For Quick Alerts
ALLOW NOTIFICATIONS  
For Daily Alerts

ಕೊರೋನಾ ಲಸಿಕೆ ಬಗ್ಗೆ ಹಾಲುಣಿಸುವ ತಾಯಂದಿರಿಗಿರುವ ಕೆಲವೊಂದು ಪ್ರಶ್ನೆಗಳಿವು

|

ದೇಶದಲ್ಲಿ ಇದೀಗ 18ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೊರೋನಾ ಲಸಿಕೆ ಹಾಕಲಾಗುತ್ತಿದೆ. ಈ ಅರ್ಹತೆಯಲ್ಲಿ ಹಾಲುಣಿಸುವ ತಾಯಂದಿರೂ ಸೇರಿದ್ದಾರೆ. ಆದರೆ ಕೊರೋನಾ ಲಸಿಕೆ ಪಡೆಯಲು ಹಾಲುಣಿಸುವ ತಾಯಂದಿರು ಹಿಂದೇಟು ಹಾಕುತ್ತಿದ್ದಾರೆ, ಕಾರಣ ಲಸಿಕೆ ಕುರಿತು ಇರುವ ಅಪನಂಬಿಕೆ, ಗೊಂದಲಗಳು. ಈ ಸಂದರ್ಭದಲ್ಲಿ ಕೊರೋನಾ ವಿಪರೀತವಾಗಿ ಹರಡಿ, ತಾಯಂದಿರು ಮತ್ತು ನವಜಾತ ಶಿಶುಗಳ ಮೇಲೆ ಪರಿಣಾಮ ಬೀರುತ್ತವೆ.

ನೀವು ಹಾಲುಣಿಸುವ ತಾಯಿಯಾಗಿದ್ದರೆ, ನಿಮ್ಮನ್ನು ಕಾಡುತ್ತಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇವೆ, ಮುಂದೆ ಓದಿ.

ಭಾರತದಲ್ಲಿ ಕೊರೋನಾ ಲಸಿಕೆಗಳು ಎಷ್ಟು ಸುರಕ್ಷಿತವಾಗಿವೆ?

ಭಾರತದಲ್ಲಿ ಕೊರೋನಾ ಲಸಿಕೆಗಳು ಎಷ್ಟು ಸುರಕ್ಷಿತವಾಗಿವೆ?

ಭಾರತದಲ್ಲಿ ಪ್ರಸ್ತುತ ಮೂರು ಲಸಿಕೆಗಳನ್ನು ನೀಡಲಾಗುತ್ತಿದೆ. ಕೊವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ. ಎಲ್ಲಾ ಮೂರು ಲಸಿಕೆಗಳು ಅಗತ್ಯ ಸುರಕ್ಷತಾ ಪರೀಕ್ಷೆಗಳನ್ನು ಮುಗಿಸಿ ಬಂದಿದ್ದು, ತನ್ನದೇ ಆದ ಪರಿಣಾಮಕಾರಿತ್ವವನ್ನು ಹೊಂದಿದೆ.

ಆದರೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಯಾವುದೇ ಹಾಲುಣಿಸುವ ತಾಯಂದಿರನ್ನು ಒಳಗೊಳಿಸಲಿಲ್ಲ ಎಂಬುದನ್ನು ಗಮನಿಸಬೇಕು. ಹೇಗಾದರೂ, WHO ಮತ್ತು ಪ್ರಮುಖ ವೈದ್ಯಕೀಯ ಸಂಸ್ಥೆಗಳು ಹಾಲುಣಿಸುವ ತಾಯಂದಿರಿಗೆ ಯಾವುದೇ ಅಪಾಯವಿಲ್ಲ, ಸುರಕ್ಷಿತ ಎಂದು ದೃಢೀಕರಿಸಿದ್ದಾರೆ. ಆದ್ದರಿಂದ ಲಸಿಕೆ ಕುರಿತು ಯಾವುದೇ ಅನುಮಾನ ಬೇಡ.

ಇದು ಹಾಲುಣಿಸುವ ತಾಯಂದಿರ ಹಾಲು ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆಯೇ?:

ಇದು ಹಾಲುಣಿಸುವ ತಾಯಂದಿರ ಹಾಲು ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆಯೇ?:

ಹಾಲುಣಿಸುವ ತಾಯಂದಿರಲ್ಲಿ ಎದೆಹಾಲು ಸಕ್ರಿಯವಾಗಿ ಉತ್ಪಾದನೆಯಾಗುತ್ತದೆ. ಆದರೆ ಲಸಿಕೆ ಪಡೆಯುವುದರಿಂದ ಎದೆಹಾಲು ಪೂರೈಕೆ ಅಥವಾ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯವಿದೆ. ಆದರೆ ಈ ಭಯ ಬೇಡ. ಎದೆಹಾಲಿಗೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ಹಾಲುಣಿಸುವ ಮಹಿಳೆಯರು ವ್ಯಾಕ್ಸಿನೇಷನ್ ಮೊದಲು ಮತ್ತು ನಂತರ ತಮ್ಮ ಶಿಶುಗಳಿಗೆ ಸುರಕ್ಷಿತವಾಗಿ ಹಾಲುಣಿಸಬಹುದು.

