For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಹುಳುಕು ಹಲ್ಲಿನ ಸಮಸ್ಯೆ ತಡೆಗಟ್ಟುವುದು ಹೇಗೆ?

|

ಹುಳುಕು ಹಲ್ಲು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲ ಮಕ್ಕಳಲ್ಲಿ ಒಂದೆರಡು ಹುಳುಕು ಹಲ್ಲುಗಳಿದ್ದರೆ, ಇನ್ನು ಕೆಲ ಮಕ್ಕಳಲ್ಲಿ ಅಷ್ಟೂ ಹಲ್ಲುಗಳು ಹುಳುಕಾಗಿರುತ್ತದೆ. ಮಕ್ಕಳಲ್ಲಿ ಹುಳುಕು ಹಲ್ಲುಗಳಿದ್ದರೆ ಹೆಚ್ಚಿನ ಪೋಷಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆ ಹಲ್ಲು ಬಿದ್ದು ಹೋದ ಮೇಲೆ ಚೆನ್ನಾಗಿರುವ ಹಲ್ಲುಗಳು ಬರುತ್ತದೆ ಎಂದು ಸಮ್ಮನಾಗುತ್ತಾರೆ.

How To Prevent tooth decay in Kids in Kannada

ಆದರೆ ಮುದ್ದಾದ ಮಕ್ಕಳು ನಕ್ಕಾಗ ನೋಡಲು ಎಷ್ಟು ಮುದ್ದಾಗಿರುತ್ತದೆ. ಆದರೆ ಈ ಹುಳುಕು ಹಲ್ಲುಗಳು ಆ ನಗುವಿನ ಅಂದವನ್ನು ಕಿತ್ತುಕೊಂಡು ಬಿಡುತ್ತದೆ, ಆದರೆ ಮಕ್ಕಳಲ್ಲಿ ಹುಳುಕು ಹಲ್ಲು ಉಂಟಾಗದಂತೆ ನೋಡಿಕೊಳ್ಳುವುದು ಬೆಸ್ಟ್. ಇಲ್ಲಿ ನಾವು ಮಕ್ಕಳಲ್ಲಿ ಹುಳುಕು ಹಲ್ಲಿನ ಸಮಸ್ಯೆ ತಡೆಗಟ್ಟುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

ಮಕ್ಕಳಿಗೆ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿಸಿ

ಮಕ್ಕಳಿಗೆ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿಸಿ

ಮಕ್ಕಳ ಮೊದಲ ಹಲ್ಲುಗಳು ಬರುವಾಗ ಆ ಹಲ್ಲುಗಳನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಒರೆಸುವ ,ಮೂಲಕ ದಿನಾ ಸ್ವಚ್ಛ ಮಾಡಿ. ಮಗುವಿನ ಎಲ್ಲಾ ಹಲ್ಲುಗಳು ಬಂದ ಬಳಿಕ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿಸಿ. ಒಂದು ಅಕ್ಕಿ ಕಾಳಿನಷ್ಟು ಟೂತ್‌ಪೇಸ್ಟ್ ಹಾಕಿ ಕೊಟ್ಟು ತಿಕ್ಕಲು ಹೇಳಿ. ಇನ್ನು 3 ವರ್ಷ ಕಳೆದ ಮಕ್ಕಳಿಗೆ ಅಧಿಕ ಸ್ವಲ್ಪ ಅಧಿಕ ಟೂತ್‌ ಪೇಸ್ಟ್ ಹಾಕಿ ಕೊಟ್ಟು ಹಲ್ಲು ತಿಕ್ಕಲು ಹೇಳಿ.

ಸಕ್ಕರೆಯಂಶ ಹಾಗೂ ಎದೆಹಾಲು ಹಲ್ಲಿನಲ್ಲಿ ನಿಲ್ಲದಂತೆ ನೋಡಿಕೊಳ್ಳಿ

ಸಕ್ಕರೆಯಂಶ ಹಾಗೂ ಎದೆಹಾಲು ಹಲ್ಲಿನಲ್ಲಿ ನಿಲ್ಲದಂತೆ ನೋಡಿಕೊಳ್ಳಿ

ಹೆಚ್ಚು ಮಿಠಾಯಿ ತಿನ್ನುವುದು, ತುಂಬಾ ಎದೆ ಹಾಲು ಕುಡಿಯುವ ಮಕ್ಕಳ ಹಲ್ಲುಗಳು ಬೇಗನೆ ಹಾಳಾಗುತ್ತದೆ. ಹಲ್ಲಿನಲ್ಲಿ ಸಕ್ಕರೆಯಂಶ ಉಳಿದುಕೊಂಡರೆ ಹಲ್ಲು ಹಾಳಾಗುವುದು. ಹಲ್ಲದೆ ಬಾಟಲಿ ಹಾಲು ಕುಡಿಸುವ ಅಭ್ಯಾಸ ನಿಲ್ಲಿಸಿ, ಇದರಿಂದ ಕೂಡ ಹಲ್ಲು ಹಾಳಾಗುವುದು. ಹಾಲುಣಿಸಿದ ಬಳಿಕ ಮಗುವಿನ ಹಲ್ಲು ಸ್ವಚ್ಛಗೊಳಿಸಿ.

 ಜ್ಯೂಸ್ ಕುಡಿಸುತ್ತೀರಾ?

ಜ್ಯೂಸ್ ಕುಡಿಸುತ್ತೀರಾ?

