For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ವೃಕ್ಷಗಳ ಪೂಜೆಗೆ ಏಕೆ ಅಷ್ಟೊಂದು ಮಹತ್ವ?

|

ಭಾರತವು ವಿಭಿನ್ನ ಪರಂಪರೆ ಮತ್ತು ಸಂಸ್ಕೃತಿಗಳ ತವರೂರು. ಆದರೆ ಕೆಲವೊಂದು ಸಂಪ್ರದಾಯಗಳು ಮತ್ತು ಆಚರಣೆಗಳು, ಇಡೀ ಭಾರತದಾದ್ಯಂತ ಒಂದೇ ರೀತಿ ಪಾಲಿಸಿಕೊಂಡು ಬರಲಾಗುತ್ತದೆ. ಅದರಲ್ಲಿಯೂ ಪ್ರಕೃತಿಯನ್ನು ಆರಾಧಿಸುವ ಬಗೆಯಂತು ಇಡೀ ದೇಶದಲ್ಲಿ ನಾವು ಎಲ್ಲಾ ಕಡೆಯಲ್ಲೂ ಸಹ ಕಾಣಬಹುದು. ಅಂತಹ ಆಚರಣೆಗಳಲ್ಲಿ ಮರಗಳ ಅಥವಾ ವೃಕ್ಷಗಳ ಆರಾಧನೆ. ಮರಗಳನ್ನು ಪೂಜಿಸುವುದರ ಹಿಂದೆ ಹಲವಾರು ಕಥೆಗಳನ್ನು ನಾವು, ವಿವಿಧ ಪ್ರಾಂತ್ಯಗಳಲ್ಲಿ ಕಾಣಬಹುದು.

ಮರಗಳ ಪೂಜೆಯು ಪುರಾಣಗಳ ಆಧಾರದ ಮೇಲೆ ನಡೆದುಕೊಂಡು ಬಂದಿದೆ. ಕೆಲವೊಂದು ಧಾರ್ಮಿಕ ನಂಬಿಕೆಗಳ ಕಾರಣದಿಂದ ನಡೆದುಕೊಂಡು ಬಂದಿವೆ. ನಾಸ್ತಿಕರು ಸಹ ವೃಕ್ಷ ಪೂಜೆಯನ್ನು ಬೆಂಬಲಿಸುತ್ತಾರೆ. ಏಕೆಂದರೆ ಅವುಗಳು ಹಣ್ಣು, ಹೂವು, ಶುದ್ಧಗಾಳಿ ಮತ್ತು ಆಮ್ಲಜನಕ ಹಾಗು ನೆರಳನ್ನು ನೀಡಿ, ಇಡೀ ತಮ್ಮ ಸರ್ವಸ್ವವನ್ನೇ ಇತರರಿಗೆ ನೀಡುತ್ತದೆ. ಇದರ ತ್ಯಾಗಕ್ಕೆ ನಾಸ್ತಿಕರು ಸಹ ತಲೆದೂಗುತ್ತಾರೆ. ದೈವಿಕ ಶಕ್ತಿ ಹೊಂದಿರುವ ಭಾರತದ ಆರು ವೃಕ್ಷಗಳು

ಹಿಂದೂ ಧರ್ಮದಲ್ಲಿ ಮರಗಳನ್ನು ವಿವಿಧ ಕಾರಣಗಳಿಗಾಗಿ ಪೂಜಿಸುತ್ತಾರೆ. ಮೋಕ್ಷ, ಆಯುಸ್ಸು ವೃದ್ಧಿ, ಸಂತಾನ ಹೀನತೆ ಅಥವಾ ಇಷ್ಟಾರ್ಥ ಸಿದ್ಧಿ ಹೀಗೆ ನಾನಾ ವಿಚಾರಗಳಿಗಾಗಿ ವೃಕ್ಷಗಳನ್ನು ಆರಾಧಿಸಲಾಗುತ್ತದೆ. ಆಲದ ಮರ ಮತ್ತು ಅಶ್ವತ್ಥ ವೃಕ್ಷಗಳನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ. ಬನ್ನಿ ಭಾರತದಲ್ಲಿ ಮರಗಳನ್ನು ಏಕೆ ಆರಾಧಿಸಲಾಗುತ್ತದೆ ಎಂಬುದನ್ನು ನಾವು ಇಂದು ಚರ್ಚಿಸೋಣ....

