For Quick Alerts
ALLOW NOTIFICATIONS  
For Daily Alerts

ಅವಳಿ ಮಕ್ಕಳಾದರೆ ಬಾಣಂತಿ ದೇಹದಲ್ಲಾಗುವ ಬದಲಾವಣೆಗಳೇನು?

|

ಅವಳಿ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹಡೆದ ತಾಯಿಗೂ ಒಂದು ಮಗುವನ್ನು ಹಡೆದ ತಾಯಿಗೂ ಬಾಣಂತನ ಅವಧಿಯಲ್ಲಿ ತುಂಬಾನೇ ವ್ಯತ್ಯಾಸವಿರುತ್ತದೆ. ನಾರ್ಮಲ್‌ ಡೆಲಿವರಿಯಾದರೆ ಸ್ವಲ್ಪ ಬೇಗ ಚೇತರಿಸಿಕೊಳ್ಳಬಹುದು, ಆದರೆ ಸಿ ಸೆಕ್ಷನ್ ಆಗಿದ್ದರೆ ಚೇತರಿಸಿಕೊಳ್ಳಲು ಒಂದು ಮಗುವನ್ನು ಹಡೆದ ತಾಯಿಗಿಂತ ಹೆಚ್ಚಿನ ಸಮಯ ಬೇಕಾಗುವುದು.

ನಿಮ್ಮ ದೇಹ ಮೊದಲಿನ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗುವುದು, ಅದಕ್ಕೆ ತಾಳ್ಮೆ ಮುಖ್ಯ. ಸೆಲೆಬ್ರಿಟಿಗಳನ್ನು ನೋಡಿ ನಾನೂ ಅವರಂತೆಯೇ ಹರಿಗೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಬಳಕುವ ಬಳ್ಳಿಯಂತಾಗಬೇಕೆಂದು ನ್ಯೂಟ್ರಿಷಿಯನ್‌ ಆಹಾರಗಳನ್ನು ತೆಗೆದುಕೊಳ್ಳದೇ ಇರುವುದು, ಬೇಗನೆ ವ್ಯಾಯಾಮಕ್ಕೆ ಮರಳುವುದು ಸರಿಯಲ್ಲ, ನಿಮ್ಮ ದೇಹ ಸಂಪೂರ್ಣ ಚೇತರಿಸಿಕೊಳ್ಳಬೇಕು, ಜೊತೆಗೆ ಎರಡು ಮಕ್ಕಳ ಆರೈಕೆಯನ್ನು ಮಾಡಬೇಕಾಗುತ್ತೆ, ಅದಕ್ಕೆ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬೇಕು.

ಅವಳಿ ಅಥವಾ ತ್ರಿವಳಿ ಮಕ್ಕಳನ್ನು ಹೆರಿಗೆಯಾದರೆ ಬಾಣಂತನ ಹೇಗೆ ಭಿನ್ನವಾಗಿರುತ್ತೆ?

ಹೊಟ್ಟೆ ದೊಡ್ಡದಾಗಿರುತ್ತದೆ:

ಹೊಟ್ಟೆ ದೊಡ್ಡದಾಗಿರುತ್ತದೆ:

ಹೆರಿಗೆಯಾದ ಸ್ವಲ್ಪ ಹೊಟ್ಟೆ ಇರುತ್ತದೆ, ಆದರೆ ಅವಳಿ ಮಕ್ಕಳಿದ್ದರೆ ಇನ್ನು ಸ್ವಲ್ಪ ಅಧಿಕ ಹೊಟ್ಟೆ ಇರುತ್ತದೆ. ದೇಹ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಇರುವವರು ಹೊಟ್ಟೆ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುವುದುಂಟು, ಹಾಗೇ ಮಾಡಬೇಡಿ, ಇದು ನಿಮ್ಮ ಮುದ್ದಾದ ಅವಳಿ ಮಕ್ಕಳ ಜೊತೆ ತಾಯ್ತನ ಅನುಭವಿಸುವ ಸಮಯ. ಹೊಟ್ಟೆ ಬಂದಿದೆ ಜಿಮ್‌ ಮಾಡಬೇಕು, ವ್ಯಾಯಾಮ ಮಾಡಬೇಕು ಎಂದು ಯೋಚಿಸಬೇಡಿ. ಒಂದು 6 ತಿಂಗಳು ಆರಾಮವಾಗಿರಿ, ನಂತರ ನಿಧಾನಕ್ಕೆ ಸಣ್ಣ-ಪುಟ್ಟ ವ್ಯಾಯಾಮ ಮಾಡುತ್ತಾ ಹೊಟ್ಟೆಯನ್ನು ಕರಗಿಸಬಹುದು.

