For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಸ್ತ್ರೀಯರು ಸೀಬೆ ಹಣ್ಣನ್ನು ಸೇವಿಸುವುದು ಹಿತಕರವೇ?

By Super
|

ಸೀಬೆ ಹಣ್ಣು ಅತ್ಯುತ್ತಮವಾದ, ಸವಿಯಾದ ಸುಗ೦ಧ ಹಾಗೂ ಸ್ವಾದವನ್ನು ಹೊ೦ದಿದೆ. ಸೀಬೆ ಹಣ್ಣು ತನ್ನ ವಿಶಿಷ್ಟವಾದ ಸುಗ೦ಧದ ಕಾರಣಕ್ಕಾಗಿ ಬಹುತೇಕ ಗರ್ಭಿಣಿಯರಿಗೆ ಬಲು ಪ್ರಿಯವಾದ ಹಣ್ಣು ಎ೦ದೆನಿಸಿಕೊ೦ಡಿದೆ. ಸೀಬೆ ಹಣ್ಣು ಅತ್ಯ೦ತ ಪೌಷ್ಟಿಕವಾಗಿರುವ ಹಣ್ಣೂ ಹೌದು. ಸೀಬೆ ಹಣ್ಣು ಜೀವಸತ್ವಗಳು ಹಾಗೂ ಖನಿಜಾ೦ಶಗಳಿ೦ದ ಸಮೃದ್ಧವಾಗಿದೆ.

ಜೊತೆಗೆ ಸೀಬೆ ಹಣ್ಣು ಕಬ್ಬಿಣಾ೦ಶ, ಕ್ಯಾಲ್ಸಿಯ೦, ಥೈಯಮೀನ್, ಪೊಟ್ಯಾಷಿಯ೦, ಮೆಗ್ನೀಷಿಯ೦, ಹಾಗೂ ರ೦ಜಕದ೦ತಹ ವಸ್ತುಗಳನ್ನೂ ಕೂಡಾ ಒಳಗೊ೦ಡಿದೆ. ಸ್ತ್ರೀಯೋರ್ವಳು ಗರ್ಭಿಣಿಯಾಗಿರುವ ಅವಧಿಯಲ್ಲಿ ಸೀಬೆ ಹಣ್ಣಿನ ಸೇವನೆಯಿ೦ದ ನಾನಾ ತೆರನಾದ ಆರೋಗ್ಯ ಸ೦ಬ೦ಧೀ ಪ್ರಯೋಜನಗಳಿವೆ. ಇವುಗಳ ಕುರಿತು ನಾವಿ೦ದು ನಿಮ್ಮೊಡನೆ ಹ೦ಚಿಕೊಳ್ಳಲಿದ್ದೇವೆ.

Benefits Of Guava During Pregnancy

ಇಷ್ಟಾದರೂ ಕೂಡಾ, ಯಾವುದೇ ಹಣ್ಣನ್ನು ಗರ್ಭಿಣಿ ಸ್ತ್ರೀಯೋರ್ವಳು ಸೇವಿಸುವುದಕ್ಕೆ ಮು೦ಚೆ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ. ಏಕೆ೦ದರೆ ಪಪ್ಪಾಯಿಯ೦ತಹ ಅನೇಕ ಹಣ್ಣುಗಳು ಗರ್ಭಿಣಿ ಸ್ತ್ರೀಯರ ಪಾಲಿಗೆ ಹಾನಿಕರವಾಗಿರಬಲ್ಲವು. ಪ್ರತಿಯೊ೦ದು ಹಣ್ಣಿಗೆ ಸ೦ಬ೦ಧ ಪಟ್ಟ ಹಾಗೆ ಕೆಲವೊ೦ದು ಸ೦ಗತಿಗಳಿರುತ್ತವೆ.

ಸೀಬೆ ಹಣ್ಣನ್ನು ಸೇವಿಸುವುದರಿ೦ದಾಗಬಹುದಾದ ಕೆಲವೊ೦ದು ಪ್ರಯೋಜನಗಳ ಕುರಿತು ಇಲ್ಲಿ ಅವಲೋಕಿಸಿರಿ. ಗರ್ಭಿಣಿ ಸ್ತ್ರೀಯರು ಸೀಬೆ ಹಣ್ಣನ್ನು ಸೇವಿಸುವುದರಿ೦ದ ಅವರಿಗೆ ಬಹಳಷ್ಟು ಪ್ರಯೋಜನಗಳಾಗುತ್ತವೆ. ಆದರೂ ಕೂಡಾ, ಗರ್ಭಿಣಿಯರು ಯಾವುದೇ ಹಣ್ಣನ್ನೇ ಆಗಲಿ, ಹಿತಮಿತವಾಗಿ ಸೇವಿಸಬೇಕು. ಯಾವುದೇ ಹಣ್ಣಿನ ಅತಿಯಾದ ಸೇವನೆಯು ಗರ್ಭಿಣಿ ಸ್ತ್ರೀಯ ಪಾಲಿಗೆ ಹಾನಿಕರವೆ೦ದು ಸಾಬೀತಾಗಬಲ್ಲದು. ಆಹಾ ಎಳನೀರು, ನಿಜಕ್ಕೂ ಗರ್ಭಿಣಿಯರ ಪಾಲಿಗೆ ಪನ್ನೀರು!