ಇದಕ್ಕೆ ತದ್ವಿರುದ್ಧವಾಗಿ, ವ್ಯಾಕ್ಷಿನ್ ಪಡೆದ ನಂತರ ಹಾಲುಣಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತಿದೆ ಎಂಬ ಸಾಕ್ಷಿಗಳು ಲಭ್ಯವಾಗುತ್ತಿವೆ. ಆದ್ದರಿಂದ ಹಾಲುಣಿಸುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕೊರೋನಾ ಲಸಿಕೆಗಳು ಸಂತಾನೋತ್ಪತ್ತಿಗೆ ಅಡ್ಡಿ ಮಾಡುತ್ತವೆಯೇ?:

ಕೊರೋನಾ ಲಸಿಕೆಗಳು ಸಂತಾನೋತ್ಪತ್ತಿಗೆ ಅಡ್ಡಿ ಮಾಡುತ್ತವೆಯೇ?:

ಕೊರೋನಾ ಲಸಿಕೆಗಳು ಮಹಿಳೆಯರ ಸಂತಾನೋತ್ಪತ್ತಿ ಮತ್ತು ಸ್ತ್ರೀಯರ ಆರೋಗ್ಯಕ್ಕೆ ಅಡ್ಡಿಯುಂಟುಮಾಡುವ ಬಗ್ಗೆ ಹಲವಾರು ಅನುಮಾನಗಳಿವೆ. ಲಸಿಕೆ ಪಡೆಯುವುದು ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳು ಆಗುತ್ತಿವೆ. ಆದರೆ ಈ ಪುರಾಣಗಳಿಗೆ ಕಿವಿಗೊಡಬೇಡಿ. ಲಸಿಕೆಗಳು ನಿಮ್ಮ ಸಂತಾನೋತ್ಪತ್ತಿ ಮೇಲೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಅಥವಾ ಹಸ್ತಕ್ಷೇಪ ಮಾಡುವುದಿಲ್ಲ. ನಿಮ್ಮ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುವ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಏಕೆಂದರೆ ಲಸಿಕೆಯು SARS-COV-2 ವೈರಸ್ನ ಸ್ಪೈಕ್ ಪ್ರೋಟೀನ್ ಅನ್ನು ಗುರಿಯಾಗಿಸುವುದಲ್ಲದೇ, ರೋಗನಿರೋಧಕ ಕಾಪಾಡಲು ಸಹಾಯ ಮಾಡುತ್ತದೆಯೇ ಹೊರತು ಸಂತಾನೋತ್ಪತ್ತಿಗೆ ಸಂಬಂಧಿಸಿಲ್ಲ.

ಈಗಷ್ಟೇ ಡೆಲಿವರಿ ಆಗಿದ್ದರೆ, ಎಷ್ಟು ಸಮಯದ ನಂತರ ನೀವು ಲಸಿಕೆ ತೆಗೆದುಕೊಳ್ಳಬಹುದು?

ಈಗಷ್ಟೇ ಡೆಲಿವರಿ ಆಗಿದ್ದರೆ, ಎಷ್ಟು ಸಮಯದ ನಂತರ ನೀವು ಲಸಿಕೆ ತೆಗೆದುಕೊಳ್ಳಬಹುದು?

ಲಸಿಕೆ ತೆಗೆದುಕೊಳ್ಳಲು ಕಾಯುವುದು ಬೇಕಿಲ್ಲ. ಯಾವುದೇ ಸಮಯದಲ್ಲಾದರೂ ಕೊರೋನಾ ಲಸಿಕೆಯನ್ನು ಪಡೆಯಬಹುದು. ಇದರಿಂದ ತಾಯಿ ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ. ಲಸಿಕೆ ಪಡೆಯುವ ಮೊದಲು ಆದ್ಯತೆ ನೀಡಬೇಕಾದ ಏಕೈಕ ವಿಷಯವೆಂದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು, ಚೆನ್ನಾಗಿ ತಿನ್ನುವುದು ಮತ್ತು ನಿಮಗೆ ಯಾವುದೇ ಬೇರೆ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು.

ನೀವು ಮಗುವಿಗೆ ಪ್ಲಾನ್ ಮಾಡಿದ್ದರೆ ಲಸಿಕೆ ತೆಗೆದುಕೊಳ್ಳಬಹುದೇ?

ನೀವು ಮಗುವಿಗೆ ಪ್ಲಾನ್ ಮಾಡಿದ್ದರೆ ಲಸಿಕೆ ತೆಗೆದುಕೊಳ್ಳಬಹುದೇ?

ಗರ್ಭಿಣಿಯಾಗುವ ಮೊದಲು ಲಸಿಕೆ ಹಾಕಲು ಯೋಜಿಸಿರುವ ಮಹಿಳೆಯರು ಆದಷ್ಟು ಬೇಗ ಹಾಕಿಕೊಳ್ಳುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಏಕೆಂದರೆ ಗರ್ಭಿಣಿಯಾದ ಮೇಲೆ ಲಸಿಕೆ ಹಾಕಲು ಅನುಮತಿ ಇಲ್ಲದಿರುವುದರಿಂದ, ಮೊದಲೇ ಲಸಿಕೆ ಹಾಕಿಕೊಳ್ಳುವುದು ಒಳ್ಳೆಯದು. ಇದು ಮುಂದಾಗುವ ಕೊರೋನಾ ಅಪಾಯವನ್ನು ತಡೆಯುತ್ತದೆ ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ.

English summary

Breastfeeding Mothers Now Allowed To Get COVID-19 Vaccine, Here are the FAQs in Kannada

Here we talking about Breastfeeding Mothers Now Allowed To Get COVID-19 Vaccine, Here are the FAQs in Kannada, read on
Story first published: Tuesday, May 25, 2021, 12:56 [IST]
X
Desktop Bottom Promotion