For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಂಡುಬರುವ ಮೂತ್ರ ವಿಸರ್ಜನೆಯ ಲಕ್ಷಣಗಳೇನು?

By Staff
|

ನೀವು ಇತ್ತೀಚೆಗೆ ಹೆಚ್ಚಾಗಿ ಮೂತ್ರವಿಸರ್ಜನೆಗೆ ಹೋಗುತ್ತಿದ್ದರೆ? ಗರ್ಭಿಣಿಯಾಗಲು ಬಯಸಿದ್ದು ಅಥವಾ ನಿಮ್ಮ ಸಂಗಾತಿಯೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಿರೇ? ಹಾಗಾದರೆ ಇದು ನಿಮಗೆ ಗರ್ಭಧಾರಣೆಯ ಮೊದಲ ಸೂಚನೆಯೇ ಸರಿ! ಪದೇ ಪದೇ ಮೂತ್ರ ವಿಸರ್ಜನೆ, ಗರ್ಭಧಾರಣೆಯ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ಗರ್ಭದಾರಣೆಯ ಒಂದು ವಾರದ ನಂತರ ಆರಂಭವಾಗಬಹುದು. ನೀವು ಈ ಹಂತದಲ್ಲಿ ಎಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಮಾಡಬಹುದು ಎಂದು ಹೇಳಲಾಗುವುದಿಲ್ಲ.

ನೀಮ್ಮ ಮೂತ್ರ ವಿಸರ್ಜನೆ ಕೇವಲ ಒಂದು ಹನಿಯಷ್ಟಾದರೂ ಆಗಿರಬಹುದು. ಆದರೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆಂದು ನಿಮಗೆ ಅನ್ನಿಸುತ್ತಿರುತ್ತದೆ. ಆದರೆ ಈ ಕಿರಿಕಿರಿ ಕೆಲವರಿಗೆ ಹೆರಿಗೆಯಾಗುವವರೆಗೂ ಮುಂದುವರೆಯುತ್ತದೆ ಮತ್ತು ಹೆರಿಗೆಯ ನಂತರ ನಿಲ್ಲುತ್ತದೆ. ಇದಲ್ಲದೆ, ಅಸಾಮಾನ್ಯ ಯೋನಿ ಸ್ರಾವ ಕೂಡ ಗರ್ಭಧಾರಣೆಯ ಒಂದು ಲಕ್ಷಣವಾಗಿದೆ.

The reason being frequent urination is one of the earliest signs of pregnancy and can strike as early as a week after conception. However, no matter how strong your urge to urinate is, you might just pass miniscule amounts of urine when you are inside the restroom.

ಏಕೆ ಹೀಗಾಗುತ್ತದೆ?

ಗರ್ಭದಾರಣೆಯ ಸಂದರ್ಭದಲ್ಲಿ, ವೀರ್ಯಾಣು ಮತ್ತು ಅಂಡಾಣುಗಳು ಸಮ್ಮಿಲಿತವಾದಾಗ ಗರ್ಭಾಶಯದಲ್ಲಿ ಗರ್ಭಧರಿಸುವ ಅಂದಾಣುಗಳನ್ನು ಉತ್ಪತ್ತಿಮಾಡುವಾಗ ಹೆಚ್ ಸಿ ಜಿ ಅಥವಾ ಹ್ಯೂಮನ್ ಕೋರಿಯಾನಿಕ್ ಗೊನೆಡೋಟ್ರೋಪಿನ್ ಎಂಬ ಹಾರ್ಮೋ‌ನ್‌ಗಳು ಸ್ರವಿಸಲು ಆರಂಭವಾಗುತ್ತದೆ.

ಈ ಹಾರ್ಮೋನುಗಳು ದೇಹದಲ್ಲಿ ಮತ್ತು ಶ್ರೋಣಿಯ ಪ್ರದೇಶದಲ್ಲಿ ರಕ್ತದ ಪೂರೈಕೆಯನ್ನು ಹೆಚ್ಚಿಸಲು ಕಾರಣವಾಗುತ್ತವೆ. ಶ್ರೋಣಿಯ ಪ್ರದೇಶದಲ್ಲಿ ಹೆಚ್ಚಿದ ರಕ್ತ ಪೂರೈಕೆ ಮೂತ್ರಕೋಶವನ್ನು ಕೆರಳಿಸುವ ಮತ್ತು ಚಟುವಟಿಕೆಯಿಂದಿರುವಂತೆ ಮಾಡುತ್ತದೆ. ಪರಿಣಾಮವಾಗಿ ಸಣ್ಣ ಪ್ರಮಾಣದಲ್ಲಿಯಾದರೂ, ಆಗಾಗ ಮೂತ್ರ ವಿಸರ್ಜನೆ ಮಾಡಲು ಇದು ಪ್ರಚೋದಿಸುತ್ತದೆ. ಗರ್ಭಧಾರಣೆಯ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ ನಿಮ್ಮ ಋತುಚಕ್ರವನ್ನು ನಿಲ್ಲಿಸುವುದು. ಮಗುವಿನ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಪ್ರವೃತ್ತಿ

ಗರ್ಭಧಾರಣೆ ಮುಂದುವರಿದಂತೆ ಗರ್ಭಕೋಶ ಉಬ್ಬುತ್ತದೆ (ದೊಡ್ಡದಾಗುತ್ತದೆ) ಮತ್ತು ಇದು ಮೂತ್ರಕೋಶದ ಮೇಲೆ ಒತ್ತಡವನ್ನು ಹೇರುತ್ತದೆ ಮತ್ತು ಅದನ್ನು ಪ್ರಚೋದನೆಗೊಳಿಸುತ್ತದೆ. ಇದು ಪದೇ ಪದೇ ಮೂತ್ರವಿಸರ್ಜನೆಯಾಗುವಂತೆ ಮಾಡುತ್ತದೆ. ಹಾಗಾಗಿ ಇದು ಗರ್ಭಧಾರಣೆಯ ಸಾಮಾನ್ಯ ಲಕ್ಷಣವಾಗಿದೆ. ಮಧ್ಯರಾತ್ರಿಯಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಾಗಿ ಗರ್ಭದಾರಣೆಯ ಸಂದರ್ಭದಲ್ಲಿ ಮೂತ್ರವಿಸರ್ಜನೆಗಾಗಿ ಎದ್ದೇಳುವ ಅನಿವಾರ್ಯತೆ ಹೆಚ್ಚಾಗುತ್ತದೆ.

English summary

Common signs and symptoms of pregnancy – frequent urination

The reason being frequent urination is one of the earliest signs of pregnancy and can strike as early as a week after conception. However, no matter how strong your urge to urinate is, you might just pass miniscule amounts of urine when you are inside the restroom.
X
Desktop Bottom Promotion