For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಜೋಕೆ, ಮಲಗುವ ವಿಷಯದಲ್ಲಿ ಎಚ್ಚರ ತಪ್ಪದಿರಿ!

|

ಗರ್ಭಾವಸ್ಥೆಯಲ್ಲಿ ಮಲಗುವ ಭಂಗಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಹೊಟ್ಟೆಯೊಳಗೆ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಮತ್ತು ಗರ್ಭಿಣಿಯ ಆರಾಮಕ್ಕೆ ಇದು ಅಗತ್ಯವಾಗಿದೆ. ಒಂದು ವೇಳೆ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದರೆ ಆ ಭಾಗದಲ್ಲಿ ರಕ್ತಸಂಚಾರ ಕಠಿಣವಾಗಿ ಮಗುವಿನ ಬೆಳವಣಿಗೆಗೆ ತೊಂದರೆ ಉಂಟಾಗಬಹುದು.

ಇನ್ನೊಂದೆಡೆ ಒಂದೇ ಭಂಗಿಯಲ್ಲಿ ಮಲಗುವುದು ಗರ್ಭಿಣಿಗೆ ಕಿರಿಕಿರಿ ತರಿಸಬಹುದು. ನಿದ್ದೆ ಭಂಗವಾಗಿ ಹಲವು ಪರೋಕ್ಷ ತೊಂದರೆಗಳು ಉದ್ಭವಿಸಬಹುದು. ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳು ನಿದ್ರೆಯ ಕೊರತೆಯಿಂದ ಎದುರಾಗಬಹುದು. ಜೊತೆಗೇ ಒತ್ತಡದ ಕಾರಣ ಅನಗತ್ಯ ಹಾರ್ಮೋನುಗಳು ಸ್ರವಿತವಾಗಿ ಮಗುವಿನ ಬೆಳವಣಿಗೆಗೆ ತೊಂದರೆಯುಂಟುಮಾಡಬಹುದು ಅಥವಾ ಅನೈಚ್ಛಿಕ ಬೆಳವಣಿಗೆ ಪಡೆಯಬಹುದು.

ಹೊಟ್ಟೆಯೊಳಗಣ ಶಿಶು ಬೆಳೆಯುತ್ತಿದ್ದಂತೆಯೇ ಗರ್ಭಿಣಿ ಕೆಲವು ಚಲನೆಗಳನ್ನು ಅನುಭವಿಸಬಹುದು. ಇದನ್ನೇ ಮಗು ಒದೆಯುತ್ತಿದೆ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ನಿದ್ದೆಯಲ್ಲಿ ಅರಿವಿಲ್ಲದೇ ಹೊಟ್ಟೆಯ ಮೇಲೆ ಒತ್ತಡ ಬರುವಂತೆ ಪವಡಿಸಿದಾಗ ಈ ಚಲನೆ ಹೆಚ್ಚಾಗಿರುವುದನ್ನು ಹಲವು ಗರ್ಭಿಣಿಯರು ಗಮನಿಸಿದ್ದಾರೆ.

ಇದರಿಂದಾಗಿ ಅನಿವಾರ್ಯವಾಗಿ ಪಕ್ಕಕ್ಕೆ ಮಲಗುವ ಒಂದೇ ಭಂಗಿಯ ಕಾರಣ ಬೆನ್ನು ನೋವು, ಎದೆಯುರು, ಸರಾಗವಾಗಿ ಉಸಿರಾಡಲು ಸಾಧ್ಯವಾಗದೇ ಇರುವುದು, ಸೊಂಟದ ಸುತ್ತಳತೆ ಹೆಚ್ಚುವುದು ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ತೊಂದರೆಗಳಿಂದ ಮುಕ್ತಿ ಪಡೆಯಲು ಕೆಲವು ಸಲಹೆಗಳನ್ನು ಈ ಮೂಲಕ ನೀಡಲಾಗಿದೆ.

