For Quick Alerts
ALLOW NOTIFICATIONS  
For Daily Alerts

ನಲವತ್ತರ ಬಳಿಕದ ಗರ್ಭಧಾರಣೆ: ಅಪಾಯ ಕಟ್ಟಿಟ್ಟ ಬುತ್ತಿ

By Arshad
|

ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸು. ಈ ಕನಸು ನನಸಾಗಲು ಹೆಣ್ಣಿನ ವಯಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ಫಲಕೊಡುವ ಸಾಧ್ಯತೆಗಳು ಇಪ್ಪತ್ತರ ಹರೆಯದಲ್ಲಿ ಅತಿಹೆಚ್ಚಾಗಿದ್ದು ಮೂವತ್ತರ ಕಡೆಯ ವರ್ಷಗಳವರೆಗೆ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ನಲವತ್ತರ ಬಳಿಕ ಅತಿ ಕಡಿಮೆಯಾಗುತ್ತದೆ.

ಇದಕ್ಕೆ ಕೇವಲ ವಯಸ್ಸೊಂದನ್ನೇ ಬೊಟ್ಟು ಮಾಡಿ ತೋರುವಂತಿಲ್ಲ, ಏಕೆಂದರೆ ಇಂದು ಕಲಬೆರಕೆಗೊಂಡಿರುವ ಆಹಾರ, ಮಲಿನಗೊಂಡ ಗಾಳಿ, ವಿವಿಧ ಅನೈಚ್ಛಿಕ ಅಂಶಗಳನ್ನೊಳಗೊಂಡ ನೀರು, ವ್ಯಾಯಾಮ ರಹಿತ ದೈನಂದಿನ ಚಟುವಟಿಕೆ ಮೊದಲಾದವು ಸಹಾ ಗರ್ಭಧಾರಣೆಯಲ್ಲಿ ಪ್ರಭಾವ ಬೀರುತ್ತವೆ. ಸಂತಾನ ಭಾಗ್ಯ ಕರುಣಿಸುವ ಅಮೃತದಂತಹ ಆಹಾರ

ದೇಹದ ಇತರ ತೊಂದರೆಗಳಾದ ರಕ್ತದೊತ್ತಡ, ಮಧುಮೇಹ ಮೊದಲಾದವೂ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ನಲವತ್ತರ ಬಳಿಕ ಗರ್ಭ ಧರಿಸುವುದು ಹಲವು ತೊಂದರೆಗಳಿಗೆ ಆಹ್ವಾನ ನೀಡಿದಂತಾಗಿದೆ. ಆದರೆ ಕೆಲವೊಮ್ಮೆ ನಿಸರ್ಗ ತಡವಾಗಿ ಹೆಣ್ಣಿನ ಬಾಳಿನಲ್ಲಿ ಆನಂದ ಮೂಡಿಸಿರುವಾಗ ಆರೋಗ್ಯವಂತ ಮಗುವನ್ನು ಪಡೆಯಲು ಹಲವು ರೀತಿಯ ಮುನ್ನೆಚ್ಚರಿಕೆಗಳನ್ನೂ, ಅತಿ ಹೆಚ್ಚಿನ ಕಾಳಜಿಯನ್ನೂ ಎದುರಿಸಬೇಕಾಗುತ್ತದೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. 40ರ ಮಹಿಳೆಯರಿಗೆ ಈ ವಿಟಮಿನ್ ಗಳು ಅಗತ್ಯ

