For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ರೋಗರುಜಿನಗಳಿಗೆ ಸಂಜೀವಿನಿ-ಕಲ್ಲಂಗಡಿ ಹಣ್ಣು!

|

ಗರ್ಭಾವಸ್ಥೆಯಲ್ಲಿ ಕಲ್ಲಂಗಡಿ ಸೇವನೆಯಿಂದ ಪ್ರಯೋಜನಗಳಿವೆಯೇ? ಹೌದು, ಕಲ್ಲಂಗಡಿಯಲ್ಲಿ ಅಧಿಕ ಪ್ರಮಾಣದ ನೀರಿನಂಶವಿರುತ್ತದೆ. ಅದ್ದರಿಂದ ಇದನ್ನು ತಪ್ಪದೆ ಗರ್ಭಾವಧಿಯಲ್ಲಿ ಸೇವಿಸಬೇಕು. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಎ ಅಧಿಕವಾಗಿ ಇರುತ್ತದೆ. ಇದರಲ್ಲಿ ಪೊಟಾಶಿಯಂ ಅಂಶಗಳು ಸಹ ಅಧಿಕವಾಗಿ ಇರುತ್ತವೆ. ಆದ್ದರಿಂದ ಇದು ಹೃದಯಕ್ಕೆ ಮತ್ತು ಜಠರದ ಆರೋಗ್ಯಕ್ಕೆ ಒಳ್ಳೆಯದು.

ಕಲ್ಲಂಗಡಿಯನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಅದನ್ನು ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಗರ್ಭಿಣಿಯಾಗಿರುವಾಗ ಕಲ್ಲಂಗಡಿಯನ್ನು ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು, ಕಾಲು ಮತ್ತು ಕೈಗಳ ಮೇಲೆ ಕಾಣಿಸಿಕೊಳ್ಳುವ ಊತಗಳನ್ನು ನಿವಾರಿಸಬಹುದು. ಬೆಳಗ್ಗೆ ಹೊತ್ತು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮಂಕನ್ನು ನಿವಾರಿಸಬಹುದು ಹಾಗು ಇತರೆ ಪ್ರಯೋಜನಗಳನ್ನು ಸಹ ಪಡೆಯಬಹುದು. ಗರ್ಭಿಣಿ ಸ್ತ್ರೀಯರು ಸೀಬೆ ಹಣ್ಣನ್ನು ಸೇವಿಸುವುದು ಹಿತಕರವೇ?

ಎದೆ ಉರಿ ಮತ್ತು ಆಸಿಡಿಟಿಯನ್ನು ನಿವಾರಿಸುತ್ತದೆ

ಎದೆ ಉರಿ ಮತ್ತು ಆಸಿಡಿಟಿಯನ್ನು ನಿವಾರಿಸುತ್ತದೆ

ಕಲ್ಲಂಗಡಿಯನ್ನು ಸೇವಿಸುವುದರಿಂದ ಗರ್ಭಿಣಿಯರು ತಮಗೆ ಕಾಣಿಸಿಕೊಳ್ಳುವ ಎದೆ ಉರಿ ಮತ್ತು ಆಸಿಡಿಟಿಯಿಂದ ನಿವಾರಣೆಯನ್ನು ಪಡೆಯಬಹುದು. ಕಲ್ಲಂಗಡಿಯು ಆಸಿಡಿಟಿಯನ್ನು ತಡೆಯುತ್ತದೆ ಮತ್ತು ಅನ್ನನಾಳದಲ್ಲಿ ಆಸಿಡಿಟಿ ರಿಫ್ಲಕ್ಸ್ ಅನ್ನು ತಡೆದು ನಿಲ್ಲಿಸುತ್ತದೆ. ಇದು ಅನ್ನನಾಳ ಮತ್ತು ಜಠರದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

