For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಸಹಜ ಜೀವನಕ್ಕೆ ಮರಳಲು ಎಷ್ಟು ಸಮಯ ಬೇಕಾಗುವುದು?

|

ಮಗುವಿನ ಜನನದ ನಂತರದ ದಿನಗಳು ಅಷ್ಟು ಸುಲಭವಾಗಿರುವುದಿಲ್ಲ. ಅದರಲ್ಲೂ ಮೊದಲನೆ ಮಗುವಾಗಿದ್ದರೆ ಎಲ್ಲವೂ ಹೊಸತು ಹೊಸತು. ತಾಯಿಗೆ ಮತ್ತು ಮಗುವಿಗೆ ವಿಶೇಷ ಆರೈಕೆ ಮಾಡಬೇಕಾಗಿರುವ ದಿನಗಳವು. ತಾಯಿಯಾದ ನಂತರ ಬಾಣಂತನ ಸರಿಯಾಗಿ ಮಾಡಿಕೊಂಡರೆ ಅಥವಾ ಮಾಡಿಸಿಕೊಂಡರೆ ಮಾತ್ರವೇ ಆರೋಗ್ಯ ಉತ್ತಮವಾಗಿರುವುದಕ್ಕೆ ಸಹಾಯವಾಗುತ್ತದೆ.

ನಿಮ್ಮ ಮಗು ಹೊಟ್ಟೆಯಲ್ಲಿದ್ದಾಗ ಆದ ಹಾರ್ಮೋನಿನ ಬದಲಾವಣೆಗಳು ಪುನಃ ಸಹಜ ಸ್ಥಿತಿಗೆ ಬರುವುದು ಸೇರಿದಂತೆ, ದೇಹದ ಅಂಗಗಳಲ್ಲಾದ ಎಲ್ಲಾ ಪ್ರಮುಖ ಬದಲಾವಣೆಗಳು ಕೂಡ ಸಹಜವಾಗುವುದಕ್ಕೆ ಬೇಕಾಗುವ ಸಮಯ ಇದಾಗಿರುತ್ತದೆ. ಗಾಯ ಗುಣವಾಗುವುದು, ನಿಮ್ಮ ಮನಸ್ಸು ಪ್ರಶಾಂತವಾಗುವುದು ಸೇರಿದಂತೆ ಹಲವು ವಿಶೇಷ ಘಳಿಗೆಗಳಿಗೆ ಸಾಕ್ಷಿಯಾಗುತ್ತದೆ ಈ ಸಮಯ.

ಮಗುವಿಗೆ ಎದೆಹಾಲು ಉಣಿಸುವುದು, ಕಡಿಮೆಯಾಗುವ ನಿದ್ದೆ, ತಾಯಿಯ ಜವಾಬ್ದಾರಿಗಳ ನಿರ್ವಹಣೆ ಎಲ್ಲವೂ ಕೂಡ ಹೊಂದಾಣಿಕೆಯಾಗುವುದಕ್ಕೆ ಕನಿಷ್ಟವೆಂದರೂ ಆರು ತಿಂಗಳ ಅವಧಿ ಬೇಕಾಗುತ್ತದೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಇದು ಸಮುದ್ರದ ಉಬ್ಬರವಿಳಿತದಂತೆ!

ಆದರೆ ಈ ಆರು ತಿಂಗಳ ಅವಧಿ ಅಥವಾ ಗುಣವಾಗುವ ಅವಧಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿರುತ್ತದೆ. ಒಂದು ವೇಳೆ ಮೂರನೇ ಮಗುವಿಗೆ ತಾಯಿಯಾಗುತ್ತಿರುವ ಮಹಿಳೆಯು ಹೆರಿಗೆಯ ಸಮಯದಲ್ಲಿ 20 ನಿಮಿಷ ಮಗುವಿನ ತಳ್ಳುವಿಕೆ ನಡೆಸಿದ್ದರೆ ಆಕೆಯ ಗುಣವಾಗುವ ಅವಧಿಯು 40 ಘಂಟೆ ನೋವು ತಿಂದು ಮೂರು ಗಂಟೆ ತಳ್ಳುವಿಕೆಯಲ್ಲಿ ತೊಡಗಿದ ಚೊಚ್ಚಲ ಹೆರಿಗೆಯ ಮಹಿಳೆಗಿಂತ ಭಿನ್ನವಾಗಿರುತ್ತದೆ. ಇನ್ನು ಸಿ-ಸೆಕ್ಷನ್ ಗೆ ಒಳಗಾದ ಮಹಿಳೆಯು ಗುಣವಾಗುವಿಕೆಯೂ ಕೂಡ ವಿಭಿನ್ನವಾಗಿರುತ್ತದೆ. ಪ್ರತಿಯೊಂದು ಗರ್ಭಧಾರಣೆ ಹೇಗೆ ವಿಭಿನ್ನವೋ ಅದೇ ರೀತಿ ಹೆರಿಗೆ ಮತ್ತು ಅವರು ಗುಣವಾಗುವಿಕೆಯೂ ಕೂಡ ಭಿನ್ನವಾಗಿರುತ್ತದೆ. ಆದರೆ ಕೆಲವು ಒಂದೇ ರೀತಿಯ ಚಿಹ್ನೆಗಳನ್ನು ಗುರುತಿಸಬಹುದಾಗಿದೆ.

