For Quick Alerts
ALLOW NOTIFICATIONS  
For Daily Alerts

ಹೆರಿಗೆ ಸಮಯದಲ್ಲಿ ಮಲವಿಸರ್ಜನೆ: ಮುನ್ನೆಚ್ಚರಿಕೆ ಕ್ರಮಗಳೇನು?

By Super
|

ಹೆರಿಗೆ ಸುಲಭವಾಗಿ ಆಗಬೇಕೆಂದು ಪ್ರತಿಯೊಬ್ಬ ಗರ್ಭಿಣಿಯ ಅಪೇಕ್ಷೆಯಾಗಿದೆ. ಸಾಮಾನ್ಯ ಹೆರಿಗೆಯ ಸಮಯದಲ್ಲಿಯೂ ಕೆಲವೊಮ್ಮೆ ಅರಿವಿಲ್ಲದಂತೆಯೇ ಮಲವಿಸರ್ಜನೆಯಾಗುವುದು ಬಳಿಕ ಕೊಂಚ ಮುಜುಗರ ತರಿಸುತ್ತದೆ. ಒಂದು ವೇಳೆ ನಿಮ್ಮ ಹೆರಿಗೆ ಆಸ್ಪತ್ರೆಯಲ್ಲಿ ಆಗುವುದಾದರೆ ಆಸ್ಪತ್ರೆಯ ದಾದಿಯರು ಈ ಪರಿಸ್ಥಿತಿಯನ್ನು ನಿರೀಕ್ಷಿಸಿದ್ದು ಅದನ್ನು ಸ್ವಚ್ಛಗೊಳಿಸುತ್ತಾರೆ.

ವಾಸ್ತವದಲ್ಲಿ ಮಲವಿಸರ್ಜನೆ ಒಂದು ಆರೋಗ್ಯಕರ ಲಕ್ಷಣವಾಗಿದೆ. ಮಗುವನ್ನು ಗರ್ಭದಿಂದ ಹೊರದಬ್ಬಲು ನೀವು ಉಪಯೋಗಿಸಿದ ಒತ್ತಡ ಸೂಕ್ತವಾಗಿದ್ದು ಸಾಮಾನ್ಯವಾದ ಹೆರಿಗೆ ಸಾಧ್ಯವಾಗಿರುವುದು ಈ ಮೂಲಕ ಸಾಬೀತಾಗುತ್ತದೆ. ಹೆರಿಗೆ ಆಸ್ಪತ್ರೆಯಲ್ಲಿ ನಿಮ್ಮ ಹೆರಿಗೆ ಇನ್ನೂ ಸುಲಭವಾಗಲು ಪ್ರಸೂತಿ ವೈದ್ಯರು ಹೆರಿಗೆ ಸಮಯಕ್ಕೂ ಮುನ್ನವೇ ಸೂಕ್ತ ಅರವಳಿಕೆ ಮತ್ತು ಎನೀಮಾ (enema) ಎಂಬ ಜಾರುಕವನ್ನು ಉಪಯೋಗಿಸಿ ಮಗುವಿನ ಚಲನೆ ಸುಲಭವಾಗುವಂತೆ ಏರ್ಪಾಡು ಮಾಡಿರುತ್ತಾರೆ.

How To Prevent Pooping During Labour

ಈ ಮುನ್ನೆಚ್ಚರಿಕೆಗಳಿಂದ ಹೆರಿಗೆ ಸುಲಭವೂ ಆಗಿದ್ದು ಮಲವಿಸರ್ಜನೆಯಾಗುವ ಪ್ರಮೇಯ ಬರುವುದಿಲ್ಲ. ಆದರೆ ಕೆಲವೊಮ್ಮೆ ತಡವಾಗಿ ಆಸ್ಪತ್ರೆಗೆ ಕರೆತಂದಿರುವ ಸಂದರ್ಭದಲ್ಲಿ ಈ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಪ್ರಸೂತಿ ತಜ್ಞರಿಗೆ ಸಮಯಾವಕಾಶವೇ ಇರುವುದಿಲ್ಲ. ಈ ಸಂದರ್ಭದಲ್ಲಿ ಮಲವಿಸರ್ಜನೆ ಅನಿವಾರ್ಯವಾಗುತ್ತದೆ. ಅದರೆ ನೀವೇ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದರಿಂದ ಈ ಮುಜುಗರದಿಂದ ತಪ್ಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಲವು ಆಪ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಗರ್ಭಿಣಿಯರ ಪ್ರಾಣ ಹಿಂಡುವ ವಾಂತಿ ಸಮಸ್ಯೆಗೆ ಕಡಿವಾಣ ಹಾಕುವುದು ಹೇಗೆ?