ಪ್ರಸೂತಿಯಲ್ಲಿ ತೊಂದರೆಯ ಸಂಭವ

ಪ್ರಸೂತಿಯಲ್ಲಿ ತೊಂದರೆಯ ಸಂಭವ

ಪ್ರಸೂತಿ ತಜ್ಞರ ಅನುಭವದ ಪ್ರಕಾರ ನಲವತ್ತರ ಬಳಿಕ ಸಾಮಾನ್ಯ ಹೆರಿಗೆಯಾಗುವುದು ತೀರಾ ಅಪರೂಪ ಮತ್ತು ಅಪಾಯಕರ. ಏಕೆಂದರೆ ವಯಸ್ಸಿನ ಕಾರಣ ಸೆಳೆತವನ್ನು ಕಳೆದುಕೊಂಡಿರುವ ಚರ್ಮ ಪುನಃ ತನ್ನ ಮೂಲಸ್ವರೂಪವನ್ನು ಪಡೆದುಕೊಳ್ಳದೇ ಪರಿಸ್ಥಿತಿ ಗಂಭೀರವಾಗಬಹುದು. ಹೆರಿಗೆ ನೋವು ಸಹಾ ಅತಿ ಹೆಚ್ಚು ಕಾಲ ಬಾಧಿಸಬಹುದು. ಇದನ್ನು ತಡೆಯಲು ಹೆಚ್ಚಾಗಿ ಸಿ-ಸೆಕ್ಷನ್ ರೂಪದ ಹೆರಿಗೆಯನ್ನೇ ಹೆಚ್ಚಿನ ಪ್ರಸೂತಿ ತಜ್ಞರು ಸಲಹೆ ನೀಡುತ್ತಾರೆ. ಆದ್ದರಿಂದ ಪ್ರಥಮ ತಿಂಗಳಿಂದಲೇ ವೈದ್ಯರ ಸಲಹೆಯನ್ನು ಸರ್ವಥಾ ಪಾಲಿಸುತ್ತಾ ಸೂಕ್ತ ಆಹಾರ ಮತ್ತು ಔಷಧಿಗಳನ್ನು ಸೇವಿಸುವುದು ಅತ್ಯಂತ ಅಗತ್ಯವಾಗಿದೆ. ನಿಯಮಿತವಾಗಿ ವೈದ್ಯರಿಂದ ತಪಾಸಣೆಗೊಳಗಾಗುವುದು ಸಹಾ ಅಗತ್ಯವಾಗಿದೆ.

ಶಿಶುವಿನ ಗಾತ್ರ ಏರುಪೇರಾಗಬಹುದು

ಶಿಶುವಿನ ಗಾತ್ರ ಏರುಪೇರಾಗಬಹುದು

ವಯಸ್ಸಿನ ಅಂತರದ ಕಾರಣ ಶಿಶು ಗರ್ಭದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಅಥವಾ ಕಡಿಮೆ ಬೆಳವಣಿಗೆಯನ್ನು ಪಡೆಯಬಹುದು. ಎರಡೂ ಪರಿಸ್ಥಿತಿ ತಾಯಿಯ ಆರೋಗ್ಯಕ್ಕೆ ಮಾರಕವಾಗಿದೆ. ಗಾತ್ರ ಹೆಚ್ಚಾದರೆ ಹೆರಿಗೆ ಕಷ್ಟಕರವಾಗಬಹುದು. ಕಡಿಮೆಯಾದರೆ ಪೋಷಕಾಂಶಗಳ ಕೊರಗೆಯಿಂದಾಗಿ ಶಿಶು ಸಹಜವಾದ ಬೆಳವಣಿಗೆಯನ್ನು ಪಡೆಯದೇ ಇರಬಹುದು. ಇದರಿಂದ ಗರ್ಭದಲ್ಲಿ ಬೆಳವಣಿಗೆಯಾಗುತ್ತಿರುವ ಶಿಶುವಿನ ಗಾತ್ರದ ಕುರಿತು ವೈದ್ಯರಿಂದ ತಪಾಸಣೆ ಮತ್ತು ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸುವುದು ಅಗತ್ಯವಾಗಿದೆ.

ರಕ್ತದೊತ್ತಡದಲ್ಲಿ ಹೆಚ್ಚಳ

ರಕ್ತದೊತ್ತಡದಲ್ಲಿ ಹೆಚ್ಚಳ

ಗರ್ಭಿಣಿಯರ ರಕ್ತದೊತ್ತಡ ಇತರರಿಗಿಂತ ಹೆಚ್ಚಾಗಿ ಏರುಪೇರಾಗುತ್ತಾ ಇರುತ್ತದೆ. ಅದರಲ್ಲೂ ನಲವತ್ತರ ಬಳಿಕ ಈ ಏರುಪೇರು ಅತಿಹೆಚ್ಚಾಗುತ್ತದೆ.ಅದರಲ್ಲೂ ಅಧಿಕ ರಕ್ತದೊತ್ತಡದ ಸಂಭವ ಹೆಚ್ಚು. ಇದಕ್ಕಾಗಿ ನಿಯಮಿತವಾಗಿ ರಕ್ತದೊತ್ತಡವನ್ನು ಪರಿಶೀಲಿಸಿಕೊಳ್ಳುತ್ತಾ ಇರಬೇಕು. ಮನೆಯಲ್ಲಿಯೇ ರಕ್ತದೊತ್ತಡಮಾಪಕವೊಂದನ್ನು ಇರಿಸಿಕೊಳ್ಳುವುದು ಶ್ರೇಯಸ್ಕರ. ಕೊಂಚವೂ ಏರುಪೇರು ಗಮನಕ್ಕೆ ಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಗರ್ಭಾವಸ್ಥೆಯ ಮಧುಮೇಹ ಎದುರಾಗಬಹುದು