ಪ್ರಸವಾ ನಂತರದ ದಿನಗಳಲ್ಲಿ ನಿಮ್ಮ ದೇಹ ಮತ್ತು ಮನಸ್ಸಿನಿಂದ ಏನನ್ನು ನಿರೀಕ್ಷಿಸಬಹುದು. ಯಾವ ರೀತಿಯ ಬದಲಾವಣೆಗಳಿಗೆ ನೀವು ಒಗ್ಗಿಕೊಳ್ಳಬೇಕಾಗುತ್ತದೆ ಎಂಬ ಕೆಲವು ಅಂಶಗಳ ಹೈಲೆಟ್ ಇಲ್ಲಿದೆ ನೋಡಿ.

ವಾರ 1- ಸಹಜ ಹೆರಿಗೆಯ ನಂತರದ ದೈಹಿಕ ಸ್ಥಿತಿ

ವಾರ 1- ಸಹಜ ಹೆರಿಗೆಯ ನಂತರದ ದೈಹಿಕ ಸ್ಥಿತಿ

ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಂದಾಜು ಒಂದು ವಾರದ ಅಥವಾ ಅದಕ್ಕಿಂತಲೂ ಕಡಿಮೆ ದಿನಗಳವರೆಗೆ ನೀವು ಆಸ್ಪತ್ರೆಯಲ್ಲೇ ಕಳೆಯಬೇಕಾಗುತ್ತದೆ. ಸಹಜ ಹೆರಿಗೆಯೇ ಆಗಿದ್ದರೂ ನಿಮ್ಮ ಯೋನಿಯ ಎಷ್ಟು ಭಾಗ ಹರಿದಿದೆ? ರಕ್ತಸ್ರಾವದ ಮಿತಿ ಹೇಗಿದೆ ಇತ್ಯಾದಿ ಗಣನೆಗೆ ಬರುತ್ತದೆ. ಖಂಡಿತ ನಿಮಗೆ ಯೋನಿಯ ಭಾಗದ ನೋವು ಕೆಲವು ದಿನಗಳವರೆಗೆ ಇದ್ದೇ ಇರುತ್ತದೆ.

ಪೆರಿನಿಯಲ್ ನೋವು ಈ ಸಮಯದಲ್ಲಿ ಸಾಮಾನ್ಯವಾಗಿರುತ್ತದೆ. ರಕ್ತವು ಕೆಂಪು ವರ್ಣದಲ್ಲಿದ್ದು ದಿನಗಳು ಕಳೆದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಎದೆಹಾಲು ಉಣಿಸುವಾಗ ವಿಶೇಷವಾಗಿ ಕಡಿಮೆ ಸಂಕೋಚನವನ್ನು ಅನುಭವಿಸುತ್ತೀರಿ.ಇದರಿಂದಾಗಿ ಗರ್ಭಾಶಯವು ಗರ್ಭಧಾರಣೆಯಾಗುವುದಕ್ಕೂ ಮುಂಚೆ ಇರುವ ಗಾತ್ರಕ್ಕೆ ಮರಳಲು ಪ್ರಯತ್ನಿಸುತ್ತದೆ.

ಸಿಸೇರಿಯನ್ ನಂತರದ ದೈಹಿಕ ಸ್ಥಿತಿಗತಿ

ಸಿ-ಸೆಕ್ಷನ್ ಆದ ನಂತರ ಅಥವಾ ಸಿಸೇರಿಯನ್ ಆದ ನಂತರ ಹೆಚ್ಚಿನ ಎಲ್ಲಾ ಚಲನೆಯೂ ಕಷ್ಟವಾಗಿರುತ್ತದೆ ಮತ್ತು ಏಳುವುದಕ್ಕೂ ಕಷ್ಟವಾಗುತ್ತದೆ. ಹಾಸಿಗೆಯಿಂದ ಏಳುವುದಕ್ಕೂ ಕೂಡ ಇನ್ನೊಬ್ಬರ ಸಹಾಯ ಬೇಕಾಗುತ್ತದೆ. ಆದರೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದಕ್ಕಾಗಿ ಹೆಚ್ಚು ನಡೆಯುವುದು ಬಹಳ ಮುಖ್ಯವಾಗಿರುತ್ತದೆ.