ಎಡಬದಿ ವಾಲಿ ಮಲಗುವುದೇ ಅತ್ಯಂತ ಶ್ರೇಷ್ಠ ವಿಧಾನವಾಗಿದೆ

How To Sleep During Pregnancy

ನಿಮ್ಮ ಎಡಬದಿಗೆ ವಾಲಿ ಮಲಗುವುದು ಮಗು ಮತ್ತು ತಾಯಿ ಇಬ್ಬರಿಗೂ ಅತ್ಯಂತ ಸೂಕ್ತವಾದ ಭಂಗಿಯಾಗಿದೆ. ಇದರಿಂದ ನಿಮ್ಮ ಹೊಟ್ಟೆ ಸರಿಯಾದ ಕ್ರಮದಲ್ಲಿ ಬೆಳವಣಿಗೆ ಪಡೆಯಲು ಅನುವು ಮಾಡಿಕೊಟ್ಟಂತಾಗುತ್ತದೆ. ರಕ್ತಸಂಚಾರ ಸುಲಲಿತಗೊಳ್ಳುತ್ತದೆ. ಗರ್ಭಿಣಿಯ ಯಕೃತ್ ಮತ್ತು ಮೂತ್ರಪಿಂಡಗಳಿಗೆ ಬೆಳೆಯುತ್ತಿರುವ ಗರ್ಭಾಶಯದ ಮೂಲಕ ಅತ್ಯಂತ ಕಡಿಮೆ ಭಾರ ಬೀಳುವುದರಿಂದ ಈ ಭಂತಿ ಅತ್ಯಂತ ಸುರಕ್ಷಿತವಾಗಿದೆ. ಮಹಿಳೆಯರಲ್ಲಿ ಸಂತಾನೋತ್ಪತ್ತಿ ಹೆಚ್ಚಿಸುವ ಸೂಪರ್ ಫುಡ್‌!

ನೆಟ್ಟಗೆ ಬೆನ್ನಿನ ಮೇಲೆ ಮಲಗುವುದು ಅತಿ ಅಪಾಯಕಾರಿ

How To Sleep During Pregnancy

ಇತರ ಹೊತ್ತಿನಲ್ಲಿ ಬೆನ್ನೆನ ಮೇಲೆ ಶವಾಸನದ ಭಂಗಿಯಲ್ಲಿ ಮಲಗುವುದು ಗರ್ಭಾವಸ್ಥೆಯಲ್ಲಿ ತರವಲ್ಲ. ಏಕೆಂದರೆ ಇದರಿಂದ ಹಲವು ರಕ್ತನಾಳಗಳು ಸಂಕುಚಿತಗೊಂಡು ಹೃದಯ ಹೆಚ್ಚಿನ ಒತ್ತಡದಿಂದ ರಕ್ತವನ್ನು ದೂಡಿಕೊಡಬೇಕಾಗುತ್ತದೆ. ಈ ಹೆಚ್ಚಿನ ಒತ್ತಡ ಪ್ರಜ್ಞೆ ತಪ್ಪಿಸಲೂಬಹುದು. ಜೊತೆಗೇ ಗರ್ಭಾಶಯದ ಭಾರ ನೇರವಾಗಿ ಮೆದುಳುಬಳ್ಳಿ, ಬೆನ್ನು ಮತ್ತು ಕರುಳುಗಳ ಮೇಲೆ ಬೀಳುವುದರಿಂದ ಇಡಿಯ ಮೈಗೆ ಭಾರ, ಸ್ನಾಯುಗಳ ಸೆಡೆತ, ರಕ್ತಸಂಚಾರದಲ್ಲಿ ಕುಂಠಿತತೆ ಎದುರಾಗುತ್ತದೆ. ಕೆಲವೊಮ್ಮೆ ಕರುಳುಗಳಲ್ಲಿ ಗಂಟುಗಳಾಗುವ hemorrhoid ಸಹಾ ಎದುರಾಗಬಹುದು. ಜೊತೆಗೇ ಶಿಶುವಿಗೆ ಪೂರೈಕೆಯಾಗುವ ರಕ್ತದಲ್ಲಿಯೂ ಕಡಿಮೆಯಾಗಿ ಬೆಳವಣಿಗೆಗೆ ತೊಂದರೆಯಾಗುತ್ತದೆ. ಹಾಗಾಗಿ ವೈದ್ಯರು ತಿಳಿಸುವವರೆಗೆ ಬೆನ್ನಿನ ಮೇಲೆ ಮಲಗಬೇಡಿ!

