For Quick Alerts
ALLOW NOTIFICATIONS  
For Daily Alerts

ಪೋಷಕರೇ , ಮಕ್ಕಳಿಗೆ ಚುಚ್ಚುಮದ್ದು ಇರುವ ದಿನ ಹೀಗೆ ಮಾಡಿ

|

ಮುದ್ದು ಮಗುವಿನ ಆಟ ನೋಡುವುದಕ್ಕೆ ಎಲ್ಲರಿಗೂ ಇಷ್ಟ. ಆದರೆ ಅವರ ಅಳು, ಅವರ ಗೋಳಾಟ ಯಾವ ಪೋಷಕರಿಗೆ ತಾನೆ ಇಷ್ಟವಾಗುತ್ತದೆ ಹೇಳಿ. ಮುದ್ದು ಕಂದಮ್ಮ ಅಳುತ್ತಿದೆ ಎಂದರೆ ಯಾಕೆ ಅಳುತ್ತಿದೆ ಎಂದು ಚಿಂತಿಸುವವರೇ ಎಲ್ಲರೂ. ಹಾಗಿರುವಾಗ ಈ ವ್ಯಾಕ್ಸೀನ್ ಅನ್ನೋ ಸಮಯ ಬಂದರಂತೂ ಅಬ್ಬಬ್ಬಾ! ತಂದೆತಾಯಿಯ ಚಡಪಡಿಕೆ ಹೇಳತೀರದು.

ದೊಡ್ಡವರಿಗೆ ಇಂಜೆಕ್ಷನ್ ಚುಚ್ಚುವುದನ್ನೇ ಸಹಿಸಲು ಅಸಾಧ್ಯ. ಹಾಗಿರುವಾಗ ಪುಟ್ಟ ಕಂದಮ್ಮನಿಗೆ ಉದ್ದ ಸೂಜಿಯಲ್ಲಿ ಚುಚ್ಚುತ್ತಾರೆ, ಜ್ವರ ಬರುತ್ತದೆ ಎಂದರೆ ಸಹಿಸುವುದಕ್ಕೆ ಸಾಧ್ಯವೇ. ಖಂಡಿತ ಇಲ್ಲ. ಮಗುವಿನ ಆ ಪೀಕಲಾಟವು ಪೋಷಕರಿಗೆ ಒತ್ತಡವೇ ಸರಿ. ಆದರೆ ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಹೇಗೆ ಎಂದು ಕೇಳುತ್ತಿದ್ದೀರಾ? ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿ ಓದಿ.

1. ಮೊದಲೇ ಸಿದ್ಧತೆ ಮಾಡಿಕೊಳ್ಳಿ

1. ಮೊದಲೇ ಸಿದ್ಧತೆ ಮಾಡಿಕೊಳ್ಳಿ

ನಿಮ್ಮ ಮಗುವನ್ನು ವ್ಯಾಕ್ಸೀನ್ ಮಾಡುವುದಕ್ಕೆ ಕರೆದುಕೊಂಡು ಹೋಗುವ ಮುಂಚೆ ಏನಾದರೂ ಪ್ರಶ್ನೆಗಳು ಅಥವಾ ಅನುಮಾನಗಳಿದ್ದಲ್ಲಿ ಅದನ್ನು ಬರೆದು ಇಟ್ಟುಕೊಳ್ಳಿ. ಒಂದು ವೇಳೆ ನೀವು ಹೊಸ ವೈದ್ಯರ ಬಳಿ ನಿಮ್ಮ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರೆ ಹಳೆಯ ಎಲ್ಲಾ ರೆಕಾರ್ಡ್ ಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಈ ಡಾಟಾವು ನಿಮ್ಮ ಮಗುವಿನ ಡೇ ಕೇರ್, ಪ್ರೀಸ್ಕೂಲ್, ಸಮ್ಮರ್ ಕ್ಯಾಂಪ್ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಯಾಣದಲ್ಲಿ ಅನುಕೂಲಕ್ಕೆ ಬರುತ್ತದೆ. ಡಿಜಿಟಲ್ ಫೈಲ್ ನಲ್ಲಿ ನಿಮ್ಮ ಮಗುವಿನ ಈ ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ. ನಿಮ್ಮ ಮಗುವಿನ ವೈದ್ಯರ ಬಳಿ ಮತ್ತು ರಾಜ್ಯ ಆರೋಗ್ಯ ಕೇಂದ್ರದ ಬಳಿಯೂ ಈ ರೆಕಾರ್ಡ್ ಇರುತ್ತದೆ. ಚುಚ್ಚುಮದ್ದು ಪಡೆಯಲು ಹೋಗುವ ದಿನ ಮಗುವಿನ ನೆಚ್ಚಿನ ಬ್ಲ್ಯಾಂಕೆಟ್, ಆಟದ ಸಾಮಾನು ಅಥವಾ ಇತ್ಯಾದಿ ಮಗುವಿನ ಅಗತ್ಯದ ಎಲ್ಲಾ ಸಾಮಗ್ರಿಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.