ಮಾನಸಿಕ ಆರೋಗ್ಯ ಸ್ಥಿತಿ

ಮೂರನೇ ದಿನವೂ ಕೂಡ ಭಾವನಾತ್ಮಕವಾಗಿ ಬಹಳ ಕಷ್ಟವಾಗಿರುವ ದಿನವೆಂದೇ ಪರಿಗಣಿಸಲಾಗುತ್ತದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಮಟ್ಟ ಕುಸಿಯುತ್ತದೆ. ಮಗು ಎದೆ ಹಾಲು ಸೇವಿಸುವಾಗ ದಿನವಿಡೀ ಪ್ರೊಲ್ಯಾಕ್ಟಿನ್ ಮತ್ತು ಆಕ್ಸಿಟೋಸಿಸ್ ಮಟ್ಟವು ಅಧಿಕವಾಗುತ್ತದೆ ಎಂದು ಲಾಸ್ ಏಂಜಲೀಸ್ ನಲ್ಲಿ ಪ್ರಸೂತಿ ತಜ್ಞೆಯಾಗಿರುವ ಜೊಸೆಲಿನ್ ಬ್ರೌನ್ ಅವರು ಅಭಿಪ್ರಾಯ ಪಡುತ್ತಾರೆ. ನಿದ್ರಾಹೀನತೆಯ ಸಮಸ್ಯೆ ಕಾಡುವುದರಿಂದಾಗಿ ಸಾಕಷ್ಟು ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ ಮತ್ತು ಏನೂ ಸರಿಯಾಗಿಲ್ಲ ಎಂಬ ಭಾವನೆ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ಒಂದು ವೇಳೆ ನಿಮ್ಮದು ಸಹಜ ಹೆರಿಗೆಯಾಗಿದ್ದರೆ ಐಸ್ ಪ್ಯಾಕ್ ನ ಬಳಕೆ ಮಾಡಿ ಅಥವಾ ಹೆಪ್ಪುಗಟ್ಟಿರುವ ಪ್ಯಾಡ್ ಗಳ ಬಳಕೆಯನ್ನು ಮಾಡಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಅಥವಾ ವಿಸರ್ಜನೆಯ ನಂತರ ಬೆಚ್ಚಗಿನ ನೀರಿನ ಸ್ಪ್ರೇ ಮಾಡಬಹುದು. ಟೈಲೆನಾಲ್ ಅಥವಾ ಅಡ್ವಿಲ್ ನ್ನು ನಿಯಮಿತವಾಗಿ ತೆಗೆದುಕೊಳ್ಳಿ. ನೋವಿನ ಬಗ್ಗೆ ಯೋಚಿಸುತ್ತಿದ್ದರೆ ನೋವು ಹೆಚ್ಚೆನಿಸುತ್ತದೆ ಹಾಗಾಗಿ ಅದರಿಂದ ಸ್ವಲ್ಪ ಹೊರಗಡೆ ಬರಲು ಪ್ರಯತ್ನಿಸಿ. ಸಾಕಷ್ಟು ನೀರು ಕುಡಿಯಿರಿ. ಹೆಚ್ಚಿನ ಆಸ್ಪತ್ರೆಗಳು ನಿಮ್ಮನ್ನು ಕೂಡಲೇ ಮನೆಗೆ ತೆರಳಲು ಬಿಡುವುದಿಲ್ಲ. ಹಾಗಾಗಿ ಆದಷ್ಟು ಆರಾಮಾಗಿರಿ.

ಸಿ ಸೆಕ್ಷನ್ ಆಗಿರುವತಾಯಂದಿರು ಮಾಡಬೇಕಿರುವ ಪ್ರಮುಖ ಕೆಲಸವೆಂದರೆ ಗಾಯವನ್ನು ಸ್ವಚ್ಛವಾಗಿಡುವುದು ಮತ್ತು ಒಣಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸ್ನಾನದ ನಂತರ ಗಾಯಕ್ಕೆ ಗಾಳಿಯಾಡಲು ಬಿಡಬೇಕು. ಶುದ್ಧ ಬಟ್ಟೆಯಿಂದ ಒರೆಸಬೇಕು. ನಿಮ್ಮ ಹೇರ್ ಡ್ರೈಯರ್ ನ್ನು ಕೂಲ್ ಗೆ ಇಡಿ ಮತ್ತು ಅದನ್ನು ನಿಮ್ಮ ಗಾಯಕ್ಕೆ ತೋರಿಸಿ. ನಿಮ್ಮ ದೇಹದ ತಾಪಮಾನವನ್ನು ದಿನಕ್ಕೆ 2 ರಿಂದ ನಾಲ್ಕು ಬಾರಿ ಪರಿಶೀಲನೆಗೆ ಒಳಪಡಿಸುವುದು ಬಹಳ ಮುಖ್ಯ. ಅದರಲ್ಲೂ ಮೊದಲ 72 ಘಂಟೆಗಳು ಬಹಳ ಜಾಗರೂಕತೆ ಬೇಕಾಗುತ್ತದೆ. ಮೂತ್ರ ಅಥವಾ ಕಿಡ್ನಿ ಸೋಂಕು ಬೇಗನೆ ಆಗುವ ಸಾಧ್ಯತೆಗಳಿರುವುದರಿಂದಾಗಿ ಜಾಗರೂಕರಾಗಿರಬೇಕಾದ ಅಗತ್ಯತೆ ಇದೆ.