ಮಕ್ಕಳಿಗೆ ಹಣ್ಣಿನ ಜ್ಯೂಸ್ ಕುಡಿಸುತ್ತೀರಾ, ಜ್ಯೂಸ್‌ ಬದಲಿಗೆ ಹಣ್ಣುಗಳನ್ನು ಹಾಗೇ ತಿನ್ನಿಸುವ ಅಭ್ಯಾಸ ಮಾಡಿ. ಏಕೆಂದರೆ ಜ್ಯೂಸ್‌ ಮಾಡುವಾಗ ರುಚಿಯಿರಲಿ ಅಂತ ಸಕ್ಕರೆ ಬಳಸುತ್ತೇವೆ. ಇದು ಮಕ್ಕಳ ಹಲ್ಲುಗಳನ್ನು ಹಾಳು ಮಾಡುತ್ತದೆ. ಇನ್ನು ಹೊರಗಡೆ ಸಿಗುವ ಜ್ಯೂಸ್‌ ಕೊಡಿಸಬೇಡಿ, ಕೊಡಸುದಾದರೂ ಶೇ. 100ರಷ್ಟು ಶುದ್ಧ ಹಣ್ಣಿನ ಜ್ಯೂಸ್ ಎಂಬ ಲೇಬಲ್ ಇರುವ ಜ್ಯೂಸ್ ಅಷ್ಟೇ ಕೊಡಿ, ಆದರೆ ಇದನ್ನೇ ಅಭ್ಯಾಸ ಮಾಡಿಸಬೇಡಿ. ಹಣ್ಣುಗಳನ್ನು ಹಾಗೇ ತಿನ್ನುವ ಅಭ್ಯಾಸ ಮಾಡಿಸಿ.

ಮಗು 8-9 ತಿಂಗಳು ತುಂಬುವಾಗಲೇ ಮೆಲ್ಲನೆ ಲೋಟ ಅಭ್ಯಾಸ ಮಾಡಿಸಿ

ಮಗು 8-9 ತಿಂಗಳು ತುಂಬುವಾಗಲೇ ಮೆಲ್ಲನೆ ಲೋಟ ಅಭ್ಯಾಸ ಮಾಡಿಸಿ

ಕೆಲವರು ಬಾಟಲಿ ಹಾಲನ್ನು ನೀಡುವುದು, ಬಾಟಲಿನಲ್ಲಿ ನೀರು ಕುಡಿಸುವುದು ಮಾಡುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ ಮಕ್ಕಳಿಗೆ ಹಾಲನ್ನು ಹಾಗೂ ನೀರನ್ನು ಬಾಟಲಿನಲ್ಲಿ ಕುಡಿಸುವುದು ಆರೋಗ್ಯಕರವಲ್ಲ ಅಲ್ಲದೆ ಇದರಿಂದ ಅವರ ಹಲ್ಲು ಕೂಡ ಹಾಳಾಗುತ್ತದೆ. ಮಕ್ಕಳಿಗೆ 6-7 ತಿಂಗಳವರೆಗೆ ಚಮಚದಲ್ಲಿ ಹಾಗೂ ಕಪ್‌ನಲ್ಲಿ ನೀರು ಅಭ್ಯಾಸ ಮಾಡಿಸಿ.

 ಆರೋಗ್ಯಕರ ಆಹಾರ ನೀಡಿ

ಆರೋಗ್ಯಕರ ಆಹಾರ ನೀಡಿ

ಮಕ್ಕಳಿಗೆ ಪೋಷಕಾಂಶ ಅಧಿಕವಿರುವ ಆಹಾರ ತಿನ್ನಲು ನೀಡಿ. ಇದರಿಂದ ಹುಳುಕು ಹಲ್ಲು ಉಂಟಾಗುವುದನ್ನು ತಪ್ಪಿಸಬಹುದು. ಅವರ ಆಹಾರದಲ್ಲಿ ದವಸ ಧಾನ್ಯಗಳು, ಹಣ್ಣುಗಳು, ತರಕಾರಿಗಳನ್ನು ಸೇರಿಸಿ. ಚೀಸ್, ಮೊಸರು, ಹಾಲು ಇವುಗಳನ್ನು ನೀಡಿ. ಮಕ್ಕಳು ಸಿಹಿ ತಿಂಡಿಗಳನ್ನು ತಿಂದ ಬಳಿಕ ಅವರ ಹಲ್ಲುಗಳನ್ನು ಸ್ವಚ್ಛಗೊಳಿಸಿ.

ನೀವು ಬಳಸಿದ ಸ್ಪೂನ್, ಲೋಟ ಕೊಡಬೇಡಿ

ನೀವು ಬಳಸಿದ ಸ್ಪೂನ್, ಲೋಟ ಕೊಡಬೇಡಿ

ಕೆಲವೊಮ್ಮೆ ನಾವು ಬಳಸಿದ ಎಂಜಲು ಚಮಚ, ಲೋಟದಲ್ಲಿ ಅವರಿಗೂ ತಿನಿಸುವುದರಿಂದ ನಮ್ಮ ಬಾಯಿಯ ಬ್ಯಾಕ್ಟಿರಿಯಾ ಮಕ್ಕಳ ಬಾಯಿಗೆ ಹರಡಿ ಹಲ್ಲುಗಳು ಹುಳುಕಾಗುವುದು. ಅವರ ಪಾತ್ರೆ, ಚಮಚಗಳನ್ನು ಪ್ರತ್ಯೇಕವಾಗಿಟ್ಟು ಬಳಸಿ.

English summary

How To Prevent tooth decay in Kids in Kannada

Tooth decay , called dental caries is common problem in kids, this is caused by bacteria eating away the outer protective layer of a tooth.
X
Desktop Bottom Promotion