For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮಕ್ಕಳು ತಿನ್ನಲೇಬೇಕಾದ, ತಿನ್ನಲೇಬಾರದ ಆಹಾರಗಳು

|

ಯಾವತ್ತೂ ಪೋಷಕರು ಮಕ್ಕಳಿಗೆ ನೀಡುವ ಆಹಾರದ ಕಡೆ ತುಂಬಾನೇ ಗಮನಹರಿಸಬೇಕು. ಮಕ್ಕಳಿಗೆ ಪೋಷಕಾಶವಿರುವ ಆಹಾರವನ್ನು ನೀಡುವುದರಿಂದ ಅವರು ಕಾಯಿಲೆ ಬೀಳುವುದನ್ನು ತಪ್ಪಿಸಬಹುದು.

ಇನ್ನು ಮಳೆಗಾಲದಲ್ಲಿ ಬ್ಯಾಕ್ಟಿರಿಯಾ, ಶಿಲೀಂಧ್ರ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು, ಆದ್ದರಿಂದ ಬಿಸಿ ಬಿಸಿ ಆಹಾರ ಸೇವಿಸಲು ನೀಡಬೇಕು. ಅಲ್ಲದೆ ಮಳೆಗಾಲದಲ್ಲಿ ಮಕ್ಕಳಿಗೆ ನೀರಿನಲ್ಲಿ ಆಡುವುದು ಎಂದರೆ ತುಂಬಾನೇ ಇಷ್ಟ. ಆದ್ದರಿಂದ ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುಸುವಂಥ ಆಹಾರ ನೀಡಬೇಕು. ಇಲ್ಲಿ ನಾವು ಮಕ್ಕಳಿಗೆ ಮಳೆಗಾಲದಲ್ಲಿ ಯಾವ ಆಹಾರ ನೀಡಬೇಕು, ಯಾವ ಆಹಾರ ನೀಡಬಾರದು ಎಂಬ ಮಾಹಿತಿ ನೀಡಿದ್ದೇವೆ:

ಮಕ್ಕಳಿಗೆ ನೀಡಬೇಕಾದ ಆಹಾರಗಳು

ಬೆಳ್ಳುಳ್ಳಿ

ಬೆಳ್ಳುಳ್ಳಿ

ಮಕ್ಕಳಿಗೆ ನೀಡುವ ಆಹಾರದಲ್ಲಿ ಬೆಳ್ಳುಳ್ಳಿ ಇರುವಂತೆ ನೋಡಿಕೊಳ್ಳಿ. ಸೋಪ್‌, ಸಾರು ಇವುಗಳಲ್ಲಿ ಬೆಳ್ಳುಳ್ಳಿ ಸೇರಿಸಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಹಾಲು ಕಾಯಿಸುವಾಗ ಅದರಲ್ಲಿ ಒಂದು ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ ನೀಡಿದರೆ ಅವರಿಗೆ ಕಫ ಉಂಟಾಗುವುದನ್ನು ತಡೆಗಟ್ಟಬಹುದು.

ಅರಿಶಿಣ

ಅರಿಶಿಣ

ಇನ್ನು ಅರಿಶಿಣ ಕೂಡ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಅವರಿಗೆ ಕುಡಿಯಲು ಕೊಡುವ ಹಾಲಿನಲ್ಲಿ ಒಂದು ಚಿಟಿಕೆಯಷ್ಟು ಅರಿಶಿಣ ಹಾಕಿ ಕುಡಿ. ಕೊಡುವ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಅರಿಶಿಣ ಇರಲಿ. ಇದು ಸೋಂಕು ಮತ್ತಿತರ ಸಮಸ್ಯೆ ಬಾರದಂತೆ ತಡೆಗಟ್ಟುತ್ತದೆ.

ಸೀಸನಲ್ ಫ್ರೂಟ್ಸ್

ಸೀಸನಲ್ ಫ್ರೂಟ್ಸ್

ಇನ್ನು ಮಕ್ಕಳಿಗೆ ಸೀಸನಲ್ ಫ್ರೂಟ್‌ ನೀಡಿ. ಬಾಳೆಹಣ್ಣು, ಪಿಯರ್ಸ್, ಪಪ್ಪಾಯಿ ಇವುಗಳನ್ನು ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿ. ವಿಟಮಿನ್ ಸಿ ಇರುವ ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

 ಬೇಳೆ

ಬೇಳೆ

ಮಕ್ಕಳಿಗೆ ಬೇಳೆ ಕೊಡುವುದಿಂದ ಪ್ರೊಟೀನ್ ಹಾಗೂ ಇತರ ಪೋಷಕಾಶಗಳು ದೊರೆಯುತ್ತವೆ. ಅಲ್ಲದೆ ಬೇಳೆ ಸೀಸನಲ್ ಇನ್‌ಫೆಕ್ಷನ್ (ಆಯಾ ಕಾಲದಲ್ಲಿ ಕಾಡುವ ಸೋಂಕು) ತಡೆಗಟ್ಟುವಲ್ಲಿಯೂ ತುಂಬಾ ಸಹಕಾರಿ. ಮಕ್ಕಳಿಗೆ ಜ್ವರ ಇದ್ದಾಗ ಬೇಳೆ ಸೂಪ್ ,ಮಾಡಿ ಕೊಡುವುದರಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ.