ವಾರ 2- ಸಹಜ ಹೆರಿಗೆಯ ನಂತರದ ದೈಹಿಕ ಸ್ಥಿತಿ

ವಾರ 2- ಸಹಜ ಹೆರಿಗೆಯ ನಂತರದ ದೈಹಿಕ ಸ್ಥಿತಿ

ಕೆಲವು ಮಹಿಳೆಯರಿಗೆ ರಕ್ತಸ್ರಾವವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ ಇನ್ನೂ ಕೆಲವರಿಗೆ ಆರು ವಾರಗಳವರೆಗೂ ಇರುತ್ತದೆ.ಎರಡೂ ಸಂಪೂರ್ಣ ಸಹಜವೇ ಆಗಿರುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ರಕ್ತಸ್ರಾವ ಅಧಿವಾಗಿರುವುದಿಲ್ಲ. ಕೆಲವರಿಗೆ ಯೋನಿಯ ತುರಿಕೆ ಪ್ರಾರಂಭವಾಗಬಹುದು. ಇದು ಗಾಯ ಗುಣವಾಗುತ್ತಿರುವುದರ ಪರಿಣಾಮವಾಗಿ ಆಗುತ್ತದೆ. ಸೂಚರ್ ಗಳು ದ್ರವದಿಂದ ಬೇರ್ಪಡುತ್ತದೆ ಮತ್ತು ಇದು ತುರಿಕೆಯನ್ನುಂಟು ಮಾಡುತ್ತಿರಬಹುದು. ಇದಕ್ಕಾಗಿ ಭಯ ಪಡುವ ಅಗತ್ಯವಿರುವುದಿಲ್ಲ. ತುರಿಕೆಯು ಗಾಯವನ್ನು ಗುಣವಾಗಿಸುತ್ತಿರುವ ಉತ್ತಮ ಸಂಕೇತವೆಂದು ಹೇಳುತ್ತಾರೆ ಬ್ರೌನ್. ತುರಿಕೆಯಾಗುತ್ತಿದೆ ಎಂದರೆ ತಾಯಿಯಾದವಳು ಈಗ ಗಾಯದಿಂದ ಗುಣವಾಗುವ ಸಮಯ ಬಂದಿದೆ ಎಂದರ್ಥ.

ಸಿ-ಸೆಕ್ಷನ್ ಆದ ನಂತರದ ದೈಹಿಕ ಸ್ಥಿತಿ

ನಿಮಗೆ ಈಗಲೂ ನೋವಿನ ಅನುಭವವಾಗುತ್ತಿರುತ್ತದೆ. ಅಷ್ಟು ಸುಲಭವಾಗಿ ಅಲ್ಲದೇ ಇದ್ದರೂ ಸ್ವಲ್ಪ ಆಚೀಚೆ ತಿರುಗಾಡುವುದಕ್ಕೆ ಸಾಧ್ಯವಾಗುತ್ತಿರುತ್ತದೆ. ಗಾಯವು ಗುಣವಾಗುತ್ತಿರುವುದರಿಂದಾಗಿ ಸ್ವಲ್ಪ ತುರಿಕೆ ಕಾಣಿಸಿಕೊಳ್ಳಲೂ ಬಹುದು.

ಮಾನಸಿಕ ಆರೋಗ್ಯದ ಸ್ಥಿತಿ

ಪ್ರಸವಾ ನಂತರದ ಮಾನಸಿಕ ಖಿನ್ನತೆ ಖಂಡಿತವಾಗಲೂ ವಿಭಿನ್ನವಾಗಿರುವಂತಹದ್ದು. ಆದರೆ ಇದೀಗ ನೀವು ಹೊಸ ಮಾನಸಿಕ ಸ್ಥಿತಿಯನ್ನು ತಲುಪಿರುತ್ತೀರಿ. ಮಗು, ಮಗುವಿನ ಆರೈಕೆಯ ಬಗ್ಗೆ ಕಾಳಜಿ ಶುರುವಾಗಿರುತ್ತದೆ. ತಾಯ್ತನವನ್ನು ಸುಖಿಸುವ ಸಮಯವಿದು. ಒಂದು ವೇಳೆ ಇಂತಹ ಉತ್ತಮ ಸ್ಥಿತಿಯನ್ನು ತಲುಪದೆ ಆತ್ಮಹತ್ಯೆ ಆಲೋಚನೆ, ನಿದ್ದೆ-ಊಟ ಸೇರದೆ ಇರುವುದು, ಮಾನಸಿಕವಾಗಿ ಅಹಿತ ಅನುಭವಿಸುತ್ತಿದ್ದು, ಯಾವುದೋ ಕಾರಣದಿಂದ ಅತಿಯಾದ ಆತಂಕ ಮತ್ತು ದುಃಖದಿಂದ ನೀವು ಬಳಲುತ್ತಿದ್ದರೆ ಕೂಡಲೇ ನಿಮ್ಮ ವೈದ್ಯರ ಬಳಿ ಚರ್ಚೆ ಮಾಡಿ.

