Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಸ್ಟ್ರೆಚ್ ಮಾರ್ಕ್ಸ್ ಇದ್ದರೆ ಮುಜುಗರ ಏಕೆ, ಅದು ಹೆಮ್ಮೆಯ ಗುರುತಲ್ಲವೇ?
ಬಾಲಿವುಡ್‌ನ ಹಾಟ್ ಬೆಡಗಿ ಮಲೈಕಾ ಅರೋರಾ ಅವರು ಇತ್ತೀಚೆಗೆ ತಮ್ಮ ಸ್ಟ್ರೆಚ್ ಮಾರ್ಕ್ಸ್ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಅವರ ಸ್ಟ್ರೆಚ್ ಮಾರ್ಕ್ಸ್ ನೋಡಿದವರು ಆಕೆಗೆ ವಯಸ್ಸಾಗಿದೆ ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಟ್ರೋಲ್ ಮಾಡುತ್ತಿರುವವರು ತಮ್ಮ ತಾಯಿಯ ಹೊಟ್ಟೆಯಲ್ಲಿ ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ಇದೆ ಎಂಬುವುದನ್ನು ಮರೆತಿದ್ದಾರೆ.
ಸ್ಟ್ರೆಚ್ ಮಾರ್ಕ್ಸ್ ಬೀಳುವುದು ವಯಸ್ಸಾದಾಗ ಅಲ್ಲ, ಹೆಣ್ಣು ತಾಯಿಯಾದಾಗ. ತಾಯ್ತನ ಒಂದು ಸುಂದರ ಅನುಭವವಾದರೇ ಸ್ಟ್ರೆಚ್ ಮಾರ್ಕ್ ಕೂಡ ಹೆಮ್ಮೆಯಲ್ಲವೇ, ಅದರ ಬಗ್ಗೆ ಕೀಳೆರಿಮೆ ಏಕೆ? ಅದು ನೀವು ಒಂದು ಜೀವಕ್ಕೆ ಜನ್ಮ ನೀಡಿದ್ದೇನೆ ಎಂದು ತೋರಿಸುವ ಗುರುತು ಅಲ್ಲವೇ?
ಸೆಲೆಬ್ರಿಟಿ ಆಗಿರಲಿ, ಸಾಧಾರಣ ಮಹಿಳೆಯಾಗಿರಲಿ ಗರ್ಭಿಣಿಯಾದಾಗ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಸಹಜ. ಕೆಲವರಲ್ಲಿ ಆಳವಾದ ಗುರುತು ಕಂಡರೆ ಮತ್ತೆ ಕೆಲವರಲ್ಲಿ ಸ್ಟ್ರೆಚ್ ಮಾರ್ಕ್ಸ್ ಅಷ್ಟಾಗಿ ಎದ್ದು ಕಾಣುವುದಿಲ್ಲ, ಅದು ಅವರ ತ್ವಚೆಯನ್ನು ಅವಲಂಭಿಸಿರುತ್ತದೆ. ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಗಾತ್ರ ಬೆಳೆಯುತ್ತಿದ್ದಂತೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಸಹಜ.
ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕ್ರೀಮ್‌ಗಳು, ಲೋಷನ್‌ಗಳು ಇವೆಯಾದರೂ ಅವು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುವುದನ್ನು ಹೇಳಲು ಸಾಧ್ಯವಿಲ್ಲ, ಕ್ರೀಮ್, ಲೋಷನ್ ಎಲ್ಲಾ ಹಚ್ಚಿದರೂ ಸ್ಟ್ರೆಚ್ ಮಾರ್ಕ್ಸ್ ಹಾಗೆಯೇ ಉಳಿದು ಬಿಡುತ್ತದೆ. ಹಾಗೇ ಉಳಿದು ಕೊಂಡರೂ ಮುಜುಗರ ಪಡಬೇಕಾಗಿಲ್ಲ, ಬದಲಿಗೆ ಹೆಮ್ಮೆ ಪಡಿ, ಯಾವ ಕಾರಣ ಹೆಮ್ಮೆ ಪಡಬೇಕು ಎಂದು ಹೇಳಿದ್ದೇವೆ ನೋಡಿ:

1. ನಿಮ್ಮಲ್ಲಿರು ಅದ್ಭುತ ಶಕ್ತಿಯ ಗುರುತು ಅದು
ಮಗುವನ್ನು ಹೊಟ್ಟೆಯಲ್ಲಿ ಬೆಳೆಸುವ ನಾವೇ ಸೂಪರ್ ಹೀರೋಗಳು. ನಮ್ಮ ಹೊಟ್ಟೆಯಲ್ಲಿ ಜೀವವೊಂದು ರೂಪ ತಾಳಿ, ಅದಕ್ಕೆ ಜನ್ಮ ನೀಡಿದರ ಗುರುತು ಹೊಟ್ಟೆಯಲ್ಲಿರುವ ಸ್ಟ್ರೆಚ್ ಮಾರ್ಕ್ಸ್.

2. ತಾಯ್ತನದ ಗುರುತು
ತಾಯ್ತನ ಎನ್ನುವುದೇ ಒಂದು ವರ, ಅದನ್ನು ಪಡೆದ ನಮ್ಮ ಬಗ್ಗೆ ನಾವು ಹೆಮ್ಮೆ ಪಡಬೇಕು. ಮಗು ಹೊಟ್ಟೆಯಲ್ಲಿ ಬೆಳೆಯುತ್ತಿದ್ದಂತೆ ನಮ್ಮ ಹೊಟ್ಟೆ ಅದರ ಬೆಳವಣಿಗೆಯನ್ನು ಪೋಷಿಸಿದರ ಗುರುತೇ ಈ ಸ್ಟ್ರೆಚ್ ಮಾರ್ಕ್ಸ್.

3. ಸೆಲೆಬ್ರಿಟಿ ಇರಲಿ, ಸಾಮಾನ್ಯಳೇ ಆಗಿರಲಿ ಸ್ಟ್ರೆಚ್ ಮಾರ್ಕ್ಸ್ ಬಿದ್ದೇ ಬೀಳುವುದು
ಸ್ಟ್ರೆಚ್ ಮಾರ್ಕ್ಸ್ ಎನ್ನುವುದು ತಾಯ್ತನದ ಗುರುತು. ಈ ಗುರುತು ಸೆಲೆಬ್ರಿಟಿಯಾಗಲಿ, ಸಾಮಾನ್ಯಳಾಗಲಿ ತಾಯಿ ತಾಯಿಯೇ ಎನ್ನುವುದರ ಗುರುತು ಆಗಿದೆ.

4. ತಾಯ್ತನದ ಸಾಕ್ಷಿ
ನಮ್ಮ ಹೊಟ್ಟೆ ಉಬ್ಬಿ ಬೆಳೆಯುತ್ತಿರುವ ಮಗುವಿಗೆ ಬೇಕಾದ ಸ್ಥಳಾವಕಾಶ ಮಾಡಿಕೊಡುತ್ತದೆ, ಈ ಪ್ರಕೃತ್ತಿ ನಿಯಮ ಎಷ್ಟೊಂದು ಸೋಜಿಗ ಹಾಗೂ ಸುಂದರ, ಆ ಸುಂದರ ಕ್ಷಣಕ್ಕೆ ಸಾಕ್ಷಿಯಾದ ಗುರುತೇ ಸ್ಟ್ರೆಚ್ ಮಾರ್ಕ್ಸ್.

5. ಮಹಿಳೆ ಬದಲಾಗುತ್ತಾಳೆ ಎಂದು ಸೂಚಿಸುವ ಗುರುತು
ಸ್ಟ್ರೆಚ್ ಮಾರ್ಕ್ಸ್ ನಾವು ಬದಲಾಗಬಹುದು ಎಂಬುವುದನ್ನು ಸೂಚಿಸುತ್ತದೆ, ಒಂದು ಮುದ್ದಾದ ಮಗು ಉದರದೊಳಗೆ ಇದ್ದಾಗ ತಾಯಿಯ ಉದರದ ಮೇಲೆ ಮೂಡಿಸಿದ ಗುರುತುಗಳವು. ಆ ಸ್ಟ್ರೆಚ್ ಮಾರ್ಕ್ಸ್ ತಾಯ್ತನ ಹಿರಿಮೆಯನ್ನು ಹೇಳುತ್ತದೆ.