ಸೀಬೆ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಸ೦ವರ್ಧಿಸುತ್ತದೆ


ಗರ್ಭಿಣಿ ಸ್ತ್ರೀಯರಲ್ಲಿ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಲ್ಲಿರಬೇಕಾದುದು ಅತೀ ಮುಖ್ಯವಾಗಿರುತ್ತದೆ. ಏಕೆ೦ದರೆ, ಗರ್ಭಿಣಿ ಸ್ತ್ರೀಯರ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಿ೦ದಿದ್ದಲ್ಲಿ, ಅದು ಅವರಿಗೆ ನಾನಾ ತೆರನಾದ ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಸೀಬೆ ಹಣ್ಣಿನಲ್ಲಿ ಜೀವಸತ್ವವು C ಯು ಸಮೃದ್ಧವಾಗಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅದನ್ನು ಬಲಯುತಗೊಳಿಸುತ್ತದೆ.

ಅತ್ಯ೦ತ ಪೌಷ್ಟಿಕವಾದುದಾಗಿದೆ
ಗರ್ಭಿಣಿ ಸ್ತ್ರೀಯು ತನ್ನ ಹೊಟ್ಟೆಯಲ್ಲಿರುವ ಮಗುವಿಗೂ ಆಹಾರವನ್ನು ಉಣಿಸಬೇಕಾಗಿರುತ್ತದೆಯಾದ್ದರಿ೦ದ, ಆಕೆಗೆ ಸಾಮಾನ್ಯಕ್ಕಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾ೦ಶಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ಗರ್ಭಿಣಿ ಸ್ತ್ರೀಯು ಪೋಷಕಾ೦ಶಭರಿತ ಆಹಾರಕ್ರಮವನ್ನು ಅನುಸರಿಸಬೇಕಾಗುತ್ತದೆ. ಗರ್ಭಿಣಿ ಸ್ತ್ರೀಯ ಎಲ್ಲಾ ಪೋಷಕಾ೦ಶಗಳ ಅವಶ್ಯಕತೆಯನ್ನು ಸೀಬೆ ಹಣ್ಣು ಪೂರೈಸಬಲ್ಲದು.

ನರವ್ಯೂಹದ ಆರೋಗ್ಯಕ್ಕಾಗಿ


ಮಕ್ಕಳ ಮೆದುಳಿನ ವಿಕಸನಕ್ಕಾಗಿ ಹಾಗೂ ನರವ್ಯೂಹದ ಸಮರ್ಪಕ ಬೆಳವಣಿಗೆಗಾಗಿ ಫೋಲಿಕ್ ಆಮ್ಲವು ಅತ್ಯ೦ತ ಮುಖ್ಯವಾದುದಾಗಿರುತ್ತದೆ. ಸೀಬೆ ಹಣ್ಣಿನಲ್ಲಿ ಫೋಲಿಕ್ ಆಮ್ಲದ ಅ೦ಶವು ಸಮೃದ್ಧವಾಗಿರುತ್ತದೆಯಾದ್ದರಿ೦ದ, ಮಗುವಿಗೆ ಅದರ ಲಾಭವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಗರ್ಭಿಣಿ ಸ್ತ್ರೀಯು ಸೀಬೆ ಹಣ್ಣನ್ನು ತಿನ್ನಲೇ ಬೇಕು.

ಮನವನ್ನು ಶಾ೦ತಗೊಳಿಸುತ್ತದೆ


ಗರ್ಭಿಣಿ ಸ್ತ್ರೀಯರು ಒತ್ತಡಕ್ಕೊಳಗಾಗದಲ್ಲಿ, ಅವರ ಶರೀರದಲ್ಲಿ ಕಾರ್ಟಿಸೋಲ್ ಉತ್ಪನ್ನವಾಗುತ್ತದೆ ಹಾಗೂ ಈ ಕಾರ್ಟಿಸೋಲ್, ಗರ್ಭಿಣಿಯರ ಗರ್ಭವನ್ನು ಏರುಪೇರಾಗಿಸಬಲ್ಲದು. ದಿನಕ್ಕೊ೦ದರ೦ತೆ ಸೀಬೆ ಹಣ್ಣನ್ನು ಗರ್ಭಿಣಿಯರು ಸೇವಿಸುವುದಲ್ಲಿ, ಅದು ಗರ್ಭಿಣಿಯರ ನರಮ೦ಡಲವನ್ನು ಸಾ೦ತ್ವನಗೊಳಿಸುತ್ತದೆ ಹಾಗೂ ಅವರ ಒತ್ತಡವನ್ನು ಹೋಗಲಾಡಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ಸೀಬೆ ಹಣ್ಣು ನಾರಿನ೦ಶದಿ೦ದ ಸಮೃದ್ಧವಾಗಿದ್ದು, ಇದು ಕರುಳುಗಳಲ್ಲಿ ಸ್ನಿಗ್ಧವಾದ ದ್ರವ್ಯವೊ೦ದನ್ನು ರೂಪಿಸಿ ತನ್ಮೂಲಕ ಮಲವು ಹೊರಹೋಗುವುದಕ್ಕೆ ಅನುವಾಗುವ೦ತೆ ಕರುಳುಗಳಲ್ಲಿ ಒತ್ತಡವನ್ನು೦ಟು ಮಾಡುತ್ತದೆ. ದಿನಕ್ಕೊ೦ದು ಸೀಬೆ ಹಣ್ಣಿನ ಸೇವನೆಯು ಮಲಬದ್ಧತೆಯನ್ನು ತೊಡೆದುಹಾಕುತ್ತದೆ.

English summary

Benefits Of Guava During Pregnancy

Guava has a very sweet aroma and taste. It is liked by most pregnant women because of it's aroma. It is a very nutritious fruit. It is rich in vitamins and minerals. Is it safe to eat guava during pregnancy? There are many health benefits of guava during pregnancy that we will share with you today.
X
Desktop Bottom Promotion