2. ಸತ್ಯವನ್ನು ಹೇಳಿ

2. ಸತ್ಯವನ್ನು ಹೇಳಿ

ಒಂದು ವೇಳೆ ನಿಮ್ಮ ಮಗು ಪ್ರೀಸ್ಕೂಲ್ ಹೋಗುವ ಅಥವಾ ಅದಕ್ಕಿಂತ ದೊಡ್ಡ ಮಗುವಾಗಿದ್ದರೆ ವೈದ್ಯರ ಬಳಿ ಯಾಕಾಗಿ ಹೋಗುತ್ತಿದ್ದೇವೆ? ಅಲ್ಲಿ ಏನಾಗುತ್ತದೆ ಎಂಬುದನ್ನೆಲ್ಲ ವಿವರಿಸಿ. ಆದಷ್ಟು ಇಂಜೆಕ್ಷನ್ ಬಗ್ಗೆ ಮಗುವಿಗೆ ಭಯವಿಲ್ಲದಂತೆ ಮುಂಚೆಯೇ ನೋಡಿಕೊಳ್ಳಿ. ಚುಚ್ಚುಮದ್ದಿನಿಂದಾಗಿ ಕೇವಲ ಇರುವೆ ಕಚ್ಚಿದಂತಾಗುತ್ತದೆ. ಕೆಲವೇ ಸೆಕೆಂಡ್ ಈ ನೋವು ಇರುತ್ತದೆ. ನಂತರ ಮಾಯವಾಗುತ್ತದೆ ಎಂಬುದನ್ನೆಲ್ಲಾ ಮನವರಿಕೆ ಮಾಡಿಬಿಡಿ. ಸೂಜಿಯಿಂದ ಚುಚ್ಚುವುದೆಂದರೆ ಸಣ್ಣ ಚೂಟಿದಂತಹ ಅನುಭವವಷ್ಟೇ ಎಂಬುದನ್ನು ತಿಳಿಸಿ. ಒಂದು ವೇಳೆ ನಿಮ್ಮ ಮಗುವಿಗೆ ಅಣ್ಣ ಅಥವಾ ಅಕ್ಕ ಇದ್ದರೆ ಅವರ ಮೂಲಕ ತಿಳಿಹೇಳುವ ಪ್ರಯತ್ನ ನಡೆಸಿರಿ.ದೊಡ್ಡ ಮಗುವು ಚಿಕ್ಕ ಮಗುವಿಗೆ ಚುಚ್ಚುಮದ್ದಿನಿಂದ ಏನಾಗಿತ್ತು ತನಗೆ ಈ ಹಿಂದೆ ಹೇಗಾಗಿತ್ತು ಎಂಬುದನ್ನು ತಿಳಿಸಲಿ. ಅದೇನು ಕೆಟ್ಟದ್ದಲ್ಲ ಎಂಬುದನ್ನು ಅರ್ಥೈಸಿ. ಇಂಜಕ್ಷನ್ ಬಗ್ಗೆ ಮೊದಲೇ ತಯಾರಿ ನಡೆಸಿ. ಮಾನಸಿಕವಾಗಿ ಮಗುವನ್ನು ಸಿದ್ಧವಾಗಿಸಿ.