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ನೀವು ಒಂದು ವೇಳೆ ಎದೆಹಾಲು ಉಣಿಸುತ್ತಿದ್ದರೆ ಇದೀಗ ನೀವು ಅದರಲ್ಲೇ ಆಳವಾಗಿ ಮುಳುಗುವಂತಾಗುತ್ತದೆ. ನೋಯುವ ಮೊಲೆ ತೊಟ್ಟುಗಳನ್ನು ಜೋಪಾನ ಮಾಡಿಕೊಳ್ಳಿ. ಅದಕ್ಕಾಗಿ ಸಿಗುವ ಆಯಿಂಟ್ಮೆಂಟ್ ಗಳ ಬಳಕೆ ಮಾಡಬಹುದು. ಎದೆಹಾಲು ಗಿರಿಯದಂತೆ ಎಚ್ಚರವಹಿಸಿ. ಮೊಲೆ ತೊಟ್ಟುಗಳಲ್ಲಿ ಸರಿಯಾಗಿ ಮಗುವು ಚೀಪುವುದನ್ನು ಖಾತ್ರಿ ಮಾಡಿಕೊಳ್ಳಿ. ಒಂದು ವೇಳೆ ಮೊಲೆಗಳಲ್ಲಿ ಸಮಸ್ಯೆ ಇದ್ದರೆ ಕೂಡಲೇ ವೈದ್ಯರ ಬಳಿ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ.

ಪೊಟಾಷಿಯಂ ಅತ್ಯುತ್ತಮವಾಗಿರುವ ಆಹಾರಗಳ ಸೇವನೆ ಮಾಡಿ. ಮನೆಯ ಸುತ್ತಲೂ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಉತ್ತಮ ಆಹಾರ ಸೇವನೆಯು ನಿಮ್ಮ ಆರೋಗ್ಯವನ್ನು ವೃದ್ಧಿಸಬಲ್ಲದು ಎಂಬುದು ನಿಮ್ಮ ಗಮನದಲ್ಲಿ ಇರಲಿ.

ಸಹಜ ಹೆರಿಗೆಯ ನಂತರದ ದೈಹಿಕ ಸ್ಥಿತಿ

ಸಹಜ ಹೆರಿಗೆಯ ನಂತರದ ದೈಹಿಕ ಸ್ಥಿತಿ

ಗರ್ಭಾಶಯವು ಗರ್ಭಧಾರಣೆಯ ಹಿಂದಿನ ಗಾತ್ರಕ್ಕೆ ಮರಳಿದಾಗ ರಕ್ತಸ್ರಾವವು ನಿಲ್ಲುತ್ತದೆ.ಹೆಚ್ಚಿನವರಿಗೆ ವ್ಯಾಯಾಮ ಮತ್ತು ಲೈಂಗಿಕ ಚಟುವಟಿಕೆಗಳಿಗಾಗಿ ಅವಕಾಶ ನೀಡಲಾಗುತ್ತದೆ. ಆದರೆ ಹೆಚ್ಚಿನವರು ಅದಕ್ಕೆ ಇನ್ನೂ ಸಿದ್ಧರಿರುವುದಿಲ್ಲ.

"ಆರರಿಂದ ಎಂಟು ವಾರ ಕಳೆದ ಹೆಚ್ಚಿನ ತಾಯಂದಿರನ್ನು ಕೇಳಿದಾಗ ತಮ್ಮ ರಕ್ತಸ್ರಾವ ನಿಂತಿದೆ ಎಂದೇ ಹೇಳುತ್ತಾರೆ. ವಿರಳಾತಿ ವಿರಳ ಕೇಸ್ ಗಳಲ್ಲಿ ಪುನಃ ಅವರ ಮಾಸಿಕ ಕಂತುಗಳು ಆರಂಭವಾಗಿರುವ ಸಾಧ್ಯತೆಯೂ ಇರುತ್ತದೆ. ಯಾಕೆಂದರೆ ನಿಮ್ಮ ಗರ್ಭಾಶಯವು ಜರಾಯು ಹುರುಪಿನಿಂದ ತಳ್ಳಲ್ಪಟ್ಟಿರುತ್ತದೆ.ಹಾಗಾಗಿ ಕೆಲವು ದಿನಗಳ ನಂತರ ಪುನಃ ಕೆಂಪು ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.