6. ಮಗು ಮೂಡಿಸಿದ ಟ್ಯಾಟೂ
ಸ್ಟ್ರೆಚ್ ಮಾರ್ಕ್ಸ್ ಎನ್ನುವುದು ತಾಯಿಯಾದಾಗ ಮೂಡುವ ಸುಂದರ ಟ್ಯಾಟೂ. ಕ್ರೀಮ್, ಲೋಷನ್ ಏನೇ ಹಚ್ಚಿದರೂ ಹೋಗದಿದ್ದರೆ ಚಿಂತೆ ಏಕೆ, ಅದು ಹಾಗೇ ಇರಲಿ, ಆ ಸ್ಟ್ರೆಚ್ ಮಾರ್ಕ್ಸ್ ಇದ್ದರೆ ಏನಂತೆ ಮುದ್ದಾದ ಮಗು ನಿಮ್ಮ ಮಡಲಿನಲ್ಲಿ ನಕ್ಕು-ನಲಿದಾಡಿದೆ ಅಲ್ವಾ? ಇರಲಿ ಬಿಡಿ, ಅದರ ಬಗ್ಗೆ ಚಿಂತೆ ಏಕೆ.

7. ತಾಯ್ತನ ಸದಾ ನೆನಪಿಸುವ ಗುರುತು
ಮಕ್ಕಳು ಬೆಳೆದು ಎಷ್ಟೇ ದೊಡ್ಡದಾಗಲಿ ಹೊಟ್ಟೆಯ ಮೇಲಿನ ಆ ಸ್ಟ್ರೆಚ್ ಮಾರ್ಕ್ಸ್ ಹೊಟ್ಟೆಯಲ್ಲಿದ್ದಾಗ ಮೂಡಿಸಿದ ಖುಷಿ, ಸುಸ್ತು, ಆತಂಕ, ಬೇಬಿ ಕಿಕ್‌ನ ರೋಮಾಂಚನ ಎಲ್ಲವನ್ನೂ ಸದಾ ನೆನಪಿಸುತ್ತೆ. ಈಗ ಹೇಳಿ ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ಹಿಂಜರಿಕೆ ಏಕೆ ಅದು ನಾವು ತಾಯಿಯಾದ ಗುರುತು ಆಗಿರುವುದರಿಂದ ಹೆಮ್ಮೆ ಪಡಬೇಕಾದ ವಿಷಯವಲ್ಲವೇ.
ಬೇರೆಯವರು ಏನು ಹೇಳುತ್ತಾರೆ ಎಂದು ಚಿಂತಿಸುವ ಬದಲು ನಮ್ಮ ದೇಹವನ್ನು ನಾವು ಪ್ರೀತಿಸಬೇಕು, ಆಗ ನಾವು ಹೇಗೇ ಇರಲಿ ನಮ್ಮ ಆತ್ಮವಿಶ್ವಾಸ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಮುಂದೆ ಸೀರೆ, ಕ್ರಾಪ್ ಟಾಪ್ ಧರಿಸುವಾಗ ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ಹಿಂಜರಿಕೆ ಬೇಡ, ಯಾರಾದರೂ ಕೇಳಿದರೆ ಅದು ನನ್ನ ಮಗ/ ಮಗಳು ಬರೆದ ಟ್ಯಾಟೂ ಎಂದು ಹೇಳಿ ನಕ್ಕ ಬಿಡಿ, ನಂತರ ಯಾರಿಗೂ ನಿಮ್ಮನ್ನು ಪ್ರಶ್ನಿಸುವ ಧೈರ್ಯ ಬರಲ್ಲ.



Click it and Unblock the Notifications