For Quick Alerts
ALLOW NOTIFICATIONS  
For Daily Alerts

ಗರ್ಭಪಾತದ ನಂತರ ಮಹಿಳೆಯರ ದೇಹದಲ್ಲಿ ಆಗುವ 10 ಬದಲಾವಣೆಗಳು.

By Super
|

ಮಹಿಳೆಯರೇ, ನೀವು ಗರ್ಭಪಾತ ಮಾಡಿಸಿಕೊಂಡ ನಂತರ ನಿಮ್ಮ ದೇಹದಲ್ಲಿ ಏನೇನು ಬದಲಾವಣೆಗಳಾಗುವುದು ಎಂದು ಗೊತ್ತೇ? ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಹಳ ಕಷ್ಟವಾಗುವುದು. ಜಗತ್ತಿನಾದ್ಯಂತ ದಿನಂಪ್ರತಿ ಸುಮಾರು ಒಂದೂವರೆಕೋಟಿ (15 ಮಿಲ್ಲಿಯನ್) ಮಹಿಳೆಯರು ವಿವಿಧ ಕಾರಣಗಳಿಗಾಗಿ ಗರ್ಭಪಾತವನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ದೇಹಕ್ಕೆ ಆಗುವ ಬದಲಾವಣೆಗಳನ್ನು ನಿಭಾಯಿಸಲು ಮಹಿಳೆಯರಿಗೆ ಅತ್ಯಂತ ಕಷ್ಟವೇ ಸರಿ. ಬೋಲ್ಡ್ ಸ್ಕೈ (Boldsky) ಈ ವಿಷಯದ ಬಗ್ಗೆ ಮಹಿಳೆಯರ ದೇಹದಲ್ಲಾಗುವ ಕೆಲವು ಅಚ್ಚರಿಗೊಳ್ಳುವ ಹಾಗೂ ದಿಗ್ಭ್ರಮೆಗೊಳ್ಳುವ ಬದಲಾವಣೆಗಳನ್ನು ಇಲ್ಲಿ ಕೊಟ್ಟಿರುತ್ತಾರೆ.

ಮಕ್ಕಳನ್ನು ಸೇರಿಸುವ ಶಾಲೆ ಹೀಗಿದ್ದರೆ ಒಳ್ಳೆಯದು

ಗರ್ಭಪಾತದ ಒಂದು ಮುಖ್ಯ ಕಾಳಜಿ ಅಥವ ಕಳವಳವೆಂದರೆ ಸಾಮಾನ್ಯ ಹೆರಿಗೆಯ ನಂತರ ಆಗುವ ರಕ್ತಸ್ರಾವದಂತೆ ನಿರಂತರ ರಕ್ತಸ್ರಾವವಾಗುವುದು. ಕೆಲವು ತಜ್ಞರ ಹೇಳುವುದೇನೆಂದರೆ ಮಹಿಳೆಯರಲ್ಲಿ ಗರ್ಭಪಾತದ ನಂತರ ಭೌತಿಕ ದೇಹದಮೇಲೆ ಬದಲಾವಣೆಗಳಲ್ಲದೆ ಅದರ ಗುರುತು ಕಾಣಿಸಿಕೊಳ್ಳುತ್ತದೆ. ಇದರಿಂದ ಅವರು ತಮ್ಮ ಇಡೀ ಜೀವನದಲ್ಲಿ ಈ ಚಿತ್ರಹಿಂಸೆಯ ಮತ್ತು ಘಟನೆಯ ನೆನಪು ಸದಾ ಉಳಿದುಕೊಳ್ಳುತ್ತವೆ. ಗರ್ಭಪಾತದ ನಂತರ ಮಹಿಳೆಯರ ದೇಹದ ಮೇಲೆ ಆಗುವ ಕೆಲವು ಭೌತಿಕ ಬದಲಾವಣೆಗಳು ಇಲ್ಲಿವೆ:

ಈ ಪರಿಸ್ಥಿತಿಗಳಿದ್ದರೆ ಅಬಾರ್ಷನ್ ಅವಶ್ಯಕ

ಊದಿಕೊಂಡ ಸ್ತನಗಳು

ಊದಿಕೊಂಡ ಸ್ತನಗಳು

ಗರ್ಭಪಾತದನಂತರ ಅತಿ ಮುಖ್ಯವಾದ ಭೌತಿಕ ಬದಲಾವಣೆಯೆಂದರೆ ಅವರ ಸ್ತನಗಳು ಹಿಗ್ಗುವುದು ಮತ್ತು ನವಿರಾಗುವುದು. ಇದು ಅವರ ಮುಟ್ಟಿನ ಪೂರ್ವ ಪರಿಸ್ಥಿತಿಯನ್ನು ಹೋಲುತ್ತದೆ. ರಾತ್ರಿ ವೇಳೆ ಅವರು ಸಡಿಲವಾಗಿರುವ ಒಳ ಉಡುಪು ಧರಿಸುವುದರಿಂದ ಅಥವಾ ಸಾಧ್ಯವಾದರೆ ನಗ್ನವಾಗಿ ಮಲಗುವುದರಿಂದ ನೋವು ಕಡಿಮೆಯಾಗುವುದಕ್ಕೆ ಸಹಾಯವಾಗುತ್ತದೆ.