ಹೊಟ್ಟೆಯನ್ನು ಖಾಲಿಯಾಗಿಡಿ

ನಿಮ್ಮ ಹೆರಿಗೆಯ ಸಮಯ ಹತ್ತಿರಾದಂತೆ ನಿಮ್ಮ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಯವನ್ನು ನಿರೀಕ್ಷಿಸಿ ಅದಕ್ಕೂ ಮುನ್ನವೇ ಹೆಚ್ಚು ಊಟ ಮಾಡದಿರುವುದು ಜಾಣತನ. ಈ ಸಮಯಕ್ಕೂ ಮುನ್ನವೇ ಶೌಚಾಲಯಕ್ಕೆ ಹೋಗಿ ಬರುವುದು ಇನ್ನೊಂದು ಮುನ್ನೆಚ್ಚರಿಕೆಯಾಗಿದೆ. ಸಾಕಷ್ಟು ನೀರು ಕುಡಿದು ಹೆರಿಗೆಗೆ ಸಿದ್ಧರಾಗಿ. ಇದರಿಂದ ಈ ತೊಂದರೆಗೆ ಸಿಲುಕಿಕೊಳ್ಳುವ ಸಂಭವ ಕಡಿಮೆಯಾಗುತ್ತದೆ.

ಮಾಂಸಾಹಾರವನ್ನು ಸೇವಿಸಿ

ಹೆರಿಗೆಯ ಮುನ್ನಾ ದಿನಗಳಲ್ಲಿ ಪ್ರೋಟೀನ್ ಹೆಚ್ಚಿರುವ ಮಾಂಸಾಹಾರಗಳನ್ನು ಸೇವಿಸಿ. ಏಕೆಂದರೆ ಹಣ್ಣು, ತರಕಾರಿ, ಹಣ್ಣಿನ ರಸಗಳಲ್ಲಿ ಹೆಚ್ಚಿನ ನಾರು ಇರುವುದರಿಂದ ದೊಡ್ಡಕರುಳಿನಲ್ಲಿ ತ್ಯಾಜ್ಯ ಸಂಗ್ರಹ ಹೆಚ್ಚಾಗುತ್ತದೆ. ಮಾಂಸಾಹಾರದಲ್ಲಿ ನಾರು ಕಡಿಮೆ ಇರುವುದರಿಂದ ಬಹುತೇಕ ಎಲ್ಲಾ ಸಣ್ಣಕರುಳಿನಲ್ಲಿಯೇ ಜೀರ್ಣವಾಗಿ ದೊಡ್ಡಕರುಳು ಬಹುತೇಕ ಖಾಲಿಯಾಗಿರುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಾಂಸ ಸೇವಿಸುವುದು ತರವಲ್ಲ. ಅಲ್ಲದೇ ಮಾಂಸದಲ್ಲಿರುವ ಕರಗದ ವಸ್ತುಗಳು ಸರಿಸುಮಾರು ಗಟ್ಟಿಯಾಗಿದ್ದು ಸುಲಭವಾಗಿ ಹೊರಬರದಂತಿರುವುದರಿಂದ ಹೆರಿಗೆ ಸಮಯದಲ್ಲಿ ಮುಜುಗರವನ್ನು ತಪ್ಪಿಸಬಹುದು.

How To Prevent Pooping During Labour

ವಾಯುಪ್ರಕೋಪವುಂಟುಮಾಡುವ ಆಹಾರಗಳಿಂದ ದೂರವಿರಿ

ಹೆರಿಗೆಗೂ ಮುನ್ನ ಕೆಲದಿನಗಳ ಕಾಲ ವಾಯುಪ್ರಕೋಪವುನ್ನುಂಟುಮಾಡುವ ಯಾವುದೇ ಆಹಾರವನ್ನು ಸೇವಿಸದಿರಿ. ಆಲುಗಡ್ಡೆ, ಬದನೆ, ಬೀನ್ಸ್ ಕಾಳು, ಹಸಿಮೆಣಸು ಮೊದಲಾದವುಗಳಿಂದ ತಯಾರಿಸಿದ ಆಹಾರಗಳಿಂದ ದೂರವಿರಿ. ವಾಯು ಪ್ರಕೋಪದಿಂದಲೂ ದೊಡ್ಡಕರುಳಿನಲ್ಲಿರುವ ತ್ಯಾಜ್ಯ ಸುಲಭವಾಗಿ ಹೊರಬರುವ ಅಪಾಯವಿರುತ್ತದೆ. ಮಗುವಿಗೆ ಹಾಲುಣಿಸಿದ ನಂತರವೂ ಸ್ತನ ಗಾತ್ರವನ್ನು ಕಾಯ್ದುಕೊಳ್ಳುವುದು ಹೇಗೆ?

