For Quick Alerts
ALLOW NOTIFICATIONS  
For Daily Alerts

ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ?

|

ಮಹಿಳೆಯರ ತೂಕ ಸಾಮಾನ್ಯವಾಗಿ ಗರ್ಭಧಾರಣೆಯ ನಂತರ ಅಥವಾ ಮಗುವಿಗೆ ಜನ್ಮ ನೀಡಿದ ಬಳಿಕ ಹೆಚ್ಚಾಗುತ್ತದೆ. ಇದಕ್ಕೆ ಕಾರಣವೇನಿರಬಹುದೆಂದು ಯಾವಾಗಲೂ ಚರ್ಚೆಯಾಗುತ್ತಲೇ ಇರುತ್ತದೆ. ಇದಕ್ಕೆ ಉತ್ತರ ನೀಡುವಂತಹ ಸಂಶೋಧನೆಯೊಂದು ಇದೀಗ ನಡೆದಿದೆ.

ಸಂಶೋಧನೆಯ ಪ್ರಕಾರ, ಮಗುವಿಗೆ ಜನ್ಮ ನೀಡಿದ ಬಳಿಕ ಆಯ್ಕೆ ಮಾಡುವ ಜೀವನಶೈಲಿಯೇ ತೂಕ ಹೆಚ್ಚಾಗಲು ಕಾರಣವೆಂಬುದು ತಿಳಿದು ಬಂದಿದೆ. ಹಾಗಾದರೆ ಆ ಅಧ್ಯಯನ ಏನು ಹೇಳುತ್ತದೆ? ತೂಕ ಹೆಚ್ಚಳಕ್ಕೆ ಸಂಶೋಧನೆಯಲ್ಲಿ ಹೇಳಲಾದ ಇತರ ಅಂಶಗಳಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ, ನೋಡಿ.

ಗರ್ಭಧಾರಣೆಯ ನಂತರದಲ್ಲಿ ಮಹಿಳೆಯರ ತೂಕ ಹೆಚ್ಚಾಗಲು ಅವರ ಜೀವನಶೈಲಿ ಹೇಗೆ ಕಾರಣವಾಗುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ಗರ್ಭಧಾರಣೆಯ ನಂತರದಲ್ಲಿ ಮಹಿಳೆಯರ ತೂಕ ಹೆಚ್ಚಾಗಲು ಅವರ ಜೀವನಶೈಲಿ ಹೇಗೆ ಕಾರಣವಾಗುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ಯುಎಸ್ ನ ಮಿಚಿಗನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಮಕ್ಕಳಿರುವ ಮತ್ತು ಮಕ್ಕಳಿಲ್ಲದ ಮಹಿಳೆಯರ ನಡುವಿನ ತೂಕದ ಹೋಲಿಕೆಗಳನ್ನು ತನಿಖೆ ಮಾಡಲು ಪ್ರಾರಂಭಿಸಿದರು. ಒಂದು ಮತ್ತು ನಾಲ್ಕು ಬಾರಿ ಜನ್ಮ ನೀಡಿದ ಸುಮಾರು 30,000 ಮಹಿಳೆಯರ ಅಧ್ಯಯನದಲ್ಲಿ, ಹೆಚ್ಚಿನ ಮಹಿಳೆಯರು ಮಗುವಿನ ಜನನದ ನಂತರ ಮೊದಲಿದ್ದ ತೂಕಕ್ಕೆ ಮರಳಲಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಸ್ವ-ಕಾಳಜಿಯ ಕಡೆಗಣನೆ:

ಸ್ವ-ಕಾಳಜಿಯ ಕಡೆಗಣನೆ:

ತಾಯಂದಿರು ತಮ್ಮ ಮಕ್ಕಳ ಅಗತ್ಯಗಳಿಗೆ ಮೊದಲ ಸ್ಥಾನವನ್ನು ನೀಡುತ್ತಾರೆ. ಮಗುವಿನ ಆರೈಕೆಯಲ್ಲಿ ಸಂಪೂರ್ಣವಾಗೊ ತೊಡಗಿಕೊಂಡು ತಮ್ಮ ಆರೈಕೆಯನ್ನು ಕಡೆಗಣಿಸುತ್ತಾರೆ. ಇದರಿಂದ ಅವರು ವ್ಯಾಯಾಮ ಮಾಡಲು ಹೋಗುವುದಿಲ್ಲ, ಇದರ ಪ್ರತಿಫಲವೇ ತೂಕ ಹೆಚ್ಚಳ.