3. ಪ್ರಶ್ನೆಗಳನ್ನು ಕೇಳಿ

3. ಪ್ರಶ್ನೆಗಳನ್ನು ಕೇಳಿ

ವೈದ್ಯರ ಬಳಿ ಪ್ರಶ್ನೆ ಕೇಳುವುದಕ್ಕೆ ಮುಜುಗರ ಮಾಡಿಕೊಳ್ಳಬೇಡಿ. ವ್ಯಾಕ್ಸಿನ್ ನಂತರದ ಕೆಲವು ಘಂಟೆಗಳಲ್ಲಿ ಏನಾಗುತ್ತದೆ? ಮಗುವು ಯಾವ ಅನುಭವಕ್ಕೆ ಒಳಗಾಗುತ್ತದೆ? ಯಾವ ರೀತಿಯ ವ್ಯತ್ಯಾಸವನ್ನು ಮಗುವಿನಲ್ಲಿ ಕಾಣುವುದಕ್ಕೆ ಸಾಧ್ಯ? ವ್ಯಾಕ್ಸಿನ್ ನಂತರ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಇತ್ಯಾದಿ ಪ್ರಶ್ನೆಗಳನ್ನು ಮುಕ್ತವಾಗಿ ವೈದ್ಯರ ಬಳಿ ಪ್ರಶ್ನಿಸಿ. ಮಗುವು ಒಂದು ವೇಳೆ ಅಸ್ವಸ್ಥತೆಗೆ ಒಳಗಾದರೆ ಹೇಗೆ ನೋಡಿಕೊಳ್ಳಬೇಕು? ಲಸಿಕೆಯ ನಂತರ ಮಗುವನ್ನು ಮಾನಸಿಕವಾಗಿ ಸದೃಢವಾಗಿಸುವುದು ಹೇಗೆ ಇತ್ಯಾದಿ ಎಲ್ಲವನ್ನೂ ತಿಳಿದುಕೊಳ್ಳಿ.

4. ಚುಚ್ಚುವಿಕೆಯನ್ನು ಸುಲಭವಾಗಿಸಿ

4. ಚುಚ್ಚುವಿಕೆಯನ್ನು ಸುಲಭವಾಗಿಸಿ

ಲಸಿಕೆ ಕೊಡಿಸುವಾಗ ನಿಮ್ಮ ಮಗುವು ಆರಾಮವಾಗಿರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಳ್ಳಿ. ನಿಮ್ಮ ಮಗುವು ನಿಮ್ಮ ಹಾಡಿನಿಂದ ಸಮಾಧಾನವಾಗುತ್ತದೆಯಾದರೆ ಕೂಡಲೇ ಲಸಿಕೆಯ ನಂತರ ಹಾಡು ಹೇಳುವುದನ್ನು ಪ್ರಾರಂಭಿಸಿ. ಮಗುವು ಲಸಿಕೆಯ ಸೂಜಿ ನೋಡದಂತೆ ಮತ್ತು ನಿಮ್ಮ ಕಣ್ಣನ್ನೇ ನೋಡುತ್ತಿರುವಂತೆ ಮಾಡಿ. ಲಸಿಕೆಯ ಸೂಜಿ ನೋಡಿ ಮಗು ಭಯಭೀತಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಮಗುವಿನ ಪ್ರೀತಿಯ ಆಟಿಕೆ, ಪ್ರಾಣಿ ಅಥವಾ ಇನ್ಯಾವುದೇ ವಸ್ತುವನ್ನು ಸಮಾಧಾನಿಸಲು ಬಳಸಬಹುದು. ಶಿಶುವಿಗಾದರೆ ಎದೆಹಾಲು ಉಣಿಸಿ ಸಮಾಧಾನಿಸಿ. ಮಗುವನ್ನು ಸಮಾಧಾನಿಸಲು ಅನೇಕ ಸೂತ್ರಗಳನ್ನು ನೀವು ಅನುಸರಿಸಬಹುದು. ನಿಮ್ಮ ಮೈ ಸ್ಪರ್ಶ, ಎದೆಹಾಲನ್ನು ಹಿಂಡಿ ಬಾಯಿಗೆ ಹಾಕುವುದು, ಸಿಹಿ ತಿನಿಸುವುದು ಇತ್ಯಾದಿ ಯಾವುದೇ ಉಪಾಯವನ್ನು ನೀವು ಅನುಸರಿಸಬಹುದು. ನಿಮ್ಮ ಭಯವನ್ನು ಚಿಕ್ಕ ಮಗುವೂ ಕೂಡ ಅರ್ಥೈಸಿಕೊಳ್ಳುತ್ತದೆ ಎಂಬುದು ನಿಮಗೆ ತಿಳಿದಿರಲಿ. ನೀವು ಭಯಮುಕ್ತರಾಗಿರಿ ಮತ್ತು ಒತ್ತಡ ರಹಿತವಾಗಿರುವುದು ಬಹಳ ಮುಖ್ಯ. ಸೂಜಿಯನ್ನು ನೋಡಿ ನೀವೇ ಭಯಭೀತಿಗೆ ಒಳಪಟ್ಟಿದ್ದರೆ ಖಂಡಿತ ನಿಮ್ಮ ಮಗೂವೂ ಕೂಡ ಭಯಗೊಳ್ಳುತ್ತದೆ. ನೀವು ಸಮಾಧಾನದಿಂದ ಇದ್ದರೆ ಮಗೂವೂ ಆದಷ್ಟು ಬೇಗ ಸಮಾಧಾನಗೊಳ್ಳುತ್ತದೆ.