ಹೆರಿಗೆ ನೋವು ಪ್ರಾರಂಭವಾದ ಬಳಿಕ ಏನನ್ನೂ ತಿನ್ನಬೇಡಿ

ಪ್ರಸೂತಿ ತಜ್ಞರು ಹೆರಿಗೆಯ ನಿಗದಿತ ಸಮಯಕ್ಕಿಂತ ಎಂಟು ಘಂಟೆಗಳ ಮುನ್ನವೇ ನಿಮ್ಮ ಊಟ ತಿಂಡಿಗಳನ್ನೆಲ್ಲಾ ನಿಲ್ಲಿಸಿಬಿಡುತ್ತಾರೆ. ಏಕೆಂದರೆ ಅಗತ್ಯವಾದ ಹೊಟ್ಟೆಯೊಳಗಣ ಒತ್ತಡ ಹೆರಿಗೆ ಸಮಯಕ್ಕೆ ಅಗತ್ಯವಿರುವುದರಿಂದ ಈ ಕ್ರಮ ಕೈಗೊಳ್ಳುತ್ತಾರೆ. ಹೆಚ್ಚಿನ ಆಹಾರವಿದ್ದರೆ ಈ ಒತ್ತಡ ತ್ಯಾಜ್ಯವನ್ನು ಹೊರಹಾಕಲೂ ಉಪಯೋಗಿಸಲ್ಪಡುವುದರಿಂದ ಹೆರಿಗೆ ಕಷ್ಟಕರವಾಗುವ ಸಂಭವವಿದೆ. ಒಂದು ವೇಳೆ ನಿಮ್ಮ ನಿಯಂತ್ರಣ ಮೀರಿ ವಿಸರ್ಜನೆಯಾದರೆ ಹಾರ್ದಿಕವಾಗಿ ನಕ್ಕುಬಿಡಿ ಎಷ್ಟು ಮುನ್ನೆಚ್ಚರಿಕೆ ಕೈಗೊಂಡರೂ ಹೆರಿಗೆಯ ವೇಳೆ ಇಷ್ಟೇ ಹೊತ್ತಿಗಾಗುತ್ತದೆ ಮಲ ವಿಸರ್ಜನೆಯಾಗುವುದೇ ಇಲ್ಲ ಎಂದು ಯಾವುದೇ ಪ್ರಸೂತಿತಜ್ಞರು ಹೇಳಲು ಸಾಧ್ಯವಿಲ್ಲ.

How To Prevent Pooping During Labour

ಸ್ವಾಭಾವಿಕವಾದ ಈ ಕ್ರಿಯೆಯ ಬಗ್ಗೆ ಯಾವುದೇ ಕೀಳರಿಮೆ ಭಾವಿಸದೇ ಮನಃಪೂರ್ತಿ ನಕ್ಕು ಮರೆತುಬಿಡಿ. ಈ ಬಗ್ಗೆ ಯಾರೂ ಅನ್ಯಥಾ ಭಾವಿಸುವುದಿಲ್ಲ, ಈ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ. ನೀವು ಈಗತಾನೇ ಜನ್ಮ ನೀಡಿದ ನಿಮ್ಮ ಕಂದನ ಬಗ್ಗೆ ಹೆಚ್ಚು ಕಾಳಜಿವಹಿಸಿ. ದೇವರು ನೀಡಿದ ಈ ಅದ್ಭುತ ಕಾಣಿಕೆಯನ್ನು ಮನಃಪೂರ್ತಿಯಾಗಿ ಸ್ವೀಕರಿಸಿ. ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತವೇ?

ಯಾವುದಕ್ಕೂ ಹೆರಿಗೆಯ ಮುನ್ನ ನಿಮ್ಮ ಮನ ನಿರಾಳವಾಗಿರುವುದು ಮುಖ್ಯ. ಮೇಲಿನ ಸೂಚನೆಗಳನ್ನು ಪಾಲಿಸಿ ನಿಮ್ಮ ಹೆರಿಗೆಯನ್ನು ಸುಲಭಗೊಳಿಸಲು ನಿಮ್ಮ ವೈದ್ಯರ ಸಲಹೆಯನ್ನೂ ಪಡೆದುಕೊಳ್ಳಿ. ಇದರ ಹೊರತಾಗಿ ನಿಮ್ಮಲ್ಲಿಯೂ ಯಾವುದಾದರೂ ಸಲಹೆಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳುವಿರಲ್ಲ?

English summary

How To Prevent Pooping During Labour

When it comes to child birth, you want only your baby to come out of your body!! But, there are still some chances for such an embarrassing moment when you poop on the delivery table. It is natural that some poop will come out when you are actively participating in the delivery process.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X