For Quick Alerts
ALLOW NOTIFICATIONS  
For Daily Alerts

ಮಕ್ಕಳು ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗುವ ಸಾಧ್ಯತೆ ಎಷ್ಟಿದೆ?

|

ಕೊರೊನಾದ ಎರಡನೇ ಅಲೆಯು ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದರ ನಡುವೆ ಬಣ್ಣ ಬಣ್ಣಗಳ ವೈರಸ್ ಕಾಟ ಬೇರೆ. ಈ ಎಲ್ಲದರ ಮಧ್ಯೆ ತಜ್ಞರು ಮಕ್ಕಳ ಮೇಲೆ ಮೂರನೆಯ ಅಲೆಯ ಕುರಿತು ನೀಡುತ್ತಿರುವ ಎಚ್ಚರಿಕೆ ಎಲ್ಲವೂ ಪೋಷಕರನ್ನು ಚಿಂತೆಗೀಡು ಮಾಡಿದೆ. ಸದ್ಯ ಬ್ಲಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ಜನರ ಸಂಖ್ಯೆಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಇದ ಮಕ್ಕಳಿಗೂ ಅಪಾಯಕಾರಿಯಾಗಬಹುದೇ ಎಂಬ ಆತಂಕ ಹೆತ್ತವರದ್ದು. ಈ ಕುರಿತು ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೊಡೋಣ.

ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂದರೇನು?:

ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂದರೇನು?:

ಇದು ಮ್ಯೂಕೋರ್ಮೈಸೆಟ್ಸ್ ಎಂಬ ತಳಿಯಿಂದ ಉಂಟಾಗುವ ತೀವ್ರವಾದ ಶಿಲೀಂಧ್ರ ಸೋಂಕಾಗಿದ್ದು, ಸಾಮಾನ್ಯವಾಗಿ ಗಾಳಿ, ಮಣ್ಣು ಅಥವಾ ಕೊಳೆತ ಸಾವಯವ ಪದಾರ್ಥಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಸೈನಸ್ಗಳು, ಮೆದುಳು ಅಥವಾ ಶ್ವಾಸಕೋಶಗಳಿಗೆ ಸೋಂಕು ತರುತ್ತದೆ. ಆದ್ದರಿಂದ ಕೊರೊನಾನಿಂದ ಬಳಲುತ್ತಿರುವ ಅಥವಾ ಚೇತರಿಸಿಕೊಳ್ಳುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಈ ಹಿಂದೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಅಥವಾ ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವವರು ಈ ಸೋಂಕನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಿದೆ.

ಬ್ಲಾಕ್ ಫಂಗಸ್ ಸೋಂಕಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳು:

ಬ್ಲಾಕ್ ಫಂಗಸ್ ಸೋಂಕಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳು:

ಒಂದು ವೇಳೆ ವ್ಯಕ್ತಿಯು ಈ ಸೋಂಕಿಗೆ ಒಳಗಾಗಿದ್ದರೆ, ನೀವು ರೋಗಲಕ್ಷಣಗಳತ್ತ ಗಮನ ಹರಿಸುವುದು ಬಹಳ ಮುಖ್ಯ.

- ತಲೆನೋವು ಮತ್ತು ಊತ

- ಮುಖದ ಒಂದು ಬದಿಯಲ್ಲಿ ಊತ

- ಮೂಗಿನ ಸುತ್ತಲೂ ಕಪ್ಪು ಬಣ್ಣದ ಪದರಗಳು

- ಮಸುಕಾದ ದೃಷ್ಟಿ ಅಥವಾ ದೃಷ್ಟಿ ನಷ್ಟ

- ಎದೆ ನೋವು, ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಉಸಿರಾಟದ ತೊಂದರೆಗಳು

ಮಕ್ಕಳಿಗೆ ಬ್ಲಾಕ್ ಫಂಗಸ್ ಬರಬಹುದೇ?:

ಮಕ್ಕಳಿಗೆ ಬ್ಲಾಕ್ ಫಂಗಸ್ ಬರಬಹುದೇ?:

ಬ್ಲಾಕ್ ಫಂಗಸ್ ಅಥವಾ ಮ್ಯೂಕಾರ್ಮೈಕೋಸಿಸ್ ಅಪರೂಪದ ಶಿಲೀಂಧ್ರ ಸೋಂಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೊರೊನಾ ರೋಗಿಗಳಲ್ಲಿ ಕಂಡುಬರುತ್ತದೆ. ದುರ್ಬಲ್ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಅಥವಾ ಮಧುಮೇಹ ಹೊಂದಿರುವವರು ಈ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ವಯಸ್ಕರಿಗೆ ಹೋಲಿಸಿದರೆ, ಮಕ್ಕಳಿಗೆ ಮಧುಮೇಹ ಅಥವಾ ದುರ್ಬಲ ರೋಗ ನಿರೋಧಕ ಶಕ್ತಿ ಸಾಧ್ಯತೆ ಕಡಿಮೆ. ಆದ್ದರಿಂದ ಮಕ್ಕಳು ಈ ಫಂಗಸ್ ಸೋಂಕಿಗೆ ತುತ್ತಾಗುವ ಸಂದರ್ಭಗಳು ಕಡಿಮೆಯಾಗಿರುತ್ತವೆ.