ಸಿ-ಸೆಕ್ಷನ್ ಆದ ನಂತರದ ದೈಹಿಕ ಸ್ಥಿತಿ

ಸಿ-ಸೆಕ್ಷನ್ ಆದ ನಂತರದ ದೈಹಿಕ ಸ್ಥಿತಿ

ಕೆಲವರು ಲೈಂಗಿಕ ಕ್ರಿಯೆ ಮತ್ತು ವ್ಯಾಯಾಮಕ್ಕೆ ಸಜ್ಜಾಗಿರುತ್ತಾರೆ. ನೀವೀಗ ಡ್ರೈವ್ ಮಾಡುವುದಕ್ಕೆ ಮತ್ತು ನಿಮ್ಮ ಮಗುವಿನ ತೂಕಕ್ಕಿಂತ ಕಡಿಮೆ ಇರುವ ಭಾರವನ್ನು ಎತ್ತುವುದಕ್ಕೆ ಯೋಗ್ಯರಾಗಿರುತ್ತೀರಿ. ಆದರೆ ಅತಿಯಾದ ಭಾರ ಎತ್ತುವಿಕೆಯನ್ನು ಮಾಡದೇ ಇರುವುದು ಒಳಿತು. ನಿಮ್ಮ ಗಾಯ ಸಂಪೂರ್ಣ ಒಣಗಿರುತ್ತದೆ ಮತ್ತು ಯಾವುದೇ ರೀತಿಯ ನೋವು ಕಾಣಿಸುವುದಿಲ್ಲ. ಆದರೆ ಗಾಯದ ಸುತ್ತ ಸಣ್ಣ ತುರಿಕೆ ಆಗುವ ಸಾಧ್ಯತೆ ಇದೆ. ನಡೆಯುವುದು ಬಹಳ ಒಳ್ಳೆಯದು. ಆಪರೇಷನ್ ನಿಂದ ನೀವು ಇದೀಗ ಸಂಪೂರ್ಣ ಗುಣಮುಖರಾಗಿರುತ್ತೀರಿ. ನಿಧಾನವಾಗಿ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ಮಾನಸಿಕ ಆರೋಗ್ಯದ ಸ್ಥಿತಿ

ಒಂದು ವೇಳೆ ಯಾವುದೇ ರೀತಿಯ ಮಾನಸಿಕ ಅಥವಾ ಭಾವನಾತ್ಮಕ ತೊಂದರೆಗಳಿದ್ದಲ್ಲಿ ನಿಮ್ಮ ವೈದ್ಯರ ಬಳಿ ತೆರಳುವುದು ಸೂಕ್ತ. ಸಾಮಾನ್ಯ ಒತ್ತಡ ಪ್ರತಿ ಮಹಿಳೆಗೂ ಇದ್ದೇ ಇರುತ್ತದೆ. ಆದರೆ ಅದಕ್ಕೂ ಮೀರಿದ ತಿರಸ್ಕಾರ ಭಾವ, ಮಾನಸಿಕ ಖಿನ್ನತೆ ಅಥವಾ ಇತ್ಯಾದಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ವೈದ್ಯರ ಬಳಿ ಚರ್ಚಿಸುವುದು ಒಳ್ಳೆಯದು.

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ತಾಂತ್ರಿಕವಾಗಿ ಆರು ತಿಂಗಳ ಅವಧಿಗೆ ಬಾಣಂತನದ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಲಾದರೂ ಕೂಡ ಹೆಚ್ಚಿನ ಮಹಿಳೆಯರಿಗೆ ಒಂದು ವರ್ಷದವರೆಗೂ ತಮ್ಮನ್ನ ತಾವು ಮಗುವಿನಿಂದ ದೂರವಿರಲು ಮನಸ್ಸು ಕೇಳುವುದಿಲ್ಲ. ಹಾಗಾಗಿ ನಿಮ್ಮೊಂದಿಗೆ ನೀವು ಬಹಳ ಸೌಮ್ಯವಾಗಿ ಇರಬೇಕಾಗುತ್ತದೆ. ನೀವು ವ್ಯಾಯಾಮ ಮಾಡುವುದಕ್ಕೆ ತಯಾರಾಗಿದ್ದರೆ ನಿಧಾನವಾಗಿ ಅದನ್ನು ಪ್ರಾರಂಭಿಸುವುದು ಸೂಕ್ತ. ಇದು ಲೈಂಗಿಕ ಪ್ರಕ್ರಿಯೆಗೂ ಅನ್ವಯಿಸುತ್ತದೆ. ನೀವು ಬಾಣಂತನ ಮುಗಿಸಿಕೊಂಡಿದ್ದೀರಿ ಎಂದರೆ ಎಲ್ಲವುದಕ್ಕೂ ನೀವು ಸಿದ್ಧವೆಂದಲ್ಲ. ನಿಮ್ಮ ದೇಹ ಯಾವುದಕ್ಕೆ ಒಗ್ಗುತ್ತದೆ, ಯಾವುದು ಅಸಾಧ್ಯವೆನಿಸುತ್ತದೆ ಎಂಬುದರ ಪರಿಕಲ್ಪನೆ ಇರಲೇಬೇಕಾಗುತ್ತದೆ. ಕೆಲವೇ ಕೆಲವು ಮಹಿಳೆಯರು ಹೆರಿಗೆ ನಂತರ ಮಾಡುವ ಮೊದಲ ಲೈಂಗಿಕ ಕ್ರಿಯೆಯಲ್ಲಿ ನೋವಾಗಿರುವ ಅನುಭವ ಹೊಂದಿರುತ್ತಾರೆ. ಈ ಅವಧಿಯ ಬಳಲಿಕೆ ಅಧಿಕವಿರುತ್ತದೆ.

