For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಪೌಷ್ಠಿಕ ಆಹಾರ ಮೋಸದಿಂದ ತಿನಿಸುವುದು ಹೇಗೆ?

|

ಮನೆಯಲ್ಲಿ ಚಿಕ್ಕ ಮಕ್ಕಳಿರುವ ಪೋಷಕರಿಗೆ ಅತೀ ದೊಡ್ಡ ಟಾಸ್ಕ್ ಎಂದರೆ ಅವರನ್ನು ತಿನಿಸುವುದು ಆಗಿರುತ್ತದೆ. ಮಕ್ಕಳಿಗೆ ಎಷ್ಟೇ ರುಚಿಕರವಾದ ಪೌಷ್ಠಿಕ ಆಹಾರವನ್ನು ನೀಡಿ, ಅವರಿಗೆ ಬೇಡ್ವೆ ಬೇಡ. ಅದೇ ಹೊರಗಿನಿಂದ ತಂದ ಜಂಕ್‌ ಫುಡ್‌ಗಳನ್ನು ಕೊಡಿ, ತುಂಬಾ ಇಷ್ಟಪಟ್ಟು ತಿಂದು ಬಿಡುತ್ತವೆ. ಆದರೇ ಆ ಜಂಕ್‌ ಫುಡ್‌ಗಳು ಬಾಯಿಗೆ ರುಚಿಯೇ ಹೊರತು ಮಕ್ಕಳ ಬೆಳವಣಿಗೆಗೆ ಅಗ್ಯತವಾದ ಯಾವುದೇ ಪೋಷಕಾಂಶಗಳು ಇರುವುದಿಲ್ಲ.

ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಅತ್ಯವಶ್ಯಕ. ತರಕಾರಿ, ಹಣ್ಣುಗಳನ್ನು ನೀಡಬೇಕು. ಆದರೆ ಅವುಗಳನ್ನು ಅವರು ಇಷ್ಟಪಟ್ಟು ತಿನ್ನುವಂತೆ ನೀಡಿದರೆ ಮಕ್ಕಳ ಹೊಟ್ಟೆಯೂ ತುಂಬುವುದು, ಅವರ ಬೆಳವಣಿಗೆಗೆ ಅಗ್ಯತವಾದ ಪೋಷಕಾಂಶಗಳೂ ಲಭಿಸುವುದು.

ಇಲ್ಲಿ ನಾವು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಮೋಸದಿಂದ ತಿನಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಮಕ್ಕಳಿಗೆ ನೀಡುವ ಆಹಾರ ಕಲರ್‌ಫುಲ್ ಆಗಿರಲಿ

ಮಕ್ಕಳಿಗೆ ನೀಡುವ ಆಹಾರ ಕಲರ್‌ಫುಲ್ ಆಗಿರಲಿ

ಮಕ್ಕಳು ರುಚಿ ಮಾತ್ರವಲ್ಲ ಕಲರ್‌ಫುಲ್‌ ಆಗಿರುವ ಆಹಾರ ತಿನ್ನಲು ಇಷ್ಟಪಡುತ್ತಾರೆ. ಆದ್ದರಿಂದ ಅವರಿಗೆ ನೀಡುವ ಆಹಾರವನ್ನು ಸ್ವಲ್ಪ ಕ್ರಿಯೇಟಿವ್‌ ಐಡಿಯಾ ಬಳಿಸಿ ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿ ನೀಡಿದರೆ ತಿನ್ನುತ್ತಾರೆ. ಉದಾಹರಣೆಗೆ ಅವರು ದೋಸೆ ಬೇಡ ಎಂದು ಹೇಳಿದಾಗ ಮೊಟ್ಟೆ ತಿನ್ನುವವರಾದರೆ ಅದರ ಮೇಲೆ ಮೊಟ್ಟೆಯ ಬಿಳಿಯನ್ನು ಸ್ಮೈಲಿ ರೀತಿ ಹಾಕಿ, ಅದರ ಮೇಲೆ ಹಳದಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ಖಾರದ ಪುಡಿ ಉದುರಿಸಿ ಬೇಯಿಸಿ ಕೊಟ್ಟು ತುಂಬಾ ಇಟ್ಟಪಟ್ಟು ತಿನ್ನುತ್ತಾರೆ.

ಚಪಾತಿ ತಿನ್ನಲ್ಲ ಎನ್ನುವುದಾದರೆ ಬೇಡ ಬಿಡಿ, ಚಪಾತ ರೋಲ್ ಮಾಡಿ.

ಇದರಲ್ಲಿ ತರಕಾರಿಯೂ ಇರುತ್ತದೆ, ರುಚಿಯೂ ಇರುತ್ತದೆ ಮಕ್ಕಳಿಗೂ ಇಷ್ಟವಾಗುವುದು. ಇನ್ನು ಚಾಕೋಲೆಟ್ ಇಡ್ಲಿ ಹೀಗೆ ಅನೇಕ ರುಚಿಕರ ತಿನಿಸುಗಳನ್ನು ಮಾಡಿ ಬಡಿಸಬಹುದು.

ಮಕ್ಕಳಿಗೆ ಮನೆಯ ಪೌಷ್ಠಿಕ ಆಹಾರವನ್ನೇ ನೀಡಬೇಕು ಏಕೆ?

ಮಕ್ಕಳಿಗೆ ಮನೆಯ ಪೌಷ್ಠಿಕ ಆಹಾರವನ್ನೇ ನೀಡಬೇಕು ಏಕೆ?