ವಿಷ್ಣುವನ್ನು ಆರಾಧಿಸಲು

ವಿಷ್ಣುವನ್ನು ಆರಾಧಿಸಲು

ಬ್ರಹ್ಮ ಪುರಾಣ ಮತ್ತು ಪದ್ಮ ಪುರಾಣಗಳ ಪ್ರಕಾರ ಒಮ್ಮೆ ರಾಕ್ಷಸರು ದೇವತೆಗಳ ಮೇಲೆ ದಂಡೆತ್ತಿ ಬಂದು, ಅವರನ್ನು ಸೋಲಿಸಿದಾಗ ಭಗವಾನ್ ವಿಷ್ಣು ಅಶ್ವತ್ಥ ವೃಕ್ಷದಲ್ಲಿ ಅಗೋಚರವಾಗಿ ಅಡಗಿ ಕುಳಿತನಂತೆ.ಹಾಗಾಗಿ ಅಂದಿನಿಂದ ವಿಷ್ಣುವಿನ ಚಿತ್ರ ಅಥವಾ ವಿಗ್ರಹದ ಸಹಾಯವಿಲ್ಲದಿದ್ದರು ಸಹ ಈ ವೃಕ್ಷವನ್ನು ನಾವು ವಿಷ್ಣುವಿನ ರೂಪವೆಂದು ಪೂಜಿಸುತ್ತೇವೆ.

ತ್ರಿಮೂರ್ತಿ ಪರಿಕಲ್ಪನೆ

ತ್ರಿಮೂರ್ತಿ ಪರಿಕಲ್ಪನೆ

ಕೆಲವರ ಪ್ರಕಾರ ಪವಿತ್ರ ವೃಕ್ಷಗಳು, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವಂತೆ. ಇವುಗಳ ಆರಾಧನೆಯು ಈ ಮೂವರ ಆರಾಧನೆಗೆ ಸಮ. ಅದಕ್ಕಾಗಿಯೇ "ಮೂಲತಃ ಬ್ರಹ್ಮ ರೂಪಾಯ:, ಮಧ್ಯತಃ ವಿಷ್ಣು ರೂಪಯೇ,ಅಗ್ರತಃ ಶಿವ ರೂಪಾಯಃ ಶ್ರೀ ವೃಕ್ಷ ರಾಜಯೇ ನಮಃ" ಎನ್ನುವ ಮಂತ್ರವು ಹುಟ್ಟಿಕೊಂಡಿತು. ಇದನ್ನು ಪಠಿಸುವುದರಿಂದ ಆಧ್ಯಾತ್ಮಿಕ ಮೋಕ್ಷ ದೊರೆಯುತ್ತದೆ.

ಮೂರು ಲೋಕಗಳ ಪರಿಕಲ್ಪನೆ

ಮೂರು ಲೋಕಗಳ ಪರಿಕಲ್ಪನೆ

ಮರಗಳ ದೈಹಿಕ ಆಕಾರಗಳ ಕಾರಣದಿಂದಾಗಿ, ಅವುಗಳನ್ನು ಮೂರು ಲೋಕಗಳನ್ನು ಸೇರಿಸುವ ಕೊಂಡಿ ಎಂದು ಕರೆಯಲಾಗುತ್ತದೆ. ಈ ಮರಗಳು ಸ್ವರ್ಗ, ಭೂಮಿ ಮತ್ತು ಪಾತಾಳಗಳನ್ನು ಸಂಪರ್ಕಿಸುವ ಕೊಂಡಿ ಎಂದು ಪರಿಗಣಿಸಲಾಗಿದೆ. ಈ ಮರಗಳಿಗೆ ನಾವು ಸಮರ್ಪಿಸುವ ನೈವೇಧ್ಯವು ಮೂರು ಲೋಕಗಳಿಗೆ ಸಲ್ಲುತ್ತದೆ ಎಂಬ ಪ್ರತೀತಿ ಮನೆ ಮಾಡಿದೆ.