ಸ್ನಾಯು ಅಥವ ಮಾಂಸಖಂಡದ ಸೆಳೆತ

ಸ್ನಾಯು ಅಥವ ಮಾಂಸಖಂಡದ ಸೆಳೆತ

ಗರ್ಭಪಾತದನಂತರ ಸಾಧಾರಣವಾಗಿ ಒಂದು - ಎರಡು ವಾರಗಳಕಾಲ ನಿರಂತರ ರಕ್ತಸ್ರಾವ ಇರುತ್ತದೆ. ಹೆಪ್ಪುಗಟ್ಟಿರುವ ರಕ್ತದಕಣಗಳು ರಕ್ತಸ್ರಾವದಜೊತೆ ಹರಿಯುವುದರಿಂದ ಸ್ನಾಯು ಬರುವ ಸಾಧ್ಯತೆಗಳಿರುತ್ತದೆ ಮತ್ತು ಇದು ದೇಹದಮೇಲೆ ಆಗುವ ಭೌತಿಕ ಬದಲಾವಣೆಗಳಲ್ಲಿ ಒಂದಾಗಿದೆ.

ರಕ್ತಸ್ರಾವ ಅಥವಾ ಗುರುತುಬೀಳುವುದು

ರಕ್ತಸ್ರಾವ ಅಥವಾ ಗುರುತುಬೀಳುವುದು

ಗರ್ಭಪಾತದನಂತರ ಭೌತಿಕ ಬದಲಾವಣೆಗಳಲ್ಲಿ ಅದರ ಗುರುತು ಉಳಿದುಕೊಳ್ಳುವುದು ಅಥವಾ ಮುಟ್ಟಾದಂತೆ (ಮುಟ್ಟಾಗದಿದ್ದರೂ ಸಹ) ರಕ್ತಸ್ರಾವವಾಗುವುದು. ಈ ಪರಿಸ್ಥಿತಿಯು ಸಾಮಾನ್ಯವಾಗಿದ್ದು ಹೊಟ್ಟೆ ಮತ್ತು ಕಣಕಾಲಿನ ಹಿಂಬಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ದೇಹದ ತೂಕ ಏರುವುದು

ದೇಹದ ತೂಕ ಏರುವುದು

ಕೆಲವು ಮಹಿಳೆಯರಿಗೆ ಗರ್ಭಪಾತದನಂತರ ದೇಹದ ತೂಕಗಳಿಕೆಯ ಅನುಭವವಿರುತ್ತದೆ. ಆದಾಗ್ಯೂ ಇನ್ನಿತರ ಮಹಿಳೆಯರಿಗೆ ಖಿನ್ನತೆಯಿಂದ ಬಳಲಿ, ಕಡಿಮೆ ಊಟಮಾಡುವುದರಿಂದ ತೂಕ ಕಡಿಮೆಯಾಗುವುದು. ಮಹಿಳೆಯರು ಇಂತ ಪರಿಣಾಮಗಳನ್ನು ಅವರು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದರಮೇಲೆ ಅವಲಂಬಿಸುತ್ತದೆ.

ಬೆನ್ನುನೋವು

ಬೆನ್ನುನೋವು

ಗರ್ಭಪಾತದನಂತರ ನಿಯಮಿತವಾಗಿ ಬೆನ್ನುನೋವು, ವಿಶೇಷವಾಗಿ ಬೆನ್ನಿನ ಕೆಳಭಾಗದಲ್ಲಿ (ಬೆನ್ನೆಲುಬಿನ ಅಂತ್ಯದಲ್ಲಿ) ಕಾಣಿಸಿಕೊಳ್ಳುವುದು ಮತ್ತೊಂದು ಭೌತಿಕ ಬದಲಾವಣೆ. ದೀರ್ಘಕಾಲ ಕುಳಿತಿದ್ದರೆ ತೀವ್ರನೋವು ಬರುವ ಸಾಧ್ಯತೆಗಳು ಹೆಚ್ಚು.

ಲೈಂಗಿಕಕಾರ್ಯದಲ್ಲಿ ನೋವಿನ ಅನುಭವ

ಲೈಂಗಿಕಕಾರ್ಯದಲ್ಲಿ ನೋವಿನ ಅನುಭವ

ಗರ್ಭಕೋಶದ ಕಂಠದಲ್ಲಿ ನೋವಿರುವುದರಿಂದ ಹಾಗೂ ಆಭಾಗವು ನಿಶ್ಟೇಷ್ಟಿತಗೊಳ್ಳುವ ಸಂಭವವಿರುವುದರಿಂದ ಸಂಭೋಗಮಾಡಲು ಸಾಧ್ಯವಾಗುವಿದಿಲ್ಲ. ಇದೂ ಒಂದು ಭೌತಿಕ ಬದಲಾವಣೆ. ಈ ಕಾರ್ಯಕ್ಕೆ ಕನಿಷ್ಟ ಮೂರುವಾರಗಳು ಕಾಯಬೇಕು.