5. ನಿಮ್ಮ ಮಗುವನ್ನು ಸರಿಯಾಗಿ ಹಿಡಿದುಕೊಳ್ಳಿ

5. ನಿಮ್ಮ ಮಗುವನ್ನು ಸರಿಯಾಗಿ ಹಿಡಿದುಕೊಳ್ಳಿ

ಮಗುವಿನ ವಯಸ್ಸಿಗೆ ಅನುಗುಣವಾಗಿ, ಲಸಿಕೆಗೆ ಅನುಗುಣವಾಗಿ ಮಗುವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ವೈದ್ಯರು ನಿಮಗೆ ತಿಳಿಸುತ್ತಾರೆ. ತೀರಾ ಗಟ್ಟಿಯಾಗಿ ಹಿಡಿದುಕೊಳ್ಳದಿರಲು ಸೂಚಿಸಲಾಗುತ್ತದೆ. ಸೂಜಿ ಚುಚ್ಚುವಾಗ ವೈದ್ಯರು ನೀಡುವ ಸಲಹೆಯನ್ನು ಶಿರಸಾವಹಿಸಿ ಪಾಲಿಸುವುದು ಬಹಳ ಮುಖ್ಯ. ಗಟ್ಟಿಯಾಗಿ ಹಿಡಿದುಕೊಳ್ಳುವುದು ಅಥವಾ ತೀರಾ ಸಡಿಲವಾಗಿ ಹಿಡಿದುಕೊಳ್ಳುವುದು ಎರಡೂ ಸರಿಯಲ್ಲ. ನೀವು ಬಿಗಿಯಾಗಿ ಹಿಡಿದುಕೊಂಡಾಗ ಮಗುವು ಒತ್ತಡಕ್ಕೆ ಸಿಲುಕುತ್ತದೆ ಮತ್ತು ಅಳುವುದಕ್ಕೆ ಪ್ರಾರಂಭಿಸಬಹುದು. ಚಿಕ್ಕ ಮಗುವಿನ ಕಾಲಿಗೆ ಲಸಿಕೆ ನೀಡಲಾಗುತ್ತದೆ ಹಾಗಾಗಿ ಮಗುವನ್ನು ನಿಮ್ಮ ಕಡೆಗೆ ತಿರುಗಿಸಿ ಹಿಡಿದುಕೊಳ್ಳಬೇಕಾಗುತ್ತದೆ. ಮಗುವಿನ ಕಾಲನ್ನು ಮತ್ತು ಕೈಗಳನ್ನು ಮಗುವಿನ ಹಿಂಭಾಗದ ಭುಜಗಳ ನೆರವಿನಿಂದ ಹಿಡಿದುಕೊಳ್ಳಬೇಕಾಗುತ್ತದೆ. ಬಹಳ ಸುರಕ್ಷಿತವಾಗಿ ಮತ್ತು ಒತ್ತಡಮುಕ್ತವಾಗಿ ನೀವು ನಿಮ್ಮ ಮಗುವನ್ನು ಹಿಡಿದುಕೊಳ್ಳುವುದು ಬಹಳ ಮುಖ್ಯ. ವೈದ್ಯರು ಲಸಿಕೆ ನೀಡುವಾಗ ಮಗುವು ತೀರಾ ಅಲುಗಾಡದಂತೆ ನೋಡಿಕೊಳ್ಳುವುದು ಮುಖ್ಯ.

