು ಬದಲಾವಣೆಗಳು ಉಂಟಾಗುತ್ತವೆಯೋ ಅಂತೆಯೇ ದೇಹದ ಹೊರಭಾಗದಲ್ಲಿಯೂ, ಭಾವನಾತ್ಮಕವಾಗಿಯೂ ಕೆಲವಾರು ಬದಲಾವಣೆಗಳು ಕಂಡುಬರುತ್ತವೆ. ಮುಂದಿನ ಒಂಬತ್ತು ತಿಂಗಳುಗಳ ಕಾಲ ಜೀವವೊಂದನ್ನು ಒಡಲಲ್ಲಿಟ್ಟು ಪೋಷಿಸುವ ಮತ್ತು ಇದರ ರಕ್ಷಣೆಯ ಭಾರ ಹೊರುವ ಮೂಲಕ ಮಹತ್ತರ ಜವಾಬ್ದಾರಿಯೂ ತಾಯಿಯದ್ದಾಗುತ್ತದೆ. ಗರ್ಭಾವಸ್ಥೆಯ ಎಲ್ಲಾ ಹಂತಗಳನ್ನು ಆರೋಗ್ಯಕರವಾಗಿ ದಾಟಬೇಕಾದರೆ ತಾಯಿಯಾಗುವವಳ ದೇಹವೂ ಆರೋಗ್ಯಕರವಾಗಿರಬೇಕು.

ದೇಹ ಆರೋಗ್ಯಕರವಾಗಿರಬೇಕಾದರೆ ಆಕೆಯ ದೈನಂದಿನ ಚಟುವಟಿಕೆ, ಆಹಾರಾಭ್ಯಾಸ, ಸಾಕಷ್ಟು ನಿದ್ದೆ, ವಿಶ್ರಾಂತಿ, ಪೌಷ್ಟಿಕ ಆಹಾರ, ನಿಯಮಿತವಾದ ವ್ಯಾಯಾಮ ಇತ್ಯಾದಿಗಳು ಅಗತ್ಯವಾಗಿವೆ. ಆದರೆ ಕೆಲವು ಕಾರಣಗಳಿಂದ ಅಥವಾ ಸಹವಾಸ ದೋಷದಿಂದ ಕೆಲವು ಚಟಗಳು ನಿಮಗೆ ಅಂಟಿಕೊಂಡಿರಬಹುದು. ಗರ್ಭಧಾರಣೆ ಪರೀಕ್ಷೆಗಳನ್ನು, ಮನೆಯಲ್ಲಿಯೇ ಮಾಡಬಹುದು!

ನಿಮಗರಿವೇ ಇಲ್ಲದಂತೆ ಇವು ದುಶ್ಚಟವಾಗಿಯೂ ಪರಿವರ್ತಿತವಾಗಿರಬಹುದು. ಈ ದುಶ್ಚಟಗಳು ತಾಯಿ ಮತ್ತು ಗರ್ಭದಲ್ಲಿರುವ ಮಗುವಿಗೂ ಅಪಾಯಕಾರವಾಗಿ ಪರಿಣಮಿಸಬಹುದು. ಬನ್ನಿ, ತಾಯಿ ಮತ್ತು ಮಗುವಿಗೆ ಆಪಾಯಕಾರಿಯಾದ ಈ ಅಭ್ಯಾಸಗಳ ಬಗ್ಗೆ ನೋಡೋಣ...

ಧೂಮಪಾನ

ಧೂಮಪಾನ

ತಾಯಿಯಾಗುವವಳ ಮತ್ತು ಗರ್ಭದಲ್ಲಿರುವ ಮಗುವಿಗೆ ಅತ್ಯಂತ ಹಾನಿಕಾರಕವಾದ ಈ ಅಭ್ಯಾಸ ವಿಶೇಷವಾಗಿ ಮಗುವಿನ ಶ್ವಾಸಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ತಾಯಿಯಾಗುವವಳ ದೇಹ ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯ ಸೂಕ್ಷ್ಮ ಸಮಯದಲ್ಲಿ ಧೂಮಪಾನದಿಂದ ಹೆಚ್ಚು ಅಪಾಯಕ್ಕೊಳಗಾಗುತ್ತದೆ. ಅಷ್ಟೇ ಅಲ್ಲ, ಧೂಮಪಾನದ ಅಭ್ಯಾಸವಿರುವ ಮಹಿಳೆಯರಿಗೆ ಗರ್ಭಾಂಕುರವಾಗುವ ಸಾಧ್ಯತೆಯೂ ಅಪಾರವಾಗಿ ಕಡಿಮೆಯಾಗುತ್ತದೆ.

ಮದ್ಯಪಾನ

ಮದ್ಯಪಾನ

ಗರ್ಭ ಧರಿಸುವ ಯೋಚನೆ ಇದ್ದರೆ ಮದ್ಯಪಾನದ ಯೋಚನೆಯನ್ನೂ ಬಿಟ್ಟುಬಿಡುವುವೇ ಉತ್ತಮ. ಏಕೆಂದರೆ ಧೂಮಪಾನದ ಮಂಪರಿನಲ್ಲಿ ಗರ್ಭಾಂಕುರ ಅತ್ಯಂತ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲ, ಒಂದು ವೇಳೆ ಗರ್ಭ ಧರಿಸಿದರೂ ಗರ್ಭಾಪಾತವಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಅಲ್ಲದೇ ಒಂದು ವೇಳೆ ಗರ್ಭ ನಿಂತರೂ foetal alcohol syndrome ಎಂಬ ಸ್ಥಿತಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಹುಟ್ಟುವ ಮಗು ಬುದ್ಧಮಾಂದ್ಯವಾಗಿ ಹುಟ್ಟುವ ಸಾಧ್ಯತೆ ಹೆಚ್ಚು. ನಿಮ್ಮ ಮಗು ಆರೋಗ್ಯಕರವಾಗಿರಬೇಕೆಂದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ ಬಳಿಕ ನಿಮ್ಮ ದೇಹವನ್ನು ತಪಾಸಣೆಗೊಳಪಡಿಸಿ ಆರೋಗ್ಯಕರವಾಗಿದೆ ಎಂದು ವೈದ್ಯರು ಅನುಮತಿ ನೀಡಿದ ಬಳಿಕವೇ ಮುಂದುವರೆಯಿರಿ.