 ಸೂಪ್

ಸೂಪ್

ಮಳೆಗಾಲದಲ್ಲಿ ಬಿಸಿ ಬಿಸಿ ಸೂಪ್‌ ಕುಡಿಯಲು ನೀಡುವುದು ಒಳ್ಳೆಯದು. ಚಿಕನ್ ಸೂಪ್, ಟೊಮೆಟೊ ಸೂಪ್, ವೆಜ್ ಸೂಪ್ ಹೀಗೆ ಯಾವುದೇ ನೀಡಬಹುದು. ಸೂಪ್ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇನ್ನು ಹುಷಾರು ತಪ್ಪಿದಾಗ ಸೂಪ್ ಕೊಡಿ, ಬೇಗನೆ ಚೇತರಿಸಿಕೊಳ್ಳಲು ತುಂಬಾನೇ ಸಹಕಾರಿ.

ಬೀಟ್‌ರೂಟ್‌

ಬೀಟ್‌ರೂಟ್‌

ಬೀಟ್‌ ಪಲ್ಯ, ಬೀಟ್‌ ರೂಟ್‌ ಜ್ಯೂಸ್ ಇನ್ನು ಬೀಟ್‌ರೂಟ್‌ನಿಂದ ಕಟ್ಲೇಟ್ ಮತ್ತಿತರ ತಿನಿಸು ತಯಾರಿಸಿ ನೀಡಿ. ಇದು ಸ್ವಲ್ಪ ಹೊಟ್ಟೆಗೆ ಹೋದರೂ ಮಕ್ಕಳಿಗೆ ತುಂಬಾನೇ ಒಳ್ಳೆಯದು. ಇದು ಮಕ್ಕಳಲ್ಲಿ ಶಕ್ತಿ ವೃದ್ದಿಸುತ್ತದೆ.

 ಕಷಾಯ

ಕಷಾಯ

ಜೀರಿಗೆ, ಒಂದು ಕಾಳು ಮೆಣಸು, ಸೋಂಪು, ಸ್ವಲ್ಪ ಶುಂಠಿ, ನಾಲ್ಕು ಎಸಳು ತುಳಸಿ ಎಲೆ ಹಾಕಿ ಕಷಾಯ ಮಾಡಿ ಸ್ವಲ್ಪ ಬೆಲ್ಲ ಹಾಕಿ ಕುಡಿಯಲು ನೀಡಿ. ಇದರಿಂದ ಕೂಡ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದನ್ನು ವಾರದಲ್ಲಿ ಒಂದು ಎರಡು ಬಾರಿ ನೀಡಿದರೆ ಸಾಕು.

 ಬಿಸಿ ನೀರಿಗೆ ಜೇನು

ಬಿಸಿ ನೀರಿಗೆ ಜೇನು

ಇನ್ನು ಮಕ್ಕಳಿಗೆ ಬಿಸಿ ನೀರಿಗೆ ಜೇನು ಹಾಕಿ ಕೊಡಿ. ಇದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಇನ್ನು ಶೀತ, ಕೆಮ್ಮು ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಮಕ್ಕಳಿಗೆ ಟೀ, ಕಾಫಿ ಹೆಚ್ಚಾಗಿ ಕುಡಿಯಲು ನೀಡಬೇಡಿ. ಉಗುರು ಬೆಚ್ಚಗಿನ ನೀರು ಕುಡಿಯಲು ನೀಡಿ.

ಯಾವ ಆಹಾರ ನೀಡಬಾರದು?

ಯಾವ ಆಹಾರ ನೀಡಬಾರದು?

ಎಣ್ಣೆಯಲ್ಲಿ ಕರಿದ ಪದಾರ್ಥಗಳು

ಮಕ್ಕಳು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಇಷ್ಟಪಡುತ್ತಾರೆ. ಆದರೆ ಅಂಥ ಆಹಾರಗಳನ್ನು ನೀಡುವುದರಿಂದ ಚಿಕ್ಕ ಪ್ರಾಯದಲ್ಲಿಯೇ ಅವರಿಗೆ ಒಬೆಸಿಟಿ ಸಮಸ್ಯೆ ಕಾಡುವುದು.