ಜಡ ಸೃಷ್ಠಿಸುವ ಕೆಲಸ ಮಾಡುವುದು:

ಜಡ ಸೃಷ್ಠಿಸುವ ಕೆಲಸ ಮಾಡುವುದು:

ತಮ್ಮ ಮಗುವಿನ ತಟ್ಟೆಯಲ್ಲಿರುವ ಆಹಾರವನ್ನು ಮುಗಿಸುವುದು ಅಥವಾ ತಮ್ಮ ಮಕ್ಕಳೊಂದಿಗೆ ಕುಳಿತು ಹೆಚ್ಚು ಸಮಯ ಕಳೆಯುವುದು ಅಥವಾ ಚಲನಚಿತ್ರವನ್ನು ನೋಡುವುದು ಮುಂತಾದ ಸಣ್ಣ ವಿಷಯಗಳು ಸಹ ಅವರನ್ನು ಜಡತ್ವಕ್ಕೆ ನೂಕುತ್ತದೆ. ಇದರಿಂದ ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ.

ಉತ್ಸಾಹ ಇಲ್ಲದೇ ಇರುವುದು:

ಉತ್ಸಾಹ ಇಲ್ಲದೇ ಇರುವುದು:

ಅನೇಕ ಮಹಿಳೆಯರು ತಮ್ಮ ಗರ್ಭಧಾರಣೆಯ ಮೊದಲಿದ್ದ ತೂಕಕ್ಕೆ ಮರಳಲು ತಮ್ಮ ಆಹಾರ ಮತ್ತು ವ್ಯಾಯಾಮವನ್ನು ಮಾಡುತ್ತಾರೆ. ಆದರೆ ಅದು ಅಲ್ಪಾವಧಿಯವರೆಗೂ ಮಾತ್ರ. ನಿಗದಿತ ಫಲಿತಾಂಶ ಬರುವವರೆಗೂ ಕಾಯುವ ಉತ್ಸಾಹ ತಾಯಿಯಾದ ಮೇಲೆ ತೋರುವುದಿಲ್ಲ. ಇದರಿಂದ ಮೊದಲಿದ್ದ ಸ್ಥಿತಿಗೆ ಮರಳಲು ಕಷ್ಟವಾಗುತ್ತದೆ.

ವಿಭಿನ್ನ ಜೀವನಶೈಲಿ:

ವಿಭಿನ್ನ ಜೀವನಶೈಲಿ:

ಗರ್ಭಧಾರಣೆಯ ಮೊದಲು, ಆ ಸಮಯ ಮತ್ತು ನಂತರ ದಿನಗಳಲ್ಲಿ ದೀರ್ಘಕಾಲೀನ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ತುಂಬಾ ಮುಖ್ಯ. ಇದು ನಿಮ್ಮ ದೇಹ ಮತ್ತು ತೂಕವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹೆಚ್ಚಿನವರು ಹೀಗೆ ಮಾಡುವುದಿಲ್ಲ. ಮಗುವಿಗೆ ಹೆಚ್ಚಿನ ಗಮನ ನೀಡುತ್ತಾರೆ. ಹಾಗಂತ ಇದು ತಪ್ಪೂ ಅಲ್ಲ. ಮಗುವಿನ ಆರೈಕೆ ಮಾಡುವುದು ತಾಯಿಯ ಆದ್ಯ ಕರ್ತವ್ಯ.

ಆದರೆ ಮಗುವಿನ ಆರೈಕೆಯ ಜೊತೆಗೆ ತಮ್ಮ ಕಡೆಗೂ ಗಮನ ಕೊಡುವುದು ತುಂಬಾ ಮುಖ್ಯ.

ಅರಿವು ಇಲ್ಲದೇ ಇರುವುದು:

ಗರ್ಭಧಾರಣೆಯ ನಂತರ ದೇಹದ ಚಿತ್ರಣದ ಬಗ್ಗೆ ಸಕಾರಾತ್ಮಕ ನಿರೀಕ್ಷೆಗಳನ್ನು ಉತ್ತೇಜಿಸಲು, ಮಾತೃತ್ವ ಮತ್ತು ವಯಸ್ಸಿಗೆ ಸಂಬಂಧಿಸಿದ ತೂಕ ಹೆಚ್ಚಳದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಮಹಿಳೆಯರು ಆರೋಗ್ಯವಂತರಾಗಿರುವವರೆಗೂ ಅದು ಮುಖ್ಯವಾಗಿರುತ್ತದೆ. ವಯಸ್ಸಿಗೆ ತಕ್ಕಂತೆ ತೂಕ ಬದಲಾವಣೆಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳಬೇಕು. ಜೊತೆಗೆ ಅದನ್ನು ನಿಯಂತ್ರಿಸುವ ವಿಧಾನವನ್ನು ಅರಿಯಬೇಕು.

English summary

Reasons Why Women Gain Weight After Pregnancy in Kannada

Here we talking about Reasons why women gain weight after pregnancy in kannada, read on
X
Desktop Bottom Promotion