ಕೆಫೀನ್

ಕೆಫೀನ್

ಇತ್ತೀಚಿನ ಸಂಶೋಧನೆಯ ಪ್ರಕಾರ ಕೆಫೀನ್ ಪ್ರಮಾಣ ಹೆಚ್ಚಿರುವ ಪಾನೀಯಗಳಾದ ಕಾಫಿ, ಎನರ್ಜಿ ಡ್ರಿಂಕ್, ಬುರುಗು ಬರುವ ಲಘು ಪಾನೀಯ ಮೊದಲಾದವುಗಳನ್ನು ಸೇವಿಸುವ ಮೂಲಕ ಗರ್ಭಾಪಾತವಾಗುವ ಅಥವಾ ಅವಧಿಗೂ ಮುನ್ನ ಶಿಶು ಜನಿಸುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಸಕ್ಕರೆಯ ಪ್ರಮಾಣ ಹೆಚ್ಚಿರುವ ಆಹಾರಗಳು

ಸಕ್ಕರೆಯ ಪ್ರಮಾಣ ಹೆಚ್ಚಿರುವ ಆಹಾರಗಳು

ಗರ್ಭಾವಸ್ಥೆಗೂ ಮುನ್ನ ಸೇವಿಸಬಾರದ ಆಹಾರಗಳಲ್ಲಿ ಸಕ್ಕರೆಯ ಅಂಶ ಹೆಚ್ಚಿರುವ ಆಹಾರಗಳೂ ಸೇರಿವೆ. ಒಂದು ವೇಳೆ ಸಿಹಿ ಹೆಚ್ಚಾಗಿ ತಿನ್ನುವ ಅಭ್ಯಾಸ ನಿಮಗಿದ್ದರೆ ಈ ಅಭ್ಯಾಸವನ್ನು ಮುಂದಿನ ಒಂದು ವರ್ಷದವರೆಗೆ ಬಿಡುವುದೇ ಒಳ್ಳೆಯದು. ಇಲ್ಲದಿದ್ದರೆ ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ ತಾಯಿಗೂ, ಮಗುವಿಗೂ ಆವರಿಸಬಹುದಾದ ಸಾಧ್ಯತೆ ಹೆಚ್ಚುತ್ತದೆ.

ಅಗತ್ಯಕ್ಕೂ ಹೆಚ್ಚು ವ್ಯಾಯಾಮ

ಅಗತ್ಯಕ್ಕೂ ಹೆಚ್ಚು ವ್ಯಾಯಾಮ

ಕೆಲವು ಮಹಿಳೆಯರಿಗೆ ತಮ್ಮ ಅಂಗಸೌಷ್ಟವವನ್ನು ಕಾಪಾಡಿಕೊಳ್ಳಲು ಅಗತ್ಯಕ್ಕೂ ಹೆಚ್ಚು ವ್ಯಾಯಾಮ ಮಾಡುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸವನ್ನು ಗರ್ಭ ಧರಿಸುವ ಅವಧಿಯಲ್ಲಿ ಬಿಡುವುದೇ ಉತ್ತಮ. ಇದರಿಂದ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುವುದು ಮಾತ್ರವಲ್ಲ, ಒಂದು ವೇಳೆ ಗರ್ಭ ನಿಂತರೂ ಗರ್ಭಾಪಾತವಾಗುವ ಸಾಧ್ಯತೆ ಹೆಚ್ಚುತ್ತದೆ.

ಒತ್ತಡ

ಒತ್ತಡ

ಗರ್ಭ ಧರಿಸುವ ಸಮಯದಲ್ಲಿ ಮಾನಸಿಕವಾಗಿ ನಿರಾಳವಾಗಿರುವುದು ಅಗತ್ಯವಾಗಿದೆ. ಯಾವುದೇ ರೀತಿಯ ಮಾನಸಿಕವಾದ ಒತ್ತಡ ತಾಯಿಯಾಗುವವಳ ದೇಹದಲ್ಲಿ ಕೆಲವು ಹಾರ್ಮೋನುಗಳನ್ನು ಸ್ರವಿಸುವಂತೆ ಮಾಡುತ್ತದೆ. ಈ ಹಾರ್ಮೋನುಗಳು ಗರ್ಭಾವಸ್ಥೆಯಲ್ಲಿ ಒಸರುವ ಹಾರ್ಮೋನುಗಳಿಗೆ ವಿರುದ್ದವಾಗಿದ್ದು ಗರ್ಭ ಧರಿಸಲು ಅಡ್ಡಿಯುಂಟು ಮಾಡುತ್ತವೆ.

English summary

Bad Habits To Stop Before Getting Pregnant

Pregnancy is a very sensitive phase of a woman's life, in which her body is going through a lot of changes, both internally and externally. During pregnancy, a woman's body has to prepare itself to carry another human being for nine whole months, provide nourishment to the unborn baby, protect it and also enable the foetus to have a healthy growth.
X
Desktop Bottom Promotion