ಇನ್ನು ಹೆರಿಗೆಯಾದ ಬಳಿಕ ಹೊಟ್ಟೆ ಬರುತ್ತದೆ ಎಂದು ಕೆಲವರು ಬಟ್ಟೆ ಕಟ್ಟುವುದು, ಬೆಲ್ಟ್ ಹಾಕುವುದು ಮಾಡುತ್ತಾರೆ, ನಿಮ್ಮದು ಸಿ ಸೆಕ್ಷನ್‌ ಹೆರಿಗೆಯಾಗಿದ್ದರೆ 3 ತಿಂಗಳವರೆಗೆ ಬೆಲ್ಟ್ ಹಾಕಬೇಡಿ, ಒಂದು ತಿಂಗಳ ಒಳಗಾಗಿ ಬೆಲ್ಟ್ ಹಾಕಿದರೆ ಹೊಲಿಗೆ ಬಿಚ್ಚಬಹುದು. ಇನ್ನು ಹೆರಿಗೆಯಾದ 10-15 ದಿನದವರೆಗೆ ಕಿಬ್ಬೊಟ್ಟೆ ನೋವು ಇರುತ್ತದೆ. ಗರ್ಭಕೋಶ ಕುಗ್ಗುತ್ತಾ ಬರುವಾಗ ಆ ರೀತಿ ಇರುತ್ತದೆ. ಹೆರಿಗೆಯಾದ ಮೊದಲ ವಾರದಲ್ಲಿ ನೋವು ಸ್ವಲ್ಪ ಅಧಿಕವೇ ಇರುತ್ತದೆ.

ಸ್ತನಗಳು:

ಸ್ತನಗಳು:

ಸ್ತನಗಳಲ್ಲಿ ಹಾಲು ಸೋರುತ್ತಾ ಇರುತ್ತದೆ, ಇದು ನಿಮಗೆ ಕಿರಿಕಿರಿ ಅನಿಸಬಹುದು, ಆದರೆ ನಿಮ್ಮ ಮಕ್ಕಳು ಸರಿಯಾಗಿ ಹಾಲು ಕುಡಿಯಲಾರಂಭಿಸಿದಾಗ ಈ ರೀತಿ ಹಾಲು ಸೋರುವುದಿಲ್ಲ , ಅವಳಿ ಮಕ್ಕಳಿದ್ದಾಗ ಕೆಲವೊಮ್ಮೆ ಹಾಲು ಸಾಕಾಗುವುದಿಲ್ಲ. ಆರೋಗ್ಯಕರ ಆಹಾರಗಳನ್ನು ಸೇವಿಸಿ, ಸಾಕಷ್ಟು ನೀರು ಕುಡಿಯಿರಿ, ದಿನದಲ್ಲಿ 3 ಲೀಟರ್‌ ನೀರು ಕುಡಿಯಲೇಬೇಕು.

ರಕ್ತಸ್ರಾವ: ಅವಳಿ ಮಕ್ಕಳಾದವರಿಗೆ ರಕ್ತಸ್ರಾವ ಸ್ವಲ್ಪ ಅಧಿಕವಿರುತ್ತದೆ. ಒಂದು 10 ದಿನಗಳವರೆಗೆ ರಕ್ತಸ್ರಾವ ಸ್ವಲ್ಪ ಅಧಿವಿರುತ್ತದ, ನಂತರ ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ದಿನಗಳು ಕಳೆದಂತೆ ರಕ್ತಸ್ರಾವ ತುಂಬಾ ಕಡಿಮೆಯಾಗುವುದು. ಸ್ವಲ್ಪ-ಸ್ವಲ್ಪ ರಕ್ತಸ್ರಾವ 4-6 ವಾರಗಳವರೆಗೆ ಇರುತ್ತದೆ.

ಬೆನ್ನು ನೋವು:

ಬೆನ್ನು ನೋವು:

ಬೆನ್ನು ನೋವಿನ ಸಮಸ್ಯೆ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ, ಹೆರಿಗೆಯಾದ ಮೇಲೂ ಕಾಡುವುದು. ರಾತ್ರಿ ಸರಿಯಾಗಿ ನಿದ್ದೆ ಇಲ್ಲದಿರುವುದು, ಎರಡು ಮಕ್ಕಳಿಗೆ ಆಗಾಗ ಹಾಲುಣಿಸಲು ಎದ್ದು ಕೂರುವುದು ಈ ಎಲ್ಲಾ ಕಾರಣಗಳಿಂದಾಗಿ ಬೆನ್ನು ನೋವು ಕಾಡುವುದು. ನೀವು ಮಗುವಿಗೆ ಹಾಲುಣಿಸುವಾಗ ಬೆನ್ನಿಗೆ ಸಪೋರ್ಟ್ ಕೊಟ್ಟು ಕೂರುವುದರಿಂದ ಬೆನ್ನು ನೋವು ಕಡಿಮೆಯಾಗುವುದು.