ಬೆಳಗಿನ ಮಂಕನ್ನು ನಿವಾರಿಸುತ್ತದೆ

ಬೆಳಗಿನ ಮಂಕನ್ನು ನಿವಾರಿಸುತ್ತದೆ

ಗರ್ಭಿಣಿಯರಿಗೆ ಬೆಳಗ್ಗೆ ಎದ್ದ ಕೂಡಲೆ ಮಂಕು ಕವಿದಂತೆ ಇರುವುದು ಸಹಜ. ಜೊತೆಗೆ ಬೆಳಗ್ಗೆ ನಾಸಿಯಾ ಮತ್ತು ವಾಂತಿಯಂತಹ ಸಮಸ್ಯೆಗಳು ಸಹ ಅವರನ್ನು ಕಾಡುತ್ತವೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೆ ಒಂದು ಲೋಟ ತಾಜಾ ಕಲ್ಲಂಗಡಿ ಹಣ್ಣಿನ ರಸವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಊತವನ್ನು ನಿವಾರಿಸಬಹುದು

ಊತವನ್ನು ನಿವಾರಿಸಬಹುದು

ಗರ್ಭಿಣಿಯರಲ್ಲಿ ಕೈ ಕಾಲುಗಳ ಊತ ಕಾಣಿಸಿಕೊಳ್ಳುವುದು ಸಹಜ. ಇದರಿಂದ ಮಗುವಿನ ಮೇಲೆ ಒತ್ತಡ ಬೀಳುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ಸೇವಿಸುವುದರಿಂದ ಇದರ ಸಮಸ್ಯೆಯನ್ನು ದೂರ

ಮಾಡಿಕೊಳ್ಳಬಹುದು. ಇದು ಕಲ್ಲಂಗಡಿಯಿಂದ ನಮಗೆ ದೊರೆಯು ಒಂದು ಒಳ್ಳೆಯ ಪ್ರಯೋಜನವಾಗಿದೆ.

ಪಿಗ್‌ಮೆಂಟೇಶನ್ ನಿವಾರಿಸುತ್ತದೆ

ಪಿಗ್‌ಮೆಂಟೇಶನ್ ನಿವಾರಿಸುತ್ತದೆ

ತ್ವಚೆಯ ಪಿಗ್‍ಮೆಂಟೇಶನ್ ಗರ್ಭಿಣಿಯರಲ್ಲಿ ಸಹಜವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಗರ್ಭಿಣಿಯರಲ್ಲಿ ಕಂಡು ಬರುವ ಅಧಿಕ ಮಟ್ಟದ ಹಾರ್ಮೊನುಗಳು. ಕಲ್ಲಂಗಡಿಯು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ನಿವಾರಿಸಿ, ದೇಹವನ್ನು ಶುದ್ಧಗೊಳಿಸುತ್ತದೆ. ಹಾಗಾಗಿ ಇದು ತ್ವಚೆಯ ಬಣ್ಣವನ್ನು ಸುಧಾರಿಸುತ್ತದೆ ಮತ್ತು ಪಿಗ್‍ಮೆಂಟೇಶನ್ ಸಮಸ್ಯೆಯನ್ನು ದೂರ ಮಾಡುತ್ತದೆ.

ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ

ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ

ಕಲ್ಲಂಗಡಿಯನ್ನು ಸೇವಿಸುವುದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗುವುದನ್ನು ತಡೆಯಬಹುದು. ಏಕೆಂದರೆ ಈ ನಿರ್ಜಲೀಕರಣದ ಸಮಸ್ಯೆಯು ಗರ್ಭಾಶಯ ಮತ್ತು ಇನ್ನೂ ಬೆಳವಣಿಗೆಯಾಗದ ಮಗುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಕಲ್ಲಂಗಡಿಯನ್ನು ಸೇವಿಸಿದರೆ, ಅದರಿಂದ ಸ್ವಲ್ಪ ನೀರಿನಂಶ ಮತ್ತು ವಿಟಮಿನ್‍ಗಳು ನಿಮ್ಮ ದೇಹವನ್ನು ಸೇರಿ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡಬಹುದು.

English summary

Benefits Of Watermelon During Pregnancy

Is watermelon healthy during pregnancy? Watermelon is rich in water content and it must be taken during pregnancy. It is rich in vitamin C, vitamin B complex and vitamin A. There are many health benefits of watermelon during pregnancy that we will share with you today.
Story first published: Saturday, April 18, 2015, 11:34 [IST]
X
Desktop Bottom Promotion