For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಮಹಿಳೆಯರು: ಚಹಾ, ಕಾಫಿಯಿಂದ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು..!

|

ಗರ್ಭಿಣಿ ಆಗೋದು ಅಥವಾ ಬಸುರಿ ಆಗೋದು ಅಂದರೆ ಮಹಿಳೆಯರಿಗೆ ಅತ್ಯಂತ ಖುಷಿ ನೀಡುವ ಸಂದರ್ಭ. ಈ ಸಮಯದಲ್ಲಿ ಹೊಟ್ಟೆಯೊಳಗೆ ಇನ್ನೊಂದು ಜೀವವು ಇರುತ್ತದೆ ಅನ್ನುವ ಖುಷಿಯು ಇರುತ್ತದೆ. ಹೀಗಾಗಿ ಗರ್ಭಿಣಿ ಮಹಿಳೆಯರು ಕೇವಲ ತಮ್ಮ ಆರೈಕೆ ಮಾಡಿದರೆ ಸಾಕಾಗುವುದಿಲ್ಲ. ಅವರ ಹೊಟ್ಟೆಯಲ್ಲಿರುವ ಕಂದಮ್ಮನ ಬಗ್ಗೆಯೂ ಅವರು ಆರೈಕೆ ಮಾಡಬೇಕಾಗುತ್ತದೆ. ಏನೇ ಕೆಲಸ ಮಾಡುವುದಾದರು ಕಂದಮ್ಮನ ಬಗ್ಗೆ ಯೋಚನೆಯಿಂದಲೇ ಮಾಡಬೇಕಾಗುತ್ತದೆ.

Popular beverage could prevent your child from growing taller says New study

ಹೀಗಾಗಿ ಮನೆಯಲ್ಲಿ ಪುಟ್ಟ ಮಕ್ಕಳಿಗೆ ಒಂದು ರೀತಿಯ ಆಹಾರ ಪದ್ಧತಿ ಇದ್ದರೆ, ದೊಡ್ಡವರಿಗೆ ಇನ್ನೊಂದು ರೀತಿ, ವಯಸ್ಸಾದವರಿಗೆ ಮತ್ತೊಂದು ರೀತಿ ಅದೇ ರೀತಿ ಗರ್ಭಿಣಿ ಮಹಿಳೆಯರಿಗೂ ಕೂಡ ಒಂದು ಬಗೆಯ ವಿಶೇಷವಾದ ಆಹಾರ ಪದ್ಧತಿ ಇದೆ. ಈ ಆಹಾರ ಪದ್ದತಿ ತಾಯಿ ಮತ್ತು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಬ್ಬರನ್ನು ಆರೋಗ್ಯವಾಗಿ ಇಡುತ್ತದೆ. ನಿಮಗೊಂದು ಗೊತ್ತಾ.?

ತಾಯಿ ಸೇವಿಸುವ ಆಹಾರದ ಮೇಲೆ ಮಗುವಿನ ಬೆಳವಣಿಗೆ ನಿಂತಿರುತ್ತದೆ. ಮಗುವಿನ ಆರೋಗ್ಯ ನಿಂತಿರುತ್ತದೆ. ಹೌದು, ತಾಯಿ ತೆಗೆದುಕೊಳ್ಳುವ ಚಹಾ ಮತ್ತು ಕಾಫಿಯಿಂದ ಮಕ್ಕಳ ಹೈಟ್ ಅಥವಾ ಎತ್ತರದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ. ಇಷ್ಟರವರೆಗೆ ಧೂಮಪಾನ, ಮದ್ಯಪಾನ ಮಾಡಿದರೆ ಗರ್ಭಿಣಿ ಮಹಿಳೆಯರಿಗೆ ಸಮಸ್ಯೆ ಆಗಲಿದೆ ಎಂದು ತಿಳಿದಿದ್ದೇವೆ. ಆದರೆ ನಿಮಗೊಂದು ಗೊತ್ತಿರಲಿ, ಯತೇಚ್ಚವಾಗಿ ಕೆಫೇನ್ ಸೇವನೆ ನಿಮ್ಮ ಮಕ್ಕಳ ಎತ್ತರದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ.

ಸಂಶೋಧನೆ ಏನು ಹೇಳುತ್ತದೆ...?

ಇಂಗ್ಲೇಂಡ್ ನ ಸಂಶೋಧನೆ ಪ್ರಕಾರ ಕೆಫೇನ್ ಅಂಶವಿರುವ ಚಹಾ ಹಾಗೂ ಕಾಫಿ ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದಲ್ಲ ಎಂದು ಹೇಳಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಎಷ್ಟು ಕೆಫೇನ್ ಸೇವಿಸಬೇಕು ಎಂದು ಕೂಡ ತಿಳಿಸಿದೆ. ವೈದ್ಯರ ಪ್ರಕಾರ, 100 ಎಂಜಿ ಕೆಫೇನ್ ಅಥವಾ 75 ಎಂಜಿ ಚಹಾ ಸೇವಿಸುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ಇನ್ನು ಅಮೆರಿಕದ ವೈದ್ಯರುಗಳು ಹೇಳುವುದೇ ಬೇರೆ 50 ಎಂಜಿ ಕೆಫೇನ್ ಹೊಟ್ಟೆಯಲ್ಲಿರುವ ಮಕ್ಕಳಿಗೆ ಹಾನಿಕಾರಕ ಎಂದು ತಿಳಿಸಿದ್ದಾರೆ. ಇನ್ನು ಇದಕ್ಕಾಗಿ ಗರ್ಭೀಣಿ ಮಹಿಳೆಯರ ಮೇಲೆ ಪ್ರಯೋಗ ನಡೆಸಲಾಗಿತ್ತು.