ಆರು ತಿಂಗಳ ಬಳಿಕ

ಆರು ತಿಂಗಳ ಬಳಿಕ

ಒಂದು ವೇಳೆ ಹೆರಿಗೆಯ ನಂತರ ನಿಮ್ಮ ಕೂದಲು ಉದುರುವುದಕ್ಕೆ ಪ್ರಾರಂಭಿಸಿದ್ದರೆ ಅದು ಈಗ ನಿಲ್ಲಬೇಕು.ಈ ಸಮಯಕ್ಕೆ ನಿಮ್ಮ ಮೂತ್ರಕೋಶದ ಕಂಟ್ರೋಲ್ ನಿಮಗೆ ಸಿಗಬೇಕು. ನಿಮ್ಮ ಕೆಲಸದ ಒತ್ತಡದ ಅನುಸಾರ ನಿಮ್ಮ ಎದೆಹಾಲು ಈಗ ಒಣಗುವುದಕ್ಕೂ ಪ್ರಾರಂಭವಾಗಿರಬಹುದು. ನಿಮ್ಮ ಮಾಸಿಕ ಕಂತು ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. (ಒಂದು ವರ್ಷದವರೆಗೂ ಕೆಲವರಿಗೆ ಬರದೇ ಇರಬಹುದು.)

ಸಿ-ಸೆಕ್ಷನ್ ಆದ ನಂತರದ ದೈಹಿಕ ಸ್ಥಿತಿ

ಸಿ-ಸೆಕ್ಷನ್ ಆದ ನಂತರದ ದೈಹಿಕ ಸ್ಥಿತಿ

ಒಂದು ಅಧ್ಯಯನವು ಹೇಳುವ ಪ್ರಕಾರ ಸಿ-ಸೆಕ್ಷನ್ ಆಗಿರುವ ಮಹಿಳೆಯರು ಆರು ತಿಂಗಳ ಅವಧಿಯ ನಂತರ ಹೆಚ್ಚು ಬಳಲುತ್ತಾರೆ. ಇದು ಖಂಡಿತ ನಿಮ್ಮ ಮಗು ಎಷ್ಟು ಉತ್ತಮ ರೀತಿಯಲ್ಲಿ ನಿದ್ರಿಸುತ್ತದೆ ಎಂಬುದನ್ನು ಆಧರಿಸಿರುತ್ತದೆ. ಸಹಜ ಹೆರಿಗೆಯಂತೆಯೇ ಸಿ ಸೆಕ್ಷನ್ ಆದವರಿಗೂ ಕೂಡ ಎದೆಹಾಲು ಒಣಗುವುದಕ್ಕೆ ಪ್ರಾರಂಭವಾಗಿರುತ್ತದೆ. ಆದರೆ ಖಂಡಿತ ಅದು ನಿಮ್ಮ ಕೆಲಸವನ್ನೇ ಅವಲಂಬಿಸಿರುತ್ತದೆ. ನಿಮ್ಮ ಮಾಸಿಕ ಋತುಚಕ್ರ ಯಾವುದೇ ಅವಧಿಗೂ ಪುನಃ ಪ್ರಾರಂಭವಾಗಬಹುದು.

ಮಾನಸಿಕ ಆರೋಗ್ಯದ ಸ್ಥಿತಿ

ನಿಮ್ಮ ಮನಸ್ಸು ಚಂಚಲತೆಗೆ ಸಿಲುಕುತ್ತಿದ್ದರೆ ಅದಕ್ಕೆ ಕಾರಣ ಹಲವು ಇರಬಹುದು. ಮಗುವು ಚೆನ್ನಾಗಿ ನಿದ್ರಿಸುತ್ತಿದ್ದು ನಿಮಗೆ ಆರಾಮದಾಯಕವಾಗಿದ್ದರೆ ಖಂಡಿತ ನೀವು ಧನಾತ್ಮಕ ಮನಸ್ಸನ್ನೇ ಹೊಂದಿರುತ್ತೀರಿ. ಒಂದು ವೇಳೆ ಒತ್ತಡದ ಯಾವುದೇ ರೀತಿಯ ಸನ್ನಿವೇಶ ಎದುರಿಸುತ್ತಿದ್ದರೆ ಅದನ್ನು ಗಮನಿಸುವುದು ಬಹಳ ಮುಖ್ಯವಾಗಿರುತ್ತದೆ.