ಐಸ್‌ ಕ್ಯಾಂಡಿ, ಐಸ್‌ ಕ್ರೀಮ್

ಐಸ್‌ ಕ್ಯಾಂಡಿ, ಐಸ್‌ ಕ್ರೀಮ್

ಇನ್ನು ಮಳೆಗಾಲದಲ್ಲಿ ಐಸ್‌ಕ್ರೀಮ್ ಇಂಥ ಆಹಾರಗಳನ್ನು ನೀಡಬೇಡಿ. ಇವು ಮಾತ್ರವಲ್ಲ ಯಾವುದೇ ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ನೀಡಬೇಡಿ. ತಾಜಾ ಆಹಾರ ನೀಡಿ. ಇನ್ನು ತಂಪು ಪಾನೀಯಗಳನ್ನು ಕೂಡ ನೀಡಬೇಡಿ.

ಮೀನು

ಮೀನು

ಮೀನು ಮಕ್ಕಳಿಗೆ ಒಳ್ಳೆಯದೇ, ಆದರೆ ಮಳೆಗಾಲದಲ್ಲಿ ಮೀನುಗಳು ಮರಿ ಮಾಡುವ ಸಮಯವಾಗಿರುವುದರಿಂದ ಗುಣಮಟ್ಟದ ಮೀನು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಶೀತಲೀಕರಿಸಿದ ಮೀನು ತಂದು ನೀಡಬೇಡಿ. ಬದಲಿಗೆ ಚಿಕನ್, ಮೊಟ್ಟೆ ನೀಡಿ.

 ಮೊಸರು

ಮೊಸರು

ಮೊಸರು ಒಳ್ಳೆಯದೇ ಆದರು ಮಳೆಗಾಲದಲ್ಲಿ ಮೊಸರು ನೀಡಲು ಹೋಗಬೇಡಿ. ಏಕೆಂದರೆ ಮಳೆಗಾಲದಲ್ಲಿ ಮೊಸರು ತಿನ್ನುವುದರಿಂದ ಕೆಮ್ಮು, ಶೀತ ಉಂಟಾಗುವ ಸಾಧ್ಯತೆ ಹೆಚ್ಚು.

 ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಮಳೆಗಾಲದಲ್ಲಿ ಹಾಲು ಕುಡಿಯಲು ನೀಡಿ, ಆದರೆ ಹಾಲಿನ ಉತ್ಪನ್ನಗಳು ಬೇಗನೆ ಹಾಳಾಗುವ ಸಾಧ್ಯತೆ ಇರುವುದರಿಂದ ಕೊಡುವುದನ್ನು ಕಡಿಮೆ ಮಾಡಿ. ಒಂದು ವೇಳೆ ಕೊಡುವುದಾದರೆ ಅದರ ಎಕ್ಸ್‌ಪೆರಿ ಡೇಟ್‌ ಚೆಕ್ ಮಾಡಿ ನೀಡಿ.

ಸಲಾಡ್, ಹಸಿ ತರಕಾರಿ

ಸಲಾಡ್, ಹಸಿ ತರಕಾರಿ

ಸಲಾಡ್‌, ಹಸಿ ತರಕಾರಿ ಇವುಗಳನ್ನು ಮಳೆಗಾಲದಲ್ಲಿ ನೀಡಲು ಹೋಗಬೇಡಿ. ಮಳೆಗಾಲದಲ್ಲಿ ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಒಳ್ಳೆಯದು. ಏಕೆಂದರೆ ಸೊಪ್ಪು, ಹಸಿ ತರಕಾರಿಗಳಲ್ಲಿ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಮಳೆಗಾಲದಲ್ಲಿ ಅಧಿಕವಿರುತ್ತದೆ. ಈ ಆಹಾರಗಳನ್ನು ತಿನ್ನುವುದರಿಂದ ವಾಂತಿ, ಬೇಧಿ ಉಂಟಾಗಬಹುದು.

ಹೊರಗಿನ ಆಹಾರ

ಹೊರಗಿನ ಆಹಾರ

ಇನ್ನು ಮಕ್ಕಳಿಗೆ ಯಾವುದೇ ಕಾರಣಕ್ಕೆ ಹೊರಗಿನ ಆಹಾರ ತಂದು ನೀಡಬೇಡಿ, ಆದಷ್ಟು ಮನೆ ಆಹಾರವೇ ನೀಡಿ. ಫಾಸ್ಟ್ ಫುಡ್‌ ಇವುಗಳನ್ನು ನೀಡಲು ಹೋಗಬೇಡಿ.

English summary

What Foods Kids Should Eat And Avoid In Rainy Season

Here are what foods kids should eat and avoid in rainy season, have look.
X
Desktop Bottom Promotion