ಎರಡು ಗುಂಪುಗಳ ಮಹಿಳೆಯರ ಪೈಕಿ ಒಂದು ಗುಂಪಿಗೆ ಕಡಿಮೆ ಪ್ರಮಾಣದಲ್ಲಿ ಕೆಫೇನ್ ನೀಡಲಾಗಿತ್ತು. ಇನ್ನು ಒಂದು ತಂಡಕ್ಕೆ ಯಾವುದೇ ಕೆಫೇನ್ ನೀಡಲಾಗಿರಲಿಲ್ಲ. ನಾಲ್ಕು ತಿಂಗಳ ಗರ್ಭೀಣಿ ಮಹಿಳೆಯರನ್ನು ಎಂಟು ತಿಂಗಳವರೆಗೆ ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಪೈಕಿ ಕೆಫೇನ್ ತೆಗೆದುಕೊಂಡ ಮಹಿಳೆಯರ ಮಕ್ಕಳ ಎತ್ತರದಲ್ಲಿ ವ್ಯತ್ಯಯ ಕಂಡುಬಂದಿತ್ತು. ಅಲ್ಲದೇ ಕೆಫೇನ್ ತೆಗೆದುಕೊಳ್ಳದ ಮಹಿಳೆಯರ ಮಕ್ಕಳ ಎತ್ತರ ಸರಿಯಾಗಿತ್ತ್ತು. ಹೀಗಾಗಿ ಕೆಫೇನ್ ಪಡೆದ ಗರ್ಭಿಣಿ ಮಹಿಳೆಯರ ಮಕ್ಕಳ ಎತ್ತರದಲ್ಲಿ ವ್ಯತ್ಯಯ ಕಂಡು ಬಂದಿದೆ. ಅಂದರೆ ಎತ್ತರದ ಬೆಳವಣಿಗೆಗೆ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ.

ಅದೇನೆ ಇದ್ದರೂ ಕೆಫೇನ್ ಸೇವನೆ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆಗಬೇಕಿದೆ. ಕೆಲ ವೈದ್ಯರು ಕೆಫೇನ್ ಸೇವನೆ ಒಳ್ಳೆಯದು ಎನ್ನುತ್ತಾರೆ. 200 ಎಂಜಿ ಕೆಫೇನ್ ನಿಂದ ಶುಗರ್ ಲೆವೆಲ್ ಚೆನ್ನಾಗಿ ಇರುತ್ತದೆ ಎನ್ನುತ್ತಾರೆ. ಇನ್ನು ಬೆಳಗ್ಗೆ ಎದ್ದು ನೇರವಾಗಿ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವುದು ಉತ್ತಮವಲ್ಲ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಗರ್ಭೀಣಿ ಮಹಿಳೆಯರು ಆಹಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು!

ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಪದ್ಧತಿಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಏಕೆಂದರೆ ಇದು ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಅಪೌಷ್ಟಿಕತೆಯ ಕಾರಣದಿಂದ ಬಹುತೇಕ ಮಕ್ಕಳು ಸಾವನ್ನಪ್ಪುದನ್ನು ನಾವು ಕೇಳಿರುತ್ತೇವೆ. ಹಾಗಾಗಿ ಗರ್ಭಾವಸ್ಥೆಯ ಸಮಯದಲ್ಲಿ ಒಬ್ಬ ಗರ್ಭಿಣಿ ಮಹಿಳೆ ಸರಿಯಾಗಿ ತನ್ನ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಹೊಂದಿರಬೇಕು.

ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಚಹಾ, ಕಾಫಿ ಬದಲಾಗಿ ಹೆಚ್ಚಾಗಿ ನೀರು ಕುಡಿಯುವುದು ಮಾತ್ರವಲ್ಲದೆ ಇನ್ನಿತರ ಆರೋಗ್ಯಕರವಾದ ಪಾನೀಯಗಳನ್ನು ಸೇವನೆ ಮಾಡಿ ಮಗುವಿನ ಸಮೃದ್ಧವಾದ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು. ಇನ್ನು ಕಾಫಿ, ಟೀ ಬದಲಾಗಿ ಎಳನೀರು ಸೇವನೆ ನಿಜಕ್ಕೂ ಉತ್ತಮ. ಇನ್ನು ಎಳನೀರಿನಲ್ಲಿ ಎಲೆಕ್ಟ್ರೋಲೈಟ್ ಅಂಶಗಳನ್ನು ಒಳಗೊಂಡಿರುವ ಕಾರಣ ದೇಹದಿಂದ ನೈಸರ್ಗಿಕವಾಗಿ ಬೆವರಿನ ರೂಪದಲ್ಲಿ ಹಾನಿಯಾಗುವ ಅನೇಕ ಅಂಶಗಳನ್ನು ಇದು ದೇಹಕ್ಕೆ ಮರುಕಳಿಸುವಂತೆ ಮಾಡುತ್ತದೆ. ಅಲ್ಲದೇ ಖನಿಜಾಂಶಗಳು ಕೂಡ ಇರುವ ಕಾರಣ ರಕ್ತದ ಒತ್ತಡವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡಬಲ್ಲದು. ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಆಮ್ಲೀಯತೆ, ಎದೆಯುರಿ, ಮಲಬದ್ಧತೆ ಇತ್ಯಾದಿಗಳಿಗೆ ಪರಿಹಾರವಾಗಿ ಎಳನೀರನ್ನು ಸೇವನೆ ಮಾಡಬಹುದು.

English summary

Popular beverage could prevent your child from growing taller says New study

Here we are discussing about Popular beverage could prevent your child from growing taller says New study. Read more.
Story first published: Thursday, November 3, 2022, 12:16 [IST]
X
Desktop Bottom Promotion