ಆದರೆ, ಇತ್ತೀಚಿನ ವರದಿಗಳು ಮಕ್ಕಳಲ್ಲಿ ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕಿನ ಅಪರೂಪದ ಪ್ರಕರಣಗಳು ದಾಖಲಾಗಿವೆ. ಗುಜರಾತ್‌ನಲ್ಲಿ 13 ವರ್ಷ ವಯಸ್ಸಿನ ಮಗುವಿನಲ್ಲಿ ಬ್ಲಾಕ್ ಫಂಗಸ್ ನ ಮೊದಲ ಪ್ರಕರಣ ಪತ್ತೆಯಾಗಿದ್ದು, ಆತ ಕೋವಿಡ್ ನಿಂದ ಚೇತರಿಸಿಕೊಂಡಿದ್ದರು. ಜೊತೆಗೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇದೇ ರೀತಿಯ ಎರಡು ಪ್ರಕರಣಗಳು ವರದಿಯಾಗಿವೆ, ಅದರಲ್ಲಿ ಒಂದು ಬಳ್ಳಾರಿ ಜಿಲ್ಲೆಯ 11 ವರ್ಷದ ಬಾಲಕಿ ಮತ್ತು ಚಿತ್ರದುರ್ಗದ 14 ವರ್ಷದ ಬಾಲಕ. ಆದರೆ, ಆರೋಗ್ಯ ಅಧಿಕಾರಿಗಳು ಇಬ್ಬರು ಮಕ್ಕಳು ತೀವ್ರ ಜುವೆನೈಲ್ ಡಯಾಬಿಟಿಸ್ (ಎಜೆಡಿ) ಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಏನು ಮಾಡಬಹುದು?:

ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಏನು ಮಾಡಬಹುದು?:

ಮಕ್ಕಳಲ್ಲಿ ಕೊರೊನಾ ಸಂಬಂಧಿತ ಶಿಲೀಂಧ್ರಗಳ ಸೋಂಕು ವಿರಳವಾಗಿ ಕಂಡುಬರುವುದಾದರೂ, ಪೋಷಕರು ಸಿದ್ಧರಾಗಿರುವುದು ಮುಖ್ಯ. ಸಾಂಕ್ರಾಮಿಕ ರೋಗದ ಬಗ್ಗೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಹೇಳಿ.

  • ಮಕ್ಕಳನ್ನು ಮನೆಯೊಳಗೆ ಇರುವಂತೆ ಹೇಳಿ. ಹೊರಗಿನವರು ಯಾರೂ ಬರದಂತೆ ನೋಡಿಕೊಳ್ಳಿ.
  • ವೈರಸ್ ಯಾರನ್ನೂ ಬಿಡುವುದಿಲ್ಲವಾದ್ದರಿಂದ, ನಿಮ್ಮ ಮಕ್ಕಳನ್ನು ಆಟವಾಡಲು ಹೊರಗೆ ಕಳುಹಿಸಬೇಡಿ, ಬದಲಿಗೆ ಒಳಗೇ ಆಡುವಂತ ಆಟಗಳನ್ನು ಆಯೋಜಿಸಿ.
  • ನಿಮ್ಮ ಮಗು ಜನಸಂದಣಿ ಇರುವ ಜಾಗಕ್ಕೆ ಭೇಟಿ ನೀಡುವಾಗ ಮಾಸ್ಕ್ ಹಾಕಿಕೊಳ್ಳಲು ಹೇಳಿ.
  • ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಮುಟ್ಟುವ ಮೊದಲು ಆಗಾಗ್ಗೆ ಕೈ ತೊಳೆಯುವುದು ಮತ್ತು ಸ್ವಚ್ಛಗೊಳಿಸಲು ಹೇಳಿ.
  • ಪೋಷಕಾಂಶಯುಕ್ತ ಆಹಾರ ಮಕ್ಕಳಿಗೆ ನೀಡಿ.
English summary

Are Children Susceptible to Black Fungus Infection? All You Need to Know in Kannada

Here we talking about Are children susceptible to black fungus infection? all you need to know in Kannada, read on
Story first published: Wednesday, June 2, 2021, 12:56 [IST]
X
Desktop Bottom Promotion