For Quick Alerts
ALLOW NOTIFICATIONS  
For Daily Alerts

ಮಕ್ಕಳೇ, ಪರೀಕ್ಷೆಯ ಸಮಯದಲ್ಲಿ ಈ ಆಹಾರಗಳನ್ನು ತಿನ್ನಲೇಬೇಡಿ..

|

ಪರೀಕ್ಷೆಯ ದಿನಗಳು ಸಮೀಪಿಸುತ್ತಿವೆ ಮತ್ತು ಆದ್ದರಿಂದ ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂದಾಗ ಮನಸ್ಸಿಗೆ ಮೊದಲು ಬರುವುದು ಆಹಾರ ತಾನೇ? ಆಹಾರವೇ ಎಲ್ಲದಕ್ಕೂ ಮೂಲವಾಗಿದೆ.

ಮಕ್ಕಳ ಪರೀಕ್ಷೆಯ ದಿನಗಳಲ್ಲಿ ತಿನ್ನಬೇಕಾದ ಆಹಾರಗಳು ಯಾವುವು ಎಂಬುದನ್ನು ಎಲ್ಲರೂ ಸಾಮಾನ್ಯವಾಗಿ ತಿಳಿದಿರುತ್ತಾರೆ. ಆದ್ದರಿಂದ ಇಂದು ನಾವು ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ತಿನ್ನಬಾರದ ಆಹಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಆಹಾರಗಳು ನಿಮ್ಮ ಮೆದುಳಿನ ಕಾರ್ಯವನ್ನು ಮತ್ತು ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.

ನಿಮ್ಮ ಪರೀಕ್ಷೆಯ ದಿನಗಳಲ್ಲಿ ನೀವು ನಿರ್ಲಕ್ಷಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ:

ಸಕ್ಕರೆಯುಕ್ತ ಆಹಾರವನ್ನು ತಪ್ಪಿಸಿ:

ಸಕ್ಕರೆಯುಕ್ತ ಆಹಾರವನ್ನು ತಪ್ಪಿಸಿ:

ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳು ನಿಮ್ಮ ಮೆದುಳಿಗೆ ಹೆಚ್ಚು ಹಾನಿ ಮಾಡುತ್ತದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಯಾವುದೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸದಿರುವುದು ಉತ್ತಮ. ಅಧ್ಯಯನಗಳ ಪ್ರಕಾರ, ಸಕ್ಕರೆ ಅಂಶ ಹೆಚ್ಚಿರುವ ಆಹಾರವನ್ನು ತಿನ್ನುವುದು ಬುದ್ದಿಶಕ್ತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ಇದು ದೀರ್ಘಕಾಲೀನ ಮತ್ತು ಅಲ್ಪಾವಧಿಯ ಮೆಮೊರಿ ನಷ್ಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಕಾಫಿ ಕುಡಿಯುವುದು ದಯವಿಟ್ಟು ನಿಲ್ಲಿಸಿ:

ಕಾಫಿ ಕುಡಿಯುವುದು ದಯವಿಟ್ಟು ನಿಲ್ಲಿಸಿ:

ಕಾಫಿ ಹೆಚ್ಚಿನ ವಿದ್ಯಾರ್ಥಿಗಳು ಕುಡಿಯಲು ಬಯಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ಇದು ನಿಮ್ಮ ಮೆದುಳಿನ ಮೇಲೆ ಕೆಲವು ಗಂಭೀರ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಪರೀಕ್ಷೆಯ ದಿನಗಳಲ್ಲಿ ಅದನ್ನು ಕುಡಿಯುವುದು ಹಾನಿಕಾರಕವಾಗಿದೆ. ಕಾಫಿಯಲ್ಲಿ ಕೆಫೀನ್ ಇದ್ದು ಅದು ದೇಹವು ಉತ್ಪಾದಿಸುವ ನಿದ್ರೆಯ ರಾಸಾಯನಿಕಗಳನ್ನು ತಡೆಯುವ ಮೂಲಕ ಶಕ್ತಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕೆಫೀನ್ ನಿಂದ ಉಂಟಾಗುವ ನಿದ್ರೆಯ ಕೊರತೆಯಿಂದಾಗಿ ದೇಹವು ಆತಂಕ, ಹೆಚ್ಚಿದ ಹೃದಯ ಬಡಿತ ಮತ್ತು ನಿದ್ರಾಹೀನತೆಯಂತಹ ದೀರ್ಘಕಾಲದ ಆರೋಗ್ಯದ ತೊಂದರೆಗಳ ಕೆಲವು ತೀವ್ರ ಲಕ್ಷಣಗಳಿಗೆ ಒಳಗಾಗಬಹುದು.

ಹುರಿದ ಆಹಾರವನ್ನು ಕಡಿಮೆ ಮಾಡಿ:

ಹುರಿದ ಆಹಾರವನ್ನು ಕಡಿಮೆ ಮಾಡಿ:

ಫ್ರೈಡ್ ಚಿಕನ್ ಅಥವಾ ಕ್ರಿಸ್ಪಿ ಚಿಕನ್‌ ನಂತಹ ಹುರಿದ ಆಹಾರಗಳು ಯಾವಾಗಲೂ ವಿದ್ಯಾರ್ಥಿಗಳಿಗೆ ತುಂಬಾ ಇಷ್ಟ ಆದರೆ ಅವು ಕೆಲವು ಗಂಭೀರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಆರೋಗ್ಯ ತಜ್ಞರ ಪ್ರಕಾರ, ಹುರಿದ ಆಹಾರಗಳು ಮೆದುಳಿನ ಮೇಲೆ ಕೆಲವು ಗಂಭೀರ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ ಮತ್ತು ಅದಕ್ಕಾಗಿಯೇ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ದಿನಗಳಲ್ಲಿ ಅವುಗಳನ್ನು ತಿನ್ನ್ದಿರುವುದು ಉತ್ತಮ. ಹುರಿದ ಆಹಾರಗಳು ನಿಮ್ಮ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಅಂದರೆ, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ರಕ್ತವನ್ನು ಮೆದುಳಿಗೆ ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ಅದರ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಟ್ರಾನ್ಸ್ ಫ್ಯಾಟ್ನಲ್ಲಿ ಸಮೃದ್ಧವಾಗಿರುವ ಆಹಾರಗಳು:

ಟ್ರಾನ್ಸ್ ಫ್ಯಾಟ್ನಲ್ಲಿ ಸಮೃದ್ಧವಾಗಿರುವ ಆಹಾರಗಳು:

ಮೆದುಳಿನ ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ತಪ್ಪಿಸಬೇಕಾದ ಮೊದಲ ಆಹಾರವೆಂದರೆ ಟ್ರಾನ್ಸ್ ಕೊಬ್ಬುಗಳು ಅಧಿಕವಾಗಿರುವ ಆಹಾರಗಳು. ಅಧ್ಯಯನದ ಪ್ರಕಾರ, ಈ ಆಹಾರಗಳು ಮೆದುಳಿನ ಕುಗ್ಗುವಿಕೆಗೆ ಕಾರಣವಾಗಬಹುದು ಮತ್ತು ಮೆದುಳಿನ ಸಂಸ್ಕರಣಾ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಅಂತಹ ಆಹಾರವು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ, ಇದು ವಿದ್ಯಾರ್ಥಿಯ ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

English summary

Foods To Avoid During Exam In Kannada

Here we told about Foods to avoid during exam in kannada, read on
X
Desktop Bottom Promotion