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ನಿಮ್ಮ ಚೇತರಿಕೆಗೆ ಸಹಾಯ ಮಾಡುವ ಸಲಹೆಗಳು:

ಈ ಹಂತದಲ್ಲಿ ವ್ಯಾಯಾಮ ಬಹಳ ಮುಖ್ಯವಾಗಿರುತ್ತದೆ. ಮಾನಸಿಕ ಮತ್ತು ದೈಹಿಕ ಎರಡೂ ರೀತಿಯ ಆರೋಗ್ಯ ಕಾಪಾಡುವುದಕ್ಕೆ ಇದು ನಿಮಗೆ ನೆರವಿಗೆ ಬರುತ್ತದೆ. ನಿಮ್ಮ ಬೆನ್ನು ಹುರಿ ಮತ್ತು ಕಿಬ್ಬೊಟ್ಟೆಯನ್ನು ಬಲಪಡಿಸಬಹುದಾದ ಯಾವುದೇ ವ್ಯಾಯಾಮವನ್ನು ಕೂಡ ಮಾಡಬಹುದು.

  • ನೀವು ಪುನಃ ನಿಮ್ಮ ಸಹಜ ಸ್ಥಿತಿಗೆ ಬರುವುದಕ್ಕೆ ಬಯಸುತ್ತಿರಬಹುದು ಆದರೆ ನಿಮ್ಮ ದೇಹ ಅದಕ್ಕೆ ಸಹಕಾರ ನೀಡದೇ ಇರುವ ಸಾಧ್ಯತೆ ಇರುತ್ತದೆ. ಹೆಚ್ಚುವರಿ ಕೆಲವು ಕೆಜಿಗಳು ಅಂದರೆ ನಿಮ್ಮ ತೂಕ ಗಮನಿಸಬಹುದಾದಷ್ಟು ಹೆಚ್ಚಳವಾಗಿರುವ ಸಾಧ್ಯತೆ ಇರುತ್ತದೆ. ಗರ್ಭಧಾರಣೆಗೂ ಮುನ್ನ ನಿಮ್ಮ ಎದೆ ಹೇಗಿತ್ತೋ ಹಾಗಿರದೆ ಹಾಲು ತುಂಬಿರುವ ಕಾರಣ ಸ್ವಲ್ಫ ವಿಭಿನ್ನವಾಗಿ ಕಾಣುತ್ತಿರುತ್ತದೆ.
  • ಸಿ-ಸೆಕ್ಷನ್ ಆಗಿದ್ದರೆ

    ಸಿ-ಸೆಕ್ಷನ್ ಆಗಿದ್ದರೆ

    ನಿಮ್ಮ ಗಾಯ ಸಂಪೂರ್ಣ ಒಣಗಿರುತ್ತದೆ. ಮಾಸಿರುತ್ತದೆ. ಆದರೆ ಸಣ್ಣ ಕಲೆಯೊಂದು ಹಾಗೆಯೇ ಇರುತ್ತದೆ. ಒಂದು ವೇಳೆ ಮತ್ತೊಂದು ಮಗು ಬೇಕು ಅನ್ನುವ ಆಲೋಚನೆ ಇದ್ದರೆ ಸಿ ಸೆಕ್ಷನ್ ಆಗಿರುವವರಿಗೆ 18 ತಿಂಗಳ ಅವಧಿಯ ಬ್ರೇಕ್ ನೀಡುವುದಕ್ಕೆ ವೈದ್ಯರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ. ಹೆರಿಗೆ ಮತ್ತು ಯೋನಿಯ ಅಪಾಯದ ಕಾರಣ ಈ ಸಲಹೆಯನ್ನು ನೀಡಲಾಗುತ್ತದೆ.

    ಮಾನಸಿಕ ಆರೋಗ್ಯದ ಸ್ಥಿತಿ

    ಮಾನಸಿಕ ಸ್ಥಿತಿಯ ಸಮತೋಲನ ಕಾಪಾಡಿಕೊಳ್ಳುವುದಕ್ಕೆ ನಿಮ್ಮ ನಿದ್ದೆಯ ಸಮಯ ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನಿಮ್ಮ ಮಗು ನಿಮಗೆ ನಿದ್ರಿಸುವುದಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ದರೆ ಖಂಡಿತ ನೀವು ಸ್ಥಿರವಾಗಿರುತ್ತೀರಿ. ವಾರಾಂತ್ಯದಲ್ಲಿ ಕಿರು ನಿದ್ದೆ, ಹಗಲಿನ ಸಣ್ಣ ನಿದ್ದೆಗಳನ್ನು ಅಭ್ಯಾಸವಿಟ್ಟುಕೊಂಡರೆ ಖಂಡಿತ ಸಮತೋಲನ ಕಾಪಾಡಿಕೊಳ್ಳುವುದಕ್ಕೆ ನೆರವಾಗಬಹುದು. ಆದರೆ ತೂಕ ಹೆಚ್ಚಳದ ಬಗ್ಗೆ ಎಚ್ಚರಿಕೆ ಇರಲಿ.

English summary

Postpartum Recovery Period: Tips and Timeline - What to Expect

Postpartum Recovery Period: Tips and Timeline - What to Expect, Read On This article.
X
Desktop Bottom Promotion