ಸುಸ್ತು ಇರುತ್ತದೆ

ಸುಸ್ತು ಇರುತ್ತದೆ

ಅವಳಿ ಮಕ್ಕಳು ಇರುವಾಗ ಒಂದು ಮಗುವನ್ನು ಸಂಬಾಳಿಸಿದಕ್ಕಿಂತ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಎರಡು ಮಕ್ಕಳು ಒಟ್ಟಿಗೆ ಎದ್ದು ಅಳಲಾರಂಭಿಸುತ್ತದೆ, ಕೆಲವೊಮ್ಮೆ ಒಂದನ್ನು ಮಲಗಿಸಿದಾಗ ಮತ್ತೊಂದು ಎದ್ದು ಅಳಲಾರಂಭಿಸುತ್ತದೆ, ಇಬ್ಬರಿಗೂ ಹಾಲುಣಿಸಿ ನಿದ್ದೆಗೆ ಜಾರುವಷ್ಟರಲ್ಲಿ ಮೈಕೈ ಸುಸ್ತು ಹೆಚ್ಚುವುದು. ಈ ಸಮಯದಲ್ಲಿ ಬಾಣಂತಿಗೆ ಮನೆಯವರ ಸಪೋರ್ಟ್ ಚೆನ್ನಾಗಿದ್ದರೆ ಸ್ವಲ್ಪವಾದರೂ ವಿಶ್ರಾಂತಿ ಸಿಗುವುದು.

ಬಾಣಂತಿ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು?

ಬಾಣಂತಿ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು?

* ಬಾಣಂತಿಗೆ ಚೇತರಿಸಿಕೊಳ್ಳಲು ಕಡಿಮೆಯೆಂದರೂ 6 ವಾರಗಳು ಬೇಕು. 3-6 ತಿಂಗಳು ರೆಸ್ಟ್ ತೆಗೆದರೆ ತುಂಬಾ ಒಳ್ಳೆಯದು.

* ಸಿ ಸೆಕ್ಷನ್ ಆಗಿದ್ದರೆ 6 ವಾರಗಳ ಬಳಿಕ ಕೂಡ ಕತ್ತರಿಸಿದ ಜಾಗದಲ್ಲಿ ನೋವು ಕಂಡು ಬಂದರೆ ಅದು ಸಾಮಾನ್ಯ ನೋವು ಕಡೆಗಣಿಸಬೇಡಿ, ನಿಮ್ಮ ವೈದ್ಯರಿಗೆ ತಿಳಿಸಿ.

* ವೈದ್ಯರು ನೀಡಿದಂತ ವಿಟಮಿನ್‌ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ.

* ಸಾಕಷ್ಟು ನೀರು ಕುಡಿಯಿರಿ, ಇಲ್ಲದಿದ್ದರೆ ಮಲವಿಸರ್ಜನೆಗೆ ಕಷ್ಟವಾಗುವುದು.

* ಕಾರ್ಬ್ಸ್, ಫೈಬರ್, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರ, ಪ್ರೊಟೀನ್‌ ಇವುಗಳಿರುವ ಆಹಾರವನ್ನು ಸೇವಿಸಬೇಕು.

ವ್ಯಾಯಾಮ ಮಾಡಲು ಅವಸರ ಮಾಡಬೇಡಿ:

ವ್ಯಾಯಾಮ ಮಾಡಲು ಅವಸರ ಮಾಡಬೇಡಿ:

* ಮೈ ತೂಕ ಹೆಚ್ಚಾಗಿದೆ ಅಂತ ವ್ಯಾಯಾಮ ಮಾಡಲು ಅವಸರ ಬೇಡ, ಮೊದಲಿಗೆ ನಿಮ್ಮ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಬೇಕು.

* 3 ತಿಂಗಳವರೆಗೆ ಸ್ವಲ್ಪ ನಡೆಯುವುದು ಅಷ್ಟೇ ಮಾಡಿ.

* ನಂತರ ಸರಳವಾದ ವ್ಯಾಯಾಮಗಳನ್ನು ಮಾಡಿ.

*ಕಷ್ಟಕರವಾದ ವ್ಯಾಯಾಮವನ್ನು 6 ತಿಂಗಳ ಬಳಿಕವಷ್ಟೇ ಮಾಡಿ.

English summary

How Your Body Changes After Having Twins or Multiples in kannada

How Your Body Changes After Having Twins or Multiples in kannada, Read on.. .
X
Desktop Bottom Promotion