For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ಟೊಕೊಫೋಬಿಯಾ ನಿವಾರಣೆ ಹೇಗೆ?

|
Fear Of Pregnancy
ಗರ್ಭಿಣಿ ಎಂದು ಗೊತ್ತಾದ ಕ್ಷಣ ದಂಪತಿಗೆ ಸಂತೋಷ ಉಂಟಾಗುತ್ತದೆ. ಮನೆಗೆ ಬರುವ ಹೊಸ ಮಗುವಿನ ಬಗ್ಗೆ ಕನಸ್ಸು ಕಾಣಲು ಪ್ರಾರಂಭಿಸುತ್ತಾರೆ. ಆದರೆ ಗರ್ಭಿಣಿಯಾಗಲು ಭಯ ಪಡುವ ಅನೇಕ ಮಹಿಳೆಯರು ಇರುತ್ತಾರೆ. ಅದಕ್ಕೆ ಅವರದೆ ಆದ ಕಾರಣಗಳಿರುತ್ತವೆ, ಅವರ ಆ ಮಾನಸಿಕ ಸ್ಥಿತಿಗೆ ಈ ಕೆಳಗಿನ ಅಂಶಗಳು ಕೂಡ ಕಾರಣವಾಗಿದೆ ಎಂದು ಮನಶಾಸ್ರಜ್ಞರು ಹೇಳುತ್ತಾರೆ.

1. ಗರ್ಭಿಣಿಯಾಗಲು ಭಯಪಡುವ ಮನಸ್ಥಿತಿಯನ್ನು ಟೊಕೊಫೋಬಿಯಾ ಎನ್ನುತ್ತಾರೆ.

2. ಹೆರಿಗೆಯ ಸಮಯದಲ್ಲಿ ಕಂಡುಬರುವ ರಕ್ತಸ್ರಾವ ಬಗ್ಗೆ ಅನೇಕ ಮಹಿಳೆಯರು ಭಯವನ್ನು ಹೊಂದಿರುತ್ತಾರೆ.

3. ಈ ರೀತಿ ಗರ್ಭಿಣಿಯಾಗಲು ಹೆದರುವ ಮಹಿಳೆಯರರ ತಮ್ಮದೆ ಆದ ಕಾರಣಗಳನ್ನು ಹೊಂದಿರುತ್ತಾರೆ, ಕೆಲವರಿಗೆ ಸೌಂದರ್ಯ ಕಡಿಮೆಯಾಗುತ್ತದೆ ಎಂಬ ಭಯ, ಇನ್ನು ಕೆಲವರಿಗೆ ನೋವಿನ ಬಗ್ಗೆ ಕಲ್ಪಿಸಿಕೊಂಡುಭಯ ಪಡುತ್ತಾರೆ.

4. ಕೆಲವು ಮಹಿಳೆಯರು ಮಗುವಾದ ಮೇಲೆ ಗಂಡ ಹೆಚ್ಚು ಪ್ರೀತಿ ತೋರುವುದಿಲ್ಲ ಎಂದು ಭಯಪಡುತ್ತಾರೆ.

5. ಮತ್ತೆ ಕೆಲವರು ತಮ್ಮ ಜೀವನ ಶೈಲಿ ಬದಲಾಗುತ್ತದೆ ಎಂದು ಭಯ ಪಡುತ್ತಾರೆ.

ಟೊಕೊಫೋಬಿಯಾಕ್ಕೆ ಕೆಲ ಪರಿಹಾರ:

1. ಮನಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಅಂದರೆ ಆಪ್ತ ಸಲಹೆ ಸೂಚನೆಗಳನ್ನು ಕೊಡಿಸಬೇಕು.

2.
ಗಂಡ ಅವಳಿಗೆ ಮಾನಸಿಕ ಧೈರ್ಯವನ್ನು ತುಂಬ ಬೇಕು, ಅವಳಿಗೆ ಗರ್ಭಿಣಿಯಾದರೆ ಯಾವುದೆ ಸಮಸ್ಯೆ ಉಂಟಾಗುವುದಿಲ್ಲ, ಕೊನೆಯವರೆಗೂ ಜೊತೆಯಲ್ಲಿ ಇರುತ್ತೇನೆ ಎಂದು ಹೇಳಿ ಅವಳೊಡನೆ ವಿಶ್ವಾಸದಿಂದ ವರ್ತಿಸಬೇಕು.

3.
ಮಕ್ಕಳ ಬಗ್ಗೆ ಇರುವ ಸಿನಿಮಾ ನೋಡುವುದರಿಂದ ಮಕ್ಕಳಿದ್ದರೆ ಮನೆ ಮತ್ತಷ್ಟು ಸುಂದರವಾಗುತ್ತದೆ ಎಂಬ ಭಾವನೆಯನ್ನು ಬರುವಂತೆ ಮಾಡಬೇಕು.

4. ತಾಯಿಯಾದರೆ ಸೌಂದರ್ಯ ಹಾಳಾಗುವುದಿಲ್ಲ, ತಾಯಿತನ ಮತ್ತಷ್ಟು ಅವಳ ಜೀವನವನ್ನು ಸುಂದರವಾಗಿಸುತ್ತದೆ ಎಂದು ಮನವರೆಕೆ ಮಾಡಬೇಕು.

English summary

How To Tackle Fear Of Pregnancy | Pregnancy Fear | ಗರ್ಭಧಾರಣೆಯಾಗುವ ಭಯವನ್ನು ನಿವಾರಿಸುವುದು ಹೇಗೆ | ಗರ್ಭಿಣಿಯಾಗಲು ಭಯ

Pregnancy is usually associated with hope, happiness, celebration of a new life. There are some women. they fear to get pregnant for many reason. Take a look.
Story first published: Saturday, December 17, 2011, 17:30 [IST]
X
Desktop Bottom Promotion