6. ದೊಡ್ಡ ಮಕ್ಕಳನ್ನು ಹಿಡಿದುಕೊಳ್ಳುವ ನಾಜೂಕುತನ

6. ದೊಡ್ಡ ಮಕ್ಕಳನ್ನು ಹಿಡಿದುಕೊಳ್ಳುವ ನಾಜೂಕುತನ

ದೊಡ್ಡ ಮಕ್ಕಳಿಗೆ ಕೈಗಳಿಗೆ ಲಸಿಕೆ ಕೊಡಿಸುವಾಗ ನಿಮ್ಮ ಮುಖಕ್ಕೆ ಎದುರಾಗಿ ಮಗುವನ್ನು ನಿಲ್ಲಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಆಗ ನೀವು ಮಗುವಿನ ಕಣ್ಣುಗಳನ್ನೇ ನೋಡುತ್ತಾ ಅವರಿಗೆ ಧೈರ್ಯ ತುಂಬುತ್ತಾ ಮಗುವು ಅತ್ತಿತ್ತ ಅಲುಗಾಡದಂತೆ ನೋಡಿಕೊಳ್ಳುವುದು ಒಂದು ನಾಜೂಕುತನ. ನಿಮ್ಮ ಕಾಲುಗಳ ನಡುವೆ ಅವರನ್ನು ನಿಲ್ಲಿಸಿಕೊಳ್ಳುವುದರಿಂದ ಅಚಾನಕ್ ಆಗಿ ಮಗುವು ಅತ್ತಿತ್ತ ಅಲುಗಾಡದಂತೆ ಮಾಡಲು ಸಾಧ್ಯವಾಗುತ್ತದೆ. ಲಸಿಕೆಯ ಭಯಕ್ಕೆ ಮಗುವು ಕುಣಿಯುವುದು ಅಥವಾ ಓಡುವುದನ್ನು ಇದರಿಂದ ತಪ್ಪಿಸಬಹುದು.