ಪಂಚ ವೃಕ್ಷ

ಪಂಚ ವೃಕ್ಷ

ಪಂಚ ವೃಕ್ಷ ಎಂದರೆ ಐದು ಮರಗಳು. ಇಂದ್ರನ ಉದ್ಯಾನವನದಲ್ಲಿ ಮಂದಾರ, ಪಾರಿಜಾತ, ಶಮಂತಕ, ಹರಿಚಂದನ ಮತ್ತು ಕಲ್ಪ ವೃಕ್ಷ ಅಥವಾ ಕಲ್ಪತರು ಎಂಬ ಐದು ವೃಕ್ಷಗಳು ಇವೆಯಂತೆ. ಭಾರತದಲ್ಲಿ ಜನರು ಏಕೆ ಮರಗಳನ್ನು ಪೂಜಿಸುತ್ತಾರೆ ಎಂಬ ಪ್ರಶ್ನೆ ಎದ್ದಾಗ, ಪುರಾಣಗಳಲ್ಲಿ ದೇವತೆಗಳೇ ಮರಗಳನ್ನು ಪೂಜಿಸುತ್ತಿದ್ದ ಉಲ್ಲೇಖಗಳು ನಮಗೆ ದೊರೆಯುತ್ತವೆ.

ಸಂತರ ಜೊತೆಗೆ ಸಂಬಂಧ

ಸಂತರ ಜೊತೆಗೆ ಸಂಬಂಧ

ಮಹಾನ್ ಸಂತರ ಜೊತೆಗೆ ಕೆಲವೊಂದು ಮರಗಳು ಸಹ ಗುರುತಿಸಲ್ಪಟ್ಟಿವೆ. ಅವರನ್ನು ನೆನೆಯುವಾಗ ನಾವು ಮರಗಳ ಹೆಸರನ್ನು ಸಹ ಸ್ಮರಿಸಿಕೊಳ್ಳುತ್ತೇವೆ. ಮಾರ್ಕಾಂಡೇಯನ ಜೊತೆಗೆ ಬರ್ಗಡ್ ಮರವನ್ನು ಮತ್ತು ಬುದ್ಧನ ಜೊತೆಗೆ ಭೋಧಿ ವೃಕ್ಷವನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಹಾಗಾಗಿ ಮರಗಳನ್ನು ಸಹ ನಾವು ಸಂತರ ರೂಪವಾಗಿ ಪೂಜಿಸುತ್ತೇವೆ.

 ಸುಖಕರವಾದ ವೈವಾಹಿಕ ಜೀವನಕ್ಕಾಗಿ

ಸುಖಕರವಾದ ವೈವಾಹಿಕ ಜೀವನಕ್ಕಾಗಿ

ಭಾರತದ ಬಹುಭಾಗಗಳಲ್ಲಿ ಯುವತಿಯರು ಮೊದಲು ಅಶ್ವತ್ಥ ವೃಕ್ಷವನ್ನು ಮದುವೆಯಾಗುತ್ತಾರೆ. ಈ ಮರಕ್ಕೆ ದಾರವನ್ನು ಕಟ್ಟಿ, ಅದರ ಸುತ್ತ 108 ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ಈ ಮರಕ್ಕೆ ಚಂದನ ಲೇಪಿಸುತ್ತಾರೆ ಮತ್ತು ಅದರ ಮುಂದೆ ಮಣ್ಣಿನ ದೀಪ ಬೆಳಗುತ್ತಾರೆ.

ದೇವರಿಗೆ ನೈವೇಧ್ಯ

ದೇವರಿಗೆ ನೈವೇಧ್ಯ

ಕೆಲವೊಂದು ದೇವರಿಗೆ ನಾವು ಕೆಲವು ವೃಕ್ಷಗಳ ಹೂವು, ಹಣ್ಣು ಮತ್ತು ಕಾಯಿಗಳನ್ನು ನೈವೇಧ್ಯವಾಗಿ ಇಡುತ್ತೇವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಮರದ ಹೂವು ಮತ್ತು ಹಣ್ಣುಗಳನ್ನು ಸಮರ್ಪಿಸುವುದಿಲ್ಲ.ಇದಕ್ಕೆ ತಮ್ಮದೇ ಆದ ಕಟ್ಟು ಪಾಡುಗಳು ಇವೆ. ಪ್ರಾಕೃತಿಕ ಮೌಲ್ಯಗಳ ಹೊರತಾಗಿ ಮರಗಳು ಭಾರತೀಯ ಸಂಸ್ಕೃತಿಯಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆದಿವೆ. ಇವುಗಳು ಸಹ ಆರಾಧಿಸಲ್ಪಡುತ್ತವೆ ಎಂಬುದೇ ವಿಶೇಷ.


English summary

Why People Worship Trees In India

India is a country with varied heritage and culture. But, some customs remain the same in most of the parts of India. This is because of the reverence and respect of the Indian culture towards mother nature. One among these is the custom of worshiping trees. There are many stories that are popular in various regions regarding this tradition of worshiping trees.
X
Desktop Bottom Promotion