ಗರ್ಭಾವಸ್ಥೆಯ ಮಧುಮೇಹ ಎದುರಾಗಬಹುದು

ಗರ್ಭಾವಸ್ಥೆಯಲ್ಲಿ ತಾತ್ಕಾಲಿಕವಾಗಿ ಎದುರಾಗುವ ಗರ್ಭಾವಸ್ಥೆಯ ಮಧುಮೇಹ (Gestational Diabetes) ನಲವತ್ತರ ಬಳಿಕ ಅಧಿಕವಾಗಿ ಬಾಧಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದಕ್ಕಾಗಿ ನಿಯಮಿತವಾಗಿ ತಪಾಸಣೆಗೊಳಪಡುವುದು ಮತ್ತು ಔಷಧಿಗಳನ್ನು ಸೇವಿಸುವುದು ಕಡ್ಡಾಯವಾಗಿದೆ.

ಗರ್ಭಪಾತದ ಭಯ

ಗರ್ಭಪಾತದ ಭಯ

ಹಿಂದಿನ ವರ್ಷಗಳಲ್ಲಿ ಸೇವಿಸಿದ್ದ ಔಷಧಿಗಳ ಅಡ್ಡಪರಿಣಾಮವಾಗಿ ಅಪರೂಪಕ್ಕೆ ಗರ್ಭಾಪಾತವಾಗುವ ಸಂಭವವಿದೆ. ಅದರಲ್ಲೂ ನಲವತ್ತರ ಬಳಿಕ ಈ ಸಂಭವ ಹೆಚ್ಚು ಇದನ್ನು ಕಡಿಮೆ ಮಾಡಿಕೊಳ್ಳಲು, ಆದರಲ್ಲೂ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ಗರ್ಭಾಪಾತಕ್ಕೆ ಎಡೆಮಾಡುವ ಯಾವುದೇ ಚಟುವಟಿಕೆಯನ್ನು ನಡೆಸಬಾರದು. ಉದಾಹರಣೆಗೆ ಮೆಟ್ಟಿಲು ಏರುವುದು, ಇಳಿಯುವುದು, ರಿಕ್ಷಾದಲ್ಲಿ ಕುಳಿತಾದ ಎತ್ತಿ ಕುಕ್ಕಿ ಹಾಕುವುದು, ಗರ್ಭಪಾತಕ್ಕೆ ಕಾರಣವಾಗುವ ಆಹಾರಗಳನ್ನು ಸೇವಿಸುವುದು, ಹೊಟ್ಟೆಯ ಮೇಲೆ ಭಾರ ಹಾಕುವುದು, ಬೇರಾವುದೋ ಕಾಯಿಲೆಗೆ ತೆಗೆದುಕೊಳ್ಳುತ್ತಿರುವ ಔಷಧಿಯ ಅಡ್ಡಪರಿಣಾಮ ಅಥವಾ ಗರ್ಭಿಣಿಯರು ಸೇವಿಸಬಾರದ ಔಷಧಗಳ ಬಗ್ಗೆ ಅರಿವಿರದೇ ಸೇವಿಸುವುದು ಮೊದಲಾದ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೆರಿಗೆಯಾಗುವ ಸ್ಥಳವನ್ನು ಮೊದಲೇ ಆಯ್ಕೆ ಮಾಡಿಕೊಂಡು ಮೂರನೆಯ ಅಥವಾ ನಾಲ್ಕನೆಯ ತಿಂಗಳಲ್ಲಿಯೇ ಪ್ರಯಾಣಿಸಿ ತಲುಪಬೇಕು. ನಿಮ್ಮ ಊರಿನಲ್ಲಿಯೇ ಒಂಭತ್ತೂ ತಿಂಗಳು ಇರುವುದು ಅತ್ಯುತ್ತಮ. ಸಾಕಷ್ಟು ನಿದ್ದೆ, ಉತ್ತಮ ಆಹಾರ, ಗಾಳಿ, ಬೆಳಕು ಮತ್ತು ಮುಖ್ಯವಾಗಿ ಮಾನಸಿಕ ನೆಮ್ಮದಿ ನಲವತ್ತರ ಬಳಿಕ ಹೆಚ್ಚು ಅಗತ್ಯವಾಗಿದೆ.

English summary

Health Risk Of Pregnancy After Fourty

Most women face extreme health risks with pregnancy after 40 due to many adversely acting conditions. In today’s world, with the adulterated food and air most of the pregnancies have become risky. Now, let us discuss about some of the health risks with pregnancy after 40
X
Desktop Bottom Promotion