7. ಇಂಜೆಕ್ಷನ್ ಆದ ನಂತರ ಮಗು ಆರಾಮಾಗಿರುವಂತೆ ನೋಡಿಕೊಳ್ಳಿ

7. ಇಂಜೆಕ್ಷನ್ ಆದ ನಂತರ ಮಗು ಆರಾಮಾಗಿರುವಂತೆ ನೋಡಿಕೊಳ್ಳಿ

ಲಸಿಕೆಯ ನಂತರ ಮಗುವಿಗೆ ಧೈರ್ಯ ತುಂಬಿ. ಇಂಜೆಕ್ಷನ್ ತೆಗೆದುಕೊಂಡಿರುವುದು ಗ್ರೇಟ್ ಎಂಬುದನ್ನು ಮಗುವಿಗೆ ತಿಳಿಸಿ. ಶಿಶುವಿಗಾದರೆ ಎದೆಹಾಲು ಉಣಿಸಿ ಲಸಿಕೆಯ ನಂತರ ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ದೊಡ್ಡ ಮಕ್ಕಳಿಗೆ ಅವರಿಗೆ ಇಷ್ಟವಾದದನ್ನು ಕೊಡಿಸಿ. ಇಂಜೆಕ್ಷನ್ ನಂತರ ಮಗುವನ್ನು ಅಸಡ್ಡೆ ಮಾಡಬೇಡಿ ಮತ್ತು ಬೈಯಬೇಡಿ. ಅವರಿಗೆ ಧೈರ್ಯ ಹೇಳಿ. ಅವಮಾನಿಸಬೇಡಿ. ಒಂದು ವೇಳೆ ಲಸಿಕೆಯ ಸಮಯದಲ್ಲಿ ನಿಮ್ಮ ಮಗು ತೊಂದರೆ ನೀಡಿದ್ದರೂ ಕೂಡ ಮಗುವನ್ನು ದೂರಬೇಡಿ. ಮಗುವು ಇನ್ನಷ್ಟು ಧೈರ್ಯವಾಗಿ ಮುಂದನ ಲಸಿಕೆಗೆ ಸಜ್ಜಾಗುವಂತೆ ಮಾಡಲು ಸಾಧ್ಯವಿದೆ ಎಂಬುದನ್ನು ಮರೆಯಬೇಡಿ. ಹಾಗಾಗಿ ಮಗುವನ್ನು ಹೊಗಳಿ. ಮುಂದಿನ ಬಾರಿ ಇನ್ನಷ್ಟು ಧೈರ್ಯವಾಗಿರುವಂತೆ ಹೇಳಿ.

8. ಮಗುವಿನ ಅಸ್ವಸ್ಥತೆಯನ್ನು ಕಡಿಮೆ ಮಾಡಿ

8. ಮಗುವಿನ ಅಸ್ವಸ್ಥತೆಯನ್ನು ಕಡಿಮೆ ಮಾಡಿ

ಹೆಚ್ಚಿನ ಮಕ್ಕಳು ಲಸಿಕೆಯ ನಂತರ ನೋವು ಅನುಭವಿಸುತ್ತಾರೆ, ಜ್ವರ ಬರಬಹುದು ಅಥವಾ ಉರಿಯೂತವಾಗಬಹುದು. ಇವೆಲ್ಲವೂ ಸಹಜ ಮತ್ತು ಕೆಲವು ದಿನಗಳಿಗೆ ಮಾತ್ರವೇ ಇರುತ್ತದೆ ಎಂಬುದು ನಿಮಗೆ ತಿಳಿದಿರಲಿ. ಮಗುವಿನ ಈ ಅಸ್ವಸ್ಥತೆಯನ್ನು ನೀವು ಕಡಿಮೆ ಮಾಡಬಹುದು. ಇಂಜೆಕ್ಷನ್ ನೀಡಿದ ಜಾಗದಲ್ಲಿ ತಣ್ಣನೆಯ ಬಟ್ಟೆ ಇಡುವುದು, ಜ್ವರವನ್ನು ಇಳಿಕೆ ಮಾಡುವಂತೆ ಮಾಡಲು ಹದವಾಗಿ ಬೆಚ್ಚಗಿರುವ ಟವೆಲ್ ನ್ನು ತಲೆಯ ಮೇಲೆ ಇಡುವುದು ಇತ್ಯಾದಿ ಮಾಡಬಹುದು. ನಿಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ವೈದ್ಯರ ಸಲಹೆಯ ಮೇರೆಗೆ ನೋವು ನಿವಾರಕವನ್ನು ನೀಡಬಹುದು. ಮಗುವು ಚೆನ್ನಾಗಿ ನೀರು ಮತ್ತು ನೀರಿನಂಶದ ಆಹಾರ ಸೇವಿಸಿ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ ಎಂಬುದು ನಿಮ್ಮ ಗಮನದಲ್ಲಿ ಇರಲಿ ಅಷ್ಟೇ ಅಲ್ಲ ಯಾವುದೇ ಸಣ್ಣ ಅನುಮಾನವಿದ್ದರೂ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಕೊನೆಯ ಒಂದು ಸಲಹೆ: ಒಂದು ಬೌಲ್ ಐಸ್ ಕ್ರೀಮ್ ಖಂಡಿತ ಬಹಳ ಸಹಾಯ ಮಾಡುತ್ತದೆ!

English summary

Ways to Make Your Child's Vaccination Visit Less Stressful

Here is a tips to make your childs's vaccination visit less stressful, have a look.
Story first published: Wednesday, October 21, 2020, 14:00 [IST]
X