ಹೊಟ್ಟೆಯ ಮೇಲೂ ಮಲಗಬೇಡಿ

How To Sleep During Pregnancy

ಕೆಲವರು ಹೊಟ್ಟೆಯ ಮೇಲ್ಭಾಗದಲ್ಲಿ ಕೆಲವು ದಿಂಬುಗಳನ್ನಿರಿಸಿ ಅಂಗಾತ ಮಲಗಿಕೊಳ್ಳುತ್ತಾರೆ. ಆದರೆ ಇದು ಅತ್ಯಂತ ತಪ್ಪು ಕ್ರಮವಾಗಿದೆ. ಏಕೆಂದರೆ ಗರ್ಭಾಶಯದ ಮೇಲೆ ಇಡಿಯ ಜಠರದ ಭಾರ ಕುಳಿತುಕೊಳ್ಳುವುದರಿಂದ ಶಿಶುವಿಗೆ ತೊಂದರೆಯುಂಟಾಗುತ್ತದೆ. ಇಡಿಯ ಒಂಭತ್ತೂ ತಿಂಗಳೂ ಈ ಭಂಗಿಯಲ್ಲಿ ಮಲಗುವುದನ್ನು ಬಿಟ್ಟುಬಿಡಿ. ಗರ್ಭಿಣಿಯಾಗಿರುವಾಗ ಹೃದ್ರೋಗವನ್ನು ನಿಭಾಯಿಸುವುದು ಹೇಗೆ?

ಇತರ ಸೂಕ್ತ ವಿಧಾನಗಳು

How To Sleep During Pregnancy

ಹಾಗಾದರೆ ಸೂಕ್ತವಾದ ಭಂಗಿ ಯಾವುದು? ವೈದ್ಯರು ತಿಳಿಸುವ ಪ್ರಕಾರ ಎಡಗಡೆ ವಾಲಿ ಮಲಗುವುದೇ ಉತ್ತಮ. ಆದರೆ ಒಂದೇ ಭಂಗಿಯಲ್ಲಿ ಮಲಗುವುದರಿಂದ ಶೀಘ್ರವೇ ಹಾಸಿಗೆಗೆ ತಗಲಿದ್ದ ಭಾಗ ಜೋಮು ಹಿಡಿದಂತಾಗುವುದರಿಂದ ಕೊಂಚ ಸಮಯ ಬಲಭಾಗಕ್ಕೆ ತಿರುಗಿ ಮಲಗಿ. ಹೊಟ್ಟೆಯ ಕೆಳಭಾಗದಲ್ಲಿ, ನಿಮಗೆ ಆರಾಮವೆನಿಸುವಂತೆ ದಿಂಬು ಇಟ್ಟುಕೊಳ್ಳಿ. ಕೊಂಚ ವಿರಾಮದ ಬಳಿಕ ಮತ್ತೆ ಎಡಕ್ಕೆ ತಿರುಗಿ. ಈ ಬದಿಯಲ್ಲಿದ್ದಾಗಲೂ ಹೊಟ್ಟೆಯ ಕೆಳಗೆ ದಿಂಬು ಒಂದಿರಲಿ. ಇದು ಹೊಟ್ಟೆಯ ಭಾರವನ್ನು ಗರ್ಭಕೋಶದ ಮೇಲೆ ಹೇರದಂತೆ ತಡೆಯುವುದರಿಂದ ಸುಖನಿದ್ದೆ ಮತ್ತು ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಬೆನ್ನಿನ ಸ್ನಾಯುಗಳಿಗೆ ಭಾರ ಬೀಳದ ಕಾರಣ ಬೆನ್ನುನೋವು ಮತ್ತಿತರ ತೊಂದರೆಗಳಿಂದಲೂ ಮುಕ್ತಿ ಪಡೆದಂತಾಗುತ್ತದೆ.

English summary

How To Sleep During Pregnancy

Sleep plays an important role during pregnancy for both baby and mother's comfort. Sleep during pregnancy helps in foetal development and growth. Sleep deprivation in pregnancy can cause depression. The stress hormones are increased due to improper sleep that can harm the baby
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more