ಮಲಬದ್ಧತೆ

ಮಲಬದ್ಧತೆ

ಗರ್ಭಪಾತವಾದಾಗ ಮಹಿಳೆಯರು ಸಾಕಷ್ಟು ರಕ್ತವನ್ನು ಕಳೆದುಕೊಂಡಿರುತ್ತಾರೆ. ಆಗ ನಿಮ್ಮ ವೈದ್ಯರು ನೀವು ಕಳೆದುಕೊಂಡ ಕಬ್ಬಿಣಾಂಶಗಳ ಕೊರತೆಯನ್ನು ನೀಗಿಸಲು ನಿಮಗೆ ಕೆಲವು ಕಬ್ಬಿಣಾಂಶವಿರುವ ಔಷಧಿಗಳನ್ನು ಖಂಡಿತವಾಗಿ ತೆಗೆದುಕೊಳ್ಳಲು ಹೇಳುತ್ತಾರೆ. ಆದರೆ ಇಂತಹ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಮಲಭದ್ದತೆಗೆ ಮುಖ್ಯ ಕಾರಣವಾಗುತ್ತದೆ.

ಗರ್ಭಪಾತದ ನಂತರವಾಗುವ ವಿಸರ್ಜನೆಗಳು

ಗರ್ಭಪಾತದ ನಂತರವಾಗುವ ವಿಸರ್ಜನೆಗಳು

ಗರ್ಭಪಾತ ದನಂತರ ಮತ್ತೊಂದು ಭೌತಿಕ ಬದಲಾವಣೆಯೆಂದರೆ ಯೋನಿಯಿಂದ ಅಸಮಾನ್ಯ ವಿಸರ್ಜನೆಯಾಗುವುದು. ನಿಮ್ಮ ದೇಹದೊಳಗೆ ಸ್ವಚ್ಚಗೊಳುಸುವ ಕಾರ್ಯದಲ್ಲಿ ಗರ್ಭಪಾತವಾದ ಬಳಿಕ ಉಳಿದಿರುವ ಅಂಗಾಂಶಗಳ ವಿಸರ್ಜನೆ ಕಂದುಬಣ್ಣದಲ್ಲಿರುತ್ತದೆ. ಅದು ಹೊಲಸುವಾಸನೆಯಿಂದ ಕೂಡಿರುತ್ತದೆ ಮತ್ತು ನಿಮಗೆ ಜ್ವರ ಬರುವ ಸಂಭವವೂ ಇರುತ್ತದೆ. ಆದರೆ ಇದರಿಂದ ನೀವೇನೂ ಹೆದರಬೇಕಾಗಿಲ್ಲ.

ಹೊಟ್ಟೆ ಉಬ್ಬುವುದು

ಹೊಟ್ಟೆ ಉಬ್ಬುವುದು

ಗರ್ಭಪಾತದ ನಂತರ ನಿಮ್ಮ ಹೊಟ್ಟೆ ಉಬ್ಬಿದ ಅಥವ ಊದಿಕೊಂಡಿರುವ ಅನುಭವವಾಗಬಹುದು. ಇದೂ ಸಹ ನಿಮ್ಮ ದೇಹದಲ್ಲಾಗುವ ಮತ್ತೊಂದು ಭೌತಿಕ ಬದಲಾವಣೆ. ಇದಕ್ಕೆ ಕಾರಣ ನಿಮ್ಮ ದೇಹದೊಳಗೆ ಕೆಲವು ಸಮಯ ರಕ್ತಸ್ರಾವದಿಂದ ಆಗುವ ರಕ್ತನಾಳಗಳ ಊತ ಮತ್ತು ಗ್ರಂಥಿಯಲ್ಲಿನ ಬದಲಾವಣೆಗಳು.

ಮುಟ್ಟಾಗುವ ಅವಧಿಗಳು

ಮುಟ್ಟಾಗುವ ಅವಧಿಗಳು

ಗರ್ಭಪಾತದ ಬಳಿಕ, ನಿಮ್ಮ ದೇಹವು ಯಥಾಸ್ಥಿತಿ ಮರಳಲು ಆರಂಭವಾಗುತ್ತದೆ. ಗರ್ಭಪಾತದನಂತರ ಸಮಾನ್ಯವಾಗಿ ೪ ರಿಂದ ೮ ವಾರಗಳೊಳಗೆ ನಿಮ್ಮ ಅಂಡೋತ್ಪತ್ತಿ ಚಕ್ರ(Ovulation Cycle) ಆರಂಭವಾಗುತ್ತದೆ.

English summary

10 Body Changes After Abortion

Did you know that your body changes after an abortion? Going through an abortion is hard for the woman, both mentally and physically. Here are some of the physical body changes after abortion:
X
Desktop Bottom Promotion