ಪೌಷ್ಠಿಕ ಆಹಾರಗಳಿಂದ ಅನೇಕ ಆಹಾರಗಳು ನಿಮಗೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ಅವುಗಳೆನ್ನೆಲ್ಲಾ ಕೊಡಲು ಹೀಗಬೇಡಿ, ಬದಲಿಗೆ ಪೌಷ್ಠಿಕ ಆಹಾರವನ್ನು ನೀವು ಮನೆಯಲ್ಲಿಯೇ ತಯಾರಿಸಿ ನೀಡಿ. ಅಲ್ಲದೆ ಮಕ್ಕಳಿಗೆ ಈ ಕೆಳಗಿನ ಕಾರಣಗಳಿಗಾಗಿ ಪೌಷ್ಠಿಕ ಆಹಾರ ನೀಡುವುದು ಅವಶ್ಯಕವಾಗಿದೆ.

  • ಮಕ್ಕಳು ಕಾಯಿಲೆ ಬೀಳುವುದನ್ನು ತಪ್ಪಿಸುತ್ತದೆ
  • ಮಕ್ಕಳ ಬೆಳವಣಿಗೆಗೆ ಸಹಕಾರಿ
  • ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇನ್ನು ತರಕಾರಿಯಲ್ಲಿರುವ ಪೌಷ್ಠಿಕಾಂಶಗಳು ಮಕ್ಕಳನ್ನು ದೀರ್ಘಕಾಲದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಹೋಗಲಾಡಿಸುವಲ್ಲಿ ಕೂಡ ಪರಿಣಾಮಕಾರಿ ಎಂಬುವುದು ಅಧ್ಯಯದಿಂದ ಸಾಬೀತಾಗಿದೆ.
  • ಇನ್ನು ತರಕಾರಿಯಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
  •  ಮಕ್ಕಳು ತರಕಾರಿ ತಿನ್ನದೆ ಹಣ್ಣು ಮಾತ್ರ ತಿಂದರೆ ಎಲ್ಲಾ ಪೌಷ್ಠಿಕಾಂಶ ದೊರೆಯುತ್ತದೆಯೇ?

    ಮಕ್ಕಳು ತರಕಾರಿ ತಿನ್ನದೆ ಹಣ್ಣು ಮಾತ್ರ ತಿಂದರೆ ಎಲ್ಲಾ ಪೌಷ್ಠಿಕಾಂಶ ದೊರೆಯುತ್ತದೆಯೇ?

    ಕೆಲ ಮಕ್ಕಳು ಹಣ್ಣುಗಳನ್ನು ಮಾತ್ರ ತಿನ್ನುತ್ತವೆ, ಯಾವುದೇ ತರಕಾರಿ ತಿನ್ನುವುದಿಲ್ಲ. ಎಲ್ಲಾ ಬಗೆಯ ಪೋಷಕಾಂಶ ಹಾಗೂ ಖನಿಜಾಂಶ ಸಿಗಬೇಕಾದರೆ ಹಣ್ಣು, ತರಕಾರಿ ಎಲ್ಲಾ ಎಲ್ಲಾ ತಿನ್ನಬೇಕು. ಬರೀ ಹಣ್ಣು ತಿಂದರೆ ಎಂದರೆ ಎಲ್ಲಾ ಪೋಷಕಾಂಶಗಳು ದೊರೆಯಲು ಸಾಧ್ಯವಿಲ್ಲ. ಅಲ್ಲದೆ ಬರೀ ಹಣ್ಣುಗಳನ್ನು ಮಾತ್ರ ತಿಂದರೆ ಮಕ್ಕಳ ಮೈ ತೂಕ ಕೂಡ ಹೆಚ್ಚಾಗುವುದು. ಮಕ್ಕಳು ಸಮತೂಕ ಹೊಂದಿರುವಂತೆ ನೋಡಿಕೊಳ್ಳಿ.

    ಒಂದೇ ಬಗೆಯ ತರಕಾರಿ ಕೊಡುವುದರಿಂದ ಏನಾದರೂ ತೊಂದರೆ ಇದೆಯೇ?

    ಒಂದೇ ಬಗೆಯ ತರಕಾರಿ ಕೊಡುವುದರಿಂದ ಏನಾದರೂ ತೊಂದರೆ ಇದೆಯೇ?

    ಒಂದೇ ಬಗೆಯ ತರಕಾರಿ ಕೊಡುವುದು ಒಳ್ಳೆಯದಲ್ಲ, ಏಕೆಂದರೆ ಒಂದು ತರಕಾರಿಯಲ್ಲಿ ಎಲ್ಲಾ ಬಗೆಯ ಪೋಷಕಾಂಶಗಳು ಇರಲ್ಲ, ಇದರಿಂದ ಪೌಷ್ಠಿಕಾಂಶದ ಕೊರತೆ ಇರುತ್ತದೆ. ಎಲ್ಲಾ ಬಗೆಯ-ಎಲ್ಲಾ ಬಣ್ಣದ ತರಕಾರಿ ಹಣ್ಣುಗಳನ್ನು ಮಕ್ಕಳಿಗೆ ನೀಡುವ ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ನಾವು ಇಲ್ಲಿ ನೀಡಿರುವ ವೀಡಿಯೋದಲ್ಲಿ ಹಲವಾರು ಪೌಷ್ಠಿಕ ರೆಸಿಪಿಗಳನ್ನು ಶೇರ್‌ ಮಾಡಿದ್ದೇವೆ, ಅವುಗಳನ್ನು ನಿಮ್ಮ ಮಕ್ಕಳ ಆಹಾರ ಕ್ರಮದಲ್ಲಿ ಸೇರಿಸಿ.

English summary

How To Teach Kids To Have Nutritious Foods

Most of the parents big worry is how to make their kids to eat nutrition foods, Here are tips to give nutrition foods for kids, have a look.
X
Desktop Bottom Promotion